K Sudhakar : ಕೊರೋನಾ ಕರ್ಫ್ಯೂ ವಿಫಲ, ಲಾಕ್ ಡೌನ್ ಸುಳಿವು ನೀಡಿದ ಸಚಿವ ಸುಧಾಕರ್!

'ಕೊರೋನಾ ಕರ್ಫ್ಯೂ' ನಾವು ಅಂದುಕೊಂಡಷ್ಟು ಪರಿಣಾಮಕಾರಿಯಾಗಿಲ್ಲ

Last Updated : May 6, 2021, 11:42 AM IST
  • ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ 'ಕೊರೋನಾ ಕರ್ಫ್ಯೂ'
  • 'ಕೊರೋನಾ ಕರ್ಫ್ಯೂ' ನಾವು ಅಂದುಕೊಂಡಷ್ಟು ಪರಿಣಾಮಕಾರಿಯಾಗಿಲ್ಲ
  • ಈಗಿರುವ ಲಾಕ್ ಡೌನ್ ವಿಫಲವಾಗಿದೆ ಎಂದ ಆರೋಗ್ಯ ಸಚಿವ ಡಾ.ಸುಧಾಕರ್
K Sudhakar : ಕೊರೋನಾ ಕರ್ಫ್ಯೂ ವಿಫಲ, ಲಾಕ್ ಡೌನ್ ಸುಳಿವು ನೀಡಿದ ಸಚಿವ ಸುಧಾಕರ್! title=

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ 'ಕೊರೋನಾ ಕರ್ಫ್ಯೂ' ನಾವು ಅಂದುಕೊಂಡಷ್ಟು ಪರಿಣಾಮಕಾರಿಯಾಗಿಲ್ಲ. ಈಗಿರುವ ಲಾಕ್ ಡೌನ್ ವಿಫಲವಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸುಧಾಕರ್(Dr K Sudhakar), ಈಗಿರುವ ಕೊರೋನಾ  ಕರ್ಫ್ಯೂ ಮೇ 12ಕ್ಕೆ ಮುಗಿಯಲಿದೆ. ಬಳಿಕ ಸಿಎಂ ಬಿಎಸ್ ಯಡಿಯೂರಪ್ಪ ಜೊತೆ ಚರ್ಚಿಸಿ ಕರ್ಫ್ಯೂ ಮುಂದುವರೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಕಾರಣ ಕೊರೋನಾ ಕರ್ಫ್ಯೂ ಜಾರಿಯಲ್ಲಿದ್ದರೂ ಜನರ ಓಡಾಟ ರಾಜಾರೋಷವಾಗಿ ನಡೆಯುತ್ತಿದೆ. ಜನರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಹಾಗಾಗಿ ಕಟ್ಟು ನಿಟ್ಟಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳುವ ಮೂಲಕ ರಾಜ್ಯಾದ್ಯಂತ ಲಾಕ್ ಡೌನ್ ಜಾರಿ ಬಗ್ಗೆ ಸುಳಿವು ನೀಡಿದ್ದಾರೆ.

ಇದನ್ನೂ ಓದಿ : Corona Vaccine ವಿಷಯದಲ್ಲೂ ಗುಜರಾತ್-ಕರ್ನಾಟಕ ನಡುವೆ ತಾರತಮ್ಯವೇ? ಎಚ್ ಡಿಕೆ ಪ್ರಶ್ನೆ

ಇನ್ನು ಮೇ 15ರ ಬಳಿಕ ನಮಗೆ ಲಸಿಕೆ(Corona Vaccine) ದೊರೆಯಲಿದೆ ಹಾಗಾಗಿ ಮೇ 15 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದರು. 

ಇದನ್ನೂ ಓದಿ : ಒಂದೇ ದಿನದಲ್ಲಿ ಕರ್ನಾಟಕದಲ್ಲಿ 50,112 ಕೊರೊನಾ ಪ್ರಕರಣ, 346 ಜನರ ಸಾವು

ಒಟ್ಟಾರೆ ರಾಜ್ಯದಲ್ಲಿ ಕೊರೋನಾ ಕರ್ಫ್ಯೂ(Corona Curfew) ಸಂಪೂರ್ಣ ವಿಫಲವಾಗಿದ್ದು, ಕೊರೊನಾ ನಿಯಂತ್ರಿಸಲು ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿ ಮಾಡಬೇಕು ಎಂಬ ಒತ್ತಡಗಳು ಸರ್ಕಾರದ ಮೇಲೆ ಹೆಚ್ಚುತ್ತಿವೆ.

ಇದನ್ನೂ ಓದಿ : "ತೇಜಸ್ವಿ ಸೂರ್ಯ ಬ್ಯಾಕಿಂಗ್ ದಂಧೆ ತಡೆಗೆ ಸೀಮಿತ ಆಗದೆ ಪಿಎಂ ಬಳಿ ಆಕ್ಸಿಜನ್ ಪೂರೈಕೆಗೆ ಒತ್ತಡ ಹೇರಲಿ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News