Rhinovirus Vs Coronavirus - ರಾಯಿನೋ ವೈರಸ್ (Rhinovirus) ನಿಂದ ಸೋಂಕಿತಗೊಂಡ 24 ಗಂಟೆಗಳ ಒಳಗೆ ಒಂದು ವೇಳೆ ಕೊರೊನಾ ವೈರಸ್ (Coronavirus) ಮಾನವನ ಶರೀರಕ್ಕೆ ಪ್ರವೇಶಿಸಿದರೆ, ರಾಯಿನೋ ವೈರಸ್ ಅದನ್ನು ಹೊರ ಹಾಕುವ ಸಾಧ್ಯತೆ ಇದೆ.
ನವದೆಹಲಿ: Rhinovirus Vs Coronavirus - ರಾಯಿನೋ ವೈರಸ್ (Rhinovirus) ನಿಂದ ಸೋಂಕಿತಗೊಂಡ 24 ಗಂಟೆಗಳ ಒಳಗೆ ಒಂದು ವೇಳೆ ಕೊರೊನಾ ವೈರಸ್ (Coronavirus) ಮಾನವನ ಶರೀರಕ್ಕೆ ಪ್ರವೇಶಿಸಿದರೆ, ರಾಯಿನೋ ವೈರಸ್ ಅದನ್ನು ಹೊರ ಹಾಕುವ ಸಾಧ್ಯತೆ ಇದೆ.
ಇದನ್ನೂ ಓದಿ-Good News: Corona ಚಿಕಿತ್ಸೆಗಾಗಿ DRDO ಔಷಧಿ 2-DG ತುರ್ತು ಬಳಕೆಗೆ DGCI ಅನುಮತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕೊರೊನಾ ವೈರಸ್ ಅನ್ನು ತಡೆಯುವ ಸಾಮರ್ಥ್ಯ ಹೊಂದಿದೆ ರಾಯಿನೋ ವೈರಸ್ - ಕೊರೊನಾ ವೈರಸ್ ಅನ್ನು ಸಾಮಾನ್ಯ ಶೀತ ಮತ್ತು ನೆಗಡಿ ಉಂಟುಮಾಡುವ ವೈರಸ್ (Virus That Cause Common Cold) ಸೋಲಿಸಬಹುದು. ಅಂದರೆ ಶೀತವಾದ ಸಂದರ್ಭದಲ್ಲಿ ಕೊರೊನಾ ವೈರಸ್ ನಿಮ್ಮನ್ನು ಸಂಪೂರ್ಣ ಸೊಂಕಿತರನ್ನಾಗಿ ಮಾಡಲು ಸಾಧ್ಯವಿಲ್ಲ. ಏಕೆಂದರೆ ರಾಯಿನೋ ವೈರಸ್, ಕೊರೊನಾ ಸೋಂಕಿನ ಪ್ರಸಾರ ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಹೀಗಂತ ನಾವು ಹೇಳುತ್ತಿಲ್ಲ. ಈ ಕುರಿತು ನಡೆದ ಸಂಶೋಧನೆಯ ಅಂಕಿ-ಅಂಶಗಳು ಈ ಮಾಹಿತಿಯನ್ನು ಬಹಿರಂಗಪಡಿಸಿವೆ.
ಗ್ಲಾಸ್ಗೋ ವಿಶ್ವವಿದ್ಯಾನಿಲಯದಲ್ಲಿ ಈ ಸಂಶೋಧನೆ ನಡೆದಿದೆ - ಈ ಕುರಿತು ಹೇಳಿಕೆ ನೀಡಿರುವ ಯುನಿವರ್ಸಿಟಿ ಆಫ್ ಗ್ಲಾಸ್ಗೋ (MRC-University of Glasgow Centre for Virus Research (CVR) ವಿಜ್ಞಾನಿಗಳು, ಸಾಮಾನ್ಯ ಸೀತ ಮತ್ತು ನೆಗಡಿಗೆ ಕಾರಣವಾಗುವ ರಾಯಿನೋ ವೈರಸ್, ಕೊವಿಡ್ ವೈರುಸ್ ಸೋಲಿಸುವ ಸಾಮರ್ಥ್ಯ (Rhinovirus Vs Coronavirus) ಹೊಂದಿದೆ ಎಂಬಂತೆ ಕಂಡುಬರುತ್ತಿದೆ ಎಂದಿದ್ದಾರೆ.
ಶೀತ-ನೆಗಡಿಯ ಈ ವೈರಸ್ ತುಂಬಾ ಪರಿಣಾಮಕಾರಿಯಾಗಿದೆ - ಅಧ್ಯಯನದ ಪ್ರಕಾರ ಈ ಅಧ್ಯಯನಕ್ಕಾಗಿ ವಿಜ್ಞಾನಿಗಳು ಮಾನವನ ಶರೀರದ ಶ್ವಾಸಾಂಗದ ಮಾಡೆಲ್ ಹಾಗೂ ಆದರ ಜೀವಕೋಶಗಳನ್ನು ತಯಾರಿಸಿದ್ದಾರೆ ಮತ್ತು ಬಳಿಕ ಅವರು ಆ ಕೃತಕ ಶಾಸಕಾಂಗದ ಮಾಡೆಲ್ ಅನ್ನು ಕೊರೊನಾ ವೈರಸ್ ಹಾಗೂ ಸಾಮಾನ್ಯ ಶೀತಕ್ಕೆ ಕಾರಣವಾಗುವ ವೈರಸ್ ನಿಂದ ಸೋಂಕಿಗೀಡು ಮಾಡಿದ್ದಾರೆ. ಈ ಎರಡು ವೈರಸ್ ಗಳನ್ನು ಏಕಕಾಲಕ್ಕೆ ಕೃತಕ ಶ್ವಾಸಕಾಂಗಕ್ಕೆ ಸೇರಿಸಿದ ಕಾರಣ, ಇವೆರಡರಲ್ಲಿ ಶೀತದ ವೈರಸ್ ಹೆಚ್ಚು ಪ್ರಭಾವಶಾಲಿ ಎಂದು ಕಂಡುಬಂದಿದೆ ಎಂದಿದ್ದಾರೆ.
ಚೇತರಿಸಿಕೊಂಡ ಬಳಿಕ ಮತ್ತೆ ಸೋಂಕಿಗೀಡು ಮಾಡಬಹುದು ಕೊರೊನಾ - ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ವಿಜ್ಞಾನಿಗಳು ರಾಯಿಯೋ ವೈರಸ್ ಕೆಲ ಸಮಯದವರೆಗೆ ಮಾತ್ರ ಮಾನವನ ದೇಹದಲ್ಲಿದ್ದರೂ ಕೂಡ, ಇದು ಮಾನವನ ಶರೀರದಲ್ಲಿ ಹರಡುವ ರೀತಿ ಕೊರೊನಾ (Covid-19) ವೈರಸ್ ನ ಪ್ರಭಾವ ಕಡಿಮೆ ಮಾಡಲು ಸಹಕರಿಸುತ್ತದೆ. ಆದರೆ ಬಳಿಕ ಕೊರೊನಾ ವೈರಸ್ ಸೋಂಕು ಮತ್ತೆ ದಾಳಿ ಇದುವ ಸಾಧ್ಯತೆ ಇದೆ ಎಂದಿದ್ದಾರೆ ಮತ್ತು ಇದಕ್ಕೆ ಕಾರಣ ರಾಯಿನೋ ವೈರಸ್ ನ ಸೀಮಿತ ಅವಧಿಯ ಪ್ರಭಾವ ಎಂದು ಅವರು ಹೇಳಿದ್ದಾರೆ.
ರಾಯಿನೋ ವೈರಸ್ ಹೆಚ್ಚು ಬಲಶಾಲಿಯಾಗಿದೆ - ವಿಜ್ಞಾನಿಗಳು ಹೇಳುವ ಪ್ರಕಾರ, ರಾಯಿನೋ ವೈರಸ್ ಸೋಂಕಿಗೆ ಗುರಿಯಾದ 24 ಗಂಟೆಯೊಳಗೆ ಒಂದು ವೇಳೆ ಕೊವಿಡ್-19 ವೈರಸ್ ಮಾನವರ ಶರೀರವನ್ನು ಪ್ರವೇಶಿಸಿದರೆ. ರಾಯಿನೋ ವೈರಸ್ ಅದನ್ನು ಹೊರಹಾಕುವ ಸಾಮರ್ಥ್ಯ ಹೊಂದಿದೆ ಎನ್ನುತ್ತಾರೆ. ಆದರೆ, ಈ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ನಡಸುವ ಅವಶ್ಯಕತೆ ಇದೆ. ಈ ಸ್ಮಶೋಧನೆ 'ಜರ್ನಲ್ ಆಫ್ ಇನ್ಫೆಕ್ಷಿಯಸ್ಡಿಸೀಜ್' ನಲ್ಲಿ ಪ್ರಕಾಶಿತಗೊಂಡಿದೆ.