Recharge Plans: ತಿಂಗಳಿಗೆ ಕೇವಲ ರೂ.125 ಖರ್ಚು ಮಾಡಿ, ವರ್ಷವಿಡೀ ರಿಚಾರ್ಜ್ ಮಾಡುವ ತಾಪತ್ರಯವನ್ನು ತಪ್ಪಿಸಿಕೊಳ್ಳಿ

Cheapest Annual Recharge Plans: ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್-ಐಡಿಯಾ (VI) ನಂತಹ ಕಂಪನಿಗಳು ತಮ್ಮ ಗ್ರಾಹಕರಿಗೆ ಕೈಗೆಟುಕುವ ರೀಚಾರ್ಜ್ ಯೋಜನೆಗಳನ್ನು ನೀಡುತ್ತವೆ, ಅವುಗಳು 1 ವರ್ಷದವರೆಗೆ ಮಾನ್ಯತೆಯನ್ನು ಹೊಂದಿವೆ ಮತ್ತು ಅವುಗಳ ಬೆಲೆ ತಿಂಗಳಿಗೆ 125 ರೂ.ಗಿಂತ ಕಡಿಮೆ ಇದೆ.

Written by - Nitin Tabib | Last Updated : May 9, 2021, 07:14 PM IST
  • ನಮ್ಮಲ್ಲಿ ಬಹುತೇಕರು ತಿಂಗಳಿಗೊಮ್ಮೆ ರಿಚ್ಚಾರ್ಜ್ ಮಾಡಿಸುತ್ತಾರೆ.
  • ಆದರೆ, ವರ್ಷಕ್ಕೊಮ್ಮೆ ರಿಚಾರ್ಜ್ ಮಾಡಿಸಿದರೆ ಹಲವು ಸೌಕರ್ಯಗಳನ್ನು ಪಡೆಯಬಹುದು.
  • ರಿಲಯನ್ಸ್ ಜಿಯೋ, ಏರ್ಟೆಲ್, ವೊಡಾಫೋನ್-ಐಡಿಯಾ ಕಂಪನಿಗಳ ಇಂತಹ ಯೋಜನೆಗಳು ಇಲ್ಲಿವೆ.
Recharge Plans: ತಿಂಗಳಿಗೆ ಕೇವಲ ರೂ.125 ಖರ್ಚು ಮಾಡಿ, ವರ್ಷವಿಡೀ ರಿಚಾರ್ಜ್ ಮಾಡುವ ತಾಪತ್ರಯವನ್ನು ತಪ್ಪಿಸಿಕೊಳ್ಳಿ title=
Cheapest Annual Recharge Plans(File Photo)

ನವದೆಹಲಿ: Cheapest Annual Recharge Plans - ಬಹುತೇಕ ಜನರು ಪ್ರತಿ ತಿಂಗಳು ತಮ್ಮ ಫೋನ್‌ಗಳನ್ನು ರೀಚಾರ್ಜ್ ಮಾಡುತ್ತಾರೆ. ಪದೇ ಪದೇ ರಿಚಾರ್ಚ್ ಮಾಡುವುದು ಹಲವು ಗೊಂದಲಗಳಿಗೆ ಕಾರಣವಾಗುತ್ತದೆ.  ಜೊತೆಗೆ ಪ್ರತಿ ತಿಂಗಳು ತೆಗೆದುಕೊಳ್ಳಬೇಕಾದ ಯೋಜನೆಯೂ ಸಹ ನಿಮಗೆ ನಿಮಗೆ ದುಬಾರಿಯಾಗುವ ಸಾಧ್ಯತೆ ಇರುತ್ತದೆ.  ಏರ್‌ಟೆಲ್ (Airtel), ರಿಲಯನ್ಸ್ ಜಿಯೋ (Reliance Jio) ಮತ್ತು ವೊಡಾಫೋನ್-ಐಡಿಯಾ (Vodafone-Idea) ನಂತಹ ಕಂಪನಿಗಳು ತಮ್ಮ ಗ್ರಾಹಕರಿಗೆ ಕೈಗೆಟುಕುವ ರೀಚಾರ್ಜ್ ಯೋಜನೆಗಳನ್ನು ತಂದಿದ್ದು, ಅವರ ಸಿಂಧುತ್ವವು 1 ವರ್ಷದವರೆಗೆ ಇರುತ್ತದೆ ಮತ್ತು ಅವುಗಳ ಬೆಲೆ ತಿಂಗಳಿಗೆ 125 ರೂ. ಗಳಿಗಿಂತ ಕೂಡ ಕಡಿಮಿ ಇದೆ.  ಹಾಗಾದರೆ ಬನ್ನಿ ಆ ವಿಶೇಷ ಯೋಜನೆಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ.

ಏರ್ಟೆಲ್
ಟೆಲಿಕಾಂ ಕಂಪನಿ ಏರ್‌ಟೆಲ್ ಕೇವಲ 1,498 ರೂಗಳಿಗೆ ಪೂರ್ಣ ವರ್ಷದ ಮಾನ್ಯತೆ ಹೊಂದಿರುವ ಯೋಜನೆಯನ್ನು ನೀಡುತ್ತಿದೆ. ಅಂದರೆ, ಗ್ರಾಹಕರು ತಿಂಗಳಿಗೆ ಕೇವಲ 124.8 ರೂ. ಪಾವತಿಸಿದಂತಾಗುತ್ತದೆ. ಈ ಏರ್‌ಟೆಲ್ ಯೋಜನೆಯಲ್ಲಿ ಗ್ರಾಹಕರಿಗೆ 3,600 ಸಂದೇಶಗಳನ್ನು ನೀಡಲಾಗಿದ್ದು, ಇದು ಒಂದು ವರ್ಷದ ಸಂಪೂರ್ಣ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯಲ್ಲಿ, ಗ್ರಾಹಕರು ಪೂರ್ಣ ವರ್ಷಕ್ಕೆ 24 ಜಿಬಿ ಡೇಟಾವನ್ನು ಪಡೆಯುತ್ತಾರೆ. ಈ ರೀಚಾರ್ಜ್ (Recharge Plan) ಯೋಜನೆಯಡಿಯಲ್ಲಿ, ಬಳಕೆದಾರರು ವರ್ಷವಿಡೀ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮಾಡಬಹುದು. ಇದರೊಂದಿಗೆ, ಬಳಕೆದಾರರು ಈ ಯೋಜನೆಯಲ್ಲಿ ಉಚಿತ ಹೆಲೋಟೂನ್ಸ್, ಏರ್ಟೆಲ್ ಎಕ್ಸ್‌ಸ್ಟ್ರೀಮ್ ಆಪ್ ಪ್ರೀಮಿಯಂ ಮತ್ತು ಅನಿಯಮಿತ ಡೌನ್‌ಲೋಡ್ ಜೊತೆಗೆ ವಿಂಕ್ ಮ್ಯೂಸಿಕ್‌ನ ಚಂದಾದಾರಿಕೆಯನ್ನು ಪಡೆಯುತ್ತಾರೆ.

ರಿಲಯನ್ಸ್ ಜಿಯೋ
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ 1,299 ರೂ.ಗಳ ಉತ್ತಮ ರೀಚಾರ್ಜ್ ಯೋಜನೆಯನ್ನು ನೀಡುತ್ತದೆ. ಈ ರೀಚಾರ್ಜ್ ಯೋಜನೆ 336 ದಿನಗಳ ಮಾನ್ಯತೆ ಹೊಂದಿದೆ. ತಿಂಗಳ ಲೆಕ್ಕಾಚಾರದಲ್ಲಿ ಈ ರೀಚಾರ್ಜ್ ಯೋಜನೆಯ ವೆಚ್ಚ ಕೇವಲ 118 ರೂಪಾಯಿ ಪ್ರತಿ ತಿಂಗಳು ಇರಲಿದೆ. ಈ ಯೋಜನೆಯಲ್ಲಿ, ಗ್ರಾಹಕರು ಇಡೀ ವರ್ಷಕ್ಕೆ 24 ಜಿಬಿ ಡೇಟಾವನ್ನು ಪಡೆಯುತ್ತಾರೆ. ಡೇಟಾ ಮಿತಿಯ ಅವಧಿ ಮುಗಿದ ನಂತರ ವೇಗವು 64 ಕೆಬಿಪಿಎಸ್‌ಗೆ ಕಡಿಮೆಯಾಗಲಿದೆ. 

ಇದನ್ನೂ ಓದಿ- WhatsApp New Privacy Policy Latest News:ನೂತನ ಗೌಪ್ಯತಾ ನೀತಿ ಒಪ್ಪಿಕೊಳ್ಳದಿದ್ದರೂ ಕೆಲಸ ಮಾಡುತ್ತಾ WhatsApp? ಇಲ್ಲಿದೆ ಕಂಪನಿಯ ಅಧಿಕೃತ ಹೇಳಿಕೆ

ಈ ಯೋಜನೆಯಲ್ಲಿ ಗ್ರಾಹಕರಿಗೆ 3,600 ಸಂದೇಶಗಳು ಸಿಗಲಿವೆ. ಇದನ್ನು 336 ದಿನಗಳವರೆಗೆ ಬಳಸಬಹುದು. ಇದರಲ್ಲಿ, ಯಾವುದೇ ನೆಟ್‌ವರ್ಕ್‌ ಗೆ ಅನಿಯಮಿತ ಕರೆಗಳ ಸೌಲಭ್ಯ ಲಭ್ಯವಿದೆ. ಇದರೊಂದಿಗೆ, ಈ ರೀಚಾರ್ಜ್ ಯೋಜನೆಯಲ್ಲಿ ಜಿಯೋ ಸಾವನ್, ಜಿಯೋ ಟಿವಿ, ಜಿಯೋ ಸಿನೆಮಾ ಮತ್ತು ಜಿಯೋ ಆಪ್ ಚಂದಾದಾರಿಕೆ ಸಹ ಲಭ್ಯವಿದೆ.

ಇದನ್ನೂ ಓದಿ- Mother's Day 2021: ನೂತನ ವೈಶಿಷ್ಟ್ಯ ಪರಿಚಯಿಸಿದ Google, ಮಕ್ಕಳಿಗೂ ಕೂಡ ಇಷ್ಟವಾಗಲಿದೆ

ವೊಡಾಫೋನ್-ಐಡಿಯಾ
ವೊಡಾಫೋನ್ ಐಡಿಯಾದಲ್ಲಿ ವರ್ಷಪೂರ್ತಿ ರೀಚಾರ್ಜ್ ಯೋಜನೆ ಬೆಲೆ ಕೇವಲ 1,499 ರೂ. ಈ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ, ಅಂದರೆ ಇದರ ಬೆಲೆ ತಿಂಗಳಿಗೆ ಕೇವಲ 124.91 ರೂ. VI ನ ಈ ಯೋಜನೆಯು ವರ್ಷಕ್ಕೆ 3,600 ಸಂದೇಶಗಳನ್ನು ಮತ್ತು 24 ಜಿಬಿ ಡೇಟಾವನ್ನು ಒದಗಿಸುತ್ತದೆ. ಇದರ ಅಡಿಯಲ್ಲಿ, ಬಳಕೆದಾರರು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಪಡೆಯಬಹುದು.

ಇದನ್ನೂ ಓದಿ- ಈಗ ಪಾಸ್ವರ್ಡ್ ಇಲ್ಲದೆ Google ಲಾಗಿನ್, ಈ ವಿಧಾನ ಎಷ್ಟು ಸುರಕ್ಷಿತವಾಗಿದೆ ಎಂದು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News