Corona Vaccine Latest Update:ಭಾರತದಲ್ಲಿ ಕರೋನಾ ಮಹಾಮಾರಿಯಿಂದ ಪಾರಾಗಲು ಲಸಿಕೆ ಹಾಕುವ ಕೆಲಸ ವೇಗವಾಗಿ ನಡೆಯುತ್ತಿದೆ. ಲಸಿಕೆ ಪಡೆಯಲು ಕೋವಿನ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿದೆ. ಆದರೆ ಜನರ ಪ್ರಕಾರ, ನೋಂದಣಿ ಪ್ರಕ್ರಿಯೆಯಲ್ಲಿ ಕೆಲವು ನ್ಯೂನತೆಗಳಿವೆ, ಈ ನ್ಯೂನತೆಗಳನ್ನು ತೆಗೆದುಹಾಕಲು ಸರ್ಕಾರ ಈಗ ಕೋವಿನ್ ಪೋರ್ಟಲ್ನಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ವ್ಯಾಕ್ಸಿನೇಷನ್ಗಾಗಿ ಅಪಾಯಿಂಟ್ಮೆಂಟ್ ತೆಗೆದುಕೊಂಡ ಜನರಿಗೆ ನಂತರ ಕೆಲವು ಕಾರಣಗಳಿಂದಾಗಿ ಅವರಿಗೆ ಲಸಿಕೆ ಪಡೆಯಲು ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ಅವರಿಗೂ ಕೂಡ ಲಸಿಕೆ ಹಾಕಿಸಿಕೊಂಡ ಬಗ್ಗೆ ಸಂದೇಶಗಳು ಬರುತ್ತಿದ್ದವು. ಈ ಸಮಸ್ಯೆಯನ್ನು ನಿವಾರಿಸಲು, ಕೋವಿನ್ ಅಪ್ಲಿಕೇಶನ್ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಇನ್ಮುಂದೆ ನೀವು ವ್ಯಾಕ್ಸಿನ್ ಗಾಗಿ ಕೋವಿನ್ ಆಪ್ ಅಥವಾ ಪೋರ್ಟಲ್ ಮೇಲೆ ನೋಂದಣಿ ಮಾಡುವಾಗ ನಿಮಗೆ ನಾಲ್ಕು ಅಂಗಗಳ ಪಾಸ್ವರ್ಡ್ ಅಥವಾ OTP ಸಿಗಲಿದೆ. ಅದನ್ನು ನೀವು ಸುರಕ್ಷಿತವಾಗಿರಿಸಬೇಕು. ಆಗ ಮಾತ್ರ ನಿಗದಿತ ವ್ಯಾಕ್ಸಿನೆಶನ್ ದಿನಾಂಕದಂದು ನಿಮಗೆ ವ್ಯಾಕ್ಸಿನ್ ಹಾಕಲಾಗುವುದು.
ಒಂದು ವೇಳೆ ನೀವು ನೋಂದಣಿ ಮಾಡಿದ ಕುರಿತು ಪ್ರಿಂಟಔಟ್ ತೆಗೆದುಕೊಂಡರೆ, ಪ್ರಿಂಟ್ ಔಟ್ ನಲ್ಲಿ OTP ಇರಲಿದೆ. ಇಲ್ಲಿ ವಿಶೇಷ ಎಂದರೆ ಲಸಿಕೆ ಹಾಕುವ ಸಿಬ್ಬಂದಿಗೆ ಈ OTP ಮಾಹಿತಿ ಇರುವುದಿಲ್ಲ. ವ್ಯಾಕ್ಸಿನೇಷನ್ ಸೆಂಟರ್ ಗೆ ನೀವು ಭೇಟಿ ನೀಡಿದಾಗ ಅವರು ನಿಮಗೆ ಈ ಕೋಡ್ ಕುರಿತು ವಿಚಾರಿಸಲಿದ್ದಾರೆ. ನೀವು ಹೇಳಿರುವ ಕೋಡ್ ಅನ್ನು ಸಿಬ್ಬಂದಿ ಕೊವಿನ್ ಪೋರ್ಟಲ್ ನಲ್ಲಿ ನಮೂದಿಸುತ್ತಾರೆ ಹಾಗೂ ನಿಮಗೆ ಲಸಿಕೆ ಹಾಕಲಾಗಿದೆಯೋ ಅಥವಾ ಇಲ್ಲವೋ ಎಂಬುದರ ಮಾಹಿತಿ ಅವರಿಗೆ ಸಿಗಲಿದೆ.
ಕೋವಿಶೀಲ್ಡ್, ಕೊವ್ಯಾಕ್ಸಿನ್ ಅಥವಾ ಸ್ಪುಟ್ನಿಕ್ V (Sputnik V) ವ್ಯಾಕ್ಸಿನ್ ಗಳಲ್ಲಿ ಆಯ್ಕೆಯ ಸ್ವಾತಂತ್ರ್ಯ ನಿಮಗಿರಲಿದೆ
ಕೊರೊನಾ ವ್ಯಾಕ್ಸಿನ್ ಪಡೆದುಕೊಳ್ಳಲು ಬಯಸುವ ಜನರ ಸೌಕರ್ಯಕ್ಕಾಗಿ ಕೋವಿನ್ (CoWin App) ಆಪ್ ನಲ್ಲಿ ಇನ್ನೂ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಆಪ್ ನ ಪ್ರಮುಖ ಡ್ಯಾಶ್ ಬೋರ್ಡ್ ನಲ್ಲಿ ನೋಂದಣಿಗಾಗಿ ನಿಮ್ಮ ಭಾಗದ ಪಿನ್ ಕೋಡ್ ಅಥವಾ ಜಿಲ್ಲೆಯ ಹೆಸರನ್ನು ನಮೂದಿಸುವಿರೋ ನಿಮ್ಮ ಮುಂದೆ ಒಟ್ಟು ಆರು ಆಯ್ಕೆಗಳು ಕಾಣಿಸಲಿವೆ.
1. Age 18+
2. Age 45+
3. Covishield
4. Covaxin
5. Free
6. Paid
ಇದನ್ನೂ ಓದಿ- Good News: 'Corona ಮಹಾಮಾರಿಯ ಅಂತ್ಯಕ್ಕೆ ಈ ಔಷಧಿ ಪರಿಣಾಮಕಾರಿ' ಎಂದ ವಿಜ್ಞಾನಿಗಳು
ಇವುಗಳಿಂದ ನೀವು ನಿಮ್ಮ ಅನಕೂಲಕ್ಕೆ ತಕ್ಕಂತೆ ಆಯ್ಕೆಯನ್ನು ಆರಿಸಬಹುದು. ಅಂದರೆ ಇನ್ಮುಂದೆ ನಿಮಗೆ ವ್ಯಾಕ್ಸಿನ್ ನ ಬ್ರಾಂಡ್, ಉಚಿತ ಅಥವಾ ಹಣಪಾವತಿಸಿ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಸ್ವಾತಂತ್ರ್ಯ ಇರಲಿದೆ.
ಇದನ್ನೂ ಓದಿ- Good News: ಭಾರತೀಯ ಮಾರುಕಟ್ಟೆಯಲ್ಲಿ ತನ್ನ Covid-19 Drug ಬಿಡುಗಡೆಗೊಳಿಸಿದ Bajaj Health Care
ಕೊವಿನ್ ಆಪ್ ನಲ್ಲಿನ ಈ ಬದಲಾವಣೆಗೂ ಮುನ್ನ ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ನಿಮ್ಮ ಮೊಬೈಲ್ ಗೆ ಒಂದು ಸಂದೇಶ ಬರುತ್ತಿತ್ತು. ಆಗ ಮಾತ್ರ ನಿಮಗೆ ಯಾವ ವ್ಯಾಕ್ಸಿನ್ (Corona Vaccine) ಹಾಕಲಾಗಿದೆ ಎಂಬುದರ ಕುರಿತು ಮಾಹಿತಿ ಸಿಗುತ್ತಿತ್ತು. ಆದರೆ, ಈ ಹೊಸ ಬದಲಾವಣೆಯ ಮೂಲಕ ವ್ಯಾಕ್ಸಿನ್ ಕುರಿತಾದ ಎಲ್ಲ ಮಾಹಿತಿ ನಿಮಗೆ ಮೊದಲೇ ಸಿಗಲಿದೆ. ವ್ಯಾಕಿನ್ಸ್ ಹಾಕಿಸಿಕೊಳ್ಳುವಾಗ ವ್ಯಾಕ್ಸಿನ್ ಆಯ್ಕೆಯನ್ನು ನೀಡಬೇಕು ಎಂಬುದು ಹಲವರ ಬೇಡಿಕೆಯಾಗಿತ್ತು. ಭಾರತದಲ್ಲಿ ಪ್ರಸ್ತುತ ಜನರಿಗೆ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಲಾಗುತ್ತಿದೆ. ಇದರ ಜೊತೆಗೆ ಇದೀಗ ರಷ್ಯಾ ವ್ಯಾಕ್ಸಿನ್ ಆಗಿರುವ ಸ್ಪುಟ್ನಿಕ್ V ಕೂಡ ಬಂದಿದೆ. ಅದನ್ನೂ ಕೂಡ ಇದೀಗ ವ್ಯಾಕ್ಸಿನೆಶನ್ ಕಾರ್ಯಕ್ರಮದಲ್ಲಿ ಸೇರಿಸಲಾಗಿದೆ.
ಇದನ್ನೂ ಓದಿ-Good News: Corona ಚಿಕಿತ್ಸೆಗಾಗಿ DRDO ಔಷಧಿ 2-DG ತುರ್ತು ಬಳಕೆಗೆ DGCI ಅನುಮತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.