ಬೆಂಗಳೂರು: ವಿಧಾನ ಸೌಧ ಮತ್ತು ಶಾಸಕರ ಭವನದ ಮಧ್ಯೆ ನಿರ್ಮಾಣವಾಗಿರುವ 22 ಅಡಿ ಎತ್ತರದ ವಾಲ್ಮೀಕಿ ಪ್ರತಿಮೆ ಅಕ್ಟೋಬರ್ 5 ರಂದು ಲೋಕಾರ್ಪಣೆಗೊಳ್ಳಲಿದೆ.
ಎರಡೂವರೆ ಎಕರೆ ಪ್ರದೇಶದಲ್ಲಿ ಅದ್ಭುತವಾದ 'ವಾಲ್ಮೀಕಿ ತಪೋವನ' ನಿರ್ಮಾಣವಾಗಿದೆ. ತಪೋವನದಲ್ಲಿ ಬೃಹತ್ ವಾಲ್ಮೀಕಿ ಪ್ರತಿಮೆ ನಿರ್ಮಾಣವಾಗಿದೆ. ವಾಲ್ಮೀಕಿ ಪ್ರತಿಮೆಯ ಲೋಕಾರ್ಪಣೆಗೆ ಇಂದಿನಿಂದಲೇ ಬೃಹತ್ ವೇದಿಕೆ ಸಜ್ಜಾಗುತ್ತಿದೆ.
ವಾಲ್ಮೀಕಿ ಪ್ರತಿಮೆ ಲೋಕಾರ್ಪಣೆಗೆ ಲಕ್ಷಾಂತರ ಜನ ಆಗಮಿಸುವ ನಿರೀಕ್ಷೆ ಇದ್ದು, ಆಗಮಿಸುವ ಜನರಿಗೆ ರಾಜ್ಯ ಸರ್ಕಾರದಿಂದಲೇ ಅಡುಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಒಂದು ಲಕ್ಷ ಜನರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಸಿದ್ದವಾಗುತ್ತಿದೆ. ವಾಲ್ಮೀಕಿ ಸಮುದಾಯದ ನಾಯಕ, ಎಂಎಲ್ಸಿ ವಿ.ಎಸ್. ಉಗ್ರಪ್ಪ ವ್ಯವಸ್ಥೆಗಳನ್ನು ಖುದ್ದು ಪರಿಶೀಲನೆ ನಡೆಸುತ್ತಿದ್ದಾರೆ.