Akshaya Tritiya: ಒಂದು ರೂಪಾಯಿಗೆ ಸಿಗಲಿದೆ 24 ಕ್ಯಾರೆಟ್ ಶುದ್ಧ ಚಿನ್ನ; ಮನೆಯಲ್ಲೇ ಕುಳಿತು ಶಾಪಿಂಗ್ ಮಾಡಿ

ನಿಮ್ಮ ಬಳಿ  ಗೂಗಲ್‌ಪೇ , ಪೇಟಿಎಂ ಇದ್ದರೆ ಅಥವಾ, ನೀವು ಎಚ್‌ಡಿಎಫ್‌ಸಿ ಬ್ಯಾಂಕ್ ಸೆಕ್ಯುರಿಟೀಸ್, ಮೋತಿಲಾಲ್ ಓಸ್ವಾಲ್  ಗ್ರಾಹಕರಾಗಿದ್ದರೆ, ಮನೆಯಲ್ಲಿ ಕುಳಿತೇ ಕೇವಲ ಒಂದು ರೂಪಾಯಿಗೆ ಚಿನ್ನ ಖರೀದಿ ಮಾಡಬಹುದು.

Written by - Ranjitha R K | Last Updated : May 13, 2021, 02:58 PM IST
  • ಅಕ್ಷಯ ತೃತೀಯದ ದಿನ ಚಿನ್ನ ಖರೀದಿ ಹೇಗೆ ಎಂಬ ಚಿಂತೆಯಲ್ಲಿದ್ದೀರಾ?
  • ಮನೆಯಲ್ಲೇ ಕುಳಿತು ಚಿನ್ನ ಖರೀದಿಸುವ ಅವಕಾಶವಿದೆ
  • ಕೇವಲ ಒಂದು ರೂಪಾಯಿಗೆ 24 ಕ್ಯಾರೆಟ್ ಶುದ್ಧ ಚಿನ್ನ ಖರೀದಿ ಮಾಡಿ
Akshaya Tritiya:  ಒಂದು ರೂಪಾಯಿಗೆ ಸಿಗಲಿದೆ 24 ಕ್ಯಾರೆಟ್ ಶುದ್ಧ ಚಿನ್ನ; ಮನೆಯಲ್ಲೇ ಕುಳಿತು ಶಾಪಿಂಗ್ ಮಾಡಿ title=
ಕೇವಲ ಒಂದು ರೂಪಾಯಿಗೆ 24 ಕ್ಯಾರೆಟ್ ಶುದ್ಧ ಚಿನ್ನ ಖರೀದಿ ಮಾಡಿ (file photo)

ನವದೆಹಲಿ : Akshaya Tritiya  2021: ನಾಳೆ ಅಕ್ಷಯ ತೃತೀಯ. ಅಕ್ಷಯ ತೃತೀಯದ ದಿನ ಚಿನ್ನ ಖರೀದಿ ಮಾಡಿದರೆ ಶುಭ ಎನ್ನುವುದು ನಂಬಿಕೆ. ಆದರೆ ಈ ಬಾರಿ ಕರೋನಾ ಮಹಾಮಾರಿ (Coronavirus) ಹಿನ್ನೆಲೆಯಲ್ಲಿ ಮನೆಯಿಂದ ಹೊರ ಹೋಗುವಂತಿಲ್ಲ. ಹೊರಗೆ ಹೋದರೂ ಚಿನ್ನ ಖರೀದಿಗೆ ಅಂಗಡಿಗಳೇ ತೆರೆದಿಲ್ಲ. ಹಾಗಾಗಿ ಈ ಬಾರಿ ಅಕ್ಷಯ  ತೃತೀಯದ (Akshaya Tritiya) ದಿನ ಚಿನ್ನ ಖರೀದಿ ಸಾಧ್ಯವಿಲ್ಲ ಎಂದು ಬೇಸರಪಡುವ ಅಗತ್ಯವಿಲ್ಲ. ಮನೆಯಲ್ಲಿ ಕುಳಿತೇ ಚಿನ್ನ ಖರೀದಿ ಮಾಡಬಹುದು. ಅದು ಕೂಡಾ 24 ಕ್ಯಾರೆಟ್ ಶುದ್ಧ ಚಿನ್ನ. 

MMTC-PAMP ಯಿಂದ ಚಿನ್ನ ಖರೀದಿಸಿ : 
ನಿಮ್ಮ ಬಳಿ  ಗೂಗಲ್‌ಪೇ (Google Pay) , ಪೇಟಿಎಂ ಇದ್ದರೆ ಅಥವಾ, ನೀವು ಎಚ್‌ಡಿಎಫ್‌ಸಿ ಬ್ಯಾಂಕ್ (HDFC) ಸೆಕ್ಯುರಿಟೀಸ್, ಮೋತಿಲಾಲ್ ಓಸ್ವಾಲ್  ಗ್ರಾಹಕರಾಗಿದ್ದರೆ, ಮನೆಯಲ್ಲಿ ಕುಳಿತೇ ಕೇವಲ ಒಂದು ರೂಪಾಯಿಗೆ ಚಿನ್ನ ಖರೀದಿ ಮಾಡಬಹುದು. ಹೌದು ಒಂದು ರೂಪಾಯಿಗೆ 999.9 ಶುದ್ಧ ಪ್ರಮಾಣೀಕೃತ ಚಿನ್ನವನ್ನು ಡಿಜಿಟಲ್ (Digital Gold) ರೂಪದಲ್ಲಿ ಖರೀದಿಸಬಹುದು. ಈ ಎಲ್ಲಾ ಪ್ಲಾಟ್‌ಫಾರ್ಮ್‌ಗಳು MMTC-PAMP ಯೊಂದಿಗೆ ಒಪ್ಪಂದವನ್ನು ಹೊಂದಿವೆ. ಎಂಎಂಟಿಸಿ-ಪಿಎಎಂಪಿ ಚಿನ್ನದ ರಿಫೈನಿಂಗ್ ಮತ್ತು ಮಿಂಟಿಂಗ್ ಕಂಪನಿಗಳು. ನೀವು  Paytm, PhonePe ಅಥವಾ Stock Holding corp ನಿಂದ ಚಿನ್ನವನ್ನು ಖರೀದಿಸಿದರೆ, ಆ ಚಿನ್ನವನ್ನು MMTC-PAMP ಯ ಸೇಫ್ಟಿ ವಾಲ್ಟ್ಸ್ ಗಳಲ್ಲಿ ಇರಿಸಲಾಗುತ್ತದೆ. ಇನ್ನು  MMTC-PAMPನ ಚಿನ್ನವು 99.9% ಶುದ್ಧ ಚಿನ್ನವಾಗಿದೆ. 

ಇದನ್ನೂ ಓದಿ : PM Kisan : ನಾಳೆಯೇ ರೈತರ ಖಾತೆ ಸೇರಲಿದೆ 8ನೇ ಕಂತಿನ ಹಣ ; ರೈತರೊಂದಿಗೆ ಸಂವಾದ ನಡೆಸಲಿರುವ ಪ್ರಧಾನಿ ಮೋದಿ

ಚಿನ್ನದ ಫಿಸಿಕಲ್ ಡೆಲಿವೆರಿ ಕೂಡಾ ಪಡೆಯಬಹುದು : 
MMTC-PAMP ನಿಂದ ಚಿನ್ನದ ಫಿಸಿಕಲ್ ಡೆಲಿವೆರಿಯನ್ನು ಕೂಡಾ ಪಡೆಯಬಹುದು. ಗೋಲ್ಡ್ ಕಾಯಿನ್ ಅಥವಾ ಬಾರ್ ಮೂಲಕ ಇದನ್ನು ಬದಲಾಯಿಸಿಕೊಳ್ಳಬಹುದು.  ಇಲ್ಲಿ ಖರೀದಿಸಿದ ಚಿನ್ನವನ್ನು ಬ್ರಿಸ್ಕ್, ವಾಲ್ಟ್ ನಲ್ಲಿ ಸ್ಟೋರ್ ಮಾಡಲಾಗುತ್ತದೆ. ಈ ವಹಿವಾಟು ಸಂಪೂರ್ಣವಾಗಿ ಡಿಜಿಟಲ್ ಆಗಿದೆ. ಗ್ರಾಹಕರು ಇಲ್ಲಿ ಖರೀಸಿದ ಚಿನ್ನವನ್ನು (Gold) ಇಲ್ಲೇ ಮಾರಾಟ ಮಾಡುವ ಅವಕಾಶವೂ ಇದೆ. 

ನೀವು ಖರೀದಿಸಿದ ಚಿನ್ನ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ : 
MMTC-PAMP ಯ ಡಿಜಿಟಲ್ ಗೋಲ್ಡ್ ಚಿನ್ನವನ್ನು ಖರೀದಿಸುವ ಅತ್ಯಂತ ಸುರಕ್ಷಿತ ಮಾರ್ಗವೆಂದು ಪರಿಗಣಿಸಲಾಗಿದೆ. ಅದರಲ್ಲಿ ಖರೀದಿಸಿದ ಪ್ರತಿ ಗ್ರಾಂ ಡಿಜಿಟಲ್ ಚಿನ್ನಕ್ಕೆ, ಎಂಎಂಟಿಸಿ-ಪಿಎಎಂಪಿ ಅದೇ ಮೌಲ್ಯದ ಕ್ವಾಲಿಟಿಯನ್ನು ಸ್ಟೋರ್ ಮಾಡಲಾಗುತ್ತದೆ. ಗ್ರಾಹಕರು ಖರೀಸಿದ ಚಿನ್ನವನ್ನು ಅತ್ಯಂತ ಸುರಕ್ಷಿತವಾಗಿ ಇರಿಸಲಾಗುತ್ತದೆ. ಯಾವುದೇ ಅಹಿತರಕರ ಘಟನೆಗಳಿಂದ ಸುರಕ್ಞಿತವಾಗಿಡಲು ಇದರ ವಿಮೆಯನ್ನು (Insurance) ಕೂಡಾ ಮಾಡಿಸಲಾಗುತ್ತದೆ. ಇದರಲ್ಲಿ IDBI ಟ್ರಸ್ಟೀಶಿಪ್ ಸರ್ವೀಸಸ್ ಲಿಮಿಟೆಡ್ ಸೆಕ್ಯುರಿಟಿಸ್ ಟ್ರಸ್ಟಿಯಾಗಿದೆ.

ಇದನ್ನೂ ಓದಿ : ಪ್ರತಿ ದಿನ 7 ರೂಪಾಯಿ ಹೂಡಿಕೆ ಮಾಡಿ ತಿಂಗಳಿಗೆ ಪಡೆಯಿರಿ 5,000 ರೂ; ತಿಳಿದಿರಲಿ ಸರ್ಕಾರದ ಈ ಯೋಜನೆ

Upstox ನಿಂದ ಚಿನ್ನವನ್ನು ಖರೀದಿಸಿ :
ಅಪ್‌ಸ್ಟಾಕ್ಸ್ ಗೋಲ್ಡ್ ಪ್ಲಾಟ್‌ಫಾರ್ಮ್ ಮೂಲಕ ನೀವು 24 ಕ್ಯಾರೆಟ್ ಶುದ್ಧ ಚಿನ್ನವನ್ನು ಡಿಜಿಟಲ್ ರೀತಿಯಲ್ಲಿ ಖರೀದಿಸಬಹುದು.  ಇಲ್ಲಿ ಕೂಡಾ 1 ರೂಪಾಯಿಗೆ ಚಿನ್ನ ಖರೀದಿ ಮಾಡಬಹುದು. ರಿಯಮ್ ಟೈಂ ಆಧಾರದ ಮೇಲೆ ಚಿನ್ನದ ಬೆಲೆಯನ್ನು ಅಪ್ ಡೇಟ್ ಮಾಡಲಾಗುತ್ತದೆ.  ಡಿಜಿಟಲ್ ಚಿನ್ನವನ್ನು ಫಿಸಿಕಲ್ ಗೋಲ್ಡ್ ರೂಪಕ್ಕೆ ಪರಿವರ್ತಿಸುವ ಸೌಲಭ್ಯವನ್ನು Upstox ಶೀಘ್ರವೇ ಗ್ರಾಹಕರಿಗೆ ನೀಡಲಿದೆ. ಇದಾದ ನಂತರ ದೇಶದ ಯಾವ ಮೂಲೆಯಲ್ಲೇ ಇರಲಿ, 0.1 ಗ್ರಾಮವರೆಗಿನ ಚಿನ್ನವನ್ನು ಕೂಡಾ ಯಾವುದೇ ಶುಲ್ಕವಿಲ್ಲದೆ, ವಿಮೆಯೊಂದಿಗೆ ಡೆಲಿವೆರಿ ಮಾಡಲಾಗುವುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News