ನವದೆಹಲಿ: Fake Covid Vaccine Registration - ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ರಮ (Corona Vaccination In India) ಭಾರತದಲ್ಲಿ ನಡೆಯುತ್ತಿದೆ. ಮೇ 1 ರಿಂದ, 18+ ವಯಸ್ಸಿನವರಿಗೆ ಲಸಿಕೆ ಪ್ರಮಾಣವನ್ನು ನೀಡಲು ಸಹ ಅನುಮೋದಿಸಲಾಗಿದೆ, ಆದರೆ ಹೆಚ್ಚಿನ ಸ್ಥಳಗಳಲ್ಲಿ ಸ್ಟಾಕ್ ಕೊರತೆಯಿಂದಾಗಿ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಲಸಿಕೆ ಸರಬರಾಜಿನ ಕೊರತೆಯಿಂದಾಗಿ ಎಲ್ಲಾ ವ್ಯಾಕ್ಸಿನೇಷನ್ ಸ್ಲಾಟ್‌ಗಳನ್ನು ಬುಕ್ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಕರೋನಾ ಲಸಿಕೆ ಪ್ರಮಾಣವನ್ನು ಪಡೆಯಲು ಹೆಚ್ಚಿನ ಜನರು ನಿರಂತರವಾಗಿ ಖಾಲಿ ಸ್ಲಾಟ್ ಗಳಿಗಾಗಿ ಹುಡುಕಿ ಲಸಿಕೆ ಪಡೆಯಲು ಕಾತರರಾಗಿದ್ದಾರೆ.
ಆದರೆ. ಕೆಲ ಕಿಡಿಗೇಡಿಗಳು ಕೋವಿನ್ ಹೆಸರಿನಲ್ಲಿ ನಕಲಿ ಲಸಿಕೆ ನೋಂದಣಿ (Registration For Vaccination) ಅರ್ಜಿಯ ಮೂಲಕ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ. ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಈ ಬಗ್ಗೆ ನಕಲಿ ಅಪ್ಲಿಕೇಶನ್‌ಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದೆ. ಈ ಆಪ್ ಗಳನ್ನು SMS ಲಿಂಕ್ ಗಳ ಮೂಲಕ ಕಳುಹಿಸಲಾಗುತ್ತದೆ. ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದಿಯುವ ಫೈಲ್‌ಗಳನ್ನು ಡೌನ್‌ಲೋಡ್ ಮಾಡದಂತೆ CERT-In ಎಲ್ಲ ಜನರಿಗೆ ಸಲಹೆ ನೀಡಿದೆ.
ಕೆಳಗಿನ ಈ ಐದು APKಗಳನ್ನು ಡೌನ್ ಲೋಡ್ ಮಾಡದಿರಲು ಸಲಹೆ
CERT-In ಪ್ರಕಾರ SMS ಲಿಂಕ್ ಕಳುಹಿಸುವ ಮೂಲಕ ಈ ನಕಲಿ ಆಪ್ ಗಳಿಂದ ಬಳಕೆದಾರರಿಗೆ ಲಸಿಕೆಗಾಗಿ ನೋಂದಣಿ ಮಾಡಲು ಆಫರ್ ನೀಡಿ, ವಂಚನೆ ಎಸಗಲಾಗುತ್ತಿದೆ. ಪ್ರತಿಯೊಂದು ಸಂದೇಶದ ಕಂಟೆಂಟ್ ಭಿನ್ನವಾಗಿದ್ದರೂ ಕೂಡ ಅಂಡ್ರಾಯಿಡ್ ಫೋನ್ ಬಳಕೆದಾರರಿಗೆ ರಿಜಿಸ್ಟ್ರೇಷನ್ ಆಪ್ ಗಳ APK ಫೈಲ್ ಡೌನ್ಲೋಡ್ ಮಾಡಲು ಸೂಚಿಸುತ್ತದೆ. ಈ SMS ಗಳ ಮೂಲಕ ಡೌನ್ ಲೋಡ್ ಲಿಂಕ್ ಕೂಡ ಕಳುಹಿಸಲಾಗುತ್ತಿದೆ.
ಹೀಗಾಗಿ CERT-In ಒಟ್ಟು ಐದು APK ಫೈಲ್ ಗಳನ್ನು ಡೌನ್ಲೋಡ್ ಮಾಡದಿರಲು ಜನರಿಗೆ ಸಲಹೆ ನೀಡಿದೆ. ಈ APK ಫೈಲ್ ಗಳಲ್ಲಿ Covid-19.apk, Vccin-Apply.apk, Cov-Regis.apk, Vaci__Regis.apk ಹಾಗೂ MyVaccin_v2.apkಗಳು ಶಾಮೀಲಾಗಿವೆ.
ಇದನ್ನೂ ಓದಿ-Covaxin, Covishield, Sputnik-V: ಭಾರತದ ಬಳಿ ಮೂರು ಅಸ್ತ್ರಗಳು, ಯಾವುದು ಎಷ್ಟು ಪರಿಣಾಮಕಾರಿ?
ನೀವು ಇನ್ಸ್ಟಾಲ್ ಮಾಡಿದಾಗ ಇನ್ಮ್ಮ ಸ್ನೇಹಿತರಿಗೂ SMS ರವಾನಿಸಲಾಗುತ್ತಿದೆಯಂತೆ
ಒಮ್ಮೆ ಈ ಅಪ್ಲಿಕೇಶನ್ ನಿಮ್ಮ ಮೊಬೈಲ್ ಗೆ ಡೌನ್ಲೋಡ್ ಆದ ಬಳಿಕ, ನಿಮ್ಮ ಫೋನ್ ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಪ್ರತಿಯೊಬ್ಬರಿಗೂ ಕೂಡ SMS ಲಿಂಕ್ ಕಳುಹಿಸಲಾಗುತ್ತಿದೆ ಎಂಬುದನ್ನು CERT-In ಪತ್ತೆಹಚ್ಚಿದೆ. ಈ ಆಪ್ ಗಳು ಕೇಳುವ ಪರ್ಮಿಶನ್ ಗಳನ್ನು ನೀಡದಂತೆ ಮೊಬೈಲ್ ಫೋನ್ ಬಳಕೆದಾರರಿಗೆ CERT-In ಎಚ್ಚರಿಕೆ ನೀಡಿದೆ. ಈ ನಕಲಿ ಆಪ್ ಗಳು ಬಳಕೆದಾರರ ಪಾಸ್ವರ್ಡ್ ಸೇರಿದಂತೆ ಇತರೆ ವೈಯಕ್ತಿಕ ಮಾಹಿತಿಗಳನ್ನು ಕೂಡ ಕದಿಯುವ ಸಾಧ್ಯತೆ ಇದೆ.
ಇದನ್ನೂ ಓದಿ- Sputnik V Price In India: ರಷ್ಯಾ ಕೊರೊನಾ ಲಸಿಕೆ Sputnik V ಬೆಲೆ ಘೋಷಣೆ
ಇದಲ್ಲದೆ ಕೊರೊನಾ ವ್ಯಾಕ್ಸಿನ್ ರಿಜಿಸ್ಟ್ರೇಷನ್ ಕುರಿತು ಭರವಸೆ ನೀಡುವ ಇಂತಹ ನಕಲಿ ಡೊಮೇನ್, ಇ-ಮೇಲ್ ಗಳು ಹಾಗೂ ಟೆಸ್ಟ್ ಮೆಸೇಜ್ ಗಳಿಂದ ದೂರ ಇರಲು ಜನರಿಗೆ CERT-In ಸಲಹೆ ನೀಡಿದೆ. ವ್ಯಾಕ್ಸಿನೆಶನ್ ನೋಂದಣಿಗಾಗಿ ಕೇವಲ cowin.gov.in ಒಂದೇ ಅಧಿಕೃತ ತಾಣವಾಗಿದೆ. ಕೆಲ ಆಪ್ ಗಳು ಹಾಗೂ ವೆಬ್ ಸೈಟ್ ಗಳು ಅತ್ಯಾವಶ್ಯಕ ಸ್ಲಾಟ್ ಗಳ ಕುರಿತು ಅಪ್ಡೇಟ್ ನೀಡುತ್ತಿವೆ ಆದರೆ, ಅವುಗಳಲ್ಲಿ ಕೇವಲ ನಿಮಗೆ ಖಾಲಿ ಸ್ಲಾಟ್ ಗಳ ಮಾಹಿತಿ ಮಾತ್ರ ಸಿಗಲಿದೆ. ರಿಜಿಸ್ಟ್ರೇಷನ್ ಗಾಗಿ ಅಧಿಕೃತ ತಾಣಕ್ಕೆ ಮಾತ್ರ ಭೇಟಿ ನೀಡುವ ಅವಶ್ಯಕತೆ ಇದೆ.
ಇದನ್ನೂ ಓದಿ- ಕರೋನಾ ಲಸಿಕೆ ಹಾಕಿಸಿಕೊಂಡರೆ 7 ಕೋಟಿ ರೂ ಗೆಲ್ಲುವ ಅವಕಾಶ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.