ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಉತ್ತಮ ಆಟಗಾರ ಮಾತ್ರವಲ್ಲ, ಉತ್ತಮ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯೂ ಹೌದು. ತನ್ನ ಆಟದಿಂದ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿರುವ ಈ ಆಟಗಾರ ಮತ್ತೊಮ್ಮೆ ಎಲ್ಲರ ಹೃದಯಗಳನ್ನು ಗೆದ್ದಿದ್ದಾರೆ.
ವಿರಾಟ್ ಕೊಹ್ಲಿ ಈಗಾಗಲೇ ಕರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಅಭಿಯಾನ ಒಂದನ್ನು ಆರಂಭಿಸಿದ್ದಾರೆ. ಇದಲ್ಲದೆ, ವಿರಾಟ್ ತನ್ನ ಕೈಲಾದ ಸಹಾಯ ಮಾಡುವುದರಿಂದ ಹಿಂದೆ ಸರಿಯುತ್ತಿಲ್ಲ. ವಾಸ್ತವವಾಗಿ, ಟೀಮ್ ಇಂಡಿಯಾದ ಮಾಜಿ ಮಹಿಳಾ ಕ್ರಿಕೆಟರ್ ತಾಯಿಯ ಜೀವ ಉಳಿಸುವಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವಿರಾಟ್ ಕೊಹ್ಲಿ ಮಾಜಿ ಮಹಿಳಾ ಕ್ರಿಕೆಟರ್ ಕೆ.ಎಸ್.ಶ್ರಾವಂತಿ ನಾಯ್ಡು (KS Sravanthi Naidu) ಅವರ ತಾಯಿ ಚಿಕಿತ್ಸೆಗೆ ಅಗತ್ಯವಾದ ಹಣ ಒದಗಿಸುವ ಮೂಲಕ ಅವರಿಗೆ ಸಹಾಯ ಮಾಡಿದ್ದಾರೆ. ಕೆ.ಎಸ್.ಶ್ರಾವಂತಿ ಅವರ ತಾಯಿ ಎಸ್.ಕೆ.ಸುಮನ್ ಕರೋನಾ ಸೋಂಕಿನಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ತುಂಬಾ ಗಂಭೀರವಾಗಿತ್ತು. ಆದರೆ ಅವರ ಚಿಕಿತ್ಸೆಗೆ ಅಗತ್ಯವಿರುವಷ್ಟು ಹಣ ಒದಗಿಸಲು ಪರದಾಡುತ್ತಿದ್ದ ಕೆ.ಎಸ್.ಶ್ರಾವಂತಿ ನಾಯ್ಡು ಅವರಿಗೆ ವಿರಾಟ್ ಕೊಹ್ಲಿ ಆರ್ಥಿಕ ನೆರವು ನೀಡಿದ್ದಾರೆ.
ಇದನ್ನೂ ಓದಿ - Shiv Sundar Das: ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಆಗಿ ಶಿವ ಸುಂದರ್ ದಾಸ್ ಆಯ್ಕೆ
ವಾಸ್ತವವಾಗಿ, ಕೆ.ಎಸ್.ಶ್ರಾವಂತಿ ನಾಯ್ಡು ತನ್ನ ಹೆತ್ತವರ ಚಿಕಿತ್ಸೆಗಾಗಿ ಸುಮಾರು 16 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಇದೀಗ ಅವರ ತಾಯಿ ಚಿಕಿತ್ಸೆಗಾಗಿ ಇನ್ನೂ ಕೂಡ ಹಣದ ಅಗತ್ಯವಿದ್ದು ಶ್ರಾವಂತಿ ತನ್ನ ತಾಯಿಯ ಚಿಕಿತ್ಸೆಗೆ ನೆರವಾಗುವಂತೆ ಬಿಸಿಸಿಐ ಮತ್ತು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಸಹಾಯವನ್ನು ಕೋರಿದರು. ಈ ಹಿನ್ನಲೆಯಲ್ಲಿ ಬಿಸಿಸಿಐನ ದಕ್ಷಿಣ ವಲಯದ ಮಾಜಿ ಸಂಯೋಜಕರಾದ ಎನ್ ವಿದ್ಯಾ ಯಾದವ್ ಅವರು ಶ್ರಾವಂತಿ ಅವರ ತಾಯಿಗೆ ಟ್ವೀಟ್ ನಲ್ಲಿ ಸಹಾಯ ಕೋರಿದ್ದಾರೆ, ಅದರಲ್ಲಿ ಅವರು ವಿರಾಟ್ ಕೊಹ್ಲಿಯನ್ನೂ (Virat Kohli) ಟ್ಯಾಗ್ ಮಾಡಿದ್ದಾರೆ.
ಟ್ವಿಟ್ಟರ್ ಮೂಲಕ ಶ್ರಾವಂತಿಯ ಕಷ್ಟಗಳ ಬಗ್ಗೆ ತಿಳಿದುಕೊಂಡ ವಿರಾಟ್ ಕೊಹ್ಲಿ ಕೂಡಲೇ ಶ್ರಾವಂತಿ ಅವರಿಗೆ 6.77 ಲಕ್ಷ ರೂಪಾಯಿ ಧನ ಸಹಾಯ ಒದಗಿಸಿದ್ದಾರೆ.
ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಕೂಡ ಶ್ರಾವಂತಿ ಅವರ ತಾಯಿ ಚಿಕಿತ್ಸೆಗಾಗಿ ಹಣ ನೀಡಿದ್ದು, ಈ ಸಮಯದಲ್ಲಿ ಅವರು ವಿರಾಟ್ ಕೊಹ್ಲಿಗೆ ಈ ಬಗ್ಗೆ ತಿಳಿಸಿದರು.
ಇದನ್ನೂ ಓದಿ - Asia Cup 2021 Called Off: ಕೊರೊನಾ ವೈರಸ್ ಹಿನ್ನೆಲೆ ಮತ್ತೊಂದು ದೊಡ್ಡ ಟೂರ್ನಿ ರದ್ದು, ಮುಂದಿನ ಎರಡು ವರ್ಷ ನಡೆಯೋಲ್ಲ ಟೂರ್ನಾಮೆಂಟ್
ವಿದ್ಯಾ ಯಾದವ್ ಈ ಬಗ್ಗೆ ಸ್ಪೋರ್ಟ್ಸ್ಟಾರ್ಗೆ ಮಾಹಿತಿ ನೀಡಿದ್ದು, 'ನಿಜ ಹೇಳಬೇಕೆಂದರೆ, ಅವರ ತಕ್ಷಣದ ಸಹಾಯವನ್ನು ನೋಡಿ ನನಗೆ ಆಶ್ಚರ್ಯವಾಯಿತು. ಅಂತಹ ಮಹಾನ್ ಕ್ರಿಕೆಟಿಗ ಅಂತಹ ಅದ್ಭುತ ಹೆಜ್ಜೆ ಇಟ್ಟರು. ಭಾರತೀಯ ಪುರುಷರ ಕ್ರಿಕೆಟ್ ತಂಡದ ಫೀಲ್ಡಿಂಗ್ ತರಬೇತುದಾರ ಆರ್.ಶ್ರೀಧರ್ ಅವರಿಗೂ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ.
ವಿರಾಟ್-ಅನುಷ್ಕಾ ಅವರ ಕ್ಯಾಟೊ ಅಭಿಯಾನ:
ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ದೇಶದ ಹೋರಾಟಕ್ಕೆ ಸಹಾಯ ಮಾಡಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಎರಡು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಅಷ್ಟೇ ಅಲ್ಲ, ಇಬ್ಬರೂ ಕ್ಯಾಟೊ ಅಭಿಯಾನದ ಮೂಲಕ 11 ಕೋಟಿ ರೂ. ಸಂಗ್ರಹಿಸಿದ್ದಾರೆ. ಕರೋನಾ ಚಿಕಿತ್ಸೆಯಲ್ಲಿ ಅಗತ್ಯವಿರುವ ಆಕ್ಸಿಜನ್ ಸರಬರಾಜು, ವೆಂಟಿಲೇಟರ್ ಮತ್ತು ಔಷಧಿಗಳಿಗಾಗಿ ಈ ಹಣವನ್ನು ಸಂಗ್ರಹಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.