ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ (Anushka Sharma) 16 ಕೋಟಿ ಸಂಗ್ರಹಿಸಿ ಮುಗ್ಧ ಮಗುವಿನ ಪ್ರಾಣ ಉಳಿಸಿದ್ದಾರೆ. ಅಯಾನ್ಶ್ ಗುಪ್ತಾ ಎಂಬ ಮಗುವಿಗೆ ಎಸ್‌ಎಂಎ (ಬೆನ್ನುಮೂಳೆಯ ಸ್ನಾಯು ಕ್ಷೀಣತೆ) ಎಂಬ ಕಾಯಿಲೆ ಇತ್ತು. ಅಯಾನ್ಶ್ ಚಿಕಿತ್ಸೆಗೆ ಸುಮಾರು 16 ಕೋಟಿ ಮೌಲ್ಯದ ಬಹಳ ದುಬಾರಿ ಔಷಧಿಯ ಅಗತ್ಯವಿತ್ತು. ಅಯಾನ್ಶ್ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು, ಅವರ ಪೋಷಕರು 'AyaanshFightsSMA' ಹೆಸರಿನಲ್ಲಿ ಟ್ವಿಟರ್ ಖಾತೆಯನ್ನು ರಚಿಸಿದ್ದರು. ಇದೀಗ ಈ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿರಾಟ್ ಮತ್ತು ಅನುಷ್ಕಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಮಗುವಿನ ಚಿಕಿತ್ಸೆಗೆ 16 ಕೋಟಿ ಮೌಲ್ಯದ ಔಷಧಿ ಒದಗಿಸಲು ಕೈ ಜೋಡಿಸಿ ವಿರಾಟ್-ಅನುಷ್ಕಾ:
'AyaanshFightsSMA' ಯಿಂದ ಟ್ವೀಟ್ ಮಾಡಲಾಗಿದ್ದು, 'ಈ ಕಷ್ಟದ ಪ್ರಯಾಣವು ಅಂತಹ ಸುಂದರವಾದ ಅಂತ್ಯವನ್ನು ಹೊಂದಿರುತ್ತದೆ ಎಂದು ನಾವು ಎಂದಿಗೂ ಭಾವಿಸಿರಲಿಲ್ಲ. ಅಯಾನ್ಶ್ ಔಷಧಿಗಾಗಿ ನಮಗೆ 16 ಕೋಟಿ ರೂ. ಅಗತ್ಯವಿತ್ತು. ಇದೀಗ ನಮಗೆ ಇಷ್ಟು ಹಣ ದೊರೆತಿದೆ ಎಂದು ಹೇಳಲು ನಮಗೆ ತುಂಬಾ ಸಂತೋಷವಾಗಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಇದು ನಿಮ್ಮ ಗೆಲುವು ಎಂದು ಬರೆದಿದ್ದಾರೆ.
WE DID IT!!!
Never thought that this arduous journey we set on to #saveayaanshgupta would culminate this beautifully. Happy to announce tht we have reachd ₹16 Cr. needed to get #Zolgensma for #Ayaansh. A big thank you to every person who supported us. This is your victory.✌️✌️ pic.twitter.com/n0mVl1BvGv
— AyaanshFightsSMA (@FightsSma) May 23, 2021
ಇದನ್ನೂ ಓದಿ - #CycloneYaas ಪೀಡಿತ ಪ್ರದೇಶಗಳಿಂದ ನಿರಾಶ್ರಿತರ ಶಿಬಿರಕ್ಕೆ ತೆರಳುವಂತೆ ಒಡಿಶಾ ಸಿಎಂ ಮನವಿ
ಅಭಿಮಾನಿಗಳ ಹೃದಯ ಗೆದ್ದ ವಿರಾಟ್-ಅನುಷ್ಕಾ:
‘AyaanshFightsSMA’ ಇನ್ನೊಂದು ಟ್ವೀಟ್ ನಲ್ಲಿ, 'ಕೊಹ್ಲಿ ಮತ್ತು ಅನುಷ್ಕಾ ಶರ್ಮಾ (Anushka Sharma) ಅವರನ್ನು ನಾವು ಯಾವಾಗಲೂ ಅಭಿಮಾನಿಯಾಗಿ ಪ್ರೀತಿಸುತ್ತಿದ್ದೆವು, ಆದರೆ ನೀವು ಅಯನ್‌ಶ್‌ಗಾಗಿ ಏನು ಮಾಡಿದ್ದೀರಿ ಮತ್ತು ಈ ಅಭಿಯಾನವು ನಿರೀಕ್ಷೆಗಳನ್ನು ಮೀರಿದೆ. ಜೀವನದ ಪಂದ್ಯವನ್ನು ಸಿಕ್ಸರ್‌ಗಳೊಂದಿಗೆ ಗೆಲ್ಲಲು ನೀವು ನಮಗೆ ಸಹಾಯ ಮಾಡಿದ್ದೀರಿ ಎಂದು ವಿರುಷ್ಕಾ ದಂಪತಿಗೆ ತಮ್ಮ ಧನ್ಯವಾದ ಅರ್ಪಿಸಿದ್ದಾರೆ.
@imVkohli & @AnushkaSharma - we always loved you as fans. But what you have done for Ayaansh and this campaign is beyond what we expected. Thanks for your generosity. You helped us win this match of life with a six! Will always be indebted for your help to #saveayaanshgupta pic.twitter.com/vJUozH2o2r
— AyaanshFightsSMA (@FightsSma) May 23, 2021
ಇದನ್ನೂ ಓದಿ - Cyclone Yaas Latest Update : ವಿನಾಶಕಾರಿಯಾಗಿರಲಿದೆ ಯಾಸ್ ಚಂಡಮಾರುತ; ಈ ರಾಜ್ಯಗಳಿಗೆ ಹೆಚ್ಚಿನ ಅಪಾಯ
ಕರೋನಾ ವಿರುದ್ಧದ ಹೋರಾಟದಲ್ಲಿ ವಿರಾಟ್-ಅನುಷ್ಕಾ :
ಕರೋನಾ ವಿರುದ್ಧದ ಯುದ್ಧದಲ್ಲಿ ಜನರಿಗೆ ಸಹಾಯ ಮಾಡಲು ವಿರಾಟ್ ಕೊಹ್ಲಿ (Virat Kohli) ಮತ್ತು ಅನುಷ್ಕಾ ಶರ್ಮಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ವಿರಾಟ್-ಅನುಷ್ಕಾ ಕಿಟ್ಟೋ ಅಭಿಯಾನದ ಮೂಲಕ 11 ಕೋಟಿ ರೂ. ಸಂಗ್ರಹಿಸಿದ್ದಾರೆ. ಈ ಹಣವನ್ನು ಕರೋನಾ ಚಿಕಿತ್ಸೆಯಲ್ಲಿ ಬಳಸಲಾಗುವ ಆಮ್ಲಜನಕ ಮತ್ತು ಇತರ ವೈದ್ಯಕೀಯ ಸೌಲಭ್ಯಗಳಿಗಾಗಿ ಬಳಸಲಾಗುತ್ತಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.