Savings Bank Account And Tax: ಬ್ಯಾಂಕ್ ನ Savings Account ನಲ್ಲಿರುವ ಎಷ್ಟು ಠೇವಣಿ Tax Free ಆಗಿರುತ್ತದೆ?

Savings Bank Account And Tax - ಒಂದು ಆರ್ಥಿಕ ವರ್ಷದಲ್ಲಿ (Financial Year) ನೀವು ನಿಮ್ಮ ಉಳಿತಾಯ ಖಾತೆಗೆ ಎಷ್ಟು ಹಣವನ್ನು ಸೇರಿಸಿದರೆ ಹಾಗೂ ಹಿಂಪಡೆದರೆ ಅಂದು ಟ್ಯಾಕ್ಸ್ ಪರಧಿಗೆ ಒಳಗಾಗುವುದಿಲ್ಲ ಎಂಬುದು ಹಲವರಿಗೆ ತಿಳಿದಿಲ್ಲ.

Written by - Nitin Tabib | Last Updated : May 30, 2021, 10:41 PM IST
  • ಒಂದು ಉಳಿತಾಯ ಖಾತೆಗೆ ಎಷ್ಟು ಹಣ ಸೇರಿಸಬೇಕು?
  • ಒಂದು ಉಳಿತಾಯ ಖಾತೆಯಿಂದ ಎಷ್ಟು ಹಣ ಹಿಂಪಡೆಯಬೇಕು?
  • ಎಷ್ಟು ಸೇರಿಸಿದರೆ ಅಥವಾ ಹಿಂಪಡೆದರೆ, ಟ್ಯಾಕ್ಸ್ ಪರಿಧಿಯಿಂದ ಪಾರಾಗಬಹುದು?
Savings Bank Account And Tax: ಬ್ಯಾಂಕ್ ನ Savings Account ನಲ್ಲಿರುವ ಎಷ್ಟು ಠೇವಣಿ Tax Free ಆಗಿರುತ್ತದೆ? title=
Savings Bank Account And Tax (File Photo)

ನವದೆಹಲಿ: Savings Bank Account And Tax  - ದೇಶದ ಹಲವು ಜನರು ಉಳಿತಾಯ ಖಾತೆಗಳನ್ನು (Savings Account) ಹೊಂದಿದ್ದಾರೆ. ಹೀಗಿರುವಾಗ ಇಂತಹ ಜನರು ತಮ್ಮ ಖಾತೆಯಲ್ಲಿರುವ ಎಷ್ಟು ಹಣಕ್ಕೆ ಟ್ಯಾಕ್ಸ್ (Income Tax) ಬೀಳುತ್ತದೆ ಮತ್ತು ಎಷ್ಟು ಹಣಕ್ಕೆ ಟ್ಯಾಕ್ಸ್ ಬೀಳುವುದಿಲ್ಲ ಎಂಬುದು ತಿಳಿಯುವುದು ಅವಶ್ಯಕವಾಗಿದೆ. ವಾಸ್ತವದಲ್ಲಿ ಬ್ಯಾಂಕ್ ಗಳ ವತಿಯಿಂದ ಸೇವಿಂಗ್ಸ್ ಅಕೌಂಟ್ ಮೇಲೆ ವಾರ್ಷಿಕ ಬಡ್ಡಿ (Annual Interest) ಪಾವತಿಸಲಾಗುತ್ತದೆ. ಆದರೆ, ವಿಭಿನ್ನ ಬ್ಯಾಂಕ್ ಗಳು ಬೇರೆ ಬೇರೆ ಬಡ್ಡಿದರ ಹೊಂದಿವೆ. ಇನ್ನೊಂದೆಡೆ ಕೆಲ ಗ್ರಾಹಕರಿಗೆ ಒಂದು ಆರ್ಥಿಕ ವರ್ಷದಲ್ಲಿ ಅವರು ಎಷ್ಟು ಹಣ ಹಾಕಬೇಕು ಹಾಗು ಎಷ್ಟು ಹಣವನ್ನು ಹಿಂಪಡೆಯಬೇಕು ಮತ್ತು ಟ್ಯಾಕ್ಸ್ ಪರಿಧಿಯಿಂದ ಹೇಗೆ ತಪ್ಪಿಸಿಕೊಳ್ಳಬೇಕು ತಿಳಿದಿರುವುದಿಲ್ಲ.  ಹಾಗಾದರೆ ಬನ್ನಿ ಅದನ್ನು ತಿಳಿದುಕೊಳ್ಳೋಣ.

ತೆರಿಗೆ ವಿಭಾಗಕ್ಕೆ (Income Tax Department) ಮಾಹಿತಿ ನೀಡಬೇಕು
ಬ್ಯಾಂಕ್ ಗಳು ಪ್ರತಿ ವರ್ಷ ತೆರಿಗೆ ವಿಭಾಗಕ್ಕೆ ಬ್ಯಾಂಕ್ ನಿಂದ ಗ್ರಾಹಕರ ಮೂಲಕ 10 ಲಕ್ಷ ರೂ. ಗಿಂತ ಹೆಚ್ಚಿನ ಹಣ ಹಿಂಪಡೆಯುವಿಕೆಯ ವರದಿ ಸಲ್ಲಿಸಬೇಕು. ಈ ಮಿತಿಯನ್ನು ಒಂದು ಹಣಕಾಸು ವರ್ಷದಲ್ಲಿ ಒಂದು ಮಿಲಿಯನ್ ರೂಪಾಯಿಗಳು ಅಥವಾ ಅದಕ್ಕಿಂತ ಹೆಚ್ಚಿನ ನಗದು ಠೇವಣಿಗಳಿಗಾಗಿ ತೆರಿಗೆದಾರರ ಒಂದು ಅಥವಾ ಹೆಚ್ಚಿನ ಖಾತೆಗಳಿಗೆ (ಚಾಲ್ತಿ ಖಾತೆಗಳು (Current Account) ಮತ್ತು ಸಮಯ ಠೇವಣಿಗಳ (Time Deposit) ಜೊತೆಗೆ) ಒಟ್ಟಾರೆಯಾಗಿ ಪರಿಗಣಿಸಲಾಗುತ್ತದೆ.

ಕೇವಲ ಇಷ್ಟೇ ಹಣವನ್ನು ಡಿಪಾಸಿಟ್ ಮಾಡಬಹುದು
ಕರೆಂಟ್ ಅಕೌಂಟ್ ನಲ್ಲಿ ಕ್ಯಾಶ್ ಡಿಪಾಸಿಟ್ ಲಿಮಿಟ್ (Cash Deposit Limit) 50 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಾಗಿದೆ. ವಹಿವಾಟಿನ ಕುರಿತು ಹೇಳುವುದಾದರೆ, ಈ ಕುರಿತು ಹೇಳುವ ಹೋಸ್ಟ್ ಬುಕ್ ಲಿಮಿಟೆಡ್ (Host Book Limited) ಸಂಸ್ಥಾಪಕ ಹಾಗೂ ಅಧ್ಯಕ್ಷ ಕಪಿಲ್ ರಾಣಾ, ಓರ್ವ ವ್ಯಕ್ತಿಯ ಖಾತೆಯ ಮೂಲಕ ಮಾಡಲಾಗುವ ಆಯವ್ಯಯದ (Transaction) ಕುರಿತು ಆದಾಯ ತೆರಿಗೆ ನಿಯಮ 114E ಇಲಾಖೆಗೆ ಮಾಹಿತಿ ಇರಬೇಕು. ಇದರಿಂದ ಆ ವ್ಯಕ್ತಿ ಒಂದು ಆರ್ಥಿಕ ವರ್ಷದಲ್ಲಿ ತನ್ನ ಸೇವಿಂಗ್ ಅಕೌಂಟ್ (Bank Account) ನಿಂದ ಅಷ್ಟೇ ಹಣವನ್ನು ಹಿಂಪಡೆಯಬಹುದು ಅಥವಾ ಜಮೆ ಮಾಡಿ ಟ್ಯಾಕ್ಸ್ ಪರದಿಯಿಂದ ಪಾರಾಗಬೇಕು (Tax Saving) ಎನ್ನುತ್ತಾರೆ.

ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಿ
>>ಸರ್ಕಾರಿ ಬ್ಯಾಂಕ್ ಆಗಲಿ ಅಥವಾ ಖಾಸಗಿ ಬ್ಯಾಂಕ್ ಆಗಲಿ, ಗ್ರಾಹಕರಿಗೆ ಖಾತೆ ತೆರೆಯುವ ಸೌಲಭ್ಯವನ್ನು ನೀಡುತ್ತವೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949  ( Banking Regulation Act 1949) ಆ ಬ್ಯಾಂಕುಗಳಿಗೆ ಅನ್ವಯಿಸುತ್ತದೆ. ಇಂತಹ ಬ್ಯಾಂಕ್ ಗಳಿಗೆ ವಹಿವಾಟಿನ ವರದಿ ನೀಡುವುದು ಅನಿವಾರ್ಯವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಕರೆಂಟ್ ಮತ್ತು ಟೈಮ್ ಡಿಪಾಸಿಟ್  ಹೊಂದಿರುವ ಖಾತೆಗಳನ್ನು ಹೊರತುಪಡಿಸಿ, ಹಣಕಾಸು ವರ್ಷದಲ್ಲಿ 10 ಮಿಲಿಯನ್ ರೂಪಾಯಿ ಅಥವಾ ಹೆಚ್ಚಿನದನ್ನು ನಗದು ಜಮಾ ಮಾಡಲಾಗುವ ಖಾತೆಗಳ ಕುರಿತು ವರದಿ ಮಾಡಬೇಕು.

ಇನ್ನೊಂದೆಡೆ ಪೇಮೆಂಟ್  ಅಥವಾ ಸೆಟಲ್ಮೆಂಟ್ ಸಿಸ್ಟಮ್ ಆಕ್ಟ್ 2007 ಸೆಕ್ಷನ್ 18ರ ಅಡಿ RBI (RBI Policy) ವತಿಯಿಂದ ಜಾರಿಗೊಳಿಸಲಾಗಿರುವ ಬ್ಯಾಂಕ್ ಡ್ರಾಫ್ಟ್ , ಪೆ ಆರ್ಡರ್, ಬ್ಯಾಂಕರ್ ಚೆಕ್, ಪ್ರೀಪೇಡ್ ಇನ್ಸ್ಟ್ರುಮೆಂಟ್ಸ್ ಖರೀದಿಗಾಗಿ ಒಂದು ಆರ್ಥಿಕ ವರ್ಷದಲ್ಲಿ ನಗದು ಒಗ್ಗೂಡಿಸುವಿಕೆ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಪೇಮೆಂಟ್ ನಡೆದಿರಬೇಕು ಎನ್ನಲಾಗಿದೆ. 

ಇದನ್ನೂ ಓದಿ-Emergency Credit Line Guarantee ಯೋಜನೆಯ ವ್ಯಾಪ್ತಿ ವಿಸ್ತರಿಸಿದ ಕೇಂದ್ರ ಸರ್ಕಾರ

ಕ್ರೆಡಿಟ್ ಕಾರ್ಡ್ ಪಾವತಿ
ಯಾವ ಬ್ಯಾಂಕ್ ಗಳು ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಜಾರಿಗೊಳಿಸುತ್ತವೆಯೋ ಅವುಗಳ ಮೇಲೂ ಕೂಡ  Banking Regulation Act 1949 ಅನ್ವಯಿಸುತ್ತದೆ ಅಥವಾ ಬೇರೆಯಾವುದದರೊಂದು ಕಂಪನಿ-ಸಂಸ್ಥೆಗಳಿಗೆ ವಹಿವಾಟಿನ ವರದಿ ನೀಡುವುದು ಆವಶ್ಯಕವಾಗಿದೆ. 

ಇದನ್ನೂ ಓದಿ-Extremely Rare Notes: 5 ರೂ.ಗಳ ಈ ನೋಟು ನಿಮಗೆ ದೊಡ್ಡ ಆದಾಯ ನೀಡಲಿದೆ, ಇದರಲ್ಲಡಗಿವೆ ವಿಶೇಷ ಸಂಗತಿಗಳು

ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್  ಹೊಂದಿದವರು ಹಾಗೂ ಬಿಲ್ ವಿರುದ್ಧ ಒಂದು ಆರ್ಥಿಕ ವರ್ಷದಲ್ಲಿ ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಕ್ಯಾಶ್ ಪಾವತಿ ಮಾಡಬೇಕು. ಜೊತೆಗೆ ಬಿಲ್ ವಿರುದ್ಧ ಯಾವುದೇ ಮೋಡ್ ಮೂಲಕ 10 ಲಕ್ಷ ಅಥವಾ ಅದಕ್ಕಿಂತ ಅಧಿಕ ಪೇಮೆಂಟ್ ಮಾಡಬೇಕು.

ಇದನ್ನೂ ಓದಿ-EPFO Big Decision: ಜೂನ್ 1 ರಿಂದ ನಿಮ್ಮ PF ಖಾತೆಗೆ ಹೊಸ ನಿಯಮ ಅನ್ವಯ, ಇಲ್ಲದಿದ್ದರೆ ಹಾನಿ ಸಾಧ್ಯತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News