ನವದೆಹಲಿ: CSIR Society Meeting 2021 - ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಸೊಸೈಟಿ ಆಯೋಜಿಸಿರುವ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ. ಈ ವೇಳೆ ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿರುವ ಅವರು, ವಿಜ್ಞಾನ (Science) ಎಂದಿಗೂ ಕೂಡ ಬಿಕ್ಕಟ್ಟಿಗೆ ಪರಿಹಾರ ಸೂಚಿಸಿದೆ ಎಂದು ಹೇಳಿದ್ದಾರೆ.
CSIR works as institutional arrangement to maintain system for science, society & industry in our country. This institution of ours has produced several talented scientists. Great scientist like Shanti Swaroop Bhatnagar has led this institution: PM addressing CSIR society meeting pic.twitter.com/usgUSv8U1r
— ANI (@ANI) June 4, 2021
ಭವಿಷ್ಯದಲ್ಲಿ ಕ್ಲೈಮೆಟ್ ಚೇಂಜ್ (Climate Change) ಸವಾಲಾಗಿ ಪರಿಣಮಿಸಲಿದೆ: PM
ಸಿಎಸ್ಐಆರ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಎಂ ನರೇಂದ್ರ ಮೋದಿ (PM Narendra Modi)ಅವರು ಭವಿಷ್ಯದ ಸವಾಲುಗಳ ಬಗ್ಗೆ ಜಗತ್ತಿಗೆ ಮುನ್ನೆಚ್ಚರಿಕೆ ನೀಡಿದ್ದು, ಮುಂಬರುವ ದಿನಗಳಲ್ಲಿ ಹವಾಮಾನ ಬದಲಾವಣೆಯು ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಹೇಳಿದ್ದು, ಇಂದಿನಿಂದಲೇ ನಾವು ಅದಕ್ಕಾಗಿ ಸಿದ್ಧತೆಗಳನ್ನು ನಡೆಸಬೇಕಿದೆ ಎಂದಿದ್ದಾರೆ.
From agriculture to astronomy, disaster management to defence technology, vaccine to virtual reality, India aspires to become self-reliant & empowered in every direction. India is leading world in fields of sustainable development & clean energy: PM during CSIR society meeting pic.twitter.com/t5tCtNmwsm
— ANI (@ANI) June 4, 2021
ಕೊರೊನಾ ಈ ಶತಮಾನದ ಅತಿ ದೊಡ್ಡ ಸವಾಲು: ಪ್ರಧಾನಿ (CSIR Society Meeting Updates)
ಸಭೆಯನ್ನುದ್ದೇಶಿಸಿ ಮಾತನಾಡಿರುವ (Modi Speech Today) ಅವರು, ಕೊರೊನಾ ಸಾಂಕ್ರಾಮಿಕ (Coronavirus Pandemic) ರೂಗ ಈ ಶತಮಾನದ ಅತಿ ದೊಡ್ಡ ಸವಾಲಾಗಿ ಹೊರಹೊಮ್ಮಿ ಇಡೀ ವಿಶ್ವವನ್ನು ತಲ್ಲಣಗೊಳಿಸಿದೆ. ಆದರೆ, ಮಾನವೀಯತೆಯ ಮೇಲೆ ಅತಿ ದೊಡ್ಡ ಬಿಕ್ಕಟ್ಟು ಎದುರಾದಾಗ, ವಿಜ್ಞಾನ ಮತ್ತಷ್ಟು ಉತ್ತಮ ಭವಿಷ್ಯದ ದಾರಿಯನ್ನು ಸಿದ್ಧಪಡಿಸಿದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ ಎಂದಿದ್ದಾರೆ.
ಭುಜಕ್ಕೆ ಭುಜ ಕೊಟ್ಟು ಭಾರತೀಯ ವಿಜ್ಞಾನಿಗಳ ಕಾರ್ಯ ಶ್ಲಾಘನೀಯ
'ಈ ಮೊದಲು ವಿಶ್ವದ ಇತರೆ ದೇಶಗಳಲ್ಲಿ ಯಾವುದೇ ಆವಿಷ್ಕಾರ ನಡೆದರೆ, ಭಾರತಕ್ಕೆ ಆ ಆವಿಷ್ಕಾರದವರೆಗೆ ತಲುಪಲು ಹಲವು ವರ್ಷಗಳ ಕಾಲ ಕಾಯಬೇಕಾಗಿತ್ತು ಎಂಬುದು ಕಳೆದ ಶತಮಾನದ ಅನುಭವ. ಆದರೆ, ಇಂದು ನಮ್ಮ ದೇಶದ ವಿಜ್ಞಾನಿಗಳು ಇತರ ದೇಶದ ವಿಜ್ಞಾನಿಗಳ ಜೊತೆಗೆ ಭುಜಕ್ಕೆ ಭುಜ ಕೊಟ್ಟು ವೇಗವಾಗಿ ಮುಂದಕ್ಕೆ ಸಾಗುತ್ತಿರುವುದು ಶ್ಲಾಘನೀಯ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
'ಕೇವಲ ಒಂದೇ ವರ್ಷದಲ್ಲಿ ಭಾರತೀಯ ವಿಜ್ಞಾನಿಗಳು ವ್ಯಾಕ್ಸಿನ್ ಅಭಿವೃದ್ಧಿಪಡಿಸಿದ್ದಾರೆ'
CSIR ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ (Narendra Modi, ಭಾರತೀಯ ವಿಜ್ಞಾನಿಗಳ ಕುರಿತು ಬಾಯ್ತುಂಬ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ಕೊರೊನಾ ಸಂಕಷ್ಟದ ನಡುವೆಯೂ ಕೂಡ ನಮ್ಮ ವಿಜ್ಞಾನಿಗಳು ಕೇವಲ ಒಂದೇ ಒಂದು ವರ್ಷದಲ್ಲಿ ಮೇಡ್ ಇನ್ ಇಂಡಿಯಾ ವ್ಯಾಕ್ಸಿನ್ ಅಭಿವೃದ್ಧಿ ಪಡಿಸಿರುವುದು ತುಂಬಾ ಶ್ಲಾಘನೀಯ ಎಂದಿದ್ದಾರೆ.
ಇದನ್ನೂ ಓದಿ- RBI Credit Policy: 6ನೇ ಸಲವೂ ಬಡ್ಡಿದರದಲ್ಲಿ ಬದಲಾವಣೆ ಇಲ್ಲ
ದೇಶಕ್ಕೆ ಪ್ರತಿಭಾನ್ವಿತರನ್ನು ನೀಡಿದೆ CSIR: PM
"ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ದೇಶಕ್ಕೆ ಎಷ್ಟೊಂದು ಪ್ರತಿಭೆಗಳನ್ನು ನೀಡಿದೆ ಮತ್ತು ಎಷ್ಟೋ ವಿಜ್ಞಾನಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಶಾಂತಿ ಸ್ವರೂಪ್ ಭಟ್ನಾಗರ್ ಅವರಂತಹ ಮಹಾನ್ ವಿಜ್ಞಾನಿ ಈ ಸಂಸ್ಥೆಗೆ ನಾಯಕತ್ವ ವಹಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದು ಪ್ರಧಾನಿ ಮೋದಿ" ಹೇಳಿದ್ದಾರೆ.
ಇದನ್ನೂ ಓದಿ-2021-22 Academic Year : ಜುಲೈ 1ರಿಂದ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭ!
'ಸ್ವಾವಲಂಭಿ ಹಾಗೂ ಸಬಲೀಕರಣಗೊಳ್ಳಲು ಬಯಸುತ್ತದೆ ಭಾರತ' (CSIR Meeting 2021 Latest News In Kannada)
"ಇಂದು ಭಾರತವು ಸುಸ್ಥಿರ ಅಭಿವೃದ್ಧಿ ಮತ್ತು ಶುದ್ಧ ಇಂಧನ ಕ್ಷೇತ್ರದಲ್ಲಿ ಜಗತ್ತಿಗೆ ದಾರಿ ತೋರಿಸುತ್ತಿದೆ. ಸಾಫ್ಟ್ವೇರ್ನಿಂದ ಹಿಡಿದು ಉಪಗ್ರಹದವರೆಗೆ ಭಾರತ ಇತರ ದೇಶಗಳ ಅಭಿವೃದ್ಧಿಯನ್ನು ಸಹ ವೇಗಗೊಲಿಸುತಿದೆ ಮತ್ತು ವಿಶ್ವದ ಅಭಿವೃದ್ಧಿಯಲ್ಲಿ ಪ್ರಮುಖ ಎಂಜಿನ್ನ ಪಾತ್ರವನ್ನು ನಿರ್ವಹಿಸುತಿದೆ. ಇಂದು, ಭಾರತವು ಸ್ವಾವಲಂಬಿಯಾಗಲು ಮತ್ತು ಕೃಷಿಯಿಂದ ಖಗೋಳಶಾಸ್ತ್ರದವರೆಗೆ, ಲಸಿಕೆಗಳಿಂದ ಹಿಡಿದು ವರ್ಚುವಲ್ ರಿಯಾಲಿಟಿವರೆಗೆ, ಜೈವಿಕ ತಂತ್ರಜ್ಞಾನದಿಂದ ಬ್ಯಾಟರಿ ತಂತ್ರಜ್ಞಾನದವರೆಗೆ ಪ್ರತಿಯೊಂದು ದಿಕ್ಕಿನಲ್ಲಿಯೂ ಸ್ವಾವಲಂಭಿಯಾಗಲು (Self Reliant India) ಹಾಗೂ ಸಬಲೀಕರಣಗೊಳ್ಳಲು ಬಯಸುತ್ತಿದೆ. ಕರೋನಾದ ಈ ಬಿಕ್ಕಟ್ಟು ವೇಗವನ್ನು ಸ್ವಲ್ಪ ನಿಧಾನಗೊಳಿಸಿರಬಹುದು, ಆದರೆ ಇಂದಿಗೂ ಕೂಡ 'ಸ್ವಾವಲಂಬಿ ಭಾರತ, ಬಲಶಾಲಿ ಭಾರತ' ನಮ್ಮ ಸಂಕಲ್ಪ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದನ್ನೂ ಓದಿ-ದ್ವಿತೀಯ ಪಿಯುಸಿ ಪರೀಕ್ಷೆ ರದ್ದು : ಸಚಿವ ಸುರೇಶ್ ಕುಮಾರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ