Vastu Tips : ಪೊರಕೆ ವಿಚಾರದಲ್ಲಿ ಈ ತಪ್ಪು ಆಗದಿರಲಿ ; ಹಣಕಾಸಿನ ಸಮಸ್ಯೆ ಎದುರಾಗಬಹುದು

ವಾಸ್ತುವಿನಲ್ಲಿ  ಸ್ವಚ್ಚತೆ ಗೆ ಎಷ್ಟು ಪ್ರಾಮುಖ್ಯತೆ ನೀಡಲಾಗಿದೆಯೋ ಅಷ್ಟೇ ಪ್ರಾಮುಖ್ಯತೆ ಸ್ವಚ್ಛಗೊಳಿಸಲು ಉಪಯೋಗಿಸುವ ಪೊರಕೆಗೂ ಇದೆ. ಪೊರಕೆ ಎಂದರೆ ಲಕ್ಷ್ಮೀಯ ಸಂಕೇತವಂತೆ. 

Written by - Ranjitha R K | Last Updated : Jun 8, 2021, 09:29 AM IST
  • ಪೊರಕೆ ಲಕ್ಷ್ಮೀ ದೇವಿಯ ಪ್ರತೀಕ ಎನ್ನುವುದು ನಂಬಿಕೆ
  • ಹೊಸ ಪೊರಕೆ ಖರೀದಿ ಮತ್ತು ಬಳಸುವ ಸಮಯದಲ್ಲಿ ಎಚ್ಚರವಿರಲಿ
  • ತಪ್ಪಿಯೂ ಪೊರಕೆಗೆ ಕಾಲಿನಿಂದ ಒದೆಯಬೇಡಿ
Vastu Tips : ಪೊರಕೆ ವಿಚಾರದಲ್ಲಿ ಈ ತಪ್ಪು ಆಗದಿರಲಿ ; ಹಣಕಾಸಿನ ಸಮಸ್ಯೆ ಎದುರಾಗಬಹುದು title=
ಪೊರಕೆ ಲಕ್ಷ್ಮೀ ದೇವಿಯ ಪ್ರತೀಕ ಎನ್ನುವುದು ನಂಬಿಕೆ (photo zee news)

ನವದೆಹಲಿ : ವಾಸ್ತುವಿಗೆ ನಮ್ಮ ಜೀವನದಲ್ಲಿ ಬಹಳ ಪ್ರಮುಖ ಸ್ಥಾನವಿದೆ. ಮನೆಯಲ್ಲಿ ಸ್ವಚ್ಛತೆ ಕಾಪಾಡುವುದು ಬಹು ಮುಖ್ಯಎಂದು ವಾಸ್ತುವಿನಲ್ಲಿ ಹೇಳಲಾಗುತ್ತದೆ. ಯಾಕೆಂದರೆ ತಾಯಿ ಲಕ್ಷ್ಮೀ ನೆಲೆಯಾಗಬೇಕಾದರೆ  ಅಲ್ಲಿ ಸ್ವಚ್ಛತೆ  ಕಾಪಾಡಿಕೊಳ್ಳಬೇಕು. ಸ್ವಚ್ಛತೆ ಇರದ ಜಾಗದಲ್ಲಿ ಲಕ್ಷ್ಮೀ ಮಾತೆ ಒಂದು ಕ್ಷಣವೂ ಇರುವುದಿಲ್ಲವಂತೆ.  ವಾಸ್ತುವಿನಲ್ಲಿ (Vastu tips) ಸ್ವಚ್ಚತೆ ಗೆ ಎಷ್ಟು ಪ್ರಾಮುಖ್ಯತೆ ನೀಡಲಾಗಿದೆಯೋ ಅಷ್ಟೇ ಪ್ರಾಮುಖ್ಯತೆ ಸ್ವಚ್ಛಗೊಳಿಸಲು ಉಪಯೋಗಿಸುವ ಪೊರಕೆಗೂ ಇದೆ. ಪೊರಕೆ ಎಂದರೆ ಲಕ್ಷ್ಮೀಯ (Godess Lakshmi) ಸಂಕೇತವಂತೆ. ಇದೇ ಕಾರಣಕ್ಕೆ ದೀಪಾವಳಿ ಸಂದರ್ಭಗಳಲ್ಲಿ ಕೆಲವು ಕಡೆ ಪೊರಕೆಯನ್ನು ಪೂಜಿಸಲಾಗುತ್ತದೆ. ನಿಮ್ಮ ಮೇಲೆಯೂ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರಬೇಕಾದರೆ ಪೊರಕೆಗೆ ಸಂಬಂಧಿಸಿದ ಕೆಲ ವಿಚಾರಗಳನ್ನು ತಿಳಿದುಕೊಳ್ಳೋಣ.. 

ಪೊರಕೆಗೆ ಸಂಬಂಧಿಸಿದ ಕೆಲ ನಿಯಮಗಳು ಯಾವುವೆಂದರೆ : 

1.ಪೊರಕೆ (Broom) ಖರೀದಿಯಿಂದ ಹಿಡಿದು ಅದನ್ನು ಹೇಗೆ ಇಟ್ಟುಕೊಳ್ಳಬೇಕು ಮತ್ತು ಬಳಸಬೇಕು ಎಂಬುದರವರೆಗೆ ವಾಸ್ತು ಶಾಸ್ತ್ರದಲ್ಲಿ (Vastu shastra)  ನಿಯಮಗಳಿವೆ. 

2. ಹೊಸ ಪೊರಕೆ ಖರೀದಿಸಲು ಮತ್ತು ಬಳಸಲು ಶನಿವಾರ ಉತ್ತಮ ದಿನ. ಕೃಷ್ಣ ಪಕ್ಷದ ಶನಿವಾರ ಪೊರಕೆ ಖರೀದಿಸಲು ಪ್ರಯತ್ನಿಸಿ. ಹಾಗೆ ಮಾಡುವುದು ತುಂಬಾ ಶುಭ.

3. ಪೊರಕೆಯನ್ನು ಲಕ್ಷ್ಮೀ ದೇವಿಯ (Godess Lakshmi) ಸಂಕೇತ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ತಪ್ಪಿಯೂ ಪೊರಕೆಗೆ ಕಾಲು ತಾಕಿಸಬೇಡಿ. ಹೀಗೆ ಮಾಡಿದರೆ ಲಕ್ಷ್ಮೀ ದೇವಿಗೆ ಅವಮಾನ ಮಾಡಿದಂತೆ ಎನ್ನುತ್ತಾರೆ ಶಾಸ್ತ್ರ ಬಲ್ಲವರು.  ಅವಮಾನವಾದ ಜಾಗದಲ್ಲಿ ಲಕ್ಷ್ಮೀ ನೆಲೆಯಾಗುವುದಿಲ್ಲ ಎನ್ನುವ ಮಾತಿದೆ. ಹಾಗಾಗಿ ಆರ್ಥಿಕ ಸಮಸ್ಯೆಗಳನ್ನು ಕೂಡಾ ಎದುರಿಸಬೇಕಾಗಬಹುದು.

ಇದನ್ನೂ ಓದಿ : Vastu Tips: ಬೇಗ ಕಂಕಣ ಬಲ ಕೂಡಿ ಬರಲು ಮಲಗುವಾಗ ಈ ದಿಕ್ಕಿನೆಡೆ ತಲೆ ಇಟ್ಟು ಮಲಗಿ

4. ಅಡುಗೆಮನೆಯಲ್ಲಿ (Kitchen) ಪೊರಕೆ ಮತ್ತು ಮನೆ ಸ್ವಚ್ಛಗೊಳಿಸುವ ಬಟ್ಟೆಯನ್ನು ಇಡಬಾರದು. ಹೀಗೆ ಮಾಡಿದರೆ ಮನೆಯಲ್ಲಿ ಆಹಾರದ ಕೊರತೆ ಎದುರಾಗುತ್ತದೆಯಂತೆ. ತ್ತದೆ.  ಅಡುಗೆ ಮಾಡುವ ಸ್ಥಳದಲ್ಲಿ ಇವುಗಳನ್ನು ಇಟ್ಟರೆ, ಮನೆಯ ಸದಸ್ಯರ ಆರೋಗ್ಯದ (Health)  ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. 

5. ವಾಸ್ತು ಪ್ರಕಾರ, ಯಾವ ಬೀರು ಅಥವಾ ಕಪಾಟಿನಲ್ಲಿ ಹಣ ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಇಡುತ್ತಿರೋ ಆ ಬೀರು ಅಥವಾ ಕಪಾಟಿನ ಬಳಿ ಅಥವಾ ಅವುಗಳಿಗೆ ತಾಕುವಂತೆ ಪೊರಕೆಯನ್ನು ಇಡಬಾರದು. ಹೀಗೆ ಮಾಡಿದರೆ ಹಣದ ನಷ್ಟ ಸಂಭವಿಸುತ್ತದೆಯಂತೆ.  

6. ಪೊರಕೆಯನ್ನು ಯಾವತ್ತೂ ಹಣವನ್ನು ಇಡುವಂತೆಯೇ ಬಚ್ಚಿಡಬೇಕಂತೆ. ಅಂದರೆ ಎಲ್ಲರ ಕಣ್ಣಿಗೂ ಬೀಳುವಂತಹ ಜಾಗದಲ್ಲಿ ಪೊರಕೆಯನ್ನು ಇಡಬಾರದು.  

ಇದನ್ನೂ ಓದಿ : Shani jayanti 2021 : ಜೂನ್ 10 ರಂದು ಶನೀಶ್ವರ ಜಯಂತಿ, ಶನಿ ದೇವರನ್ನು ಪ್ರಸನ್ನಗೊಳಿಸುವ ಬಗೆ ಯಾವುದು..?

7. ಪೊರಕೆಯನ್ನು ಯಾವತ್ತೂ ನಿಂತಿರುವ ಭಂಗಿಯಲ್ಲಿ ಇಡಬಾರದು. ಪೊರಕೆಯನ್ನು ಸದಾ ನೆಲದ ಮೇಲೆ ಮಲಗಿರುವಂತೆ ಇಟ್ಟಿರಬೇಕು. 

8. ಮುರಿದ ಪೊರಕೆ ಕೂಡ ಮನೆಯಲ್ಲಿ ಎಂದಿಗೂ ಇಡಬಾರದು. ಪೊರಕೆ ತುಂಡಾಗಿದ್ದರೆ ತಕ್ಷಣ ಬದಲಾಯಿಸಿಬಿಡಬೇಕು. ಇಲ್ಲದಿದ್ದರೆ, ಮನೆಯಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News