ನವದೆಹಲಿ: Covid-19 Test - ಮಧ್ಯಪ್ರದೇಶದಲ್ಲಿ (Madhya Pradesh) ಕರೋನಾ ಸೋಂಕಿನ ವೇಗವನ್ನು ಇನ್ನಷ್ಟು ಕಡಿಮೆಗೊಳಿಸಲು ವಿವಾಹ ಸಮಾರಂಭಗಳಲ್ಲಿ (Wedding) ಭಾಗವಹಿಸುವವರ ಸಂಖ್ಯೆಯನ್ನು ಮತ್ತೊಮ್ಮೆ ನಿಗದಿಪಡಿಸಲಾಗಿದೆ, ಆದರೆ ಈ ಸಮಾರಂಭಗಳಲ್ಲಿ ಯಾರು ಭಾಗವಹಿಸುತ್ತಾರೋ ಅವರು ಕರೋನಾ ಪರೀಕ್ಷೆಗೆ ಒಳಗಾಗಬೇಕಾಗಲಿದೆ. ಜಿಲ್ಲೆಗಳ ಬಿಕ್ಕಟ್ಟು ನಿರ್ವಹಣಾ ಸಮಿತಿಯ ಸದಸ್ಯರನ್ನುದ್ದೇಶಿಸಿ ಮಾತನಾಡಿದ ರಾಜ್ಯದ ಮುಖ್ಯಮಂತ್ರಿ ಶಿವರಾಜ್ (Shivaraj Singh) ಸಿಂಗ್ ಚೌಹಾನ್, ಈಗ ವಧು-ವರರ 20-20 ಸಂಬಂಧಿಕರು ಮದುವೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ. ಭಾಗವಹಿಸುವ ಎಲ್ಲ ವ್ಯಕ್ತಿಗಳಿಗೆ ಕರೋನಾ (Coronavirus) ಪರೀಕ್ಷೆ ಕಡ್ಡಾಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಬಿಕ್ಕಟ್ಟು ನಿರ್ವಹಣಾ ಸಮಿತಿಗಳಿಂದ ಪಡೆದ ಸಲಹೆಗಳ ಆಧಾರದ ಮೇಲೆ, ಜೂನ್ 15 ರೊಳಗೆ ಹೊಸ ಮಾರ್ಗದರ್ಶಿ ಮಾರ್ಗವನ್ನು ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಶಾಸಕರು ಇದೀಗ ಶಾಸಕರ ನಿಧಿಯ ಶೇ.50 ರಷ್ಟು ಹಣವನ್ನು ಅಗತ್ಯವಿರುವವರಿಗೆ ಸಹಾಯ ಮಾಡಲು ಬಳಸಿಕೊಳ್ಳಬಹುದಾಗಿದೆ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ. ಕರೋನದ ಪ್ರಕೋಪವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಇಂತಹ ವ್ಯವಸ್ಥೆಗಳನ್ನು ಮಾಡುತ್ತಿದೆ, ಕರೋನಾ ಸೋಂಕಿನ ಬಿಕ್ಕಟ್ಟು ಇನ್ನೂ ಹೋಗಿಲ್ಲ ಎಂದು ಚೌಹಾನ್ ಹೇಳಿದ್ದಾರೆ. ಮೂರನೇ ಅಲೆಯ ಸಾಧ್ಯತೆಯನ್ನು ವರ್ತಿಸಲಾಗಿದ್ದು, ಅದರಿಂದ ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ ಮತ್ತು ಎಚ್ಚರಿಕೆಯ ಅಗತ್ಯವಿದೆ ಎಂದಿದ್ದಾರೆ. ರಾಜಕೀಯ, ಸಾಮಾಜಿಕ ಚಟುವಟಿಕೆಗಳು, ಮೆರವಣಿಗೆಗಳು, ಕಿಕ್ಕಿರಿದ ಚಟುವಟಿಕೆಗಳನ್ನು ನಿಷೇಧಿಸಲಾಗುವುದು. ಶಾಲಾ-ಕಾಲೇಜು, ಕ್ರೀಡೆ, ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮಗಳು ಇತ್ಯಾದಿಗಳಿಗೂ ನಿಷೇಧ ಜಾರಿಯಲ್ಲಿರಲಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಸೋಂಕು ನಿಯಂತ್ರಣದಲ್ಲಿದೆ ಎಂದು ಚೌಹಾನ್ ಹೇಳಿದ್ದಾರೆ. ಗ್ರಾಮ, ವಾರ್ಡ್, ನಗರ ಮತ್ತು ಜಿಲ್ಲಾ ಮಟ್ಟದಲ್ಲಿ ಬಿಕ್ಕಟ್ಟು ನಿರ್ವಹಣಾ ಸಮಿತಿಗಳು ನಿರ್ವಹಿಸುವ ಜವಾಬ್ದಾರಿ, ಶ್ರದ್ಧೆ ಮತ್ತು ಸಹಕಾರದಿಂದಾಗಿ, ಕರೋನಾದ ಮೇಲೆ ನಿಯಂತ್ರಣವನ್ನು ಸಾಧಿಸಲಾಗಿದೆ. ಈಗ ಪರಿಸ್ಥಿತಿ ಸಮಾಧಾನಕರವಾಗಿದ್ದು, ಇಂದು ಕೇವಲ ಹೊಸ 274 ಪ್ರಕರಣಗಳು ವರದಿಯಾಗಿವೆ. ಇಪ್ಪತ್ತು ಜಿಲ್ಲೆಗಳಲ್ಲಿ ಒಂದೇ ಒಂದು ಪ್ರಕರಣವೂ ಇಲ್ಲ. ಪ್ರಕರಣಗಳು ಭೋಪಾಲ್, ಇಂದೋರ್ ಮತ್ತು ಜಬಲ್ಪುರದಲ್ಲಿ ಮಾತ್ರ ಎರಡು ಅಂಕೆಗಳಲ್ಲಿವೆ. ಸಕಾರಾತ್ಮಕ ದರವು ಶೇಕಡಾ 0.3 ಕ್ಕೆ ಇಳಿದಿದೆ ಎಂದು ಚೌಹಾನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ- Gujarat: 17 ವರ್ಷದ ಅಪ್ರಾಪ್ತ ಬಾಲಕನನ್ನು ಅಪಹರಿಸಿ ಯುವತಿ ಮಾಡಿದ್ದೇನು ಗೊತ್ತಾ?
ರಾಜ್ಯದ ಜನತೆಗೆ ಜಾಗರೂಕರಾಗಿರಲು ಸಲಹೆ ನೀಡಿರುವ ಮುಖ್ಯಮಂತ್ರಿಗಳು ಇಂಗ್ಲೆಂಡ್‌ನಲ್ಲಿ 90 ದಿನಗಳ ಲಾಕ್‌ಡೌನ್ ನಂತರ, ಅನ್ಲಾಕ್ ಮಾಡುವುದರೊಂದಿಗೆ, ಕರೋನದ ಪ್ರಕರಣಗಳು ಹೆಚ್ಚಾಗಲು ಆರಂಭಿಸಿವೆ ಎಂದು ಹೇಳಿದ್ದಾರೆ. ಈ ಪರಿಸ್ಥಿತಿಯಲ್ಲಿ, ಕರೋನಾ ಅಲೆಯನ್ನು ನಿಲ್ಲಿಸುವುದು ಮತ್ತು ಅದರ ತೀವ್ರತೆಯನ್ನು ಕಡಿಮೆ ಮಾಡುವ ಅವಶ್ಯಕತೆ ಇದೆ ಎಂದು ಚೌಹಾನ್ ಹೇಳಿದ್ದಾರೆ.
ಇದನ್ನೂ ಓದಿ-ತಮಿಳುನಾಡಿನಲ್ಲಿ ಸೋಷಿಯಲಿಸಂ ಮದುವೆಯಾದ ಮಮತಾ ಬ್ಯಾನರ್ಜಿ....!
ಅಮೆರಿಕ, ಇಂಗ್ಲೆಂಡ್ ಮತ್ತು ಯುರೋಪಿನ ಇತರ ದೇಶಗಳ ಪರಿಸ್ಥಿತಿಯನ್ನು ಸಹ ಈ ಸಂದರ್ಭದಲ್ಲಿ ಉಲ್ಲೇಖ್ಸಯಾಲಾಗಿದೆ ಅಲ್ಲಿ ಅನ್ಲಾಕ್ ಮತ್ತು ಜೀವನ ಮತ್ತು ನಡವಳಿಕೆ ಸಾಮಾನ್ಯವಾಗುವುದರೊಂದಿಗೆ ಪ್ರಕರಣಗಳು ಮತ್ತೆ ಹೆಚ್ಚಾಗಲು ಪ್ರಾರಂಭಿಸಿವೆ. ಇದೆ ವೇಳೆ ಸಿಂಗಾಪುರದ ಪರಿಪೂರ್ಣ ಉದಾಹರಣೆಯನ್ನು ಸಹ ಪ್ರಸ್ತುತಪಡಿಸಲಾಯಿತು, ಅಲ್ಲಿ COVID ಕಂಪ್ಲೈಂಟ್ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ ಪರಿಣಾಮವಾಗಿ ಪರಿಸ್ಥಿತಿ ನಿರಂತರವಾಗಿ ನಿಯಂತ್ರಣದಲ್ಲಿದೆ ಮತ್ತು ದೈನಂದಿನ ಪ್ರಕರಣಗಳ ಸಂಖ್ಯೆ 100 ಕ್ಕಿಂತ ಕಡಿಮೆಯಿದೆ. ಆದ್ದರಿಂದ, ಕರೋನಾ ಸೋಂಕಿನ ನಿಯಂತ್ರಣಕ್ಕೆ ಕೋವಿಡ್ ಸ್ನೇಹಿ ನಡವಳಿಕೆ ಅಗತ್ಯ ಎಂದು ಸಿಎಂ ಚೌಹಾನ್ ಹೇಳಿದ್ದಾರೆ.
ಇದನ್ನೂ ಓದಿ-Curfew Extends in Goa : ಗೋವಾದಲ್ಲಿ ಮತ್ತೆ ಒಂದು ವಾರ ವಿಸ್ತರಣೆಗೊಂಡ ಕರ್ಫ್ಯೂ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.