Delta Plus Variant ತಡೆಗಟ್ಟಲು ತಕ್ಷಣ ಕ್ರಮಕೈಗೊಳ್ಳಿ, ಕರ್ನಾಟಕಕ್ಕೆ ಕೇಂದ್ರ ಸೂಚನೆ

Karnataka Coronavirus Delta Plus Variant - ಈ ಕುರಿತು ಜೂನ್ 25 ರಂದು ಹೇಳಿಕೆ ನೀಡಿದ್ದ ರಾಜ್ಯ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Dr. K. Sudhakar), ರಾಜ್ಯದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿಯ (Delta Plus Variant) ಎರಡು ಪ್ರಕರಣಗಳು ದೊರೆತಿವೆ. ಇವುಗಳಲ್ಲಿ ಒಂದು ಬೆಂಗಳೂರಿನಲ್ಲಿ ಪತ್ತೆಯಾಗಿದ್ದರೆ, ಮತ್ತೊಂದು ಪ್ರಕರಣ ಮೈಸೂರಿನಲ್ಲಿ (Mysuru) ಪತ್ತೆಯಾಗಿದೆ ಎಂದಿದ್ದರು.

Written by - Nitin Tabib | Last Updated : Jun 26, 2021, 09:18 PM IST
  • ಕೊವಿಡ್-19 ಡೆಲ್ಟಾ ಪ್ಲಸ್ ತಡೆಗಟ್ಟಲು ಕ್ರಮಕೈಗೊಳ್ಳುವಂತೆ ಕರ್ನಾಟಕಕ್ಕೆ ಕೇಂದ್ರ ಸೂಚನೆ.
  • ಡೆಲ್ಟಾ ಪ್ರಕರಣಗಳು ಕಂಡು ಬಂದ ಜಿಲ್ಲೆಗಳಲ್ಲಿ ವ್ಯಾಪಕ ಟೆಸ್ಟಿಂಗ್ ಕೈಗೊಳ್ಳಲು ಸೂಚನೆ.
  • ವೈರಸ್ ಅನ್ನು ಆಯಾ ಜಿಲ್ಲೆಗಳಿಗೆ ಸೀಮಿತಗೊಳಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ.
Delta Plus Variant ತಡೆಗಟ್ಟಲು ತಕ್ಷಣ ಕ್ರಮಕೈಗೊಳ್ಳಿ, ಕರ್ನಾಟಕಕ್ಕೆ ಕೇಂದ್ರ ಸೂಚನೆ title=
Karnataka Coronavirus Delta Plus Variant (File Photo)

Karnataka Coronavirus Delta Plus Variant - ಕೊವಿಡ್-19 ಸೋಂಕಿನ ಡೆಲ್ಟಾ ಪ್ಲಸ್ ರೂಪಾಂತರಿ ದೊರೆತ ಜಿಲ್ಲೆಗಳಲ್ಲಿ ಅದನ್ನು ತಡೆಗಟ್ಟಲು ತಕ್ಷಣಕ್ಕೆ ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಕ್ರಮಗಳಲ್ಲಿ ಜನಸಂದಣಿ ತಡೆಗಟ್ಟುವ ಕ್ರಮ, ವ್ಯಾಪಕ  ಪರೀಕ್ಷೆ ನಡೆಸುವುದು ಹಾಗೂ ವ್ಯಾಕ್ಸಿನೆಶನ್ ಹೆಚ್ಚಿಸುವುದು ಶಾಮೀಲಾಗಿವೆ. ದೇಶಾದ್ಯಂತ ಕೊವಿಡ್-19 (Covid-19)ವೇರಿಯಂಟ್ ನ 50 ಪ್ರಕರಣಗಳು ಬೆಳಕಿಗೆ ಬಂದಿರುವುದು ಇಲ್ಲಿ ಗಮನಾರ್ಹ. 

ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯ ಸಚಿವರಾಗಿರುವ ಪಿ. ರವಿ ಕುಮಾರ್ (P.Ravikumar) ಅವರಿಗೆ ಪತ್ರ ಬರೆದಿರುವ ಕೇಂದ್ರ ಮುಖ್ಯ ಸಚಿವ (ಆರೋಗ್ಯ) ರಾಜೇಶ್ ಭೂಷಣ್, ಸಾರ್ವಜನಿಕ ಆರೋಗ್ಯ ಉಪಾಯಗಳನ್ನು ಮತ್ತಷ್ಟು ಕಠಿಣಗೊಳಿಸಲು ಹಾಗೂ ಗಟ್ಟಿಗೊಳಿಸಲು ಸೂಚಿಸಿದ್ದಾರೆ. ಜೂನ್ 25ರಂದು ಅವರು ಈ ಪತ್ರ ಬರದಿದ್ದಾರೆ.

ಇದನ್ನೂ ಓದಿ-Karnataka Govt : ರಾಜ್ಯ ಸರ್ಕಾರದಿಂದ 'ಮದುವೆ ಸಮಾರಂಭ'ಗಳಿಗೆ ಷರತ್ತುಬದ್ಧ ಅನುಮತಿ!

'ಕೊವಿಡ್ 19 (Coronavirus) ಡೆಲ್ಟಾ ಪ್ಲಸ್ ಪ್ರಕರಣಗಳು ಕಂಡು ಬಂದ ಜಿಲ್ಲೆಗಳಲ್ಲಿ ಜನಸಂದಣಿ ತಡೆಗಟ್ಟಲು ಹಾಗೂ ಜನ ಸಂಪರ್ಕ ಕಡಿಮೆಗೊಳಿಸಲು ವ್ಯಾಪಕ ಟೆಸ್ಟಿಂಗ್ ನಡೆಸಿ ಪ್ರಕರಣಗಳನ್ನು ತ್ವರಿತ ಗತಿಯಲ್ಲಿ ಪತ್ತೆ ಹಚ್ಚಿಆದ್ಯತೆಯ ಮೇರೆಗೆ ಲಸಿಕಾಕರಣವನ್ನು (Corona Vaccination) ನಡೆಸುವುದರ ಜೊತೆಗೆ ತಕ್ಷಣ ತಡೆಗಟ್ಟುವ ಉಪಾಯಗಳನ್ನು ನಡೆಸುವಂತೆ' ಪತ್ರದಲ್ಲಿ ಸೂಚಿಸಲಾಗಿದೆ. 

ಇದನ್ನೂ ಓದಿ-Heavy Rain in Karnataka : ರಾಜ್ಯದಲ್ಲಿ ಇನ್ನೂ 3 ದಿನ ಗುಡುಗು ಸಹಿತ ಭಾರೀ ಮಳೆ!

ಶುಕ್ರವಾರ ವರಿಷ್ಠ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ(CM B.S.Yadyurappa), ಗಡಿ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ನ ಡೆಲ್ಟಾ ಪ್ಲಸ್ ರೂಪಾಂತರಿಯ ಮೇಲೆ ನಿಗಾವಹಿಸುವಂತೆ ನಿರ್ದೇಶನಗಳನ್ನು ನೀಡಿದ್ದರು ಎಂಬುದು ಇಲ್ಲಿ ಗಮನಾರ್ಹ. ಈ ವೇಳೆ ಮಾಹಿತಿ ನೀಡಿದ್ದ ರಾಜ್ಯದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ರಾಜ್ಯದಲ್ಲಿ ಡೆಲ್ಟಾ ಪ್ಲಸ್ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಒಂದು ಪ್ರಕರಣ ಬೆಂಗಳೂರಿನಲ್ಲಿ (Bengaluru) ಪತ್ತೆಯಾಗಿದ್ದರೆ ಮತ್ತೊಂದು ಪ್ರಕರಣ ಪತ್ತೆಯಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ-Unlock Karnataka: ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News