SBI ಖಾತೆದಾರರೇ ಗಮನಿಸಿ! ಜುಲೈ 1 ರಿಂದ ಈ ಸೇವೆಗಳಿಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಪ್ರಮುಖ ಸುದ್ದಿ ಇದೆ. ಎಸ್‌ಬಿಐ ಗ್ರಾಹಕರು ಜುಲೈ 1 ರಿಂದ ಕೆಲವು ಸೇವೆಗಳಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಎಟಿಎಂನಿಂದ ನಗದು ಹಿಂಪಡೆಯುವಿಕೆ ಮತ್ತು ಚೆಕ್ ಬುಕ್ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ಎಸ್‌ಬಿಐ ಬದಲಾಯಿಸಿದೆ.

Written by - Yashaswini V | Last Updated : Jun 29, 2021, 01:05 PM IST
  • ಜುಲೈ 1 ರಿಂದ ಎಸ್‌ಬಿಐ ಹಲವು ನಿಯಮಗಳಲ್ಲಿ ಬದಲಾವಣೆಗಳನ್ನು ಜಾರಿಗೆ ತರಲಿದೆ
  • ಎಸ್‌ಬಿಐ ತನ್ನ ಎಟಿಎಂ ಮತ್ತು ಬ್ಯಾಂಕ್ ಶಾಖೆಯಿಂದ ಹಣವನ್ನು ಹಿಂಪಡೆಯಲು ಸೇವಾ ಶುಲ್ಕವನ್ನು ಬದಲಾಯಿಸಿದೆ
  • ಹೊಸ ಸೇವಾ ಶುಲ್ಕಗಳು ಎಸ್‌ಬಿಐ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (ಬಿಎಸ್‌ಬಿಡಿ) ಖಾತೆದಾರರಿಗೆ ಜುಲೈ 1, 2021 ರಿಂದ ಅನ್ವಯವಾಗುತ್ತವೆ
SBI ಖಾತೆದಾರರೇ ಗಮನಿಸಿ! ಜುಲೈ 1 ರಿಂದ ಈ ಸೇವೆಗಳಿಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ! title=
ಜುಲೈ 1 ರಿಂದ ಬದಲಾಗಲಿರುವ ಹೊಸ ನಿಯಮಗಳನ್ನು ತಪ್ಪದೇ ತಿಳಿಯಿರಿ

SBI ATM New Rule: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank Of India) ಗ್ರಾಹಕರಿಗೆ ಪ್ರಮುಖ ಸುದ್ದಿ ಇದೆ. ಎಸ್‌ಬಿಐ ಗ್ರಾಹಕರು ಜುಲೈ 1 ರಿಂದ ಕೆಲವು ಸೇವೆಗಳಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಎಟಿಎಂನಿಂದ ನಗದು ಹಿಂಪಡೆಯುವಿಕೆ (Cash Withdrawal) ಮತ್ತು ಚೆಕ್ ಬುಕ್ (Cheque Book) ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ಎಸ್‌ಬಿಐ ಬದಲಾಯಿಸಿದೆ. ಆದ್ದರಿಂದ, ನೀವು ಈ ನಿಯಮಗಳನ್ನು ಸಹ ಎಚ್ಚರಿಕೆಯಿಂದ ಓದಬೇಕು.

ಎಸ್‌ಬಿಐ ಸೇವಾ ಶುಲ್ಕವನ್ನು ಹೆಚ್ಚಿಸಿದೆ:
ಜುಲೈ 1 ರಿಂದ ಎಸ್‌ಬಿಐ ಹಲವು ನಿಯಮಗಳಲ್ಲಿ (SBI New Rule) ಬದಲಾವಣೆಗಳನ್ನು ಜಾರಿಗೆ ತರಲಿದೆ. ವಾಸ್ತವವಾಗಿ, ಎಸ್‌ಬಿಐ ತನ್ನ ಎಟಿಎಂ ಮತ್ತು ಬ್ಯಾಂಕ್ ಶಾಖೆಯಿಂದ ಹಣವನ್ನು ಹಿಂಪಡೆಯಲು ಸೇವಾ ಶುಲ್ಕವನ್ನು ಬದಲಾಯಿಸಿದೆ. ಈ ಮಾಹಿತಿಯನ್ನು ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಅಂತೆಯೇ, ಹೊಸ ಶುಲ್ಕಗಳು ಚೆಕ್ಬುಕ್ (Cheque Book), ವರ್ಗಾವಣೆ ಮತ್ತು ಇತರ ಹಣಕಾಸೇತರ ವಹಿವಾಟುಗಳಿಗೆ ಅನ್ವಯವಾಗುತ್ತವೆ. ಹೊಸ ಸೇವಾ ಶುಲ್ಕಗಳು ಎಸ್‌ಬಿಐ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (BSBD) ಖಾತೆದಾರರಿಗೆ ಜುಲೈ 1, 2021 ರಿಂದ ಅನ್ವಯವಾಗುತ್ತವೆ ಎಂದು ಬ್ಯಾಂಕ್ ತಿಳಿಸಿದೆ.

ಇದನ್ನೂ ಓದಿ - SBI ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ 2 ಲಕ್ಷ ರೂ. ಗಳ ಲಾಭ

ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುವುದು ದುಬಾರಿಯಾಗಲಿದೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ ಎಟಿಎಂ ಮತ್ತು ಬ್ಯಾಂಕ್ ಸೇವೆಯ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಎಸ್‌ಬಿಐ ಗ್ರಾಹಕರು ಎಟಿಎಂನಿಂದ ನಾಲ್ಕು ಬಾರಿಗಿಂತ ಅಧಿಕ ಬಾರಿ ಹಣವನ್ನು ಹಿಂಪಡೆಯಲು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬ್ಯಾಂಕ್ ನಾಲ್ಕು ಬಾರಿ ಹಣವನ್ನು ಹಿಂತೆಗೆದುಕೊಂಡ ನಂತರ, ಪ್ರತಿ ವಹಿವಾಟಿಗೂ ನೀವು 15 ರೂ. ಮತ್ತು ಜಿಎಸ್‌ಟಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಲ್ಲಾ ಹೊಸ ಸೇವಾ ಶುಲ್ಕಗಳು ಜುಲೈ 1, 2021 ರಿಂದ ಜಾರಿಗೆ ಬರುವಂತೆ ಎಸ್‌ಬಿಐ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (ಬಿಎಸ್‌ಬಿಡಿ) ಖಾತೆದಾರರಿಗೆ ಅನ್ವಯವಾಗುತ್ತವೆ.

ಇದನ್ನೂ ಓದಿ - PF Withdrawal ಲಾಭದಾಯಕ ವ್ಯವಹಾರವಲ್ಲ, ₹ 1 ಲಕ್ಷ ವಿತ್ ಡ್ರಾ ₹ 11.55 ಲಕ್ಷ ನಷ್ಟಕ್ಕೆ ಕಾರಣವಾಗುತ್ತೆ

ಎಸ್‌ಬಿಐ ಚೆಕ್‌ಬುಕ್ ದುಬಾರಿಯಾಗುತ್ತದೆ:
ಎಸ್‌ಬಿಐ ಬಿಎಸ್‌ಬಿಡಿ ಖಾತೆದಾರರಿಗೆ ಯಾವುದೇ ಶುಲ್ಕವಿಲ್ಲದೆ 10 ಚೆಕ್ ಲೀಫ್ ಗಳನ್ನು ಹಣಕಾಸು ವರ್ಷದಲ್ಲಿ ಉಚಿತವಾಗಿ ನೀಡಲಾಗುತ್ತದೆ. ಆದರೆ ಹೊಸ ನಿಯಮಗಳ ಪ್ರಕಾರ ಮುಂದಿನ 10 ಚೆಕ್ ಲೀವ್ಸ್ ಗಳಿಗಾಗಿ 40 ರೂ. ಜೊತೆಗೆ ಜಿಎಸ್‌ಟಿ ವಿಧಿಸಲಾಗುತ್ತದೆ. ಅದೇ ಸಮಯದಲ್ಲಿ, 25 ಚೆಕ್ ಲೀವ್ಸ್ ಹೊಂದಿರುವ ಚೆಕ್ ಪುಸ್ತಕಗಳಿಗೆ 75 ರೂ. ಮತ್ತು ಜಿಎಸ್‌ಟಿ ಶುಲ್ಕವನ್ನು, ತುರ್ತು ಚೆಕ್ ಪುಸ್ತಕದಲ್ಲಿ 50 ರೂ. ಮತ್ತು ಜಿಎಸ್‌ಟಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ಹಿರಿಯ ನಾಗರಿಕರಿಗೆ ಚೆಕ್ ಪುಸ್ತಕಗಳಲ್ಲಿನ ಹೊಸ ಸೇವಾ ಶುಲ್ಕದಿಂದ ವಿನಾಯಿತಿ ನೀಡಲಾಗುವುದು. ಬ್ಯಾಂಕ್ ಬಿಎಸ್ಬಿಡಿ ಖಾತೆದಾರರು ಮನೆಯಲ್ಲಿ ಮತ್ತು ತಮ್ಮ ಅಥವಾ ಇತರ ಬ್ಯಾಂಕ್ ಶಾಖೆಯಿಂದ ಹಣವನ್ನು ಹಿಂಪಡೆಯಲು ಯಾವುದೇ ಶುಲ್ಕವಿರುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News