ಭಾರತದಲ್ಲಿ Novavax ಗೆ ಇನ್ನೆರಡು ತಿಂಗಳಲ್ಲಿ ಅನುಮತಿ ಸಾಧ್ಯತೆ

ಅಮೆರಿಕದ ಲಸಿಕೆ ಕಂಪನಿ ನೊವಾವಾಕ್ಸ್ ಅಭಿವೃದ್ಧಿಪಡಿಸಿದ ಕೊವೊವಾಕ್ಸ್ ಲಸಿಕೆ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಭಾರತದಲ್ಲಿ ಬಳಸಲು ಅವಕಾಶ ನೀಡಬಹುದು ಎನ್ನಲಾಗಿದೆ.ಆ ಮೂಲಕ ಇದು ಈಗ ಭಾರತದಲ್ಲಿ ಅನುಮೋದನೆ ಪಡೆಯಲಿರುವ ಐದನೇ ಲಸಿಕೆಯಾಗಲಿದೆ.

Written by - Zee Kannada News Desk | Last Updated : Jun 30, 2021, 08:10 PM IST
  • ಅಮೆರಿಕದ ಲಸಿಕೆ ಕಂಪನಿ ನೊವಾವಾಕ್ಸ್ ಅಭಿವೃದ್ಧಿಪಡಿಸಿದ ಕೊವೊವಾಕ್ಸ್ ಲಸಿಕೆ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಭಾರತದಲ್ಲಿ ಬಳಸಲು ಅವಕಾಶ ನೀಡಬಹುದು ಎನ್ನಲಾಗಿದೆ.
  • ಆ ಮೂಲಕ ಇದು ಈಗ ಭಾರತದಲ್ಲಿ ಅನುಮೋದನೆ ಪಡೆಯಲಿರುವ ಐದನೇ ಲಸಿಕೆಯಾಗಲಿದೆ.
ಭಾರತದಲ್ಲಿ Novavax ಗೆ ಇನ್ನೆರಡು ತಿಂಗಳಲ್ಲಿ ಅನುಮತಿ ಸಾಧ್ಯತೆ  title=
ಸಂಗ್ರಹ ಚಿತ್ರ

ನವದೆಹಲಿ: ಅಮೆರಿಕದ ಲಸಿಕೆ ಕಂಪನಿ ನೊವಾವಾಕ್ಸ್ ಅಭಿವೃದ್ಧಿಪಡಿಸಿದ ಕೊವೊವಾಕ್ಸ್ ಲಸಿಕೆ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಭಾರತದಲ್ಲಿ ಬಳಸಲು ಅವಕಾಶ ನೀಡಬಹುದು ಎನ್ನಲಾಗಿದೆ.ಆ ಮೂಲಕ ಇದು ಈಗ ಭಾರತದಲ್ಲಿ ಅನುಮೋದನೆ ಪಡೆಯಲಿರುವ ಐದನೇ ಲಸಿಕೆಯಾಗಲಿದೆ.

ಆದರೆ ಈ ಲಸಿಕೆಯ ಬೆಲೆ ಕೋವಿಶೀಲ್ಡ್ (Covishield) ಗಿಂತ ಅಧಿಕವಾಗಲಿದೆ ಎಂದು ಕಂಪನಿಯ ಸಿಇಒ ಇಂದು ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.ನೊವಾವಾಕ್ಸ್‌ (Novavax) ನ ಅಧ್ಯಕ್ಷ ಮತ್ತು ಸಿಇಒ ಸ್ಟಾನ್ಲಿ ಎರ್ಕ್ ಅವರು, ಕೊವೊವಾಕ್ಸ್ ಕೋವಿಡ್ ರೂಪಾಂತರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದಿದ್ದರೂ, ಡೆಲ್ಟಾ ರೂಪಾಂತರದ ವಿರುದ್ಧ ಅದರ ಪರಿಣಾಮಕಾರಿತ್ವದ ಮಾಹಿತಿಯು ಇನ್ನೂ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: MS Dhoni: ಸ್ನೇಹಿತನ ಪ್ರಾಣ ಉಳಿಸಲು ಹೆಲಿಕಾಪ್ಟರ್ ಕಳುಹಿಸಿದ್ದ ಧೋನಿ, ಆದರೆ...

'ನಾವು ಯುಕೆಯಲ್ಲಿ 3 ನೇ ಹಂತದ ಪ್ರಯೋಗಗಳಲ್ಲಿ ಲಸಿಕೆ ಅಸಾಧಾರಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸುವ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದ್ದೇವೆ. ಮತ್ತು ಯುಎಸ್ ನಲ್ಲಿ ನಾವು ಎಲ್ಲಾ ಕ್ಲಿನಿಕಲ್ ಡೇಟಾ, ಸುರಕ್ಷತಾ ಡೇಟಾ ಮತ್ತು ಈಗ ಉತ್ಪಾದನಾ ಡೇಟಾವನ್ನು ತಯಾರಿಸುವ ಕೊನೆಯ ಹಂತಗಳಲ್ಲಿದ್ದೇವೆ. ಪರವಾನಗಿ ಪ್ಯಾಕೇಜ್‌ಗೆ ಹೋಗಬೇಕಾಗಿದೆ. ಪ್ಯಾಕೇಜ್ ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ ಎಂಬುದು ನಮ್ಮ ನಿರೀಕ್ಷೆ, ಖಂಡಿತವಾಗಿಯೂ ಮುಂಬರುವ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳಲಿದೆ ಎಂದು ಎರ್ಕ್ ಹೇಳಿದರು.

ಇದನ್ನೂ ಓದಿ- Sputnik V Price In India: ರಷ್ಯಾ ಕೊರೊನಾ ಲಸಿಕೆ Sputnik V ಬೆಲೆ ಘೋಷಣೆ

ನೊವಾವಾಕ್ಸ್ ಕೋವಿಡ್ ವಿರುದ್ಧ ಶೇಕಡಾ 90 ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿದ್ದರೂ, ಭಾರತದಲ್ಲಿ ಹರಡಿರುವ ಡೆಲ್ಟಾ ರೂಪಾಂತರದಿಂದ ರಕ್ಷಿಸಲಿದೆಯೇ ಎನ್ನುವುದರಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

'ನಮ್ಮ ಯುಎಸ್ ಪ್ರಯೋಗದಲ್ಲಿ ಪ್ರಸಾರವಾಗುತ್ತಿರುವ ರೂಪಾಂತರಗಳ ವಿರುದ್ಧ ನಾವು 93% ರಕ್ಷಣಾತ್ಮಕವಾಗಿದ್ದೇವೆ. ಆದರೆ ನಮ್ಮ ಪ್ರಯೋಗದ ಸಮಯದಲ್ಲಿ ಡೆಲ್ಟಾ ಹರಡುವಿಕೆ ಇಲ್ಲದೆ ಇದ್ದಿದ್ದರಿಂದ ಅದನ್ನು ಇದರಲ್ಲಿ ತೋರಿಸಿಲ್ಲ, ಆದರೆ ಈ ವಿಚಾರವಾಗಿ ಈಗ ಪರೀಕ್ಷೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

'ನಾವು ವಿವಿಧ ವ್ಯತ್ಯಾಸಗಳ ವಿರುದ್ಧ ಹೊಂದಿರುವ ದತ್ತಾಂಶವನ್ನು ಆಧರಿಸಿ, ನಾವು ಡೆಲ್ಟಾ ವಿರುದ್ಧ ಗಮನಾರ್ಹ ಪ್ರಮಾಣದ ಪರಿಣಾಮಕಾರಿತ್ವವನ್ನು ಹೊಂದಿದ್ದೇವೆ ಎಂಬುದು ನಮ್ಮ ಆಶಯ. ಆ ಸಂಖ್ಯೆ ಇನ್ನೂ ಏನು ಎಂದು ನಾನು ನಿಮಗೆ ಹೇಳಲಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ : CRICURU App : ಕ್ರಿಕೆಟ್ ತರಬೇತಿಗೆ 'ಆ್ಯಪ್' ಆರಂಭಿಸಿದ ವೀರೇಂದ್ರ ಸೆಹ್ವಾಗ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News