Alert! SBI ಖಾತೆದಾರರ ಮೇಲೆ ಚೀನಾ ಸೈಬರ್ ಕಳ್ಳರ ಕಣ್ಣು, ಖಾತೆ ಖಾಲಿಯಾದೀತು ಎಚ್ಚರ!

Online Hacking - ಆನ್‌ಲೈನ್ ಹ್ಯಾಕಿಂಗ್ ಬಳಕೆದಾರರಿಗೆ ದೊಡ್ಡ ಆತಂಕ ಸೃಷ್ಟಿಸುತ್ತಿದೆ. ಹೀಗಿರುವಾಗ ಒಂದು ವೇಳೆ ನೀವೂ ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಾಗಿದ್ದರೆ, ನೀವು ತುಂಬಾ ಜಾಗೃತರಾಗಿರಬೇಕಾದ ಪರಿಸ್ಥಿತಿ ಇದೆ. ಇತ್ತೀಚಿಗೆ ಚೀನೀ ಹ್ಯಾಕರ್‌ಗಳು ಎಸ್‌ಬಿಐ ಗ್ರಾಹಕರ (SBI Customers) ಹಣದ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ ಎನ್ನಲಾಗಿದೆ. 

Written by - Nitin Tabib | Last Updated : Jul 8, 2021, 01:16 PM IST
  • ಆನ್‌ಲೈನ್ ಹ್ಯಾಕಿಂಗ್ ಬಳಕೆದಾರರಿಗೆ ದೊಡ್ಡ ಆತಂಕ ಸೃಷ್ಟಿಸುತ್ತಿದೆ.
  • ಹೀಗಿರುವಾಗ ಒಂದು ವೇಳೆ ನೀವೂ ಕೂಡ SBI ಗ್ರಾಹಕರಾಗಿದ್ದರೆ, ಈಗಲೇ ಎಚ್ಚತ್ತುಕೊಳ್ಳಿ .
  • ಇತ್ತೀಚಿಗೆ ಚೀನೀ ಹ್ಯಾಕರ್‌ಗಳು ಎಸ್‌ಬಿಐ ಗ್ರಾಹಕರ ಹಣದ ಕಣ್ಣುಹಾಕಿದ್ದಾರೆ ಎನ್ನಲಾಗಿದೆ.
Alert! SBI ಖಾತೆದಾರರ ಮೇಲೆ ಚೀನಾ ಸೈಬರ್ ಕಳ್ಳರ ಕಣ್ಣು, ಖಾತೆ ಖಾಲಿಯಾದೀತು ಎಚ್ಚರ!  title=
Online Hacking (File Photo)

ನವದೆಹಲಿ: Online Hacking - ಆನ್‌ಲೈನ್ ಹ್ಯಾಕಿಂಗ್ ಬಳಕೆದಾರರಿಗೆ ದೊಡ್ಡ ಆತಂಕ ಸೃಷ್ಟಿಸುತ್ತಿದೆ. ಹೀಗಿರುವಾಗ ಒಂದು ವೇಳೆ ನೀವೂ ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಾಗಿದ್ದರೆ, ನೀವು ತುಂಬಾ ಜಾಗೃತರಾಗಿರಬೇಕಾದ ಪರಿಸ್ಥಿತಿ ಇದೆ. ಇತ್ತೀಚಿಗೆ ಚೀನೀ ಹ್ಯಾಕರ್‌ಗಳು ಎಸ್‌ಬಿಐ ಗ್ರಾಹಕರ (SBI Customers) ಹಣದ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ ಎನ್ನಲಾಗಿದೆ. ಈ ಹ್ಯಾಕರ್‌ಗಳು ಫಿಶಿಂಗ್ ಹಗರಣದ ಮೂಲಕ  SBI (State Bank Of India) ಗ್ರಾಹಕರ ಬ್ಯಾಂಕ್ ಖಾತೆಯನ್ನು (SBI Accounts) ಕೆಲವೇ ನಿಮಿಷಗಳಲ್ಲಿ ಖಾಲಿ ಮಾಡಬಹುದು ಎನ್ನಲಾಗುತ್ತಿದೆ. ಈ ರೀತಿಯ ವಂಚನೆಯ ಪ್ರಕರಣಗಳು ಕಳೆದ ಕೆಲವು ತಿಂಗಳುಗಳಲ್ಲಿ ವೇಗವಾಗಿ ಹೆಚ್ಚಾಗತೊಡಗಿವೆ. ಈ ಹ್ಯಾಕರ್‌ಗಳು ಜಾಣತನದಿಂದ ಖಾತೆದಾರರ ವಿವರಗಳನ್ನು ತೆಗೆದುಕೊಂಡು ಹಣ ಕಳ್ಳತನ ಮಾಡುತ್ತಿದ್ದಾರೆ.

ಈ ಆಟ ಹೇಗೆ ನಡೆಯುತ್ತಿದೆ?
ವರದಿಗಳ ಪ್ರಕಾರ ಚೈನೀಸ್ ಹ್ಯಾಕರ್ ಗಳು ಫಿಶಿಂಗ್ ಸ್ಕ್ಯಾಮ್ (Fishing Scam) ಮೂಲಕ ಗ್ರಾಹಕರನ್ನು (SBI Account Holders) ಬಲಿಯಾಗಿಸುತ್ತಿದ್ದಾರೆ. ಈ ಹ್ಯಾಕರ್ ಗಳು ಬಳಕೆದಾರರಿಗೆ ಅವರ KYC ಅಪ್ಡೇಟ್ (SBI KYC Update) ಮಾಡಿಸಲು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಕೆಲ ಪ್ರಕರಣಗಳಲ್ಲಿ ಹ್ಯಾಕರ್ ಗಳು ಬ್ಯಾಂಕ್ ಗ್ರಾಹಕರಿಗೆ SMS ಕಳುಹಿಸಿ KYC ಅಪ್ಡೇಟ್ ಮಾಡಿದರೆ, ಉಡುಗೊರೆ ನೀಡುವ ಆಮೀಶವೋಡ್ದುತ್ತಿದ್ದಾರೆ. ಒಂದು ವೇಳೆ ನೀವು ನಿಮ್ಮ ಹಣವನ್ನು ರಕ್ಷಿಸಬೇಕು ಎಂದಾದಲ್ಲಿ ಇಂತಹ ಆಮೀಷ ಹಾಗೂ ನಕಲಿ ಸಂದೇಶಗಳಲ್ಲಿ (Fake SMS)ನೀಡಲಾಗಿರುವ ಲಿಂಕ್ ಗಳ ಮೇಲೆ ಅಪ್ಪಿತಪ್ಪಿಯೂ ಕೂಡ ಕ್ಲಿಕ್ಕಿಸಬೇಡಿ.

SBI ನಕಲಿ ವೆಬ್ ಸೈಟ್ ( SBI Fake Website) ತಯಾರಿಸಿದ ಹ್ಯಾಕರ್ ಗಳು
ದೆಹಲಿ ಮೂಲದ ಸೈಬರ್ ಪೀಸ್ ಫೌಂಡೇಶನ್ ಹಾಗೂ ಆಟೋಬಾಟ್ ಇನ್ಫಾಸೆಕ್ ಇಂತಹ ಎರಡು ಪ್ರಕರಣಗಳನ್ನೂ ಪತ್ತೆಹಚ್ಚಿದ್ದು, ಈ ಪ್ರಕರಣಗಳಲ್ಲಿ ಹ್ಯಾಕರ್ ಗಳು SBI ಗ್ರಾಹಕರನ್ನು ಗುರಿಯಾಗಿಸಿದ್ದಾರೆ. ಮೊದಲ ಪ್ರಕರಣದಲ್ಲಿ KYC ಪುನರ್ಪರಿಶೀಲಿಸಲು ಗ್ರಾಹಕರಿಗೆ ಟೆಕ್ಸ್ಟ್ ಸಂದೇಶ ಕಳುಹಿಸಲಾಗಿತ್ತು. ಸಂದೇಶದಲ್ಲಿ ನೀಡಲಾಗಿರುವ ಲಿಂಕ್ ಮೇಲೆ ಕ್ಲಿಕ್ಕಿಸುತ್ತಿದ್ದಂತೆ ಬಳಕೆದಾರರನ್ನು SBIನ ನಕಲಿ ಖಾತೆಗೆ ರೀಡೈರೆಕ್ಟ್ ಮಾಡಲಾಗುತ್ತಿತ್ತು. ಅಲ್ಲಿ ನೀಡಲಾಗಿರುವ  'Continue to Login'ಗುಂಡಿಯನ್ನು ಕ್ಲಿಕ್ಕಿಸುತ್ತಿದ್ದಂತೆ, ಬಳಕೆದಾರರನ್ನು ಬೇರೊಂದು ಪೇಜ್ ಗೆ ರೀಡೈರೆಕ್ಟ್ ಮಾಡಲಾಗುತ್ತಿತ್ತು. ಬಳಿಕ ಅಲ್ಲಿ ಕ್ಯಾಪ್ಚಾ ಕೋಡ್(Captcha Code) ನಮೂದಿಸಿ ಯೂಜರ್ ಐಡಿ (User Id) ಹಾಗೂ ಪಾಸ್ವರ್ಡ್ (Passward) ನಮೂದಿಸಲು ಹೇಳಲಾಗುತ್ತಿತ್ತು. 

ಒಂದೊಮ್ಮೆ ಗ್ರಾಹಕರು ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್ ನಮೂದಿಸುತ್ತಿದ್ದಂತೆ, SBI ಗ್ರಾಹಕರ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗಿರುವ OTP ನಮೂದಿಸಲು ಸೂಚಿಸಲಾಗುತ್ತದೆ ಮತ್ತು ನಂತರ ಒಂದು ಹೊಸ ಪುಟ ತೆರೆದುಕೊಳ್ಳುತ್ತದೆ. ಈ ಹೊಸ ಪುಟದಲ್ಲಿ ಬಳಕೆದಾರರಿಗೆ ಖಾತೆದಾರಣ ಹೆಸರು, ಮೊಬೈಲ್ ಸಂಖ್ಯೆ, ಜನನ ತಿಥಿ ನಮೂದಿಸಲು ಸೂಚಿಸಲಾಗುತ್ತದೆ. ಒಂದೊಮ್ಮೆ ಖಾತೆದಾರರು ಅಥವಾ ಬಳಕೆದಾರರು ಈ ಮಾಹಿತಿಯನ್ನು ಹಂಚಿಕೊಂಡ ಬಳಿಕ, ಮತ್ತೆ OTP ಪುಟಕ್ಕೆ ರೀಡೈರೆಕ್ಟ್ ಮಾಡಲಾಗುತ್ತದೆ.

ಇದನ್ನೂ ಓದಿ- ವೈಯಕ್ತಿಕ ಸಾಲದ ಮೇಲೆ ಆದಾಯ ತೆರಿಗೆ ವಿನಾಯಿತಿ ಲಭ್ಯ : ಹೇಗೆ ಕ್ಲೈಮ್ ಮಾಡಬೇಕು ಇಲ್ಲಿದೆ

ವಾಟ್ಸ್ ಆಪ್ ಸಂದೇಶಗಳ (Fake WhatsApp Message) ಮೂಲಕ ಕೂಡ ವಂಚನೆ ಎಸಗಲಾಗುತ್ತಿದೆ
ಎರಡನೇ ಪ್ರಕರಣದಲ್ಲಿ ಹ್ಯಾಕರ್ ಗಳು SBI ಗ್ರಾಹಕರಿಗೆ ವಾಟ್ಸ್ ಆಪ್ ಮೂಲಕ ಲಿಂಕ್ ಕಳುಹಿಸಿದ್ದರು. ಈ ಸಂದೇಶದಲ್ಲಿ 50 ಲಕ್ಷ ರೂ. ಉಡುಗೊರೆಯ ಕುರಿತು ಹೇಳಾಗಿತ್ತು. ಈ ವಂಚನೆಯಲ್ಲಿ ವಂಚಕರು ತಾವೇ SBI ಬ್ಯಾಂಕ್ ರೀತಿ ವರ್ತಿಸಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಆದರೆ, ವಾಸ್ತವದಲ್ಲಿ ಈ ವಂಚನೆ ಥರ್ಡ್ ಪಾರ್ಟಿ ಡೊಮೇನ್ ಮೂಲಕ ನಡೆಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ಮಳೆಗಾಲದಲ್ಲಿ ಇರಲಿ ಈ 3 'ಜೀವ ವಿಮಾ' ಪಾಲಿಸಿಗಳು!

URL ಅನ್ನು ಕೂಡ ತಿರುಚಲಾಗಿದೆ
SBI ಮುಖವಾಡವನ್ನು ಧರಿಸಿ ಹ್ಯಾಕರ್ ಗಳು ಈ ವಂಚನೆಯ ಅಭಿಯಾನ ನಡೆಸುತಿದ್ದಾರೆ. ಇದಕ್ಕಾಗಿ ಚೈನೀಸ್ ಹ್ಯಾಕರ್ ಗಳು ಥರ್ಡ್ ಪಾರ್ಟಿ ಡೊಮೇನ್ ಬಳಸುತ್ತಿದ್ದಾರೆ. ವೆಬ್ ಸರ್ವರ್ ನಲ್ಲಿ ಡೈರೆಕ್ಟರಿ ಲಿಸ್ಟಿಂಗ್ ಅನ್ನು ಸಕ್ರೀಯಗೊಳಿಸಲಾಗಿದೆ ಎಂಬುದು ಈ URL ತಿರುಚುವಿಕೆಯಿಂದ ತಿಳಿದುಬರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈ ತಿರುಚುವಿಕೆ SBI ಸೇರಿದಂತೆ IDFC, PNB, PNB ಹಾಗೂ ಕೊಟಕ್ ಬ್ಯಾಂಕ್ ಗ್ರಾಹಕರ ಜೊತೆಗೂ ಕೂಡ ಇದೇ ರೀತಿಯ ವಂಚನೆ ಎಸಗಲಾಗುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತದೆ. SBI ವತಿಯಿಂದ ಪ್ರಸ್ತುತ ಈ ಪ್ರಕರಣದಲ್ಲಿ ಯಾವುದೇ ಅಧಿಕೃತ ಹೇಳಿಕೆ ಜಾರಿಗೊಳಿಸಿಲ್ಲ. 

ಇದನ್ನೂ ಓದಿ- ಕೇಂದ್ರ ನೌಕರರಿಗೆ ಸಿಹಿ ಸುದ್ದಿ : ಜುಲೈನಲ್ಲಿ DA 3% ರಷ್ಟು ಹೆಚ್ಚಿಗೆ; ಸೆಪ್ಟೆಂಬರ್‌ ನಲ್ಲಿ ಬಾಕಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News