Jammu-Kashmir: ಜಮ್ಮು ಕಾಶ್ಮೀರದ ವಿವಿಧೆಡೆ NIA ದಾಳಿ : ಐದು ಜನ ಆರೋಪಿಗಳ ಬಂಧನ

ಕಾಶ್ಮೀರ ಕಣಿವೆಯ ಅನಂತ್‌ನಾಗ್‌ನ ಹೊರತಾಗಿ, ಶ್ರೀನಗರ, ಅವಂತಿಪೋರಾ ಮತ್ತು ಬಾರಾಮುಲ್ಲಾದಲ್ಲೂ ಎನ್‌ಐಎ ದಾಳಿ ನಡೆಸುತ್ತಿದೆ. ISISನ ಭಯೋತ್ಪಾದಕ ಸಂಘಟನೆಯ ಮಾಡ್ಯೂಲ್‌ಗೆ ಸಂಬಂಧಿಸಿದ ಹತ್ತು ವರ್ಷದ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗುತ್ತಿದೆ.

Written by - Ranjitha R K | Last Updated : Jul 11, 2021, 11:22 AM IST
  • ಮಿಡಲ್ ಈಸ್ಟ್ ಏಷ್ಯಾದಲ್ಲಿ ISIS ಸಾಮ್ರಾಜ್ಯ
  • ಭಾರತೀಯ ಯುವಕರನ್ನು ಬ್ರೈನ್ ವಾಶ್ ಮಾಡಲಾಗುತ್ತಿತ್ತು
  • ಭಯೋತ್ಪಾದಕ ಸಂಘಟನೆಯಲ್ಲಿ ಸೇರಲು ಪ್ರಚೋದಿಸಲಾಗುತ್ತಿತ್ತು
Jammu-Kashmir: ಜಮ್ಮು ಕಾಶ್ಮೀರದ ವಿವಿಧೆಡೆ NIA ದಾಳಿ : ಐದು ಜನ ಆರೋಪಿಗಳ ಬಂಧನ  title=
ಮಿಡಲ್ ಈಸ್ಟ್ ಏಷ್ಯಾದಲ್ಲಿ ISIS ಸಾಮ್ರಾಜ್ಯ (Photo PTI)

ಅನಂತ್‌ನಾಗ್ : ಜಮ್ಮು ಮತ್ತು ಕಾಶ್ಮೀರದ  (Jammu-Kashmir) ಕೆಲವು ಕಡೆಗಳಲ್ಲಿ ಎನ್‌ಐಎ (NIA) ತಂಡ ದಾಳಿ ನಡೆಸಿದೆ.  ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ (NIA Raids In Anantnag) ಸೇರಿದಂತೆ ಅನೇಕ ಸ್ಥಳಗಳಲ್ಲಿ ದಾಳಿ ಮುಂದುವರೆದಿದೆ. ಈ ವೇಳೆ  ಎನ್ಐಎ ತಂಡದೊಂದಿಗೆ ಭದ್ರತಾ ಪಡೆ ಕೂಡಾ ಸ್ಥಳದಲ್ಲೇ  ಕಾರ್ಯನಿರ್ವಹಿಸುತ್ತಿದೆ. 

ಟೆರರ್ ಫನ್ದಿಂಗ್ ಪ್ರಕರಣದಲ್ಲಿ 5 ಆರೋಪಿಗಳ ಬಂಧನ: 
ದಾಳಿಯ ಸಮಯದಲ್ಲಿ, ಎನ್ಐಎ (NIA) ಕಾಶ್ಮೀರದ 5 ಜನರನ್ನು ಬಂಧಿಸಿದೆ. ಅನಂತ್‌ನಾಗ್‌ ನಲ್ಲಿ ನಾಲ್ಕು ಜನ ಮತ್ತು ಶ್ರೀನಗರದಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಟೆರರ್ ಫಂಡಿಂಗ್ (Terror fundinf case) ಪ್ರಕರಣಕ್ಕೆ ಸೇರಿದವರಾಗಿದ್ದಾರೆ. 

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ! ಜುಲೈನಲ್ಲಿ DA ಹೆಚ್ಚಳ : ಸೆಪ್ಟೆಂಬರ್ ನಲ್ಲಿ ಕೈ ಸೇರಲಿದೆ ಬಾಕಿ ಮೊತ್ತ!

ISIS  ಮಾಡ್ಯೂಲ್  ಬಹಿರಂಗ : 
ಕಾಶ್ಮೀರ ಕಣಿವೆಯ ಅನಂತ್‌ನಾಗ್‌ನ ಹೊರತಾಗಿ, ಶ್ರೀನಗರ, ಅವಂತಿಪೋರಾ ಮತ್ತು ಬಾರಾಮುಲ್ಲಾದಲ್ಲೂ ಎನ್‌ಐಎ ದಾಳಿ ನಡೆಸುತ್ತಿದೆ. ISISನ ಭಯೋತ್ಪಾದಕ ಸಂಘಟನೆಯ ಮಾಡ್ಯೂಲ್‌ಗೆ ಸಂಬಂಧಿಸಿದ ಹತ್ತು ವರ್ಷದ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗುತ್ತಿದೆ.

 ಶ್ರೀಲಂಕಾ ಮತ್ತು ಮಾಲ್ಡೀವ್ಸ್ ನಲ್ಲೂ ಪ್ರಕರಣದ ಸಂಪರ್ಕ : 
ISISಗೆ ಸೇರಲು ಆನ್‌ಲೈನ್ (Online) ಮೂಲಕ ಭಾರತೀಯ ಯುವಕರನ್ನು ಪ್ರಚೋದಿಸಲಾಗುತ್ತಿತ್ತು. ಅವರನ್ನು ಬ್ರೈನ್ ವಾಶ್ ಮಾಡುವ ಐಎಸ್ ಐಸ್ ಗೆ ಸೇರಿಸಲಾಗುತ್ತಿತ್ತು. ಇದೀಗ ಈ ಪ್ರಕರಣ ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ ನಲ್ಲೂ  ಸಂಪರ್ಕ ಹೊಂದಿರುವುದು ತಿಳಿದು ಬಂದಿದೆ. 

ಇದನ್ನೂ ಓದಿ : Bank Alert! ಈ ಬ್ಯಾಂಕ್ ಖಾತೆದಾರರು ಈ ಕೆಲಸ ಮಾಡದಿದ್ದಲ್ಲಿ ಆನ್ ಲೈನ್ ಪೇಮೆಂಟ್ ಸಾಧ್ಯವಾಗುವುದಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

 

Trending News