Samsung Galaxy F22: 6000mah ಬ್ಯಾಟರಿ ಸಾಮರ್ಥ್ಯದ ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಫೋನ್ ಬೆಲೆ, ವೈಶಿಷ್ಟ್ಯ ತಿಳಿಯಿರಿ

ಸ್ಯಾಮ್‌ಸಂಗ್ ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 22 (Samsung Galaxy F22) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಜುಲೈ 13 ರಿಂದ ಫ್ಲಿಪ್‌ಕಾರ್ಟ್ ತನ್ನ ಮಾರಾಟವನ್ನು ಪ್ರಾರಂಭಿಸಿದೆ. 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ರೂಪಾಂತರದ ಈ ಸ್ಮಾರ್ಟ್‌ಫೋನ್ ಬೆಲೆ  12,999 ರೂ.ಗಳಾಗಿದ್ದು ಈ ಪ್ರಸ್ತಾಪದಲ್ಲಿ, ನೀವು ಈ ಫೋನ್ ಅನ್ನು ಅಗ್ಗದ ದರದಲ್ಲಿ ಖರೀದಿಸಬಹುದಾಗಿದೆ.

Written by - Yashaswini V | Last Updated : Jul 14, 2021, 01:44 PM IST
  • ಸ್ಯಾಮ್‌ಸಂಗ್‌ನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 22 ಫೋನ್ 12,999 ರೂ.ಗೆ ಲಭ್ಯವಿದೆ
  • ಲಾಂಚ್ ಆಫರ್‌ನಲ್ಲಿ ನೀವು ಈ ಫೋನ್ ಅನ್ನು ಅಗ್ಗದ ದರದಲ್ಲಿ ಖರೀದಿಸಬಹುದು
  • ಕಂಪನಿಯು ಫೋನ್ ಅನ್ನು ಎರಡು ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ
Samsung Galaxy F22: 6000mah ಬ್ಯಾಟರಿ ಸಾಮರ್ಥ್ಯದ ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಫೋನ್ ಬೆಲೆ, ವೈಶಿಷ್ಟ್ಯ ತಿಳಿಯಿರಿ title=
Samsung Galaxy F22 Price And Features (Image courtesy: androidpolice)

ಬೆಂಗಳೂರು: Samsung Galaxy F22 Price And Specifications- ಇತ್ತೀಚೆಗಷ್ಟೇ ಸ್ಯಾಮ್‌ಸಂಗ್ ಎಫ್-ಸೀರೀಸ್‌ನ (F-Series) ಹೊಸ ಫೋನ್ ಅನ್ನು ಬಿಡುಗಡೆ ಮಾಡಿದೆ. ಕಳೆದ ವಾರ ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 22 (Samsung Galaxy F22) ಅನ್ನು ಬಿಡುಗಡೆ ಮಾಡಿದ್ದು ಜುಲೈ 13 ರಿಂದ ಫ್ಲಿಪ್‌ಕಾರ್ಟ್ನಲ್ಲಿ ಈ ಫೋನ್ ಲಭ್ಯವಾಗುತ್ತಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 22 (Samsung Galaxy F22)  ಫೋನ್ 90Hz ರಿಫ್ರೆಶ್ ದರದೊಂದಿಗೆ ವಿಭಾಗ-ಪ್ರಮುಖ 6.4-ಇಂಚಿನ HD + sAMOLED ಡಿಸ್ಪ್ಲೇ ಹೊಂದಿದೆ. ಈ ಫೋನಿನ 4 ಜಿಬಿ + 64 ಜಿಬಿ ಮತ್ತು 6 ಜಿಬಿ + 128 ಜಿಬಿ ರೂಪಾಂತರಗಳ ಬೆಲೆ ಕ್ರಮವಾಗಿ 12,499 ರೂ. ಮತ್ತು 14,499 ರೂ. ಆಗಿದ್ದು ಕಂಪನಿಯು ಈ ಫೋನ್ ಅನ್ನು ಎರಡು ಬಣ್ಣಗಳಲ್ಲಿ  (ಡೆನಿಮ್ ಬ್ಲೂ ಮತ್ತು ಡೆನಿಮ್ ಬ್ಲ್ಯಾಕ್) ಬಿಡುಗಡೆ ಮಾಡಿದೆ. ಫ್ಲಿಪ್‌ಕಾರ್ಟ್‌ನಲ್ಲಿನ (Flipkart) ಲಾಂಚ್ ಆಫರ್‌ನಲ್ಲಿ ನೀವು ಈ ಫೋನ್ ಅನ್ನು ಅಗ್ಗದ ದರದಲ್ಲಿ ಖರೀದಿಸಬಹುದಾಗಿದೆ. 

ಇದನ್ನೂ ಓದಿ- Flipkart Sale ನಲ್ಲಿ ಈ ಫೋನ್ ಗಳ ಮೇಲೆ ಸಿಗಲಿದೆ ಮೂರು ಸಾವಿರ ರೂಪಾಯಿಗಳ ರಿಯಾಯಿತಿ

ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್ 22 ನ ಬೆಲೆ ಮತ್ತು ವೈಶಿಷ್ಟ್ಯ (Samsung Galaxy F22 Price And Features) :-
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 22 (Samsung Galaxy F22) ರ 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ರೂಪಾಂತರವನ್ನು 12,999 ರೂ.ಗಳಿಗೆ ಖರೀದಿಸಬಹುದು. ಅದೇ ಸಮಯದಲ್ಲಿ, 6 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ರೂಪಾಂತರವನ್ನು 14,999 ರೂ.ಗಳಿಗೆ ಖರೀದಿಸಬಹುದು. ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಲಾಂಚ್ ಆಫರ್ ಅಡಿಯಲ್ಲಿ, ನೀವು ಈ ಫೋನ್ ಅನ್ನು ಕ್ರೆಡಿಟ್ ಕಾರ್ಡ್ (Credit Card) ಅಥವಾ ಡೆಬಿಟ್ ಕಾರ್ಡ್ನೊಂದಿಗೆ ಖರೀದಿಸಿದರೆ, ನಿಮಗೆ 1000 ರೂಪಾಯಿ ರಿಯಾಯಿತಿ ಸಿಗುತ್ತದೆ. ಅಂದರೆ, ನೀವು ಈ ಫೋನ್ ಅನ್ನು 11,999 ಕ್ಕೆ ಖರೀದಿಸಲು ಸಾಧ್ಯವಾಗುತ್ತದೆ.

ಕ್ಯಾಮೆರಾ ಸಹ ಅದ್ಭುತವಾಗಿದೆ:
ಫೋನ್‌ನಲ್ಲಿ  ರಿಯರ್ ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಇದು 48 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮರಾ ಹೊಂದಿದೆ. ಇನ್ನೆರಡು 2-2 ಮೆಗಾಪಿಕ್ಸೆಲ್ ಕ್ಯಾಮರಾ ಕೂಡ ಇದರಲ್ಲಿದೆ. ಫೋನ್‌ನಲ್ಲಿ 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಇದನ್ನೂ ಓದಿ- WhatsApp Banking: ಯಾವ ಬ್ಯಾಂಕ್ ಗ್ರಾಹಕರಿಗೆ ಲಭ್ಯವಿದೆ ವಾಟ್ಸಾಪ್ ಬ್ಯಾಂಕಿಂಗ್ ಸೌಲಭ್ಯ

6000mah ಬ್ಯಾಟರಿ:
ಅಧಿಕ ಸಾಮರ್ಥ್ಯದ ಶಕ್ತಿಯನ್ನು ನೀಡಲು ಫೋನ್‌ಗೆ 6000 mAh ಬ್ಯಾಟರಿಯನ್ನು ಒದಗಿಸಲಾಗಿದೆ. ಇದು 15 ವ್ಯಾಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಫಿಂಗರ್‌ಪ್ರಿಂಟ್ ಸೆನ್ಸಾರ್ ಸಹ ಫೋನ್‌ನ ಬದಿಯಲ್ಲಿ ಲಭ್ಯವಿದೆ. ಫೋನ್ 4 ಜಿ ಎಲ್ ಟಿಇ (4G LTE) ಮತ್ತು ಯುಎಸ್ಬಿ-ಟೈಪ್ ಸಿ ನಂತಹ ಸಂಪರ್ಕ ವೈಶಿಷ್ಟ್ಯಗಳನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News