Sun Transit 2021: ನಾಳೆ ಕರ್ಕ ರಾಶಿಗೆ ಸೂರ್ಯ ಪ್ರವೇಶ, ಸೂರ್ಯನ ಗೋಚರದ ವಿಶೇಷತೆ ಇಲ್ಲಿದೆ

Surya Rashi Parivartan July 2021 - ಸೂರ್ಯ ಜುಲೈ 16, 2021ರಂದು ಶುಕ್ರವಾರ ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. ಸೂರ್ಯನ ಈ ಕರ್ಕ ರಾಶಿಯ ಗೋಚರದಿಂದ (Surya Gochar 2021) ಕೆಲ ರಾಶಿಗಳ ಜನರ  ಬಿಸಿನೆಸ್, ನೌಕರಿ, ಕೌಟುಂಬಿಕ ಹಾಗೂ ವೈವಾಹಿಕ ಜೀವನದ ಮೇಲೆ ಪ್ರಭಾವ ಬೀರಲಿದೆ. 

Written by - Nitin Tabib | Last Updated : Jul 15, 2021, 10:39 AM IST
  • ನಾಳೆ ಸೂರ್ಯ ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ.
  • ಆಗಸ್ಟ್ 17ರವರೆಗೆ ಆತ ಕರ್ಕರಾಶಿಯಲ್ಲಿಯೇ ಇರಲಿದ್ದಾನೆ.
  • ನಂತರ ಸೂರ್ಯ ತನ್ನ ಸ್ವಾಮಿ ರಾಶಿ ಸಿಂಹ ರಾಶಿಯಲ್ಲಿ ಗೋಚರಿಸಲಿದ್ದಾನೆ.
Sun Transit 2021: ನಾಳೆ ಕರ್ಕ ರಾಶಿಗೆ ಸೂರ್ಯ ಪ್ರವೇಶ, ಸೂರ್ಯನ ಗೋಚರದ ವಿಶೇಷತೆ ಇಲ್ಲಿದೆ  title=
Surya Rashi Parivartan July 2021 (File Photo)

Surya Rashi Parivartan July 2021 - ಸೂರ್ಯ ಜುಲೈ 16, 2021ರಂದು ಶುಕ್ರವಾರ ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. ಸೂರ್ಯನ ಈ ಕರ್ಕ ರಾಶಿಯ ಗೋಚರದಿಂದ (Surya Gochar 2021) ಕೆಲ ರಾಶಿಗಳ ಜನರ  ಬಿಸಿನೆಸ್, ನೌಕರಿ, ಕೌಟುಂಬಿಕ ಹಾಗೂ ವೈವಾಹಿಕ ಜೀವನದ ಮೇಲೆ ಪ್ರಭಾವ ಬೀರಲಿದೆ. ಶಾಸ್ತ್ರಗಳಲ್ಲಿ ಸೂರ್ಯನಿಗೆ ಜಗತ್ತಿನ ಆತ್ಮ ಎಂದು ಕರೆಯಲಾಗುತ್ತದೆ. ಸೂರ್ಯನ ಹೊರತು ಭೂಮಿಯ ಮೇಲೆ ಜೀವನ ಕಲ್ಪಿಸಲು ಕೂಡ ಸಾಧ್ಯವಿಲ್ಲ. ಹಾಗಾದರೆ ಬನ್ನಿ ಸೂರ್ಯನ ಈ ಗೋಚರದ ಕೆಲ ವಿಶೇಷತೆಗಳನ್ನು ತಿಳಿದುಕೊಳ್ಳೋಣ ಬನ್ನಿ.

ಸೂರ್ಯನ ಈ ಕರ್ಕ ರಾಶಿ ಗೋಚರ ಯಾವಾಗ ಸಂಭವಿಸಲಿದೆ?
ಶುಕ್ರವಾರ ಅಂದರೆ ಜುಲೈ 16, 2021ಕ್ಕೆ ಸಂಜೆ 04 ಗಂಟೆ 41 ನಿಮಿಷಕ್ಕೆ ಸೂರ್ಯ ಚಂದ್ರನ ರಾಶಿಯಾಗಿರುವ ಕರ್ಕ ರಾಶಿಯಲ್ಲಿ ಗೋಚರಿಸಲಿದ್ದಾನೆ (Surya Rashi Parivartan 2021).  ಸೂರ್ಯ ಈ ರಾಶಿಯಲ್ಲಿ ಆಗಸ್ಟ್ 17, 2021ರವರೆಗೆ ಅಂದರೆ ಮಂಗಳವಾರ ಬೆಳಗಿನ ಜಾವ 01ಗಂಟೆ 05ಗಂಟೆಯವರೆಗೆ ವಿರಾಜಮಾನನಾಗಲಿದ್ದಾನೆ. ಬಳಿಕ ಆತ ತಮ್ಮ ಸ್ವಾಮಿ ರಾಶಿಯಾಗಿರುವ ಸಿಂಹರಾಶಿಗೆ ಪ್ರವೇಶಿಸಲಿದ್ದಾನೆ.

ಈ ಸೂರ್ಯ ರಾಶಿ ಪರಿವರ್ತನೆಯ ಪ್ರಭಾವ ಏನು?
ಜ್ಯೋತಿಷ್ಯ ಶಾಸ್ತ್ರದ (Astrology Today) ಪ್ರಕಾರ, ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯನ ಸಿಂಹ ರಾಶಿ ಗೋಚರವನ್ನು ಸೂರ್ಯ ಕ್ರಾಂತಿ ಮತ್ತು ಸೂರ್ಯನ ಕರ್ಕ ರಾಶಿ ಪ್ರವೇಶವನ್ನು ಕರ್ಕ ಕ್ರಾಂತಿ ಎನ್ನಲಾಗುತ್ತದೆ. ಸೂರ್ಯ ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಸೂರ್ಯನ ರಾಶಿ ಪರಿವರ್ತನೆಯ ಪ್ರಭಾವ ಎಲ್ಲಾ 12 ರಾಶಿಗಳ ಮೇಲೆ ಉಂಟಾಗುತ್ತದೆ.  ಅದರಲ್ಲೂ ವಿಶೇಷವಾಗಿ ಸೂರ್ಯನ ಈ ರಾಶಿ ಪರಿವರ್ತನೆಯ ಪ್ರಭಾವ ಕರ್ಕ ಹಾಗೂ ಸಿಂಹರಾಶಿಯ ಜಾತಕದವರ ಮೇಲೆ ಹೆಚ್ಚಾಗಿರಲಿದೆ. ಏಕೆಂದರೆ, ಸೂರ್ಯ ಸಿಂಹ ರಾಶಿಗೆ ಅಧಿಪತಿ ಹಾಗೂ ಆತ ಕರ್ಕ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ.

ಇದನ್ನೂ ಓದಿ-Chaturmas 2021: ಜುಲೈ 20 ರಿಂದ ಚಾತುರ್ಮಾಸ ಆರಂಭ, ನವೆಂಬರ್ 14ರವರೆಗೆ ಮಂಗಳ ಕಾರ್ಯಗಳು ನಡೆಯುವುದಿಲ್ಲ

ಕುಂಡಲಿಯಲ್ಲಿ ಸೂರ್ಯನ ಬಲವಾದ ಸ್ಥಿತಿ 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನನ ಕುಂಡಲಿಯಲ್ಲಿ ಸೂರ್ಯ ಪ್ರಬಲ ಸ್ಥಿತಿಯಲ್ಲಿದ್ದರೆ, ಆ ಜಾತಕದ ಜನರು ಪ್ರತಿಯೊಂದು ರಂಗದಲ್ಲೂ ಯಶಸ್ಸು ಸಂಪಾದಿಸುತ್ತಾರೆ ಎನ್ನಲಾಗುತ್ತದೆ. ಅವರ ಜೀವನ ಸುಖ, ಸಮೃದ್ಧಿಯಿಂದ ಕೂಡಿರುತ್ತದೆ. ಸರ್ಕಾರಿ ನೌಕರಿ ಸಿಗುವ ಯೋಗ ನಿರ್ಮಾಣಗೊಳ್ಳುತ್ತದೆ. ಸೂರ್ಯ ದೇವನ ಕೃಪೆ ಇರುವ ಜಾತಕದವರಿಗೆ ಪದೋನ್ನತಿ ಪ್ರಾಪ್ತಿಯಾಗುತ್ತದೆ.

ಇದನ್ನೂ ಓದಿ-Benefits Of Wearing Pearl: ದೇವಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರಲು ಈ ಕೆಲಸ ಮಾಡಿ, ಹಣದ ಮುಗ್ಗಟ್ಟು ಎದುರಾಗುವುದಿಲ್ಲ

ಕುಂಡಲಿಯಲ್ಲಿ ಸೂರ್ಯನ  ದುರ್ಬಲ ಸ್ಥಿತಿ
ಜನ್ಮ ಜಾತಕದಲ್ಲಿ ಸೂರ್ಯನ ಸ್ಥಿತಿ ದುರ್ಬಲವಾಗಿದ್ದರೆ. ಅಂತಹ ಜಾತಕದ ಜನರಿಗೆ ಕಷ್ಟಗಳು ಎದುರಾಗುತ್ತವೆ. ಈ ಅವಧಿಯಲ್ಲಿ ಅವರಿಗೆ ಹೃದಯ ಹಾಗೂ ಕಣ್ಣುಗಳಿಗೆ ಸಂಬಂಧಿಸಿದ ವ್ಯಾಧಿ ಎದುರಾಗಬಹುದು. ಇದಲ್ಲದೆ ಇಂತಹ ಜಾತಕದವರು ಸುಳ್ಳು ಆರೋಪಗಳಿಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಜಾತಕದಲ್ಲಿ ಸೂರ್ಯನ ದುರ್ಬಲ ಸ್ಥಿತಿ ಧನ ಹಾನಿ ಸೂಚಿಸುತ್ತದೆ.

ಇದನ್ನೂ ಓದಿ- House Door Vastu Tips: ಮನೆಯ ಬಾಗಿಲು ಹೀಗಿದ್ದರೆ ಸುಖ ಶಾಂತಿಗೆ ಕೊರತೆಯಿರುವುದಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News