China Launched UUV - ಚೀನಾ ತನ್ನ ಅತ್ಯಂತ ರಹಸ್ಯ ಹಾಗೂ ಶಕ್ತಿಶಾಲಿ ಅಸ್ತ್ರದ ಯಶಸ್ಸಿನ ಕುರಿತು ಘೋಷಣೆ ಮಾಡಿದೆ. ಹೌದು, ಜುಲೈ ಮೊದಲ ವಾರದಲ್ಲಿ ಚೀನಾ ನೌಕಾಪಡೆ ಯೋಧರಿಲ್ಲದೆ ನಡೆದಾಡುವ ಸಬ್ಮರೀನ್ ಅಂದರೆ ಡ್ರೋನ್ ಸಬ್ಮರೀನ್ ನ ಯಶಸ್ವಿ ಪರೀಕ್ಷೆ ನಡೆಸಿದೆ. ಹಾಗೆ ನೋಡಿದರೆ ಹಲವು ದೇಶಗಳು Unmanned Underwater Vehicles (UUV)ತಯಾರಿಸುವ ಪ್ರಯತ್ನ ನಡೆಸುತ್ತಿವೆ. ಆದರೆ, ಚೀನಾ ತನ್ನ ಈ ಅಸ್ತ್ರವನ್ನು ಸಮುದ್ರಕ್ಕೆ ಇಳಿಸಿರುವುದಾಗಿ ಹೇಳಿಕೊಂಡಿದೆ.
2010ರಿಂದ ಈ ಅಸ್ತ್ರದ ಮೇಲೆ ಕಾರ್ಯನಿರ್ವಹಿಸುತ್ತಿತ್ತು ಚೀನಾ
2019ರಲ್ಲಿ ಚೀನಾ ತನ್ನ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆಸಲಾಗಿದ್ದ ಸೈನಿಕ ಪರೇಡ್ ನಲ್ಲಿ UUV ಪ್ರದರ್ಶಿಸಿತ್ತು ಹಾಗೂ ಈ ಕಾರ್ಯಕ್ರಮದ ಮೇಲೆ ಅದು 2010ರಿಂದ ಕಾರ್ಯನಿರ್ವಹಿಸುತ್ತಿದೆ. ಈ ಸಬ್ ಮರೀನ್ ಯಾವುದೇ ಶತ್ರುರಾಷ್ಟ್ರಗಳ ಸಬ್ ಮರೀನ್ ಅನ್ನು ಗುರುತಿಸಿ, ಅದನ್ನು ಹಿಂಬಾಲಿಸಿ, ಅದರ ಮೇಲೆ ಹಲ್ಲೆ ನಡೆಸುವ ಸಾಮರ್ಥ್ಯ ಹೊಂದಿದೆ. ಅಷ್ಟೇ ಅಲ್ಲ ಯಾವುದೇ ಸೈನಿಕರ ಸಹಾಯವಿಲ್ಲದೆ ಅದು ಈ ಕೆಲಸ ಮಾಡಬಲ್ಲದು. ಇಂತಹುದೇ ಒಂದು UUV ಕಳೆದ ವರ್ಷ ಡಿಸೆಂಬರ್ ನಲ್ಲಿ ದಕ್ಷಿಣ ಚೀನಾದ ಸಮುದ್ರದಿಂದ ಹಿಂದೂ ಮಹಾಸಾಗರಕ್ಕೆ ಸಮುದ್ರ ಮಾರ್ಗವನ್ನು ಹೊಂದಿರುವ ಇಂಡೋನೇಷ್ಯಾದ ದ್ವೀಪಗಳ ಬಳಿ ಇಂತಹ ಒಂದು UUV ಕಳೆದ ಡಿಸೆಂಬರ್‌ನಲ್ಲಿ ಪತ್ತೆಯಾಗಿತ್ತು. ಆದರೆ, ಆಗ ಚೀನಾ ಈ ಯುವಿ ಜೊತೆ ತನ ಯಾವುದೇ ಸಂಬಂಧವಿಲ್ಲ ಎಂದು ಹೇಳಿ ನಿರಾಕರಿಸಿತ್ತು.
ಈ ಎಲ್ಲಾ ರೀತಿಯ ಕ್ಷಮತೆಗಳನ್ನು ಹೊಂದಿದೆ ಈ ಸಬ್ ಮರೀನ್
ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಚೀನಾದ ಹರಿಬನ್ ಎಂಜಿನಿಯರಿಂಗ್ ವಿಶ್ವವಿದ್ಯಾಲಯದ ಚೀನೀ ಜಲಾಂತರ್ಗಾಮಿ ಸಂಶೋಧನಾ ಸಂಸ್ಥೆಯ ಪ್ರೊಫೆಸರ್ ಲಿಯಾಂಗ್ ಗುಲಾಂಗ್, ಡ್ರೋನ್ ಜಲಾಂತರ್ಗಾಮಿ ಸಮುದ್ರದಲ್ಲಿ ಒಂದು ನಿರ್ದಿಷ್ಟ ಸ್ಥಳದಲ್ಲಿ 10 ಮೀಟರ್ ಆಳದಲ್ಲಿ ಯಶಸ್ವಿಯಾಗಿ ಗಸ್ತು ತಿರುಗಿದೆ ಎಂದು ಹೇಳಿದ್ದಾರೆ. ಇನ್ನೂ ಕೆಲವು ಸುಧಾರಣೆಗಳ ನಂತರ ಈ ಜಲಾಂತರ್ಗಾಮಿ ನೌಕೆಗಳ ಒಂದು ಪಡೆ ಶತ್ರು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳ ವಿರುದ್ಧ ನಿಯೋಜಿಸಬಹುದು ಎಂದು ಗುಲಾಂಗ್ ಹೇಳಿದ್ದಾರೆ. ಈ ಜಲಾಂತರ್ಗಾಮಿ ಶತ್ರು ಜಲಾಂತರ್ಗಾಮಿ ನೌಕೆಯ ನಿರ್ದೇಶನ, ವೇಗಕ್ಕೆ ಅನುಗುಣವಾಗಿ ಕೃತಕ ಬುದ್ಧಿಮತ್ತೆ (Artificial Intellegence) ಸಹಾಯದಿಂದ ಸ್ವಂತವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಚೀನಾ ಸಾಗರದಾಳದಲ್ಲಿ ಸಂಶೋಧನಾ ಕೇಂದ್ರದ ಸಿದ್ಧತೆ
ಚೀನಾ ನೌಕಾಪಡೆಯ ಸಿಬ್ಬಂದಿ ಇಲ್ಲದೆ ದಕ್ಷಿಣ ಚೀನಾ ಸಮುದ್ರದ ಆಳದಲ್ಲಿ ಯುದ್ಧನೌಕೆಗಳು, ಸೀಪ್ಲೇನ್ಗಳು ಮತ್ತು ಸಂಶೋಧನಾ ಕೇಂದ್ರವನ್ನು ನಿರ್ಮಿಸುತ್ತಿದೆ ಎಂದೂ ಕೂಡ ಹೇಳಲಾಗುತ್ತಿದೆ. ಜುಲೈ 2018 ರಲ್ಲಿ, ಶೆನ್ಯಾಂಗ್ ಇನ್ಸ್ಟಿಟ್ಯೂಟ್ ಆಫ್ ಆಟೊಮೇಷನ್ ನಿರ್ದೇಶಕರು ಅಂತಾರಾಷ್ಟ್ರೀಯ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಚೀನಾ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಕಣ್ಗಾವಲು, ಸುರಂಗ ಮಾರ್ಗ ಮತ್ತು ಸಮುದ್ರದಲ್ಲಿ ಶತ್ರುಗಳ ಮೇಲೆ ದಾಳಿ ನಡೆಸುವ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದಿದ್ದರು.
ಅಮೇರಿಕಾ ಬಳಿಯೂ ಇಲ್ಲ ಇಂತಹ ಸಬ್ಮರೀನ್
ಕಳೆದ ಸುಮಾರು ಎರಡು ದಶಕಗಳಿಂದ ಚೀನಾ ಯುಯುವಿಗಳ ಸಂಶೋಧನೆಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದೆ. 2019 ರ ವಾರ್ಷಿಕ ಮಿಲಿಟರಿ ಪೆರೇಡ್‌ನಲ್ಲಿ ಚೀನಾ ಇಂತಹ ಎರಡು ಜಲಾಂತರ್ಗಾಮಿ ನೌಕೆಗಳನ್ನು ಪ್ರದರ್ಶಿಸಿತ್ತು. ಇವುಗಳಿಗೆ ಅದು ಎಚ್‌ಎಸ್‌ಯು - 001 ಎಂದು ಹೆಸರಿಸಿದೆ. ಸಮುದ್ರದ ಕೆಳಗೆ ರೋಬೋಟ್‌ನಂತೆ ಕೆಲಸ ಮಾಡುವ ಜಲಾಂತರ್ಗಾಮಿ ನೌಕೆಯನ್ನು ತಯಾರಿಸುವುದು ಮತ್ತು ಅದರ ಸೈನಿಕರನ್ನು ಬಳಸುವುದು ಬಹಳ ಕಷ್ಟಕರವಾದ ತಾಂತ್ರಿಕ ಪ್ರಕ್ರಿಯೆ ಎಂದು ತಜ್ಞರು ಹಳುತ್ತಾರ ಮತ್ತು ಇದುವರೆಗೆ ಅಮೆರಿಕಾಗೂ ಕೂಡ ಇಂತಹ ಜಲಾಂತರ್ಗಾಮಿ ನೌಕೆಯನ್ನು ತಯಾರಿಸಲು ಸಾಧ್ಯವಾಗಿಲ್ಲ. ಆದರೆ ಚೀನಾ ಯುಯುವಿಗಳ ಕುರಿತು ಕಳೆದ ವರ್ಷದಿಂದಲೇ ಸಂಕೇತಗಳು ಸಿಗಲಾರಂಭಿಸಿದ್ದವು.
ಇದನ್ನೂ ಓದಿ-Foreign Policy: ಮಾಡಿದ್ದುಣ್ಣೋ ಮಹರಾಯ! ಪಾಕ್ ಬಿಟ್ಟರೆ ಚೀನಾ ಬಳಿಯಿಂದ ಯಾರು ಶಸ್ತ್ರಾಸ್ತ್ರ ಖರೀದಿಸುತ್ತಿಲ್ಲವಂತೆ
ಮಹಾಸಾಗರಗಳಲ್ಲಿ ಬೇಹುಗಾರಿಕೆಗೆ UUV ಬಳಕೆ
ಡಿಸೆಂಬರ್ 2020 ರಲ್ಲಿ, ಇಂಡೋನೇಷ್ಯಾದ ಸೆಲಾಯರ್ ದ್ವೀಪಗಳ ಬಳಿ ಸ್ಥಳೀಯ ಮೀನುಗಾರರು ಚೀನಾಗೆ ಸೇರಿದೆ ಎಂದೇ ಹೇಳಲಾಗಿರುವ ಯುವಿಯುವೊಂದನ್ನು ಪತ್ತೆಹಚ್ಚಿದ್ದರು. ಮಿಲಿಟರಿ ತಜ್ಞರ ಪ್ರಕಾರ, ಈ ಯುವಿಯನ್ನು ಶೆನ್ಯಾಂಗ್ ಸಂಸ್ಥೆಯಲ್ಲಿ ನಿರ್ಮಿಸಲಾಗಿದೆ ಮತ್ತುಇದನ್ನು ದಕ್ಷಿಣ ಚೀನಾ ಸಮುದ್ರದಲ್ಲಿ ಒಂದು ವರ್ಷದ ಹಿಂದೆ ಚೀನಾದ ಸಮೀಕ್ಷಾ ಹಡಗು ಇಳಿಸಿತ್ತು ಎಂದಿದ್ದರು. ಈ ಯುವಿ ತಾಪಮಾನ, ಸಮುದ್ರದ ವಿವಿಧ ಸ್ಥಳಗಳ ಅಲೆಗಳ ವೇಗದಂತಹ ದತ್ತಾಂಶ ಸಂಗ್ರಹಿಸುತ್ತಿತ್ತು. ಈ ಯುವಿ ಪತ್ತೆಯಾದ ಸ್ಥಳ ದಕ್ಷಿಣ ಚೀನಾ ಸಮುದ್ರದಿಂದ ಹಿಂದೂ ಮಹಾಸಾಗರದ ಎರಡು ಮಾರ್ಗಗಳಾದ ಸುಂದಾ ಜಲಸಂಧಿ ಮತ್ತು ಲೊಂಬೊಕ್ ಜಲಸಂಧಿಯ ಬಳಿ ಇದೆ. ಅಂದರೆ, ಚೀನೀ ನೌಕಾಪಡೆ ಈಗ ಹಿಂದೂ ಮಹಾಸಾಗರದಲ್ಲಿ ಬೇಹುಗಾರಿಕೆಗಾಗಿ ತನ್ನ ಯುವಿಯನ್ನು ಬಳಸಲು ಸಿದ್ಧತೆ ನಡೆಸಿದೆ ಎಂದೇ ಇದರಿಂದ ಅರ್ಥವಾಗುತ್ತದೆ.
ಇದನ್ನೂ ಓದಿ-Afghans ತಮ್ಮ ಭವಿಷ್ಯವನ್ನು ನಿರ್ಧರಿಸಬೇಕು: ಯುಎಸ್ ಅಧ್ಯಕ್ಷ ಬಿಡೆನ್
ಡ್ರೋನ್ ಹಾಗೂ UUVಗಳು ಚೀನಾದ ಹೊಸ ಅಸ್ತ್ರಗಳಾಗಿವೆ
ಸಮುದ್ರದಲ್ಲಿನ ತನ್ನ ದೌರ್ಬಲ್ಯವನ್ನು ಹೋಗಲಾಡಿಸಲು ಚೀನಾ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಚೀನೀ ನೌಕಾಪಡೆಯು (China Navy) ತನ್ನನ್ನು ತಾನೇ ವೇಗವಾಗಿ ಬಲಪಡಿಸುತ್ತಿದೆ. ಜಲಾಂತರ್ಗಾಮಿ ನೌಕೆಗಳು ಮತ್ತು ವಿಮಾನವಾಹಕ ನೌಕೆಗಳ ಬಲವನ್ನು ಹೆಚ್ಚಿಸುತ್ತಿದೆ. ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್‌ನ ಒಟ್ಟು ನೌಕಾ ಶಕ್ತಿಯನ್ನು ಎದುರಿಸಲು ಚೀನಾ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ, ಇವುಗಳನ್ನು ಕ್ವಾಡ್ ಕಂಟ್ರೀಸ್ ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಚೀನಾ ಇದೀಗ ಸಮುದ್ರದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಡ್ರೋನ್ ತಂತ್ರಜ್ಞಾನವನ್ನು ಬಳಸಲು ತಯಾರಿ ನಡೆಸುತ್ತಿದೆ. ಡ್ರೋನ್‌ಗಳು ಮತ್ತು ಯುಯುವಿಗಳು ಚೀನಾದ ಹೊಸ ಮತ್ತು ಅತ್ಯಂತ ಅಪಾಯಕಾರಿ ಆಯುಧಗಳಾಗಿವೆ ಎಂದು ಹೇಳಿದರೆ ತಪ್ಪಾಗಲಾರದು.
ಇದನ್ನೂ ಓದಿ-"ಲಡಾಖ್ ವಿವಾದದಿಂದಾಗಿ ಭಾರತ ಮತ್ತು ಚೀನಾ ನಡುವಿನ ಸಂಬಂಧಕ್ಕೆ ತೊಂದರೆಯಾಗಿದೆ"
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ