/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ಮನೆಯಲ್ಲಿ ಈ ನಾಲ್ಕು ಗಿಡಗಳನ್ನು ಯಾವತ್ತೂ ಬೆಳೆಸಬೇಡಿ, ಸಮಸ್ಯೆಗಳು ಕೊನೆಯಾಗುವುದೇ ಇಲ್ಲ

ಹಿಂದೂ ಧರ್ಮಗ್ರಂಥಗಳಲ್ಲಿ ಮರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಸುಖ ಸಮೃದ್ಧಿಗಾಗಿ ಕೆಲವು ಗಿಡಗಳನ್ನು ಮನೆಯಲ್ಲಿ ನೆಡುವಂತೆ ಸೂಚಿಸಲಾಗಿದೆ. ಲವು ಮರಗಳನ್ನು ನೆಡುವುದರಿಂದ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. 

Written by - Ranjitha R K | Last Updated : Jul 19, 2021, 06:37 PM IST
  • ಮನೆ ಮತ್ತು ಸುತ್ತಮುತ್ತ ಮರಗಳನ್ನು ನೆಡುವಾಗ ಎಚ್ಚರ ವಹಿಸಿ
  • ಮನೆ ಅಂದಕ್ಕಾಗಿ ನೆಡುವ ಗಿಡಗಳಿಂದ ಸಮಸ್ಯೆ ಎದುರಾಗಬಹುದು
  • ವಾಸ್ತು ಶಾಸ್ತ್ರದಲ್ಲಿ ಹೇಳಿದಂತೆ ಯಾವ ಮರಗಳು ನೆಡಬೇಕು ತಿಳಿಯಿರಿ
ಮನೆಯಲ್ಲಿ ಈ ನಾಲ್ಕು ಗಿಡಗಳನ್ನು ಯಾವತ್ತೂ ಬೆಳೆಸಬೇಡಿ, ಸಮಸ್ಯೆಗಳು ಕೊನೆಯಾಗುವುದೇ ಇಲ್ಲ  title=
ಮನೆ ಮತ್ತು ಸುತ್ತಮುತ್ತ ಮರಗಳನ್ನು ನೆಡುವಾಗ ಎಚ್ಚರ ವಹಿಸಿ (photo zee news)

ನವದೆಹಲಿ : ಹಿಂದೂ ಧರ್ಮಗ್ರಂಥಗಳಲ್ಲಿ ಮರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ವಾಸ್ತು ಶಾಸ್ತ್ರದ (Vastu shastra) ಪ್ರಕಾರ, ಸುಖ ಸಮೃದ್ಧಿಗಾಗಿ ಕೆಲವು ಗಿಡಗಳನ್ನು ಮನೆಯಲ್ಲಿ ನೆಡುವಂತೆ ಸೂಚಿಸಲಾಗಿದೆ. ಈ ಗಿಡಗಳನ್ನು ನೆಡುವುದರಿಂದ ಜೀವನದಲ್ಲಿ ಸುಖ, ಸಂತೋಷ ಅಭಿವ್ರದ್ದಿ ಸಿಗುತ್ತದೆ ಎನ್ನುವುದು ನಂಬಿಕೆ. ಆದರೆ, ಇನ್ನು ಕೆಲವು ಮರಗಳನ್ನು ನೆಡುವುದರಿಂದ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಂತಹ ಕೆಲವು ಮರಗಳ ಬಗೆಗಿನ ಮಾಹಿತಿ ಇಲ್ಲಿದೆ. 

ತಾಳೆ ಮರ  : 
ವಾಸ್ತು ಶಾಸ್ತ್ರದ (Vastu shastra) ಪ್ರಕಾರ, ಮನೆಯಲ್ಲಿ ತಾಳೆಮರವನ್ನು ನೆಡುವುದು ಅಶುಭ ಎನ್ನಲಾಗಿದೆ. ಯಾವ ಮನೆಯಲ್ಲಿ ತಾಳೆಮರ (palm tree) ಇರುತ್ತದೆಯೋ ಅಲ್ಲಿ ಸದಾ ಹಣದ ಕೊರತೆ ಎದುರಾಗುತ್ತದೆ. ಅಲ್ಲದೆ, ಮನೆ ಮಂದಿಯ ಸಾಲವು ಹೆಚ್ಚುತ್ತದೆಯಂತೆ. ಇದರ ಜೊತೆ ಕುಟುಂಬ ಸದಸ್ಯರ ಆರೋಗ್ಯದ (health problem) ಮೇಲೂ ಪರಿಣಾಮ ಬೀರುತ್ತದೆಯಂತೆ. ಆದ್ದರಿಂದ, ಈ ಮರವನ್ನು ತಪ್ಪಿಯೂ ಮನೆಯಲ್ಲಿ ನೆಡಬಾರದು. 

ಇದನ್ನೂ  ಓದಿ : Shravan Somvar 2021: ಶ್ರಾವಣ ಸೋಮವಾರದ ವೃತದ ವೇಳೆ ಈ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

ಬಿದಿರು :  
ಮನೆಯಲ್ಲಿ ಬಿದಿರನ್ನು (Bamboo) ನೆಡಬಾರದು. ಇದನ್ನು ಮನೆಯಲ್ಲಿ ಹಾಕಿದರೆ ಎಲ್ಲಾ ಕೆಲಸಗಳು ಕೆಡುತ್ತವೆ ಎನ್ನುವುದು ನಂಬಿಕೆ. ಹಿಂದೂ ಧರ್ಮದಲ್ಲಿ, ಸಾವಿನ ಸಮಯದಲ್ಲಿ ಬಿದಿರನ್ನು ಬಳಸಲಾಗುತ್ತದೆ. ಹಾಗಾಗಿ ಇದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ.

ಬುಗರಿ ಗಿಡ :   
ವಾಸ್ತು ಪ್ರಕಾರ (vastu tips), ತಪ್ಪಿ ಕೂಡಾ  ಬುಗರಿ ಮರವನ್ನು ಮನೆಯಲ್ಲಿ ನೆಡಬಾರದು. ಇದನ್ನು ಮನೆಯಲ್ಲಿ ಹಾಕುವುದರಿಂದ ಮನೆಯಲ್ಲಿ ಬಡತನ ತಾಂಡವವಾಡುತ್ತದೆಯಂತೆ. ಅಲ್ಲದೆ, ಮನೆ ಮಂದಿಯ ಮನಸ್ಸಿನ ಶಾಂತಿ ಭಂಗವಾಗುತ್ತದೆ. ಈ ಗಿಡ ಹೆಚ್ಚು ಋಣಾತ್ಮಕ (Negetive energy) ಪರಿಣಾಮಗಳನ್ನು ನೀಡುತ್ತದೆ ಎನ್ನಲಾಗಿದೆ. 

ಹುಣಸೆ ಮರ : 
ವಾಸ್ತು ಶಾಸ್ತ್ರದ ಪ್ರಕಾರ, ಹುಣಸೆ ಗಿಡವನ್ನು ಎಂದಿಗೂ ಮನೆ ಅಥವಾ ತೋಟದಲ್ಲಿ ನೆಡಬಾರದು. ಏಕೆಂದರೆ ಮನೆಯ ಸುತ್ತ ಹುಣಸೆ ಗಿಡ ಇರುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಹುಣಸೆ ಗಿಡ ಇರುವ ಸ್ಥಳದಲ್ಲಿ ವಾಸಿಸುವ ಜನರ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಕುಟುಂಬ ಸದಸ್ಯರು ರೋಗಗಳನ್ನು ಎದುರಿಸಬೇಕಾಗುತ್ತದೆ.

ಇದನ್ನೂ  ಓದಿ : Guru Purnima 2021 ಈ ದಿನ ಗುರು ಪೌರ್ಣಿಮೆ ಆಚರಿಸಲಾಗುವುದು, ಇಲ್ಲಿದೆ ಶುಭ ಮುಹೂರ್ತ ಹಾಗೂ ಮಹತ್ವ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ