Vastu Shastra: ಮನೆಯ ಮೇಲ್ಚಾವಣಿಯಲ್ಲಿ ಈ ವಸ್ತು ಇದ್ದರೆ ಎಂದಿಗೂ ಎದುರಾಗಲ್ಲ ಹಣದ ಸಮಸ್ಯೆ

ಮನೆಯ ಟೆರೇಸ್ ಅಂದರೆ ಮೇಲ್ಛಾವಣಿ ಶನಿ ದೇವ ಮತ್ತು ಕುಬೇರ ದೇವರಿಗೆ ಸಂಬಂಧಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಶನಿ ದೇವ, ಕುಬೇರ ದೇವ ಇಬ್ಬರ ಅಸಮಾಧಾನವು ಮನೆಯವರನ್ನು ಆರ್ಥಿಕ ತೊಂದರೆಯಲ್ಲಿ ಸಿಲುಕಿಸಬಹುದು ಮತ್ತು ಇವರ ಅನುಗ್ರಹದಿಂದ ಮನೆಯು ಸಂಪತ್ತಿನಿಂದ ತುಂಬಿರುತ್ತದೆ ಎಂದು ನಂಬಲಾಗಿದೆ.

Written by - Yashaswini V | Last Updated : Jul 6, 2021, 12:37 PM IST
  • ಮನೆಯ ಮೇಲ್ಛಾವಣಿಯನ್ನು ಸದಾ ಸ್ವಚ್ಛವಾಗಿಡಿ
  • ಮನೆಯ ಮೇಲ್ಛಾವಣಿಯ ಉತ್ತರ ದಿಕ್ಕಿನಲ್ಲಿ ಈ ವಸ್ತುವನ್ನು ಇರಿಸಿ
  • ಮನೆಯಲ್ಲಿ ನೀರಿನ ಟ್ಯಾಂಕ್ ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು
Vastu Shastra: ಮನೆಯ ಮೇಲ್ಚಾವಣಿಯಲ್ಲಿ ಈ ವಸ್ತು ಇದ್ದರೆ ಎಂದಿಗೂ ಎದುರಾಗಲ್ಲ ಹಣದ ಸಮಸ್ಯೆ title=
ಮನೆಯ ಟೆರೇಸ್‌ನ ಉತ್ತರ ದಿಕ್ಕಿನಲ್ಲಿ ಈ ವಸ್ತು ಇದ್ದರೆ ಮನೆಯಲ್ಲಿ ಸದಾ ಸಂಪತ್ತು, ಸಮೃದ್ಧಿ ತುಂಬಿರುತ್ತೆ

ಬೆಂಗಳೂರು: ವಾಸ್ತು ಶಾಸ್ತ್ರದಲ್ಲಿ, ಮನೆಯ ಪ್ರತಿಯೊಂದು ದಿಕ್ಕು, ಅವುಗಳ ಬಳಕೆ ಮತ್ತು ಅಲ್ಲಿ ಇರಿಸಲಾಗಿರುವ ವಸ್ತುಗಳಿಗೆ ಅದರದೇ ಆದ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ಇವುಗಳಲ್ಲಿ ಕೆಲವು ಅಂಶಗಳು ಬಹಳ ಮುಖ್ಯವಾಗಿದ್ದು ಇವುಗಳನ್ನು ಸರಿಯಾಗಿ ಪಾಲಿಸದಿದ್ದರೆ ಮನೆಯಲ್ಲಿ ನಾನಾ ರೀತಿಯ ಸಂಕಷ್ಟ ಎದುರಾಗಬಹುದು ಎಂದು ಹೇಳಲಾಗುತ್ತದೆ. ಇದಲ್ಲದೆ ಮನೆಯು ವಾಸ್ತು ಪ್ರಕಾರ ಇದ್ದರೆ ಮನೆಯಲ್ಲಿ ಸುಖ-ಶಾಂತಿ, ಅಪಾರ ಸಂಪತ್ತು-ಸಮೃದ್ಧಿ ತುಂಬಿರುತ್ತದೆ ಎಂದು ಕೂಡ ನಂಬಲಾಗಿದೆ.

ಮನೆಯ ಮೇಲ್ಛಾವಣಿ ಬಹಳ ಮುಖ್ಯ:
ಹೌದು, ವಾಸ್ತು (Vastu) ಪ್ರಕಾರ ಮನೆಯ ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ಮನೆಯ ಮೇಲ್ಛಾವಣಿಯು (House Terrace) ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಅದು ಶನಿ ದೇವನಿಗೆ ಸಂಬಂಧಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಮನೆಯ ಛಾವಣಿಯಲ್ಲಿ ಕಸ, ಕೊಳಕು ಮತ್ತು ಜಂಕ್ ಸಂಗ್ರಹವಾಗುವುದರಿಂದ ಶನಿ ಕೋಪಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಶನಿ ಕೋಪಗೊಳ್ಳುವುದರಿಂದ ಮನೆಯಲ್ಲಿ ನಾನಾ ರೀತಿಯ ಸಂಕಷ್ಟ, ತೊಂದರೆ ಎದುರಾಗುತ್ತದೆ ಎಂದು ನಂಬಲಾಗಿದೆ. ಹಾಗಾಗಿಯೇ ಸದಾ ಮನೆಯ ಮೇಲ್ಛಾವಣಿಯನ್ನು ಸ್ವಚ್ಛವಾಗಿರಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ. 

ಇದನ್ನೂ ಓದಿ- Importance Of Decorating Home: ವಿಶೇಷ ಸಂದರ್ಭಗಳಲ್ಲಿ ಮನೆಯನ್ನು ಅಲಂಕರಿಸುವುದರ ಹಿಂದಿನ ಮಹತ್ವವಿದು

ಮನೆಯಲ್ಲಿ ಧನ-ಪ್ರಾಪ್ತಿಗಾಗಿ ಈ ಉಪಾಯಗಳನ್ನು ಅನುಸರಿಸಿ:
- ಮನೆಯ ಮೇಲ್ಛಾವಣಿಯು (House Terrace) ಶನಿ ದೇವ ಮತ್ತು ಸಂಪತ್ತಿನ ದೇವರಾದ ಕುಬೇರನಿಗೆ ಸಂಬಂಧಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ರೆ ನಿಮ್ಮ ಮನೆಯ ಮಹಡಿಯಲ್ಲಿ ಬಗ್ಗೆ ಕೆಲವು ಕ್ರಮಗಳನ್ನು ತೆಗೆದುಕೊಂಡರೆ, ಸದಾ ನಿಮ್ಮ ಮನೆಯಲ್ಲಿ ಸಂಪತ್ತು-ಸಮೃದ್ಧಿ ತುಂಬಿ ತುಳುಕಲಿದೆ ಎಂದು ಹೇಳಲಾಗುತ್ತದೆ.

- ಮನೆಯಲ್ಲಿ ಹಣದ ಕೊರತೆಯಿದ್ದರೆ, ಮನೆಯ ಛಾವಣಿಯ ಉತ್ತರ ದಿಕ್ಕಿನಲ್ಲಿ ಸಕ್ಕರೆಯನ್ನು ಇರಿಸಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ, ಸಂಪತ್ತು ಮತ್ತು ಸಮೃದ್ಧಿಯು ನಿಮ್ಮನ್ನು ಅರಸಿ ಬರಲಿದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ- Vastu Shastra Green Colour Benefits: ಮನೆಯಲ್ಲಿ ಈ ಬಣ್ಣದ ಗಡಿಯಾರವಿರಲಿ, ಬದಲಾವಣೆ ನಿಮಗೆ ತಿಳಿಯಲಿದೆ

- ಅಂತೆಯೇ, ಮನೆಯಲ್ಲಿ ನೀರಿನ ಟ್ಯಾಂಕ್ (Water Tank) ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು.  ಈ ಕ್ರಮಗಳನ್ನು ಕೈಗೊಳ್ಳುವುದಾರಿಂದ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಿರುತ್ತಾಳೆ. ಮನೆಯಲ್ಲಿ ಆರ್ಥಿಕ ಸ್ಥಿರತೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News