CBSE 12th Result : ಫಲಿತಾಂಶ ಅಂತಿಮಗೊಳಿಸುವ ಗಡುವು ವಿಸ್ತರಣೆ , ಈ ದಿನ ಹೊರ ಬೀಳಲಿದೆ ಫಲಿತಾಂಶ

ಫಲಿತಾಂಶದ  ಕೆಲಸದಲ್ಲಿ ತೊಡಗಿರುವ  ಶಿಕ್ಷಕರು ಒತ್ತಡದಲ್ಲಿದ್ದಾರೆ ಎಂದು ಪರೀಕ್ಷಾ ನಿಯಂತ್ರಕ ಸನ್ಯಂ ಭರದ್ವಾಜ್ ತಿಳಿಸಿದ್ದಾರೆ. ಫಲಿತಾಂಶಗಳನ್ನು ಅಂತಿಮಗೊಳಿಸುವ ದಿನಾಂಕ ಸಮೀಪಿಸುತ್ತಿರುವುದರಿಂದ, ಶಿಕ್ಷಕರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ.

Written by - Ranjitha R K | Last Updated : Jul 21, 2021, 08:25 PM IST
  • CBSE 12th ಫಲಿತಾಂಶ ಅಂತಿಮಗೊಳಿಸುವ ಗಡುವು ವಿಸ್ತರಣೆ
  • ಶಿಕ್ಷಕರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ
  • ಈ ದಿನ ಹೊರಬೀಳಲಿದೆ ಫಲಿತಾಂಶ
CBSE 12th Result : ಫಲಿತಾಂಶ ಅಂತಿಮಗೊಳಿಸುವ ಗಡುವು ವಿಸ್ತರಣೆ , ಈ ದಿನ ಹೊರ ಬೀಳಲಿದೆ ಫಲಿತಾಂಶ  title=
CBSE 12th ಫಲಿತಾಂಶ ಅಂತಿಮಗೊಳಿಸುವ ಗಡುವು ವಿಸ್ತರಣೆ (photo zee news)

ನವದೆಹಲಿ: CBSE 12th Result  : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಶಾಲೆಗಳ 12 ನೇ  ತರಗತಿಯ ಫಲಿತಾಂಶವನ್ನು ಅಂತಿಮಗೊಳಿಸುವ ಗಡುವನ್ನು ಜುಲೈ 25 ರವರೆಗೆ ವಿಸ್ತರಿಸಿದೆ. ಪರೀಕ್ಷಾ ನಿಯಂತ್ರಕ ಸನ್ಯಂ ಭರದ್ವಾಜ್ ಈ ಮಾಹಿತಿ ನೀಡಿದ್ದಾರೆ. 

ಒತ್ತಡಕ್ಕೆ ಒಳಗಾಗುತ್ತಿರುವ ಶಿಕ್ಷಕರು  :
ಫಲಿತಾಂಶದ  ಕೆಲಸದಲ್ಲಿ ತೊಡಗಿರುವ  ಶಿಕ್ಷಕರು ಒತ್ತಡದಲ್ಲಿದ್ದಾರೆ ಎಂದು ಪರೀಕ್ಷಾ ನಿಯಂತ್ರಕ ಸನ್ಯಂ ಭರದ್ವಾಜ್ ತಿಳಿಸಿದ್ದಾರೆ. ಫಲಿತಾಂಶಗಳನ್ನು (CBSE 12th Result) ಅಂತಿಮಗೊಳಿಸುವ ದಿನಾಂಕ ಸಮೀಪಿಸುತ್ತಿರುವುದರಿಂದ, ಶಿಕ್ಷಕರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಕಾರಣಗಳಿಂದ ತಪ್ಪುಗಳಾಗುತ್ತಿವೆ. ಈ ತಪ್ಪುಗಳನ್ನು ಸರಿಪಡಿಸುವ ಸಲುವಾಗಿ ಸಿಬಿಎಸ್‌ಇಗೆ (CBSE ) ಮನವಿ ಕಳುಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಲೆಗಳು ಮತ್ತು ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಿಬಿಎಸ್‌ಇ ಅರ್ಥ ಮಾಡಿಕೊಳ್ಳುತ್ತಿದೆ ಎಂದವರು ಹೇಳಿದ್ದಾರೆ. . 

ಇದನ್ನೂ ಓದಿ : ಜಂತರ್ ಮಂತರ್ ನಲ್ಲಿ ರೈತರ ಪ್ರತಿಭಟನೆಗೆ ಅವಕಾಶ ನೀಡಿದ ದೆಹಲಿ ಸರ್ಕಾರ

ಕರೋನಾದ ಕಾರಣ ಪರೀಕ್ಷೆಗಳನ್ನು ರದ್ದುಪಡಿಸಲಾಗಿತ್ತು :
 ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು,  ಸಿಬಿಎಸ್‌ಇ ಕೊನೆಯ ದಿನಾಂಕವನ್ನು ಜುಲೈ 22 ರಿಂದ ಜುಲೈ 25 ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ಕರೋನಾ (COVID-19) ಎರಡನೇ ಅಲೆಯ ಕಾರಣದಿಂದಾಗಿ ಪರೀಕ್ಷೆಗಳನ್ನು ರದ್ದು ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ alternative evaluation policy ಆಧಾರದ ಮೇಲೆ ಫಲಿತಾಂಶವನ್ನು ನೀಡುವಂತೆ ಸೂಚಿಸಲಾಗಿತ್ತು.  ಇದೀಗ ಫಲಿತಾಂಶ ಅಂತಿಮಗೊಳಿಸುವ ಗಡುವನ್ನು ವಿಸ್ತರಿಸಿರುವ ಕಾರಣದಿಂದ ಫಲಿತಾಂಶ ಪ್ರಕಟಗೊಳ್ಳುವುದು ವಿಳಂಬವಾಗಲಿದೆಯೇ ಎನ್ನುವುದನ್ನು ಸಿಬಿಎಸ್‌ಇ ಸ್ಪಷ್ಟಪಡಿಸಿಲ್ಲ. ಜುಲೈ 31 ರೊಳಗೆ ಫಲಿತಾಂಶ ಘೋಷಿಸಲಾಗುವುದು ಎನ್ನಲಾಗಿದೆ. 

ಇದನ್ನೂ ಓದಿ : ಜುಲೈ 24,25 ಕ್ಕೆ ಕೇರಳದಲ್ಲಿ ಸಂಪೂರ್ಣ ಲಾಕ್ ಡೌನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News