Government on Covid Deaths: Coronaದಿಂದ 50 ಲಕ್ಷ ಸಾವುಗಳ ವರದಿ ಆಧಾರರಹಿತ, ನಮ್ಮ ಸಿಸ್ಟಂ ತುಂಬಾ ಸದೃಢವಾಗಿದೆ ಎಂದ ಕೇಂದ್ರ ಸರ್ಕಾರ

Government on Covid Deaths - ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸರ್ಕಾರ ದೇಶದಲ್ಲಿ ಮರಣ  ನೋಂದಣಿ ಕಡ್ಡಾಯವಾಗಿದ್ದು, ಈ ವ್ಯವಸ್ಥೆ ತುಂಬಾ ಸದೃಢವಾಗಿದೆ ಎಂದಿದೆ. ಸೊಂಕಿನ ಭಯದಿಂದ ಮೃತಪಟ್ಟವರ ಕೆಲವರ ಸಂಖ್ಯೆ ಇರರಲ್ಲಿ ಇರಲಿಕ್ಕಿಲ್ಲ, ಆದರೆ, ನಮ್ಮ ಎಣಿಕೆಯಯಲ್ಲಿ ಯಾವುದೇ ತಪ್ಪು ನಡೆದಿಲ್ಲ  ಎಂದೂ ಕೂಡ ಸರ್ಕಾರ ಸ್ಪಷ್ಟಪಡಿಸಿದೆ.

Written by - Nitin Tabib | Last Updated : Jul 22, 2021, 07:25 PM IST
  • US Global Centre for Development ಪ್ರತಿಕ್ರಿಯೆ ನೀಡಿದ ಭಾರತ.
  • ಭಾರತದ ಮರಣ ನೋಂದಣಿ ತಂತ್ರ ತುಂಬಾ ಬಲಿಷ್ಠವಾಗಿದೆ.
  • ಅಂಕಿ ಅಂಶಗಳಲ್ಲಿ ತಪ್ಪು ನಡೆಯುವ ಸಾಧ್ಯತೆಯೇ ಇಲ್ಲ ಎಂದ ಭಾರತ.
Government on Covid Deaths: Coronaದಿಂದ 50 ಲಕ್ಷ ಸಾವುಗಳ ವರದಿ ಆಧಾರರಹಿತ, ನಮ್ಮ ಸಿಸ್ಟಂ ತುಂಬಾ ಸದೃಢವಾಗಿದೆ ಎಂದ ಕೇಂದ್ರ ಸರ್ಕಾರ title=
Government on Covid Deaths (File Photo)

Government on Covid Deaths: ಕೋವಿಡ್‌ನಿಂದ (Covid-19) ಉಂಟಾದ ಸಾವುಗಳ ಕುರಿತು ಅಮೆರಿಕಾದ ಗ್ಲೋಬಲ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ( US Global Centre for Development) ಅಧ್ಯಯನ ನೀಡಿರುವ ಅಂಕಿ-ಅಂಶಗಳನ್ನು ಖಂಡಿಸಿರುವ ಕೇಂದ್ರ ಸರ್ಕಾರ, ದೇಶದಲ್ಲಿ ಈ ಅವಧಿಯಲ್ಲಿ  ಸಂಭವಿಸಿರುವ ಎಲ್ಲಾ ಸಾವುಗಳನ್ನು ಕೊರೊನಾದಿಂದ ಸಂಭವಿಸಿವೆ ಎಂದು ಭಾವಿಸಲಾಗಿದೆ ಎಂದಿದೆ. ಕರೋನಾದ ಸಾವಿನ ಅಂಕಿ ಅಂಶಗಳಿಗೆ (Covid-19 Deaths In India) ಸಂಬಂಧಿಸಿದಂತೆ ಪ್ರಕಟಗೊಂಡಿರುವ GCD ವರದಿ ಸಂಪೂರ್ಣ ತಪ್ಪು ಮತ್ತು ಆಧಾರರಹಿತವಾಗಿದೆ.

ಇದನ್ನೂ ಓದಿ- Coronavirus Update: ಭಾರತದಲ್ಲಿ Covid-19ನಿಂದ ಸುಮಾರು 50 ಲಕ್ಷ ಸಾವು, ಸ್ವಾತಂತ್ರ್ಯದ ನಂತರದ ಅತಿ ದೊಡ್ಡ ದುರಂತ ಎಂದ US ವರದಿ

ವಾಸ್ತವದಲ್ಲಿ ಅಮೆರಿಕಾದ ಥಿಂಕ್ ಟ್ಯಾಂಕ್ ಆಗಿರುವ ಗ್ಲೋಬಲ್ ಸೆಂಟರ್ ಫಾರ್ ಡೆವಲಪ್ಮೆಂಟ್ ತನ್ನ ವರದಿಯಲ್ಲಿ, ಭಾರತದಲ್ಲಿ ಕೊರೊನಾದಿಂದ ಸುಮಾರು 50 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಹೇಳಿದೆ. ಆದರೆ, ಕೇಂದ್ರ ಸರ್ಕಾರದ ಅಂಕಿ-ಅಂಶಗಳು ಭಾರತದಲ್ಲಿ ಇದುವರೆಗೆ ಕೊರೊನಾದಿಂದ ಸುಮಾರು 4 ಲಕ್ಷ 18 ಸಾವಿರಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದಿದೆ. ದೇಶದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರರಾಗಿರುವ (Former Chief Advisor) ಅರವಿಂದ್ ಸುಬ್ರಮಣ್ಯಮ್ (Aravind Subramanyam) ಈ ಅಧ್ಯಯನದ ಭಾಗವಾಗಿದ್ದಾರೆ. ಭಾರತದ ಮಾಹಿತಿ ಯಂತ್ರ ಬಲಿಷ್ಠವಾಗಿಲ್ಲ ಎಂಬುದು ಸುಬ್ರಮಣ್ಯಮ್ ಅವರ ಅಭಿಪ್ರಾಯವಾಗಿದೆ. ಅಷ್ಟೇ ಅಲ್ಲ ಇದೆ ಕಾರಣದಿಂದ ಸಾವುಗಳ ಅಂಕಿ-ಅಂಶಗಳಲ್ಲಿ ಇಷ್ಟೊಂದು ಅಂತರವಿದೆ ಎಂಬುದು ಅವರ ಅಭಿಪ್ರಾಯ. ಆದರೆ, ಅರವಿಂದ್ ಸುಬ್ರಮಣ್ಯಮ್ ಅವರ ಈ ವರದಿಗೆ ಉತ್ತರಿಸಿರುವ ಕೇಂದ್ರ ಸರ್ಕಾರ ಭಾರತದ ರಿಪೋರ್ಟಿಂಗ್ ಸಿಸ್ಟಂ ಸಾಕಷ್ಟು ಉತ್ತಮವಾಗಿದ್ದು, ಕೊವಿಡ್ ನಿಂದ (Coronavirus) ಸಂಭವಿಸಿರುವ ಸಾವುಗಳ ಸಂಖ್ಯೆಯಲ್ಲಿ ತಪ್ಪಾಗುವ ಪ್ರಶ್ನೆಯೇ ಇಲ್ಲ ಎಂದಿದೆ.

ಇದನ್ನೂ ಓದಿ-ಸಂಪೂರ್ಣ ಲಸಿಕೆ ತೆಗೆದುಕೊಂಡರೂ ಬ್ರಿಟನ್ ಆರೋಗ್ಯ ಸಚಿವರಿಗೆ ಕೊರೊನಾ ಪಾಸಿಟಿವ್..!

ದೇಶದಲ್ಲಿ ಮರಣ ನೋಂದಣಿ ಕಡ್ಡಾಯವಾಗಿರುವ ಕಾರಣ ಅಂಕಿ-ಅಂಶಗಳಲ್ಲಿ ತಪ್ಪು ನಡೆಯುವ ಸಾಧ್ಯತೆ ಇಲ್ಲ
ಸುದ್ದಿ ಸಂಸ್ಥೆ PTI ಪ್ರಕಟಿಸಿರುವ ವರದಿಯ ಪ್ರಕಾರ ಅಮೆರಿಕಾದ GCD ವರದಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ. ಭಾರತದಲ್ಲಿ ಮರಣ ನೋಂದಣಿ (Death Registration) ಕಡ್ಡಾಯವಾಗಿದೆ ಹಾಗೂ ಈ ತಂತ್ರ ತುಂಬಾ ಬಲಿಷ್ಠವಾಗಿದೆ. ಸೋಂಕಿನ ಭಯದಿಂದ ಕೆಲವರ ಸಾವಿನ ಕುರಿತು ಮಾಹಿತಿ ಲಭಿಸಿರಲಿಕ್ಕಿಲ್ಲ. ಆದರೆ, ಎಣಿಕೆಯಲ್ಲಿ ಯಾವುದೇ ತಪ್ಪು ನಡೆಯುವ ಸಾಧ್ಯತೆಯೇ ಇಲ್ಲ ಎಂದಿದೆ. ಅಮೆರಿಕಾದ ಥಿಂಕ್ ಟ್ಯಾಂಕ್ ತನ್ನ ವರದಿಯಲ್ಲಿ ಕೊವಿಡ್-19ನಿಂದ ಸಂಭವಿಸಿರುವ ಸಾವುಗಳನ್ನು ಭಾರತದಲ್ಲಿ ಕಡಿಮೆ ಮಾಡಿ ತೋರಿಸಲಾಗಿದೆ. ಆದರೆ, ಈ ವರದಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ಸರ್ಕಾರ (Central Governmet) ಹೇಳಿದೆ.

ಇದನ್ನೂ ಓದಿ-COVID-19 Effect: ಕೊರೊನಾದಿಂದ ವಾಡಿಕೆ ಲಸಿಕೆ ತಪ್ಪಿಸಿಕೊಂಡ 23 ಮಿಲಿಯನ್ ಮಕ್ಕಳು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News