Coronavirus Double Mutant Found In India - ಅಸ್ಸಾಂನ ಮಹಿಳಾ ವೈದ್ಯರೊಬ್ಬರು ಏಕಕಾಲಕ್ಕೆ ಎರಡು ವಿಭಿನ್ನ ರೀತಿಯ SAR CoV-2 ಅಂದರೆ ಕರೋನಾ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆ. ಈ ರೀತಿಯ ಇದು ಬಹುಶಃ ದೇಶದ ಮೊದಲ ಪ್ರಕರಣವಾಗಿದೆ. ದಿಬ್ರುಗಡ್ ICMRನ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ (RMRC) ಪರೀಕ್ಷೆಗಳಿಂದ ಇದು ಬಹಿರಂಗವಾಗಿದೆ. ಈ ವೈದ್ಯರು ಕೊರೊನಾ ವೈರಸ್ (Corona Virus) ನಿರೋಧಕ ಲಸಿಕೆಯ ಎರಡನೇ ಡೋಸ್ ಪಡೆದ ಒಂದು ತಿಂಗಳ ನಂತರ ಕರೋನಾ ವೈರಸ್ನ ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳಿಂದ ಸೋಂಕಿತರಾಗಿದ್ದಾರೆ (Coronavirus Alpha And Delta Variants). ಈ ವೈದ್ಯರಲ್ಲಿ ಸೋಂಕಿನ ಸಾಮಾನ್ಯ ಲಕ್ಷಣಗಳಿರುವ ಕಾರಣ ಆಸ್ಪತ್ರೆಗೆ ದಾಖಲಾಗದೆಯೇ ಗುಣಮುಖರಾಗಿದ್ದಾರೆ.
ವಿಶ್ವಾದ್ಯಂತ ಕೊರೊನಾ ವೈರಸ್ ನ ಎರಡು ರೂಪಾಂತರಿಗಳಿಂದ ಸೊಂಕಿತರಾದವರ ಸಂಖ್ಯೆ ತೀರಾ ಕಮ್ಮಿಯಾಗಿವೆ. ಇದಕ್ಕೂ ಮೊದಲು 90 ವರ್ಷದ ಬೆಲ್ಜಿಯಂ ಮಹಿಳೆಯೂ ಕೂಡ ಕೊರೊನಾ ಸೋಂಕಿನ ಎರಡು ವೇರಿಯಂಟ್ ಗಳಿಗೆ (Coronavirus Double Mutant) ಗುರಿಯಾಗಿದ್ದಳು. ಆದರೆ, ವಯಸ್ಸು ಹೆಚ್ಚಾದ ಕಾರಣ ಮತ್ತು ಕೊರೊನಾ ಲಸಿಕೆ (Coronavaccine) ಪಡೆದಿಲ್ಲವಾದ ಕಾರಣ ಮಾರ್ಚ್ ನಲ್ಲಿ ಮಹಿಳೆ ಕೊನೆಯುಸಿರೆಳೆದಿದ್ದಳು. ಇದಕ್ಕೂ ಮೊದಲು ಭಾರತದಲ್ಲಿ ಇಂತಹ ಪ್ರಕರಣ ದಾಖಲಾಗಿಲ್ಲ.
ಈ ಕುರಿತು ಹೇಳಿಕೆ ನೀಡಿರುವ RCMR ಹಿರಿಯ ವಿಜ್ಞಾನಿ ಡಾ. ಬಿ.ಜೆ. ಬೋರ್ಕಾಕೋಟಿ, " ಒಬ್ಬ ವ್ಯಕ್ತಿ ಏಕಕಾಲಕ್ಕೆ ಅಥವಾ ತುಂಬಾ ಕಡಿಮೆ ಅವಧಿಯಲ್ಲಿ ಕೊರೊನಾವೈರಸ್ ನ ಎರಡು ವೇರಿಯಂಟ್ ಗಳಿಂದ ಸೋಂಕಿಗೆ ಒಳಗಾದರೆ ಅದನ್ನು ದ್ವಿರೂಪಾಂತರಿ ಸೋಂಕು (Double Mutant) ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯು ಒಂದು ರೂಪಾಂತರಿ ಸೋಂಕಿಗೆ ಒಳಗಾದಾಗ ಮತ್ತು ಅದರ ವಿರುದ್ಧ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುವ ಮೊದಲೇ 2-3 ದಿನಗಳಲ್ಲಿ ಎರಡನೇ ರೂಪಾಂತರಿ ಸೋಂಕಿಗೆ ಒಳಗಾದಾಗ ಇದು ಸಂಭವಿಸುತ್ತದೆ" ಎಂದಿದ್ದಾರೆ.
"ಇಂತಹ ಸೋಂಕಿನ ಕೆಲವು ಪ್ರಕರಣಗಳು ಯುಕೆ, ಬ್ರೆಜಿಲ್ ಮತ್ತು ಪೋರ್ಚುಗಲ್ ನಿಂದ ವರದಿಯಾಗಿದ್ದರೂ, ಭಾರತದಿಂದ ಇಂತಹ ಯಾವುದೇ ಪ್ರಕರಣ ವರದಿಯಗಿರಲಿಲ್ಲ. ಸಾಂಕ್ರಾಮಿಕ ರೋಗದ ಪರಿವರ್ತನೆಯ ಹಂತದಲ್ಲಿ ಒಂದು ವಿಧವನ್ನು ಇನ್ನೊಂದರಿಂದ ಬದಲಾಯಿಸಿದಾಗ ಡಬಲ್ ಸೋಂಕು ಮುಖ್ಯವಾಗಿ ಸಂಭವಿಸುತ್ತದೆ. ಈ ವರ್ಷ ಫೆಬ್ರವರಿ-ಮಾರ್ಚ್ನಲ್ಲಿ ಅಸ್ಸಾಂನಲ್ಲಿ ನಡೆದ ಎರಡನೇ ಅಲೆಯ ಆರಂಭಿಕ ಹಂತದಲ್ಲಿ, ಹೆಚ್ಚಿನ COVID19 ಪ್ರಕರಣಗಳು ಆಲ್ಫಾ ರೂಪಾಂತರದಿಂದಾಗಿವೆ" ಎಂದು ಡಾ. ಬೊರ್ಕಕೋಟಿ ಹೇಳಿದ್ದಾರೆ. ನಂತರ ಏಪ್ರಿಲ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ, ಡೆಲ್ಟಾ ರೂಪಾಂತರದ ಸೋಂಕಿನ ಪ್ರಕರಣಗಳು ಬೆಳೆಕಿಗೆ ಬರಲು ಪ್ರಾರಂಭಿಸಿದವು ಎಂದು ಅವರು ಹೇಳಿದ್ದಾರೆ.
"ಡಬಲ್ ರೂಪಾಂತರಿ ಸೋಂಕು ಕಂಡುಹಿಡಿಯುವುದು ತುಂಬಾ ಕಷ್ಟದ ಕೆಲಸ. ಏಕೆಂದರೆ ಒಂದು ವಿಧವು ಇನ್ನೊಂದಕ್ಕಿಂತ ಹೆಚ್ಚು ಪ್ರಚಲಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಜೀನೋಮ್ ಸೀಕ್ವೆನ್ಸಿಂಗ್ (Genome Sequencing) ಮೂಲಕ ಡಬಲ್ ಸೋಂಕು (Double Corona Infection) ಪತ್ತೆಹಚ್ಚಬಹುದು. ಆದರೆ ಇದರಿಂದಲೂ ಕೂಡ ಡಬಲ್ ಸೋಂಕು ಪತ್ತೆಯಾಗದೆ ಇರಬಹುದು. ಇದನ್ನು ಸ್ಯಾಂಗರ್ ಸೀಕ್ವೆನ್ಸಿಂಗ್ (Sanger Sequencing) ಎಂಬ ಮತ್ತೊಂದು ತಂತ್ರದೊಂದಿಗೆ ಮರು ದೃಡಪಡಿಸಬೇಕಾಗುತ್ತದೆ" ಎಂದು ಡಾ. ಬೊರ್ಕಕೋಟಿ ಹೇಳುತ್ತಾರೆ.
ಇದನ್ನೂ ಓದಿ- WHO ಎಚ್ಚರಿಕೆ: ಕೋವಿಡ್ -19 ರ ಹೊಸ ರೂಪ 'ಡೆಲ್ಟಾ' ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ
ಈ ವರ್ಷದ ಮೇ ಆರಂಭದಲ್ಲಿ ಅಸ್ಸಾಂನ ದಿಬ್ರುಗಡದ ಮಹಿಳಾ ವೈದ್ಯರಲ್ಲಿ ಆರ್ಎಂಆರ್ಸಿ ಲ್ಯಾಬ್ ಡಬಲ್ ಸೋಂಕನ್ನು ಪತ್ತೆ ಹಚ್ಚಿತ್ತು. COVID19 ರೋಗಿಗಳ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದ ರೋಗಿಯು ರೋಗಕ್ಕೆ ಎರಡನೇ ಡೋಸ್ ಲಸಿಕೆ ಪಡೆದುಕೊಂಡ ಒಂದು ತಿಂಗಳ ನಂತರ ಡಬಲ್ ಸೋಂಕಿಗೆ ಗುರಿಯಾಗಿದ್ದಾರೆ. ವೈದ್ಯರಾಗಿರುವ ಅವರ ಪತಿಗೂ ಕೂಡ ಆಲ್ಫಾ ರೂಪಾಂತರಿ ವೈರಸ್ ಸೋಂಕು ತಗುಲಿತ್ತು.
ಇದನ್ನೂ ಓದಿ-Mixing Covid-19 Vaccines: ವ್ಯಾಕ್ಸಿನ್ ಮಿಕ್ಸಿಂಗ್ ಅಪಾಯಕಾರಿಯೇ? WHO ಪ್ರಮುಖ ವೈಜ್ಞಾನಿಕ ಈ ಕುರಿತು ಹೇಳಿದ್ದೇನು?
" ನಾವು ಮ್ಯಾಕ್ಸಮ್-ಗಿಲ್ಬರ್ಟ್ ಸೀಕ್ವೆನ್ಸಿಂಗ್ (Maxam-Gilbert Sequencing) ತಂತ್ರಜ್ಞಾನವನ್ನು ಅಳವಡಿಸಿದಾಗ ಅದು ಎಲ್ಲವನ್ನೂ ವಿಶ್ಲೇಷಿಸುತ್ತದೆ ಮತ್ತು ನಿಮಗೆ ವರದಿಯನ್ನು ನೀಡುತ್ತದೆ. ಆದರೆ ದಿಬ್ರುಗಡದ ಪ್ರಯೋಗಾಲಯದಲ್ಲಿ, ನಾವು ಸಾಮಾನ್ಯವಾಗಿ ಟಾರ್ಗೆಟ್ ಸಿಕ್ವೆನ್ಸಿಂಗ್ ಮಾತ್ರ ಮಾಡುತ್ತೇವೆ ಮತ್ತು ನಾವು ಆ ಸಿಕ್ವೆನ್ಸಿಂಗ್ ಗಳನ್ನು ಮ್ಯಾನುವಲ್ ಆಗಿ ವಿಶ್ಲೇಷಿಸುತ್ತೇವೆ. ನಾವು ಇದನ್ನು ಮಾಡಿದಾಗ, ರೋಗಿಗೆ ಡಬಲ್ ಸೋಂಕು ಇರಬಹುದು ಎಂಬ ಶಂಕೆ ನಮಗೆ ಬಂದಿತ್ತು" ಎಂದು ಡಾ. ಬೊರ್ಕಕೋಟಿ ಹೇಳಿದ್ದಾರೆ.
ಇದನ್ನೂ ಓದಿ-Study: ಈ ಜನರು Coronavirus ಸೋಂಕಿಗೆ ಗುರಿಯಾಗುವ ಸಾಧ್ಯತೆ ಹೆಚ್ಚು ಎನ್ನುತ್ತೆ ಸಂಶೋಧನೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.