Viral Video: ಭೋಜಪುರಿ ಹಾಡಿಗೆ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿ ಧೂಳೆಬ್ಬಿಸಿದ ಪುಟ್ಟಪೋರಿ..!

ಭೋಜಪುರಿ ಹಾಡಿಗೆ ಪುಟ್ಟಪೋರಿಯ ಸಖತ್ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ.

Written by - Puttaraj K Alur | Last Updated : Jul 29, 2021, 12:48 PM IST
  • ಭೋಜಪುರಿ ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿ ಧೂಳೆಬ್ಬಿಸಿದ ಪುಟ್ಟ ಪೋರಿ
  • ಈಕೆ ಡ್ಯಾನ್ಸ್ ನೋಡಿದರೆ ಬಾಲಿವುಡ್ ನಟಿಯರೇ ಬಾಯ್ ಮೇಲೆ ಬೆರಳು ಇಟ್ಟುಕೊಳ್ಳುತ್ತಾರೆ
  • ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸದ್ದು ಸದ್ದು ಮಾಡುತ್ತಿರುವ ವಿಡಿಯೋ
Viral Video: ಭೋಜಪುರಿ ಹಾಡಿಗೆ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿ ಧೂಳೆಬ್ಬಿಸಿದ ಪುಟ್ಟಪೋರಿ..!  title=
ಪುಟ್ಟ ಹುಡುಗಿಯ ಮಸ್ತ್ ಮಸ್ತ್ ಡ್ಯಾನ್ಸ್

ನವದೆಹಲಿ: ಸೋಷಿಯಲ್ ಮೀಡಿಯಾಗಳಲ್ಲಿ ಪ್ರತಿದಿನ ನೂರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲ ವಿಡಿಯೋಗಳು ಮಾತ್ರ ನಮ್ಮ ಮನಸ್ಸಿಗೆ ತಟ್ಟುತ್ತವೆ. ಪುಟ್ಟಮಕ್ಕಳು ಹಾಡು ಹಾಡುವುದು, ಡ್ಯಾನ್ಸ್ ಮಾಡುವುದು, ತೊದಲು ತೊದಲಾಗಿ ಮಾತನಾಡುವುದು ಹೀಗೆ ಅನೇಕ ವಿಡಿಯೋಗಳನ್ನು ನಾವು ನೋಡಿದ್ದೇನೆ. ಇದೀಗ ಅಂತಹದ್ದೇ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಭೋಜಪುರಿ ಹಾಡಿಗೆ ಪುಟ್ಟಪೋರಿಯೊಬ್ಬಳು ಸಖತ್ ಆಗಿ ಡ್ಯಾನ್ಸ್(Dance Video) ಮಾಡಿದ್ದಾಳೆ. ಈ ಪುಟ್ಟ ಹುಡುಗಿಯ ಡ್ಯಾನ್ಸ್ ನೋಡಿದರೆ ಬಾಲಿವುಡ್ ನಟಿಯರೇ ಬಾಯ್ ಮೇಲೆ ಬೆರಳು ಇಟ್ಟುಕೊಳ್ಳುವುದು ಗ್ಯಾರಂಟಿ. ಹಾಗಿದೆ ಪುಟ್ಟಪೋರಿಯ ಅದ್ಭುತ ಡ್ಯಾನ್ಸ್. ನೋಡಿದ ಪ್ರತಿಯೊಬ್ಬರೂ ಅಬ್ಬಾ..! ಎನ್ನುವಂತೆ ಈಕೆ ಡ್ಯಾನ್ಸ್ ಮಾಡಿದ್ದಾಳೆ.

ಇದನ್ನೂ ಓದಿ: India-China: ಚೀನಾಕ್ಕೆ ಪಾಠ ಕಲಿಸಲು ಹಸಿಮಾರಾ ಏರ್‌ಬೇಸ್‌ನಲ್ಲಿ ರಫೇಲ್ ನಿಯೋಜಿಸಿದ ಭಾರತ

ನೀಲಿ ಫ್ರಾಕ್ ತೊಟ್ಟು ಸೂಪರ್ ಹಿಟ್ ಭೋಜಪುರಿ ಹಾಡಿ(Bhojpuri Song)ಗೆ ಡ್ಯಾನ್ಸ್ ಪುಟ್ಟ ಪೋರಿ ಸಖತ್ ಸ್ಟೆಪ್ಸ್ ಹಾಕಿದ್ದಾಳೆ. ಆಕೆಯ ಹಾವಭಾವ, ನೋಟ, ಅಭಿನಯ ಎಲ್ಲವೂ ಅದ್ಭುತವಾಗಿದೆ. 22 ಸೆಕೆಂಡುಗಳ ಈ ವಿಡಿಯೋವನ್ನುಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಪುಟ್ಟ ಪೋರಿಯ ಅದ್ಭುತ ಡ್ಯಾನ್ಸ್ ಗೆ ಅನೇಕರು ಫಿದಾ ಆಗಿದ್ದಾರೆ. ಅನೇಕರು ವಿಡಿಯೋ ಶೇರ್ ಮಾಡಿದ್ದು ವಾವ್ಹಾ..! ವಾವ್ಹಾ..! ಎಂದಿದ್ದಾರೆ.

ಇದನ್ನೂ ಓದಿ: King Chilli : ವಿಶ್ವದ ಅತ್ಯಂತ 'ಖಾರವಾದ ಮೆಣಸಿನಕಾಯಿ' ನಮ್ಮ ದೇಶದ ಈ ಸ್ಥಳದಲ್ಲಿ ಮಾತ್ರ ಸಿಗುತ್ತದೆ!

ಇತ್ತೀಚಿನ ದಿನಗಳಲ್ಲಿ ಪುಟ್ಟಮಕ್ಕಳು ಕೂಡ ತಮ್ಮ ವಿಶಿಷ್ಟ ಕೌಶಲ್ಯಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಪುಟ್ಟಮಕ್ಕಳ ಅನೇಕ ವಿಡಿಯೋ(Viral Video)ಗಳು ಇಂಟರ್ ನೆಟ್ ನಲ್ಲಿ ಸದ್ದು ಮಾಡಿದ್ದವು. ಹೊಟ್ಟೆ ಹುಣ್ಣಾಗುವಂತೆ ನಗುವ ಮಕ್ಕಳ ತುಂಟಾದ ಫನ್ನಿ ವಿಡಿಯೋಗಳು ನೆಟಿಜನ್ ಗಳ ಗಮನ ಸೆಳೆದಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News