ನವದೆಹಲಿ : ವಾಟ್ಸಾಪ್ 'view once ' ಎಂಬ ಹೊಸ ಫೀಚರ್ ಅನ್ನು (Whatsapp new feature) ಪರಿಚಯಿಸಿದೆ. ಇದರಲ್ಲಿ ಒಮ್ಮೆ ಚಾಟ್ ಅನ್ನು ವೀಕ್ಷಿಸಿದ ನಂತರ ಫೋಟೋಗಳು ಮತ್ತು ವೀಡಿಯೋಗಳನ್ನು ಡಿಲೀಟ್ ಮಾಡಲು ಅವಕಾಶ ನೀಡುತ್ತದೆ. ಈ ಫೀಚರ್ ಮೂಲಕ, ಬಳಕೆದಾರರು ಪ್ರೈವಸಿ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಂದರೆ ನೀವು ಯಾರಿಗಾದರು ಕಳುಹಿಸುವ ಪೋಟೋವನ್ನು ರಿಸೀವ್ ಮಾಡಿದವರು ಒಂದು ಸಲ ವೀಕ್ಷಿಸಿದ ತಕ್ಷಣ ಅದು ಡಿಲೀಟ್ ಆಗಲಿದೆ. ಫೋಟೋಗಳು ಮತ್ತು ವೀಡಿಯೊಗಳು ಇನ್ನು ಮುಂದೆ ರಿಸೀವ್ ಮಾಡಿದವರ ಗ್ಯಾಲರಿಯಲ್ಲಿ (Gallery) ಸೇವ್ ಆಗುವುದಿಲ್ಲ.
ಈ ವಾರದಿಂದ ಈ ವೈಶಿಷ್ಟ್ಯವನ್ನು (Whatsapp new feature) ಎಲ್ಲರಿಗೂ ಪರಿಚಯಿಸಲಾಗಿದೆ. ಅಲ್ಲದೆ ಈ ವೈಶಿಷ್ಟ್ಯದ ಬಗ್ಗೆ ಬಳಕೆದಾರರ ಪ್ರತಿಕ್ರಿಯೆಗಾಗಿ ಕಂಪನಿ ಕಾಯುತ್ತಿದೆ. ಇನ್ನು ಮುಂದೆ, ವಾಟ್ಸಾಪ್ನಲ್ಲಿ (Whatsapp) ಕಳುಹಿಸುವ ಎಲ್ಲಾ ವೈಯಕ್ತಿಕ ಚಾಟ್ಗಳಂತೆ, ವಾಟ್ಸ್ಆ್ಯಪ್ನಲ್ಲಿ ಕಳುಹಿಸಲಾಗುವ ಫೋಟೋಗಳು ಮತ್ತು ವೀಡಿಯೊಗಳನ್ನು ಮತ್ತೆ ಮತ್ತೆ ನೋಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಇದು ವ್ಯೂಓನ್ಸ್ ಮೀಡಿಯಾ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಮೂಲಕ ಸುರಕ್ಷಿತವಾಗಿರುತ್ತದೆ.
ನಾವು ಕಳುಹಿಸಿದ ಫೋಟೋ (Photo) ಅಥವಾ ವೀಡಿಯೊವನ್ನು ಓಪನ್ ಮಾಡಲಾಗಿದೆಯೇ ವೀಕ್ಷಿಸಲಾಗಿದೆಯೇ ಎಂಬ ಗೊಂದಲ ಕೂಡ ಇರುವುದಿಲ್ಲ. ಯಾಕೆಂದರೆ ಪೋಟೋ ಅಥವ ವಿಡಿಯೋವನ್ನು ರಿಸಿವ್ ಮಾಡಿದ ವ್ಯಕ್ತಿ, ಅದನ್ನು ವೀಕ್ಷಿಸಿದ ಕೂಡಲೇ ಹೊಸ ಒನ್-ಟೈಮ್ ಐಕಾನ್ನೊಂದಿಗೆ (one time icon) ಗೋಚರವಾಗುತ್ತದೆ. ಈ ಮೂಲಕ ಮೆಸೆಜ್ ವಿಕ್ಷಿಸಿರುವ ಬಗ್ಗೆ ಸ್ಪಷ್ಟವಾಗಿ ತಿಳಿಯುತ್ತದೆ.
ಮೀಡಿಯಾವನ್ನು ಸಕ್ರಿಯಗೊಳಿಸಿದ ನಂತರ ನೀವು ಕಳುಹಿಸಿದ ಅಥವಾ ಸ್ವೀಕರಿಸಿದ ಫೋಟೋಗಳನ್ನು ಅಥವಾ ವೀಡಿಯೊಗಳನ್ನು ಸೇವ್ ಮಾಡಲು ಅಥವಾ ಫಾರ್ವರ್ಡ್ ಮಾಡಲು ಅಥವಾ ಶೇರ್ ಮಾಡಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ : Amazon Great Freedom Festival ಸೇಲ್ನಲ್ಲಿ ಈ ಸ್ಮಾರ್ಟ್ಫೋನ್ಗಳು ಭಾರೀ ರಿಯಾಯಿತಿಯಲ್ಲಿ ಲಭ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ