ನವದೆಹಲಿ: ಅಚ್ಚರಿಯ ಬೆಳವಣಿಗೆಯಲ್ಲಿ ಭಾನುವಾರ(ಆಗಸ್ಟ್ 15) ತಾಲಿಬಾನ್ ಅಫ್ಘಾನಿಸ್ತಾನ(Afghanistan)ದ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡಿತು. ಅಫ್ಘಾನಿಸ್ತಾನದಲ್ಲಿ ಯುದ್ಧ ಮುಗಿದಿದೆ ಎಂದು ಘೋಷಿಸಿರುವ ಭಯೋತ್ಪಾಕದ ಸಂಘಟನೆಯು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಶಾಂತಿಯುತ ಸಂಬಂಧಕ್ಕಾಗಿ ಮನವಿ ಮಾಡಿದೆ.
ಅಲ್ ಜಜೀರಾ ಟಿವಿಯೊಂದಿಗೆ ಮಾತನಾಡಿರುವ ತಾಲಿಬಾನ್(Taliban)ವಕ್ತಾರ ಮೊಹಮ್ಮದ್ ನಯೀಮ್, ‘ತಾಲಿಬಾನ್ ಪ್ರತ್ಯೇಕವಾಗಿ ಬದುಕಲು ಬಯಸುವುದಿಲ್ಲ. ಈ ಸಂಘಟನೆಯು ಶರಿಯಾ ಕಾನೂನಿನೊಳಗೆ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸುತ್ತದೆ’ ಅಂತಾ ಹೇಳಿದ್ದಾರೆ. ‘ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ನಮ್ಮೊಂದಿಗೆ ಮುಕ್ತವಾಗಿ ಚರ್ಚಿಸಲು ನಾವು ಎಲ್ಲಾ ದೇಶಗಳು ಮತ್ತು ಸಂಸ್ಥೆಗಳನ್ನು ಕೇಳುತ್ತೇವೆ’ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.
ತಾಲಿಬಾನ್ ಮೌಲ್ಯ ಎಷ್ಟು ಮತ್ತು ಈ ಸಂಘಟನೆಯ ಆದಾಯದ ಮೂಲ ಯಾವುದು?
2016ರಲ್ಲಿ ವಿಶ್ವದ 10 ಭಯೋತ್ಪಾದಕ ಸಂಘಟನೆಗಳಲ್ಲಿ ತಾಲಿಬಾನ್(Taliban) 5ನೇ ಶ್ರೀಮಂತ ಸಂಘಟನೆ ಎಂದು ಫೋರ್ಬ್ಸ್ ನಿಯತಕಾಲಿಕೆ ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ ISIS ಸಂಘಟನೆಯು 2 ಶತಕೋಟಿ ಅಮೆರಿನ್ ಡಾಲರ್ ವಾರ್ಷಿಕ ವಹಿವಾಟಿನೊಂದಿಗೆ ಅಗ್ರಸ್ಥಾನದಲ್ಲಿದೆ ಅಂತಾ ಹೇಳಲಾಗಿತ್ತು. ಅದರಂತೆ ತಾಲಿಬಾನ್ 400 ದಶಲಕ್ಷ ಅಮೆರಿಕನ್ ಡಾಲರ್ ವಾರ್ಷಿಕ ವಹಿವಾಟಿನೊಂದಿಗೆ 5ನೇ ಸ್ಥಾನವನ್ನು ಆಕ್ರಮಿಸಿಕೊಂಡಿತ್ತು.
ಇದನ್ನೂ ಓದಿ: Afghanistan Crisis: ಅಫ್ಘಾನಿಸ್ತಾನದಲ್ಲಿ ಭಾರತೀಯರಿಗೆ ನಮ್ಮಿಂದ ಯಾವುದೇ ಅಪಾಯ ಇಲ್ಲ ಎಂದ ತಾಲಿಬಾನ್
ಫೋರ್ಬ್ಸ್ ಪ್ರಕಾರ, ತಾಲಿಬಾನ್ನ ಪ್ರಾಥಮಿಕ ಆದಾಯ ಮೂಲಗಳು ಮಾದಕವಸ್ತು, ಕಳ್ಳಸಾಗಣೆ, ಹಣದ ರಕ್ಷಣೆ ಮತ್ತು ವಿಶ್ವದಾದ್ಯಂತ ಹರಿದುಬರುವ ದೇಣಿಗೆಯಾಗಿದೆ. ರೇಡಿಯೋ ಫ್ರೀ ಯೂರೋಪ್/ರೇಡಿಯೋ ಲಿಬರ್ಟಿಯಿಂದ ಪಡೆದ ನ್ಯಾಟೋ ವರದಿಯ ಪ್ರಕಾರ, 2019-20ರಲ್ಲಿ ತಾಲಿಬಾನ್ ನ ವಾರ್ಷಿಕ ಬಜೆಟ್(Taliban Annual Budget)1.6 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಹೇಳಲಾಗಿದೆ.
RFE/RF ತಾಲಿಬಾನ್ಗಳು ಹೇಗೆ ಹಣ ಗಳಿಸಿದರು ಎಂಬುದರ ವಿವರ ನೀಡಿದೆ.
ಗಣಿಗಾರಿಕೆ: 464 ಮಿಲಿಯನ್ ಅಮೆರಿಕನ್ ಡಾಲರ್
ಡ್ರಗ್ಸ್: 416 ಮಿಲಿಯನ್ ಅಮೆರಿಕನ್ ಡಾಲರ್
ವಿದೇಶಿ ದೇಣಿಗೆಗಳು: 240 ಮಿಲಿಯನ್ ಅಮೆರಿಕನ್ ಡಾಲರ್
ರಫ್ತು: 240 ಮಿಲಿಯನ್ ಅಮೆರಿಕನ್ ಡಾಲರ್
ತೆರಿಗೆಗಳು: 160 ಮಿಲಿಯನ್ ಅಮೆರಿಕನ್ ಡಾಲರ್ (ರಕ್ಷಣೆ/ಸುಲಿಗೆ ಹಣ?)
ರಿಯಲ್ ಎಸ್ಟೇಟ್: 80 ಮಿಲಿಯನ್ ಅಮೆರಿಕನ್ ಡಾಲರ್
ಇದನ್ನೂ ಓದಿ: Haiti Earthquake: ಹೈತಿಗಪ್ಪಳಿಸಿದ ಪ್ರಬಲ ಭೂಕಂಪ, 304 ಜನರ ಸಾವು 1800 ಜನರಿಗೆ ಗಾಯ
ಸ್ವತಂತ್ರ ರಾಜಕೀಯ ಮತ್ತು ಸೇನಾ ಘಟಕವಾಗಲು ತಾಲಿಬಾನ್(Taliban) ನಾಯಕತ್ವವು ಸ್ವಾವಲಂಬಿಯಾಗುವತ್ತ ಗಮನಹರಿಸಿದೆ ಎಂದು ನ್ಯಾಟೋ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ