ನವದೆಹಲಿ : ನೀವು ಪಂಜಾಬ್ ನ್ಯಾಷನಲ್ (Punjab National Bank) ತನ್ನ ಗ್ರಾಹಕರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. PNB ತನ್ನ ಗ್ರಾಹಕರಿಗೆ 2 ಲಕ್ಷದವರೆಗೆ ಉಚಿತ ವಿಮೆಯನ್ನು ನೀಡುತ್ತಿದೆ. ಆದರೆ, ಬ್ಯಾಂಕ್ ಈ ಸೌಲಭ್ಯವನ್ನು ಜನ್ ಧನ್ ಖಾತೆಗಳನ್ನು ಹೊಂದಿರುವ ಗ್ರಾಹಕರಿಗೆ ಮಾತ್ರ ನೀಡುತ್ತಿದೆ. ಇದರ ಹೊರತಾಗಿ, ಗ್ರಾಹಕರು ಬ್ಯಾಂಕಿನ ಇತರ ಅನೇಕ ಸೌಲಭ್ಯಗಳ ಲಾಭವನ್ನು ಪಡೆಯಬಹುದು.
ಉಚಿತವಾಗಿ ಸಿಗಲಿದೆ 2 ಲಕ್ಷ ರೂಪಾಯಿಗಳ ಲಾಭ :
PNB Rupay Jandhan Card ಸೌಲಭ್ಯವನ್ನು ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುತ್ತಿದೆ. ಈ ಕಾರ್ಡ್ನಲ್ಲಿ, ಬ್ಯಾಂಕ್ ಗ್ರಾಹಕರಿಗೆ 2 ಲಕ್ಷ ರೂ.ವರೆಗಿನ ವಿಮಾ ಸೌಲಭ್ಯವನ್ನು ಒದಗಿಸುತ್ತದೆ. Rupay Card ಮೂಲಕ ಖಾತೆಯಿಂದ ಹಣವನ್ನು ಹಿಂಪಡೆಯಬಹುದು ಮತ್ತು ಖರೀದಿಗಳನ್ನು ಸಹ ಮಾಡಬಹುದು.
सामाजिक सुरक्षा योजनाओं से लाभ प्राप्त करें और अपनी आवश्यकताओं को पूरा करें। अधिक जानकारी के लिए क्लिक करें: https://t.co/NnFJ1GicPe pic.twitter.com/iFu1Z8dwvl
— Punjab National Bank (@pnbindia) August 16, 2021
ಇದನ್ನೂ ಓದಿ : ಆಧಾರ್ ಗೆ ಸಂಬಂಧಿಸಿದ ಈ ಕೆಲಸವನ್ನು ತಕ್ಷಣ ಮಾಡಿ ಮುಗಿಸಿ, ಇಲ್ಲವಾದರೆ ತೆರಬೇಕಾದೀತು ದಂಡ
330 ರೂ.ಗಳ ವಾರ್ಷಿಕ ಕಂತಿನಲ್ಲಿ 2 ಲಕ್ಷ ಲಾಭ :
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಗೆ (PMJJBY) ಪ್ರತಿ ವರ್ಷ 330 ರೂಯನ್ನು ಪಾವತಿಸಬೇಕು. ಈ ಯೋಜನೆಯಡಿ, ಗ್ರಾಹಕರಿಗೆ ಜೀವ ರಕ್ಷಣೆ ವಿಮೆಯನ್ನು ನೀಡಲಾಗುತ್ತದೆ. ಇದರ ಅಡಿಯಲ್ಲಿ, ಡೆತ್ ಬೆನಿಫಿಟ್ ಕೂಡಾ ನೀಡಲಾಗುತ್ತದೆ. ಈ ಮೊತ್ತವನ್ನು ನಿಮ್ಮ ಬ್ಯಾಂಕ್ (Bank) ಖಾತೆಯಿಂದ ಇಸಿಎಸ್ ಮೂಲಕ ತೆಗೆದುಕೊಳ್ಳಲಾಗುತ್ತದೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ:
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ PMSBY ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಜೀವ ವಿಮೆಯನ್ನು ನೀಡುತ್ತದೆ. ಕೇಂದ್ರ ಸರ್ಕಾರದ ಯೋಜನೆಯಾಗಿರುವ ಪಿಎಮ್ಎಸ್ಬಿವೈ ಯಲ್ಲಿ ಖಾತೆದಾರರು ಕೇವಲ 12 ರೂ. ಪಾವತಿಸಿದರೆ 2 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ.
ಇದನ್ನೂ ಓದಿ :National Pension Scheme: ಪ್ರತಿದಿನ 50 ರೂ. ಹೂಡಿದರೆ ಸಿಗಲಿದೆ 34 ಲಕ್ಷ ರೂ. ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ