"ಅಕ್ಟೋಬರ್ ಅಂತ್ಯದ ವೇಳೆಗೆ ಕೊರೊನಾ ಮೂರನೇ ಅಲೆ"

ಅಕ್ಟೋಬರ್ ಅಂತ್ಯದ ವೇಳೆಗೆ ಅಥವಾ ನವೆಂಬರ್ ಮೊದಲ ವಾರಕ್ಕೆ ಮಹಾರಾಷ್ಟ್ರದಲ್ಲಿ  ಕೊರೊನಾ ಮೂರನೇ ಅಲೆ ಬರಲಿದೆ, ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

Written by - Zee Kannada News Desk | Last Updated : Aug 26, 2021, 09:49 PM IST
  • ಅಕ್ಟೋಬರ್ ಅಂತ್ಯದ ವೇಳೆಗೆ ಅಥವಾ ನವೆಂಬರ್ ಮೊದಲ ವಾರಕ್ಕೆ ಮಹಾರಾಷ್ಟ್ರದಲ್ಲಿ ಕೊರೊನಾ ಮೂರನೇ ಅಲೆ ಬರಲಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.
  • ನವೆಂಬರ್‌ನಲ್ಲಿ ಹಬ್ಬದ ಸೀಸನ್ ಮುಗಿಯುವ ವೇಳೆಗೆ 60 ಲಕ್ಷ ಜನರು ಸೋಂಕಿಗೆ ಒಳಗಾಗಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.
"ಅಕ್ಟೋಬರ್ ಅಂತ್ಯದ ವೇಳೆಗೆ ಕೊರೊನಾ ಮೂರನೇ ಅಲೆ" title=
ಸಾಂದರ್ಭಿಕ ಚಿತ್ರ

ನವದೆಹಲಿ: ಅಕ್ಟೋಬರ್ ಅಂತ್ಯದ ವೇಳೆಗೆ ಅಥವಾ ನವೆಂಬರ್ ಮೊದಲ ವಾರಕ್ಕೆ ಮಹಾರಾಷ್ಟ್ರದಲ್ಲಿ  ಕೊರೊನಾ ಮೂರನೇ ಅಲೆ ಬರಲಿದೆ, ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

ಬಹುತೇಕ ಹಬ್ಬಗಳು ಈ ತಿಂಗಳಲ್ಲಿ ಕೊನೆಗೊಳ್ಳುವುದರಿಂದಾಗಿ ಹೆಚ್ಚಿನ ಕೊರೊನಾ (Coronavirus) ಪ್ರಕರಣಗಳು ದಾಖಲಾಗಲಿವೆ.ನವೆಂಬರ್‌ನಲ್ಲಿ ಹಬ್ಬದ ಸೀಸನ್ ಮುಗಿಯುವ ವೇಳೆಗೆ 60 ಲಕ್ಷ ಜನರು ಸೋಂಕಿಗೆ ಒಳಗಾಗಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: Today Petrol-Diesel Prices : ವಾಹನ ಮಾಲೀಕರೇ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ!

ಮುಂಬರುವ ಹಬ್ಬಗಳಾದ ಗಣೇಶ ಚತುರ್ಥಿ, ನವರಾತ್ರಿ, ದಸರಾ ಮತ್ತು ದೀಪಾವಳಿಯಿಂದಾಗಿ, ಸೋಂಕಿನ ಏರಿಕೆಯನ್ನು ಕಾಣಬಹುದು ಎಂದು ಅವರು ಹೇಳಿದರು.ಕನಿಷ್ಠ 13 ಲಕ್ಷ ಜನರಿಗೆ ಆಮ್ಲಜನಕದ ಬೆಂಬಲ ಬೇಕಾಗಬಹುದು ಎಂದು ಅವರು ಹೇಳಿದರು.ಸಾಂಕ್ರಾಮಿಕ ರೋಗವನ್ನು ಎದುರಿಸಲು ರಾಜ್ಯ ಸರ್ಕಾರ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: New Labour Code : ಉದ್ಯೋಗಿಗಳ ಸಂಬಳ, PF, ಗ್ರಾಚ್ಯುಟಿ, ಕೆಲಸದ ಸಮಯ ಅ.1 ರಿಂದ ಬದಲಾಗುವ ಸಾಧ್ಯತೆ

"ನಾವು ನಮ್ಮ ಆಮ್ಲಜನಕದ ಸಾಮರ್ಥ್ಯವನ್ನು 2000 MT ಗೆ ಹೆಚ್ಚಿಸಿದ್ದೇವೆ.ಸರ್ಕಾರವು ಹೆಚ್ಚಿನ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮತ್ತು ಆರೋಗ್ಯ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಕ್ರಿಯೆಯಲ್ಲಿದೆ" ಎಂದು ತೋಪೆ ಹೇಳಿದರು.

'ನಾವು 1200 ವೈದ್ಯರನ್ನು ನೇಮಿಸಿಕೊಳ್ಳುತ್ತಿದ್ದೇವೆ.ಸೆಪ್ಟೆಂಬರ್ ಅಂತ್ಯದ ವೇಳೆಗೆ, ನಾವು 7,000 ಹೆಚ್ಚಿನ ಆರೋಗ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತೇವೆ.ನಾವು ಆಮ್ಲಜನಕದ ಉತ್ಪಾದನೆ ಮತ್ತು ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದೇವೆ.ನಾವು 1000 ಹೊಸ ಆಂಬ್ಯುಲೆನ್ಸ್‌ಗಳನ್ನು ಖರೀದಿಸಿದ್ದೇವೆ "ಎಂದು ಟೋಪೆ ಹೇಳಿದರು.

ಇದನ್ನೂ ಓದಿ:Personal Loan on LIC Policy : LIC Policy ಮೇಲೆ ಪಡೆಯಬಹುದು ಪರ್ಸನಲ್ ಲೋನ್, ಹೇಗೆ ತಿಳಿಯಿರಿ

"ನಾವು ಆಶಾ ಕಾರ್ಮಿಕರ ವೇತನದಲ್ಲಿ 1500 ರೂ ಹೆಚ್ಚಳವನ್ನು ಅನುಮೋದಿಸಿದ್ದೇವೆ. ಇದು 71,000 ಆಶಾ ಕಾರ್ಯಕರ್ತರಿಗೆ ಪ್ರಯೋಜನವವಾಗಲಿದೆ. ಇದಕ್ಕಾಗಿ ಸರಿಸುಮಾರು 275 ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ಸೇರಿಸಲಾಗುವುದು"ಎಂದು ಅವರು ಹೇಳಿದರು.

ಸೆಪ್ಟೆಂಬರ್ 5 ರೊಳಗೆ ಬೋಧನೆ ಮತ್ತು ಬೋಧಕೇತರ ಸಿಬ್ಬಂದಿಗೆ ಲಸಿಕೆ ಹಾಕುವಂತೆ ಸರ್ಕಾರವು ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News