Funny Video:ಲೈವ್ ಪಂದ್ಯದ ವೇಳೆ ಮೈದಾನಕ್ಕೆ ಎಂಟ್ರಿ ಕೊಟ್ಟ ಹುಂಜದ ಗಾಂಭೀರ್ಯ ನಡೆ

Funny Video - ಕೆರೆಬಿಯನ್ ಪ್ರಿಮಿಯರ್ ಲೀಗ್ 2021(CPL 2021) ವೇಳೆ ಕಂಡು ಬಂದ ಒಂದು ಪಿಚ್ ಇಂವೆಂಡರ್ ನನ್ನು ಮೈದಾನದಿಂದ ಹೊರಹಾಕಲು ಯಾವುದೇ ಭದ್ರತಾ ಸಿಬ್ಬಂಧಿ ಮುಂದಾಗಿಲ್ಲ. 

Written by - Nitin Tabib | Last Updated : Aug 30, 2021, 05:37 PM IST
  • ಪಂದ್ಯದ ವೇಳೆ ಮೈದಾನಕ್ಕೆ ಎಂಟ್ರಿ ನೀಡಿದ ಹುಂಜ.
  • ತುಂಬಾ ಹೊತ್ತು ಈ ಹುಂಜ ಗಾಂಭೀರ್ಯವಾಗಿ ಓಡಾಡಿದೆ.
  • ಅಭಿಮಾನಿಗಳು ಕೂಡ ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Funny Video:ಲೈವ್ ಪಂದ್ಯದ ವೇಳೆ ಮೈದಾನಕ್ಕೆ ಎಂಟ್ರಿ ಕೊಟ್ಟ ಹುಂಜದ ಗಾಂಭೀರ್ಯ ನಡೆ  title=
Funny Video (File Photo)

ನವದೆಹಲಿ: Funny Video - ಕ್ರಿಕೆಟ್ ಟೂರ್ನಿಯ (Live Match) ವೇಳೆ ಮೈದಾನದಲ್ಲಿ ಕಾಣಿಸಿಕೊಳ್ಳುವ ಕೆಲ ಪ್ರಸಂಗಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಇಂತಹುದೇ ಒಂದು ದೃಶ್ಯ ಕೆರೆಬಿಯನ್ ಪ್ರಿಮಿಯರ್ ಲೀಗ್ 2021 (CPL 2021)  ವೇಳೆ ಮೈದಾನದಲ್ಲಿ ಕಂಡುಬಂದಿದೆ. ಇದರಲ್ಲಿ ಪಂದ್ಯಕ್ಕೆ ಆಹ್ವಾನ ನೀಡಲಾಗಿರದ ಅತಿಥಿಯೋರ್ವ ಮೈದಾನಕ್ಕೆ ಗಾಂಭೀರ್ಯವಾಗಿ ಎಂಟ್ರಿ ನೀಡಿ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದಾನೆ.

ಪಂದ್ಯದ ವೇಳೆ ಮೈದಾನಕ್ಕೆ ಎಂಟ್ರಿ ಕೊಟ್ಟ ಹುಂಜಪ್ಪ
ಸೆಂಟ್ ಕಿಟ್ಸ್ ಅಂಡ್ ನೆವಿಸ್ ಪ್ಯಾಟ್ರಿಯಟ್ ಹಾಗೂ ಗುಯಾನ್ ಅಮೆಜಾನ್ ವಾರಿಯರ್ಸ್ ನಡುವೆ ನಡೆಯುತ್ತಿದ್ದ ಪಂದ್ಯದ ವೇಳೆ ಮೈದಾನಕ್ಕೆ ಒಂದು ಹುಂಜ ಎಂಟ್ರಿ ನೀಡಿದೆ. ಪ್ರಸ್ತುತ ಈ ಕುರಿತಾದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ-ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ಪೃಥ್ವಿ ಅಂಬರ್- ಮಾನ್ವಿತಾ ಜೋಡಿ

ತುಂಬಾ ಗಾಂಭಿರ್ಯತೆಯಿಂದ ಓಡಾಡಿದ ಹುಂಜ 
CPL 2021ನ ಎಂಟನೆ ಪಂದ್ಯದಲ್ಲಿ St Kitts and Nevis Patriots ತಂಡದ ಬ್ಯಾಟಿಂಗ್ ವೇಳೆ 10ನೇ ಓವರ್ ಬಳಿಕ ಹುಂಜೊಂದು ಮೈದಾನಕ್ಕೆ ಎಂಟ್ರಿ ನೀಡಿದೆ. ಈ ಹುಂಜ ತುಂಬಾ ಹೊತ್ತು ಮೈದಾನದಲ್ಲಿ ಗಾಂಭೀರ್ಯವಾಗಿ ಓಡಾಡಿಕೊಂಡಿರುವುದು ಕಾಣಿಸಿಕೊಂಡಿದೆ.

ಇದನ್ನೂ ಓದಿ-Drugs Case: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಬಂಧನ

ಅಭಿಮಾನಿಗಳಿಗೆ ಮೆಚ್ಚುಗೆಯಾದ ವಿಡಿಯೋ
CPL 2021 ಈ ವಿಡಿಯೋ ಅನ್ನು ತನ್ನ ಅಧಿಕೃತ ಟ್ವಿಟ್ಟರ್ ಕ್ಯಾಂಡಲ್ ಮೂಲಕ ಹಂಚಿಕೊಂಡಿದೆ. ಈ ಟ್ವೀಟ್ ನಲ್ಲಿ ಈ ಹುಂಜನ್ನು Pitch Invader ಎಂದು ಹೇಳಲಾಗಿದೆ. ಅಭಿಮಾನಿಗಳು ಕೂಡ ಈ ತಮಾಷೆಯ ವಿಡಿಯೋವನ್ನು (Viral Video) ತುಂಬಾ ಇಷ್ಟಪಡುತ್ತಿದ್ದಾರೆ. ಪಂದ್ಯದ ಕುರಿತು ಹೇಳುವುದಾದರೆ ಸೇಂಟ್ ಕಿಟ್ಸ್ ತಂಡವು ಈ ಪಂದ್ಯವನ್ನು 6 ವಿಕೆಟ್ಗಳಿಂದ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ-ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News