ನವದೆಹಲಿ : ಭಾರತದಲ್ಲಿ ಅನ್ನವನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಜನರು ಅನ್ನವನ್ನು ತಿನ್ನಲು ಇಷ್ಟ ಪಡುತ್ತಾರೆ. ಫಿಟ್ನೆಸ್ ಫ್ರೀಕ್ ಜನರು ಪಾತ್ರೆಯಲ್ಲಿ ಅನ್ನವನ್ನು ಬೇಯಿಸಲು ಇಷ್ಟ ಪಡುತ್ತಾರೆ. ಹೀಗೆ ಮಾಡಿ ಅನ್ನದ ಸ್ಟಾರ್ಚ್ ಅನ್ನು ಹೊರ ತೆಗೆಯುತ್ತಾರೆ. ಇನ್ನು ಕೆಲವರು, ಕುಕ್ಕರ್ ನಲ್ಲಿ ಬೇಯಿಸಿದ ಅನ್ನ (Rice in pressure cooker) ರುಚಿಯಾಗಿರುವುದಿಲ್ಲ ಎಂದು ಕೊಂಡು ಪಾತ್ರೆಯಲ್ಲಿಯೇ ಬೇಯಿಸುತ್ತಾರೆ. ಇದೇ ವೇಳೆ, ಕೆಲವರು ಪ್ರೆಶರ್ ಕುಕ್ಕರ್‌ನಲ್ಲಿ ಅನ್ನವನ್ನು ತಯಾರಿಸಲು ಇಷ್ಟಪಡುತ್ತಾರೆ. ಪ್ರೆಶರ್ ಕುಕ್ಕರ್‌ನಲ್ಲಿ (pressure cooker) ಅನ್ನ ತುಂಬಾ ಬೇಗನೆ ಬೇಯುವುದರಿಂದ, ಸಮಯ ಉಳಿಯುತ್ತದೆ ಎನ್ನುವ ಕಾರಣಕ್ಕೆ ಕುಕ್ಕರ್ ಮೊರೆ ಹೋಗುವವರು ಇವರು. ಆದರೆ, ಅನ್ನವನ್ನು ಹೇಗೆ ಬೇಯಿಸಿದರೆ ಒಳ್ಳೆಯದು. ಪ್ರತ್ಯೇಕ ಪಾತ್ರೆಯಲ್ಲಿ ಅನ್ನ ಬೇಯಿಸಬೇಕೆ? ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದರೆ ಒಳ್ಳೆಯದೇ ಎಂಬ ಪ್ರಶ್ನೆ ಯಾವತ್ತಾದರೂ ಮನಸ್ಸಿಗೆ ಬಾರದೆ ಇರದು. ಇದಕ್ಕೆ ಉತ್ತರ ಈ ಸುದ್ದಿಯಲ್ಲಿದೆ.
ಹೌದು, ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದ ಆಹಾರ ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ (Benefits of pressure cooked rice). ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದ ಅನ್ನದ ಪ್ರಯೋಜನಗಳನ್ನು ತಿಳಿದುಕೊಳ್ಳೋಣ..
ತೂಕ ನಿಯಂತ್ರಣ :
ಪ್ರೆಶರ್ ಕುಕ್ಕರ್‌ನಲ್ಲಿ ಅನ್ನವನ್ನು ಬೇಯಿಸುವುದರಿಂದ ಅದರ ಸ್ಟಾರ್ಚ್ ಹಾಗೆಯೇ ಉಳಿಸಿಕೊಳ್ಳುತ್ತದೆ. ಇದರಿಂದ ಬಹಳಷ್ಟು ಹೊತ್ತಿನವರೆಗೆ ಹೊಟ್ಟೆ ಹಸಿಯುವುದಿಲ್ಲ. ಹಾಗಾಗಿ ಆಗಾಗ ಏನಾದರು ತಿನ್ನಬೇಕು ಅನ್ನಿಸುವುದಿಲ್ಲ. ಇದು ತೂಕವನ್ನು ನಿಯಂತ್ರಣದಲ್ಲಿರಿಸುತ್ತದೆ (Weight loss). ಒಂದು ವೇಳೆ ತೂಕ ಹೆಚ್ಚಿಸಲು ಬಯಸುವುದಾದರೆ, ಅನ್ನವನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವಾಗ, ಅದಕ್ಕೆ ತುಪ್ಪವನ್ನು (Ghee) ಸೇರಿಸಿ ಬೇಯಿಸಿ.
ಇದನ್ನೂ ಓದಿ : Health Benefits of Pumpkin: ಬೊಜ್ಜು ಕರಗಿಸಬೇಕೆ? ನಿಯಮಿತವಾಗಿ ಕುಂಬಳಕಾಯಿ ಸೇವಿಸಿ, ಸಿಗಲಿವೆ ಹಲವು ಲಾಭಗಳು
ಜೀರ್ಣಕ್ರಿಯೆ ಉತ್ತಮವಾಗುತ್ತದೆ :
ಅಕ್ಕಿಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅದು ಚೆನ್ನಾಗಿ ಬೇಯುತ್ತದೆ. ಇದರಿಂದಾಗಿ ಜೀರ್ಣಕ್ರಿಯೆ (Digestion) ಸರಾಗವಾಗಿ ನಡೆಯುತ್ತದೆ. ಕುಕ್ಕರ್ ನಲ್ಲಿ ಬೇಯಿಸುವ ಅನ್ನದಲ್ಲಿ ನೀರಿನ (water) ಪ್ರಮಾಣ ಉಳಿದುಕೊಳ್ಳುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
ಪೌಷ್ಟಿಕತೆ ಉಳಿಯುತ್ತದೆ :
ಅನ್ನ ಬೇಯಿಸಲು ಪ್ರೆಶರ್ ಕುಕ್ಕರ್ ಅಥವಾ ಸ್ಟೀಮಿಂಗ್ ವಿಧಾನಗಳನ್ನು ಬಳಸಿ. ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದ ಅನ್ನ ಬೆಂಕಿಗೆ ಬಹಳ ಕಡಿಮೆ ಸಮಯಕ್ಕೆ ಬೆಂಕಿಗೆ ಒಡ್ಡಿಕೊಳ್ಳುವುದರಿಂದ ಅದರ ಪೌಷ್ಟಿಕಾಂಶವು ಹಾಗೆಯೇ ಉಳಿಯುತ್ತದೆ.
ಬ್ಯಾಕ್ಟೀರಿಯ ಮುಕ್ತವಾಗಿರುತ್ತದೆ :
ಹೆಚ್ಚಿನ ಶಾಖ ಮತ್ತು ಒತ್ತಡದಿಂದಾಗಿ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವ ಅನ್ನ ಬ್ಯಾಕ್ಟೀರಿಯಾದಿಂದ (Bacteria) ದೂರವಿರುತ್ತದೆ.
ಇದನ್ನೂ ಓದಿ : Sprouts for Diabetes: 'ಮಧುಮೇಹಿ'ಗಳಿಗೆ ತುಂಬಾ ಪ್ರಯೋಜನಕಾರಿ ಈ ಮೂರು ಮೊಳಕೆ ಕಾಳುಗಳು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.