ನವದೆಹಲಿ : Indian Railways Latest News: ರೈಲು ಪ್ರಯಾಣಿಕರಿಗೊಂದು ಒಳ್ಳೆಯ ಸುದ್ದಿಯಿದೆ. ಭಾರತೀಯ ರೈಲ್ವೆಯ (Indian Railways) ಉತ್ತರ ಮಧ್ಯ ರೈಲ್ವೆಯ (NCR) ಅಗ್ಗದ AC-3 ಶ್ರೇಣಿಯ ಇಕಾನಮಿ ಕೋಚ್ (AC three-tier economy coach) ಇಂದಿನಿಂದ ಆರಂಭವಾಗುತ್ತಿದೆ. ರೈಲು ಸಂಖ್ಯೆ 02403/02404 ಪ್ರಯಾಗರಾಜ್-ಜೈಪುರ-ಪ್ರಯಾಗರಾಜ್ ಡೈಲಿ ಸ್ಪೆಷಲ್ ಎಕ್ಸ್‌ಪ್ರೆಸ್ ಇಂದಿನಿಂದ ಅಗ್ಗದ ಎಸಿ -3 ಶ್ರೇಣಿಯ ಇಕಾನಮಿ ಕೋಚ್ ಅನ್ನು ಆರಂಭಿಸಿದೆ. ಹೊಸ ಎಸಿ ಕೋಚ್‌ನಲ್ಲಿ, 72 ಸೀಟು ಬದಲು 83 ಸೀಟುಗಳಿವೆ. ಈ ಕೋಚ್‌ಗಳಲ್ಲಿನ ದರವು ಸಾಮಾನ್ಯ ಎಸಿ ತ್ರೀ ಟಯರ್ ಕೋಚ್‌ಗಿಂತ ಕಡಿಮೆ ಇರುತ್ತದೆ.
ಸ್ಲೀಪರ್ ಕ್ಲಾಸ್ ಯಾತ್ರಿಗಳಿಗೆ ಸಿಗಲಿದೆ ಸೌಲಭ್ಯ :
ಎಸಿ ಕೋಚ್‌ಗಳಿಗೆ ಸ್ಲೀಪರ್ ಕ್ಲಾಸ್ ಪ್ರಯಾಣಿಕರನ್ನು ಆಕರ್ಷಿಸಲು ಹೊಸ ಎಸಿ 3 ಎಕಾನಮಿ ಕ್ಲಾಸ್ ಕೋಚ್‌ಗಳನ್ನು (AC3 Economy Class) ಸಿದ್ಧಪಡಿಸಲಾಗಿದೆ ಎಂದು ಉತ್ತರ ರೈಲ್ವೆಯ ಜನರಲ್ ಮ್ಯಾನೇಜರ್ ಅಶುತೋಷ್ ಗಂಗಾಲ್ ತಿಳಿಸಿದ್ದಾರೆ. ದುಬಾರಿ ದರಗಳ ಕಾರಣದಿಂದಾಗಿ, ಈ ಕೋಚ್‌ಗಳ ಟಿಕೆಟ್ ಅನ್ನು ಬುಕ್ ಮಾಡದ ಜನರಿಗೆ ಎಸಿ ಪ್ರಯಾಣದ ಅವಕಾಶವನ್ನು ಒದಗಿಸುವ ದೃಷ್ಟಿಯಿಂದ, ಹೊಸ ಎಸಿ 3 ಎಕಾನಮಿ ಕ್ಲಾಸ್ ಕೋಚ್‌ಗಳನ್ನು (AC3 Economy Class Coach) ಪರಿಚಯಿಸಲಾಗಿದೆ.
ಇದನ್ನೂ ಓದಿ :Bank Holidays : ಮುಂದಿನ ಐದು ದಿನ ಬ್ಯಾಂಕ್ ರಜೆ , ನಿಮ್ಮೆಲ್ಲ ಕೆಲಸಗಳನ್ನು ತಕ್ಷಣ ಪೂರೈಸಿಕೊಳ್ಳಿ
ಹೊಸ ಕೋಚ್‌ನ ವೈಶಿಷ್ಟ್ಯಗಳು :
ಹೊಸ ಎಸಿ 3 ಎಕಾನಮಿ ಕೋಚ್‌ನಲ್ಲಿ ಹಲವು ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಈ ಹೊಸ ಕೋಚ್‌ಗಳಲ್ಲಿ, 2 ಸೀಟ್‌ಗಳ ನಡುವಿನ ಅಂತರವನ್ನು ಕಡಿಮೆ ಮಾಡಲಾಗಿದೆ. ಇಲ್ಲಿಯವರೆಗೆ ಎಲ್ಲಾ ಒಂದು ಕೋಚ್ ಗರಿಷ್ಠ 72 ಸೀಟುಗಳನ್ನು ಹೊಂದಿದೆ. ಆದರೆ, ಎಸಿ 3 ಎಕಾನಮಿ ಕೋಚ್‌ನಲ್ಲಿನ ಬರ್ತ್‌ಗಳ ಸಂಖ್ಯೆಯನ್ನು 83 ಕ್ಕೆ ಏರಿಸಲಾಗಿದೆ.
ಜನರಲ್ ಮ್ಯಾನೇಜರ್ ಅಶುತೋಷ್ ಗಂಗಾಲ್ ಅವರ ಪ್ರಕಾರ, ಈ ಬದಲಾವಣೆಗಳು ರೈಲ್ವೆಯ ಗಳಿಕೆಯನ್ನು ಹೆಚ್ಚಿಸಲಿದೆ. ಅದೇ ಸಮಯದಲ್ಲಿ, ಪ್ರಯಾಣ ದರ ಇಳಿಕೆಯಿಂದಾಗಿ, ಪ್ರಯಾಣಿಕರು ಕೂಡ ಇದರ ಲಾಭ ಪಡೆಯುತ್ತಾರೆ. ಎಸಿ ಫಸ್ಟ್ ಕ್ಲಾಸ್, ಸೆಕೆಂಡ್ ಕ್ಲಾಸ್ ಮತ್ತು ಥರ್ಡ್ ಕ್ಲಾಸ್ ಕೋಚ್‌ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ :EPFO Latest News: ಆರು ಕೋಟಿ ಜನರ ಖಾತೆಗೆ ಹಣ ವರ್ಗಾಯಿಸುತ್ತಿದೆ ಸರ್ಕಾರ, ಫಟಾಫಟ್ ನಿಮ್ಮ ಬ್ಯಾಲೆನ್ಸ್ ಚೆಕ್ ಮಾಡಿ
ಇಕಾನಮಿ ಕ್ಲಾಸ್ ನಲ್ಲಿ ದೊಡ್ಡ ಬದಲಾವಣೆ :
ಎಸಿ 3 ಎಕಾನಮಿ ಕೋಚ್‌ನ (AC3 Economy Class) ಒಳಾಂಗಣ ವಿನ್ಯಾಸವನ್ನು ಬದಲಾಯಿಸಲಾಗಿದೆ ಎಂದು ಜನರಲ್ ಮ್ಯಾನೇಜರ್ ಹೇಳಿದ್ದಾರೆ. ಪ್ರತಿ ಆಸನದ ಪ್ರಯಾಣಿಕರಿಗೆ ಎಸಿ ಡಕ್ ಅನ್ನು ಪ್ರತ್ಯೇಕವಾಗಿ ಅಳವಡಿಸಲಾಗಿದೆ. ಇದರೊಂದಿಗೆ, ಬಾಟಲ್ ಸ್ಟ್ಯಾಂಡ್, ರೀಡಿಂಗ್ ಲೈಟ್ (Reading Light) ಮತ್ತು ಪ್ರತಿ ಸೀಟಿನಲ್ಲೂ ಚಾರ್ಜಿಂಗ್ ವ್ಯವಸ್ಥೆ ಮಾಡಲಾಗಿದೆ.
ವಾಶ್ ಬೇಸಿನ್ ವಿನ್ಯಾಸಗಳೂ ಬದಲಾಗಿವೆ :
ಕರೋನಾ (Coronavirus) ಸಾಂಕ್ರಾಮಿಕದ ದೃಷ್ಟಿಯಿಂದ, ವಾಶ್ ಬೇಸಿನ್‌ನ ವಿನ್ಯಾಸವನ್ನೂ ಬದಲಾಯಿಸಲಾಗಿದೆ. ಕಾಲಿನ ಸಹಾಯದಿಂದ ಗುಂಡಿಯನ್ನು ಒತ್ತುವ ಮೂಲಕ ಟ್ಯಾಪ್ ಆನ್ ಮಾಡುವ ಮೂಲಕ ವಾಶ್ ಬೇಸಿನ್‌ನಲ್ಲಿ ಕೈ ತೊಳೆಯಬಹುದು. ವಿಕಲ ಚೇತನರಿಗೆ ಆರಾಮದಾಯಕ ಶೌಚಾಲಯಗಳನ್ನು ವಿನ್ಯಾಸಗೊಳಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ