ಬೇಯಿಸಿದ ಮೊಟ್ಟೆಯನ್ನು ಎಷ್ಟು ಸಮಯದೊಳಗೆ ಸೇವಿಸಬೇಕು, ಹೆಚ್ಚು ಹೊತ್ತು ಬಿಟ್ಟು ತಿಂದರೆ ಏನಾಗುತ್ತದೆ ?

ಬೇಯಿಸಿದ ಮೊಟ್ಟೆ ಕೆಡದಂತೆ ತಡೆಯಲು ಫ್ರಿಜ್  ಅಗತ್ಯ.  ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಅದು ತಡೆಯುತ್ತದೆ ಅಥವಾ ನಿಧಾನವಾಗಿಸುತ್ತದೆ.  ಮೊಟ್ಟೆಯನ್ನು ಬೇಯಿಸಿದ ನಂತರ ಅದನ್ನು ರೂಂ ಟೆಂಪರೇಚರ್ ನಲ್ಲಿವುಡುವುದು ಸರಿಯಲ್ಲ.

Written by - Ranjitha R K | Last Updated : Sep 11, 2021, 05:15 PM IST
  • ಮೊಟ್ಟೆಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
  • ಮೊಟ್ಟೆಯನ್ನು ಎಷ್ಟು ದಿನಗಳವರೆಗೆ ಸಂರಕ್ಷಿಸಿ ಇಡಬಹುದು ?
  • ಬೇಯಿಸಿದ ಮೊಟ್ಟೆಗಳನ್ನು ಎಷ್ಟು ಹೊತ್ತು ಹಾಗೇ ಇಡಬಹುಡು ?
ಬೇಯಿಸಿದ ಮೊಟ್ಟೆಯನ್ನು ಎಷ್ಟು ಸಮಯದೊಳಗೆ ಸೇವಿಸಬೇಕು, ಹೆಚ್ಚು ಹೊತ್ತು ಬಿಟ್ಟು ತಿಂದರೆ ಏನಾಗುತ್ತದೆ ?  title=
How Long You Can Keep Boiled Egg (file photo)

ನವದೆಹಲಿ : How Long You Can Keep Boiled Egg:ಮೊಟ್ಟೆಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.  ಉತ್ತಮ ಆರೋಗ್ಯಕ್ಕೆ ದಿನಕ್ಕೊಂದು ಮೊಟ್ಟೆ (Benefits of boiled egg) ತಿನ್ನುವಂತೆ ಸಲಹೆ ನೀಡುತ್ತಾರೆ ವೈದ್ಯರು. ಮೊಟ್ಟೆಯಲ್ಲಿ ಹಲವು ವಿಧದ ಪೋಷಕಾಂಶಗಳು ಕಂಡುಬರುತ್ತವೆ. ಕ್ಯಾಲ್ಸಿಯಂ ಮತ್ತು ಪ್ರೋಟೀನ್ ನಿಂದ ಸಮೃದ್ಧವಾಗಿರುವ ಮೊಟ್ಟೆಯನ್ನು ನಿತ್ಯ ಸೇವಿಸಿದರೆ ಅನೇಕ ಪ್ರಯೋಜನಗಳಾಗುತ್ತವೆ. ಹೆಚ್ಚಿನರು ಮೊಟ್ಟೆಯನ್ನು ಬೇಯಿಸಿ ತಿನ್ನುತ್ತಾರೆ ಅಂದರೆ  Boiled Egg ಸೇವಿಸುವುದನ್ನು ಬಹಳಷ್ಟು ಜನ ಇಷ್ಟಪಡುತ್ತಾರೆ. ಆದರೆ ನಿಮಗೊಂದು ವಿಚಾರ ತಿಳಿದಿದೆಯಾ? ಒಮ್ಮೆ ಬೇಯಿಸಿದ ಮೊಟ್ಟೆಗಳನ್ನು ಎಷ್ಟು ಹೊತ್ತಿನೊಳಗೆ ತಿನ್ನಬೇಕು (How Long You Can Keep Boiled Egg). ಹೆಚ್ಚು ಹೊತ್ತು ಹಾಗೇ ಬಿಟ್ಟರೆ ಏನಾಗುತ್ತದೆ ? ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎನ್ನುವುದು ಗೊತ್ತಿದೆಯಾ? 

ಮೊಟ್ಟೆಯನ್ನು ಎಷ್ಟು ದಿನಗಳವರೆಗೆ ಸಂರಕ್ಷಿಸಿ ಇಡಬಹುದು ? 
ಬೇಯಿಸಿದ ಮೊಟ್ಟೆ ಕೆಡದಂತೆ ತಡೆಯಲು ಫ್ರಿಜ್  ಅಗತ್ಯ. ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಅದು ತಡೆಯುತ್ತದೆ ಅಥವಾ ನಿಧಾನವಾಗಿಸುತ್ತದೆ.  ಮೊಟ್ಟೆಯನ್ನು ಬೇಯಿಸಿದ ನಂತರ ಅದನ್ನು ರೂಂ ಟೆಂಪರೇಚರ್ ನಲ್ಲಿವುಡುವುದು ಸರಿಯಲ್ಲ. ಬೇಯಿಸಿದ ಮೊಟ್ಟೆಯನ್ನು ಬೇಯಿಸಿದ ಎರಡು ಗಂಟೆ ಒಳಗೆ ಫ್ರಿಜ್ ನಲ್ಲಿಡಬೇಕು (How Long You Can Keep Boiled Egg).ಇನ್ನು ಫ್ರಿಜ್ ನಲ್ಲಿಡುವಾಗಲೂ ಒಂದು ಡಬ್ಬದಲ್ಲಿ ಹಾಕಿ ಇಡಬೇಕು. ಇಲ್ಲವಾದರೆ ಫ್ರಿಜ್  (fridge) ಬಾಗಿಲನ್ನು ಪದೇ ಪದೇ ಹಾಕುವುದು ತೆಗೆಯುವುದು ಮಾಡುವಾಗ ಟೆಂಪರೇಚರ್ ನಲ್ಲಿ ಏರಿಳಿತವಾಗಿ ಮೊಟ್ಟೆ ಕೆಡಬಹುದು. ಸರಿಯಾದ ರೀತಿಯಲ್ಲಿ ಮೊಟ್ಟೆಯನ್ನು (Boiled egg)  ಶೇಖರಿಸಿಟ್ಟರೆ 7 ದಿನಗಳವರೆಗೆ ಕೆಡದಂತೆ ಉಳಿಯುತ್ತದೆ. 

ಇದನ್ನೂ ಓದಿ : Covishield Side Effects:ಕೊವಿಶೀಲ್ದ್ ಲಸಿಕೆಯ ನಾಲ್ಕು ಹೊಸ ಅಡ್ಡ ಪರಿಣಾಮಗಳು..! ಈ ಲಕ್ಷಣಗಳು ಕಂಡು ಬಂದರೆ ಕಡೆಗಣಿಸಬೇಡಿ

ಬೇಯಿಸಿದ ಮೊಟ್ಟೆಗಳನ್ನು ಎಷ್ಟು ಹೊತ್ತು ಹಾಗೇ ಇಡಬಹುಡು ? 
ಬೇಯಿಸಿದ ಮೊಟ್ಟೆಗಳನ್ನು (egg) ತಕ್ಷಣ ತಿನ್ನದಿದ್ದರೆ, ಅದರ ಸಿಪ್ಪೆಯನ್ನು ಕೂಡಾ ತೆಗೆಯಬೇಡಿ.  ನೀವು ಮೊಟ್ಟೆಯನ್ನು ತಿನ್ನುವ ಸಂದರ್ಭದಲ್ಲಿಯೇ ಅದರ ಸಿಪ್ಪೆಯನ್ನು ತೆಗೆಯಿರಿ. ಬೇಯಿಸಿದ ಮೊಟ್ಟೆಯ ಸಿಪ್ಪೆಯನ್ನು ಒಮ್ಮೆ ತೆಗೆದ ಮೇಲೆ ಅದನ್ನು ಹೆಚ್ಚು ಹೊತ್ತು ಇಡಬಾರದು, ತಕ್ಷಣ ಸೇವಿಸಬೇಕು. ಹೀಗಾದಾಗ ಅದು  ಬ್ಯಾಕ್ಟೀರಿಯಾದ (Bacteria) ಸಂಪರ್ಕಕ್ಕೆ ಬರುವುದಿಲ್ಲ. ಬೇಯಿಸಿದ ಮೊಟ್ಟೆಯ ಸಿಪ್ಪೆ ತೆಗೆದು ಹಾಗೇ ಇಟ್ಟರೆ ಅದು ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬರುತ್ತದೆ. ಇನ್ನು ಬೇಯಿಸುವಾಗ ಒಂದೊಮ್ಮೆ ಮೊಟ್ಟೆ ಒಡೆದರೆ, ಅದನ್ನು ಕೂಡಾ ತಕ್ಷಣ ತಿನ್ನಿರಿ. ತಪ್ಪಿಯೂ ಅದನ್ನು ಫ್ರಿಜ್ ನಲ್ಲಿ ಇಡಲು ಹೋಗಬೇಡಿ. ಹಾಗೆಯೇ ಬೇಯಿಸಿದ ಮೊಟ್ಟೆಯನ್ನು ಯಾವುದೇ ಕಾರಣಕ್ಕೆ ಫ್ರೀಜರ್ ನಲ್ಲಿ ಇಡಲು ಹೋಗಬೇಡಿ. 

ಇದನ್ನೂ ಓದಿ Benefits Of Jaggery: ಈ ನಾಲ್ಕು ಕಾರಣಗಳಿಗಾಗಿ ನಿತ್ಯ ಬೆಲ್ಲವನ್ನು ಸೇವಿಸಬೇಕು, ಸಿಗಲಿವೆ ಈ ಲಾಭಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News