ನೀವು ಎಂದಾದರೂ ತಿಂದಿದ್ದೀರಾ ಒಣಗಿದ ಪಪ್ಪಾಯ ? ಅದರ ಪ್ರಯೋಜನಗಳನ್ನು ತಿಳಿಯಿರಿ

ಪಪ್ಪಾಯವನ್ನು  ಸಾಮಾನ್ಯಾಗಿ ಎಲ್ಲರು ತಿಂದಿರುತ್ತಾರೆ. ಆದರೆ ಎಂದಾದರೂ, ಒಣಗಿದ ಪಪ್ಪಾಯವನ್ನು ತಿಂದಿದ್ದೀರಾ? ಇಂದು ನಾವು ನಿಮಗೆ ಒಣಗಿದ ಪಪ್ಪಾಯಿಯ ಪ್ರಯೋಜನಗಳ ಬಗ್ಗೆ ಹೇಳಲಿದ್ದೇವೆ. ಮೊದಲಿ ಒಣಗಿದ ಪಪ್ಪಾಯಿವನ್ನು ಹೇಗೆ ತಯಾರಿಸುವುದು ಎಂದು ನೋಡೋಣ. 

Written by - Ranjitha R K | Last Updated : Sep 12, 2021, 11:44 AM IST
  • ಪಪ್ಪಾಯಿ ಹಣ್ಣು ಅನೇಕ ಔಷಧೀಯ ಗುಣಗಳಿಂದ ಕೂಡಿದೆ
  • ಎಂದಾದರೂ, ಒಣಗಿದ ಪಪ್ಪಾಯವನ್ನು ತಿಂದಿದ್ದೀರಾ?
  • ಪಪ್ಪಾಯಿಯನ್ನು ಒಣಗಿಸಲು ಫ್ರೀಜ್-ಡ್ರೈಯಿಂಗ್ ತಂತ್ರವನ್ನು ಬಳಸಲಾಗುತ್ತದೆ.
ನೀವು ಎಂದಾದರೂ ತಿಂದಿದ್ದೀರಾ ಒಣಗಿದ ಪಪ್ಪಾಯ ? ಅದರ ಪ್ರಯೋಜನಗಳನ್ನು ತಿಳಿಯಿರಿ  title=
ಪಪ್ಪಾಯಿ ಹಣ್ಣು ಅನೇಕ ಔಷಧೀಯ ಗುಣಗಳಿಂದ ಕೂಡಿದೆ (file photo)

ನವದೆಹಲಿ : ಪಪ್ಪಾಯಿ ಹಣ್ಣು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಪಪ್ಪಾಯಿ ಅನೇಕ ರೋಗಗಳನ್ನು ದೂರವಿಡುವಲ್ಲಿ ಪರಿಣಾಮಕಾರಿಯಾಗಿ (benefits of papaya) ಕೆಲಸ ಮಾಡುತ್ತದೆ. ಜೀರ್ಣಕ್ರಿಯೆಯ ಸಮಸ್ಯೆ ಅಥವಾ ಹಸಿವಿನ ಕೊರತೆಯಿಂದ ಬಳಲುತ್ತಿರುವ ಜನರಿಗೆ ಪಪ್ಪಾಯಿ ತಿನ್ನಲು ಸಲಹೆ ನೀಡಲಾಗುತ್ತದೆ. ಇದು ಅನೇಕ ಔಷಧೀಯ ಗುಣಗಳಿಂದ ಕೂಡಿದೆ. ಈ ಗುಣಗಳಿಂದಾಗಿ, ಇದು ತನ್ನದೇ ಆದ ವಿಶೇಷ ಗುರುತನ್ನು ಹೊಂದಿದೆ.  ಪಪ್ಪಾಯ ಕಾಯಿಯಾಗಿರಲಿ ಅಥವಾ ಹಣ್ಣಾಗಿರಲಿ, ಎರಡೂ ಆರೋಗ್ಯದ ದೃಷ್ಟಿಯಿಂದ ಪ್ರಯೋಜನಕಾರಿ (health benefits of papaya) . ಪಪ್ಪಾಯದಲ್ಲಿ ವಿಟಮಿನ್ ಎ, ವಿಟಮಿನ್ ಸಿ, ನಿಯಾಸಿನ್, ಮೆಗ್ನೀಶಿಯಂ, ಕ್ಯಾರೋಟಿನ್, ಫೈಬರ್, ಫೋಲೇಟ್, ಪೊಟ್ಯಾಶಿಯಂ, ತಾಮ್ರ, ಕ್ಯಾಲ್ಸಿಯಂ ಸೇರಿದಂತೆ ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿವೆ. ಪಪ್ಪಾಯಿಯಲ್ಲಿ ಸ್ವಲ್ಪ ಪ್ರಮಾಣದ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಕೂಡ ಇದೆ.

ಪಪ್ಪಾಯವನ್ನು (papaya) ಸಾಮಾನ್ಯಾಗಿ ಎಲ್ಲರು ತಿಂದಿರುತ್ತಾರೆ. ಆದರೆ ಎಂದಾದರೂ, ಒಣಗಿದ ಪಪ್ಪಾಯವನ್ನು ತಿಂದಿದ್ದೀರಾ? ಇಂದು ನಾವು ನಿಮಗೆ ಒಣಗಿದ ಪಪ್ಪಾಯಿಯ ಪ್ರಯೋಜನಗಳ ಬಗ್ಗೆ ಹೇಳಲಿದ್ದೇವೆ. ಮೊದಲಿ ಒಣಗಿದ ಪಪ್ಪಾಯಿವನ್ನು ಹೇಗೆ ತಯಾರಿಸುವುದು ಎಂದು ನೋಡೋಣ. 

ಇದನ್ನೂ ಓದಿ : Sleeping tips : ರಾತ್ರಿಯ ಗಾಢ ನಿದ್ದೆಗೆ ಈ ಸೂತ್ರಗಳನ್ನು ಅನುಸರಿಸಿ ನೋಡಿ ..!

ಪಪ್ಪಾಯಿಯನ್ನು ಒಣಗಿಸಲು ಫ್ರೀಜ್-ಡ್ರೈಯಿಂಗ್ (freez drying) ತಂತ್ರವನ್ನು ಬಳಸಲಾಗುತ್ತದೆ. ಇದರಲ್ಲಿ, ಪಪ್ಪಾಯಿ ತಿರುಳಿನಿಂದ ನೀರನ್ನು ತೆಗೆಯಲಾಗುತ್ತದೆ. ಒಣಗಿದ ಪಪ್ಪಾಯಿಗಳನ್ನು ತಯಾರಿಸಲು ಸ್ಪ್ರೇ ಡ್ರೈಯಿಂಗ್ ಇನ್ನೊಂದು ವಿಧಾನವಾಗಿದೆ. ಈ ವಿಧಾನದಲ್ಲಿ, ಮಾಲ್ಟೋಡೆಕ್ಸ್ಟ್ರಿನ್‌ನಂತಹ ಒಂದು ಎನ್ ಕ್ಯಾಪ್ಸ್ಯುಲೆಟಿಂಗ್ ಏಜೆಂಟ್ ಅನ್ನು ಬಳಸಲಾಗುತ್ತದೆ. ಇದು ಒಂದೇ ಹಂತದಲ್ಲಿ ವಸ್ತುವನ್ನು ಒಣಪುಡಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.

ಒಣಗಿದ ಪಪ್ಪಾಯಿಯ ಪ್ರಯೋಜನಗಳು :
ತೂಕವನ್ನು ಕಡಿಮೆ ಮಾಡಲು : ಒಣಗಿದ ಪಪ್ಪಾಯಿಯನ್ನು (dry papaya) ಸೇವಿಸುವುದರಿಂದ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ಒಣಗಿದ ಪಪ್ಪಾಯಿಯಲ್ಲಿ ಸಕ್ಕರೆ (sugar) ಮತ್ತು ಕ್ಯಾಲೋರಿಗಳು ತುಂಬಾ ಕಡಿಮೆ ಇರುತ್ತವೆ. ಇದು ಹೆಚ್ಚು ಫೈಬರ್ ಅನ್ನು ಹೊಂದಿರುತ್ತದೆ. ಇದರಿಂದಾಗಿ ಹೊಟ್ಟೆ ತುಂಬ ಹೊತ್ತು ತುಂಬಿರುತ್ತದೆ. ಈ ಕಾರಣದಿಂದಾಗಿ ತೂಕವು ಬೇಗನೆ ಕಡಿಮೆಯಾಗುತ್ತದೆ.

ಇದನ್ನೂ ಓದಿ : ಬೇಯಿಸಿದ ಮೊಟ್ಟೆಯನ್ನು ಎಷ್ಟು ಸಮಯದೊಳಗೆ ಸೇವಿಸಬೇಕು, ಹೆಚ್ಚು ಹೊತ್ತು ಬಿಟ್ಟು ತಿಂದರೆ ಏನಾಗುತ್ತದೆ ?

ದೇಹಕ್ಕೆ ಶಕ್ತಿ ಸಿಗುತ್ತದೆ : ಒಣಗಿದ ಪಪ್ಪಾಯಿಯಲ್ಲಿ ಫೈಬರ್ ಸಮೃದ್ಧವಾಗಿದೆ. ಈ ಕಾರಣದಿಂದಾಗಿ ದೇಹವು ಶಕ್ತಿಯನ್ನು ಪಡೆಯುತ್ತದೆ. ಇದು ದೇಹದಲ್ಲಿ ಶಕ್ತಿಯನ್ನು ಉಳಿಸುತ್ತದೆ.

ಲಿವರ್ ನ ಆರೋಗ್ಯಕ್ಕೆ : ಒಣಗಿದ ಪಪ್ಪಾಯಿಯಲ್ಲಿ  ಆ್ಯಂಟಿ ಹೆಪಟೊಟೊಕ್ಸಿಕ್ ಆಕ್ಟಿವಿಟಿ  ಇರುತ್ತದೆ. ಔಷಧಗಳಿಂದ ಲಿವರ್‌ ಗೆ  (liver) ಉಂಟಾಗುವ ಹಾನಿಯಿಂದ ರಕ್ಷಿಸಲು ಇದು ಸಹಾಯ ಮಾಡುತ್ತದೆ. ಇದು ಪಪ್ಪಾಯಿ ಪುಡಿಯ ಆ್ಯಂಟಿ ಆಕ್ಸಿಡೆಂಟ್ ಗುಣಗಳ ಪರಿಣಾಮದಿಂದಾಗಿರಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News