Sleeping tips : ರಾತ್ರಿಯ ಗಾಢ ನಿದ್ದೆಗೆ ಈ ಸೂತ್ರಗಳನ್ನು ಅನುಸರಿಸಿ ನೋಡಿ ..!

ಅನೇಕ ಸಲ ನಾವು 9-10 ಗಂಟೆಗಳ ಕಾಲ ಮಲಗಿರುತ್ತೇವೆ. ಇಷ್ಟು ಮಲಗಿದರೂ ಯಾಕೆ ಇನ್ನು ನಿದ್ದೆ ಪೂರ್ತಿಯಾಗದ ಹಾಗೇ ಅನ್ನಿಸುತ್ತದೆ ಎನ್ನುವ ಭಾವನೆ ಅನೇಕ ಸಲ ಬರುತ್ತದೆ. ಇದಕ್ಕೆ ಕಾರಣಗಳಿವೆ. 

Written by - Ranjitha R K | Last Updated : Sep 11, 2021, 06:58 PM IST
  • ಸುಖ ನಿದ್ದೆಗೂ ಇವೆ ಸೂತ್ರಗಳು
  • ಹೆಚ್ಚು ಹೊತ್ತು ಮಲಗುವುದಲ್ಲ, ಗಾಢ ನಿದ್ದೆ ಅಗತ್ಯ
  • ನಿದ್ದೆಯ ಅನೇಕ ಹಂತಗಳನ್ನು ತಿಳಿದುಕೊಳ್ಳಿ
Sleeping tips : ರಾತ್ರಿಯ ಗಾಢ ನಿದ್ದೆಗೆ ಈ ಸೂತ್ರಗಳನ್ನು ಅನುಸರಿಸಿ ನೋಡಿ ..! title=
ಸುಖ ನಿದ್ದೆಗೂ ಇವೆ ಸೂತ್ರಗಳು (file photo)

ನವದೆಹಲಿ : ಬಾಲ್ಯದಲ್ಲಿ ಬರುತ್ತಿದ್ದ ಸುಖ ನಿದ್ರೆ, ಸಮಯ ಕಳೆದಂತೆ ಎಲ್ಲಿ ಮಾಯವಾಗುತ್ತದೆಯೋ ಗೊತ್ತಿಲ್ಲ. ಬಾಲ್ಯದಲ್ಲಿ ನಿದ್ರಿಸಿ ಎದ್ದ ನಂತರ ಮತ್ತೆ ಇಡೀ ದಿನ ಫ್ರೆಶ್ ಆಗಿ ಇರುವುದು ಸಾಧ್ಯವಾಗುತ್ತದೆ. ಆದರೆ  ಸಮಯ ಕಳೆಯುತ್ತಾ ಬಂದಂತೆ, ಆ ನೆಮ್ಮದಿ ಕೂಡಾ ದೂರವಾಗುತ್ತದೆ.  ಬೆಳೆದಂತೆಲ್ಲಾ ನಾವು ತೆಗೆದುಕೊಳ್ಳುವ ಸ್ಟ್ರೆಸ್ (Stress), ಪಡುವ ಆಯಾಸದ ಕಾರಣ ನಿದ್ದೆಯೂ ನಮ್ಮಿಂದ ದೂರವಾಗುತ್ತದೆ. ಆ ಗಾಢ ನಿದ್ರೆ (Deep sleep) ಬರುವುದೇ ಇಲ್ಲ.    

ಹೆಚ್ಚು ಹೊತ್ತು ಮಲಗುವುದಲ್ಲ, ಗಾಢ ನಿದ್ದೆ ಅಗತ್ಯ :  
ಅನೇಕ ಸಲ ನಾವು 9-10 ಗಂಟೆಗಳ ಕಾಲ ಮಲಗಿರುತ್ತೇವೆ. ಇಷ್ಟು ಮಲಗಿದರೂ ಯಾಕೆ ಇನ್ನು ನಿದ್ದೆ ಪೂರ್ತಿಯಾಗದ (Deep sleep) ಹಾಗೇ ಅನ್ನಿಸುತ್ತದೆ ಎನ್ನುವ ಭಾವನೆ ಅನೇಕ ಸಲ ಬರುತ್ತದೆ. ಇದಕ್ಕೆ ಕಾರಣಗಳಿವೆ. 

ಇದನ್ನೂ ಓದಿ:  ಬೇಯಿಸಿದ ಮೊಟ್ಟೆಯನ್ನು ಎಷ್ಟು ಸಮಯದೊಳಗೆ ಸೇವಿಸಬೇಕು, ಹೆಚ್ಚು ಹೊತ್ತು ಬಿಟ್ಟು ತಿಂದರೆ ಏನಾಗುತ್ತದೆ ?

ವಾಸ್ತವವಾಗಿ, ನಿದ್ರೆಗೆ ಅನೇಕ ಹಂತಗಳಿವೆ. ಅವುಗಳೆಂದರೆ : 
ಹಂತ 1 - ಇದು ನಿದ್ರೆಯ ಮೊದಲ ಹಂತ. ಇದು ಮಲಗಿದ ನಂತರ 5 ರಿಂದ 10 ನಿಮಿಷಗಳವರೆಗೆ ಇರುತ್ತದೆ. ಇದರಲ್ಲಿ ಕಣ್ಣುಗಳನ್ನು ಮುಚ್ಚಿರುತ್ತೇವೆಯಾದರೂ ಎಚ್ಚರವಾಗಿರುತ್ತೇವೆ. 
ಹಂತ 2 - ಇದು ನಿದ್ರೆಯ ಎರಡನೇ ಹಂತ. ಮಲಗಿದ ನಂತರ 10 ರಿಂದ 25 ನಿಮಿಷಗಳವರೆಗೆ ಇರುತ್ತದೆ. ಇದರಲ್ಲಿ ವ್ಯಕ್ತಿಯು ಅರ್ಧ ಎಚ್ಚರ ಮತ್ತು ಅರ್ಧ ನಿದ್ದೆಯಲ್ಲಿರುತ್ತಾನೆ. 
ಹಂತ 3 - ಇದು ನಿದ್ರೆಯ ಪ್ರಮುಖ ಹಂತವಾಗಿದೆ. ಇದರಲ್ಲಿ ಗಾಢ ನಿದ್ರೆ ಇರುತ್ತದೆ. ನಿಮ್ಮ ನಿದ್ರೆಯ ಈ ಹಂತವು ಚಿಕ್ಕದಾಗಿದ್ದರೆ, ಬೆಳಿಗ್ಗೆ ಎದ್ದ ನಂತರವೂ ಫ್ರೆಶ್ (not feeling fresh) ಅನ್ನಿಸುವುದೇ ಇಲ್ಲ. ಈ ಹಂತವು ದೀರ್ಘ ಅಥವಾ ಸಾಮಾನ್ಯವಾಗಿದ್ದರೆ, ಸಂಪೂರ್ಣವಾಗಿ ಫ್ರೆಶ್ ಆಗಿರುತ್ತೇವೆ. 
ಹಂತ 4 - ಇವುಗಳಲ್ಲದೆ, ನಾಲ್ಕನೇ ಹಂತವೂ ಇದೆ. ಇದನ್ನು REM ಅಂದರೆ ರಾಪಿಡ್ ಐ ಎಂದು ಕರೆಯಲಾಗುತ್ತದೆ. ಇದು ನಿದ್ರೆ ಮತ್ತು ಎಚ್ಚರಗೊಳ್ಳುವಿಕೆಯ ನಡುವಿನ ಸ್ಥಿತಿಯಾಗಿದೆ. ಈ ಸಮಯದಲ್ಲಿ ನಾವು ಕನಸು ಕಾಣುತ್ತೇವೆ.

ನಿದ್ರಾಹೀನತೆ ಅಥವಾ ನಿದ್ರೆಯ ಕೊರತೆಯ (reason of lack of sleep) ಕಾರಣ: ಈ ಅಭ್ಯಾಸಗಳು ಆಳವಾದ ನಿದ್ರೆಯನ್ನು ಉಂಟುಮಾಡುವುದಿಲ್ಲ.

-ತಡವಾಗಿ ಎದ್ದೇಳುವುದು 
-ಮಧ್ಯಾಹ್ನ 12 ಗಂಟೆಯ ನಂತರ ಕೆಫೀನ್ (Caffin) ತೆಗೆದುಕೊಳ್ಳುವುದು
-ಹಗಲಿನಲ್ಲಿ ನಿದ್ರಿಸುವುದು 
-ರಾತ್ರಿ ತಡವಾಗೋ ಉಟ  ಮಾಡುವುದು ಅಥವಾ ಭರ್ಜರಿಯಾಗಿ ತಿನ್ನುವುದು 
-ವ್ಯಾಯಾಮ (Exercise) ಮಾಡದಿರುವುದು 
-ರಾತ್ರಿ ಮೊಬೈಲ್ ಅಥವಾ laptop ಬಳಸುವುದು 
-ರಾತ್ರಿ 11 ರ ನಂತರ ಮಲಗುವುದು
- ಒತ್ತಡ
-ಮದ್ಯ ಅಥವಾ ಧೂಮಪಾನ

ಇದನ್ನೂ ಓದಿ:  Benefits Of Jaggery: ಈ ನಾಲ್ಕು ಕಾರಣಗಳಿಗಾಗಿ ನಿತ್ಯ ಬೆಲ್ಲವನ್ನು ಸೇವಿಸಬೇಕು, ಸಿಗಲಿವೆ ಈ ಲಾಭಗಳು

ಗಾಢ ನಿದ್ರೆಗೆ ಸಲಹೆಗಳು: 
- ಬೆಳಿಗ್ಗೆ ಬೇಗನೆ ಎದ್ದೇಳುವುದು .
-ರಾತ್ರಿ ಹೊತ್ತು ಉಗುರುಬೆಚ್ಚನೆಯ ಅರಿಶಿನ ಹಾಲು (Turmeric milk) ಅಥವಾ ಕ್ಯಾಮೊಮೈಲ್ ಚಹಾ ಸೇವಿಸಿ.
- ಪ್ರಾಣಾಯಾಮ ಮಾಡಿ. 
- ರಾತ್ರಿ ಹಾಸಿಗೆಯಲ್ಲಿ ಮೊಬೈಲ್ (Mobile) ಅಥವಾ ಗ್ಯಾಜೆಟ್ ಬಳಸಬೇಡಿ.
- ಮಸಾಜ್ ಮಾಡುವುದು.
- ಪ್ರತಿದಿನ ರಾತ್ರಿ ಡೈರಿ ಬರೆಯುವುದು.
- ರಾತ್ರಿ ಪ್ರತಿ ಮೂಗಿನ ಹೊಳ್ಳೆಗೆ 2 ಹನಿ ಹಸುವಿನ ತುಪ್ಪವನ್ನು (Ghee) ಹಾಕಿ.
- ಧ್ಯಾನ ಅಥವಾ ಮಂತ್ರಗಳ ಪಠಣ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News