ಬಾಲಿವುಡ್ ತಾರೆಯರು ಖಾಸಗಿ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನಕ್ಕಾಗಿ ಎಷ್ಟು ಶುಲ್ಕ ವಿಧಿಸುತ್ತಾರೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ..
ಭಾರತದಲ್ಲಿ ಬಾಲಿವುಡ್ ತಾರೆ(Bollywood Stars)ಯರನ್ನು ದೇವಾಂಶಸಂಭೂತ(Demi-God)ರೆಂದು ಪರಿಗಣಿಸಲಾಗಿದೆ. ನಮ್ಮಲ್ಲಿ ಬಹುತೇಕ ಜನರಿಗೆ ಬಾಲಿವುಡ್ ನಟ-ನಟಿಯರು ತಮ್ಮ ಕುಟುಂಬ ಸಮಾರಂಭಗಳಲ್ಲಿ ಹಾಜರಾಗುವ ಕನಸು ಇರುತ್ತದೆ. ಅದರಂತೆ ಬಾಲಿವುಡ್ ತಾರೆಯರು ಖಾಸಗಿ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಾರೆ. ತಮ್ಮ ಒಂದು ದಿನದ ನೃತ್ಯಕ್ಕೆ ಕೋಟಿ ಕೋಟಿ ರೂ. ಹಣ ಪಡೆಯುತ್ತಾರೆ. ಬಾಲಿವುಡ್ ತಾರೆಯರು ತಮ್ಮ ನೃತ್ಯ ಪ್ರದರ್ಶನಕ್ಕಾಗಿ ಎಷ್ಟು ಶುಲ್ಕ ವಿಧಿಸುತ್ತಾರೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಬಾಲಿವುಡ್ ‘ಕಿಲಾಡಿ’ ಅಕ್ಷಯ್ ಕುಮಾರ್ ಮದುವೆ ಸಮಾರಂಭಗಳಲ್ಲಿ ನೃತ್ಯ ಪ್ರದರ್ಶನಕ್ಕೆ ಸುಮಾರು 2.5 ಕೋಟಿ ರೂ. ಪಡೆಯುತ್ತಾರೆ
Bollywoodlife.comನಲ್ಲಿ ಪ್ರಕಟವಾದ ವರದಿಯ ಪ್ರಕಾರ ‘ಬಾದ್ಶಾ ಆಫ್ ಬಾಲಿವುಡ್’ ಶಾರುಖ್ ಖಾನ್ ಸುಮಾರು 3 ಕೋಟಿ ರೂ. ಪಡೆಯುತ್ತಾರೆ.
‘ದಬಾಂಗ್’ ನಟ ಸಲ್ಮಾನ್ ಖಾನ್ ಖಾಸಗಿ ಮದುವೆಗಳಲ್ಲಿ ನೃತ್ಯ ಮಾಡಲು ಸುಮಾರು 2 ಕೋಟಿ ರೂ. ತೆಗೆದುಕೊಳ್ಳುತ್ತಾರೆ ಎಂದು ವರದಿಯಾಗಿದೆ.
‘ಟೈಗರ್ ಜಿಂದಾ ಹೈ 3’ ನಟಿ ಕತ್ರಿನಾ ಕೈಫ್ ನೃತ್ಯ ಪ್ರದರ್ಶನಕ್ಕಾಗಿ ಸುಮಾರು 3.5 ಕೋಟಿ ರೂ. ಹಣ ಪಡೆಯುತ್ತಾರೆಂದು ವರದಿಯಾಗಿದೆ.
ಖ್ಯಾತ ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಮದುವೆ ಸಮಾರಂಭಗಳಲ್ಲಿ ಸೊಂಟ ಬಳುಕಿಸಲು ಸುಮಾರು 2.5 ಕೋಟಿ ರೂ. ಪಡೆಯುತ್ತಾರಂತೆ.
ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಕೂಡ ಸುಮಾರು 2.5 ಕೋಟಿ ರೂ. ಪಡೆಯುತ್ತಾರಂತೆ.