ನವದೆಹಲಿ: Approval To DigiLocker And mParivahan - ವಾಹನ ಚಾಲಕರಿಗೆ ಒಳ್ಳೆಯ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಇದೀಗ ನೀವು ನಿಮ್ಮೊಂದಿಗೆ ಚಾಲನಾ ಪರವಾನಗಿ (DL) ಹಾಗೂ ನೋಂದಣಿ ಪ್ರಮಾಣಪತ್ರವನ್ನು (RC) ಯಾವಾಗಲು ನಿಮ್ಮ ಬಳಿ ಇರಿಸಿಕೊಳ್ಳುವ ಅವಶ್ಯಕತೆ ಇಲ್ಲ. ರಾಷ್ಟ್ರೀಯ ರಾಜಧಾನಿಯಲ್ಲಿನ ಚಾಲಕರು ಈ ದಾಖಲೆಗಳನ್ನು ಟ್ರಾಫಿಕ್ ಪೋಲಿಸ್ ಮತ್ತು ಸಾರಿಗೆ ಇಲಾಖೆಯಿಂದ ಕೇಳಲಾದ ಸಂದರ್ಭಗಳಲ್ಲಿ DigiLocker ಪ್ಲಾಟ್ಫಾರ್ಮ್ ಅಥವಾ mParivahan ಮೊಬೈಲ್ ಆಪ್ನಲ್ಲಿ ತೋರಿಸಬಹುದು ಎಂದು ದೆಹಲಿ ಸರ್ಕಾರ ಹೇಳಿದೆ.
DigiLockerಗೆ ಮಾನ್ಯತೆ
ದೆಹಲಿ ಸರ್ಕಾರದ ಸಾರಿಗೆ ಇಲಾಖೆಯು ನೀಡಿರುವ ಅಧಿಸೂಚನೆ ಪ್ರಕಾರ, ಡಿಜಿ-ಲಾಕರ್ ಪ್ಲಾಟ್ಫಾರ್ಮ್ ಅಥವಾ ಎಂ-ಪರಿವಾಹನ್ ಮೊಬೈಲ್ ಆಪ್ನಲ್ಲಿ ಡಿಜಿಟಲ್ ರೂಪದಲ್ಲಿ ಇರಿಸಲಾಗಿರುವ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಪ್ರಮಾಣಪತ್ರವು ಮೋಟಾರು ವಾಹನ ಕಾಯ್ದೆ 1988 ರ ಅಡಿಯಲ್ಲಿ ಮಾನ್ಯ ದಾಖಲೆಗಳಾಗಿವೆ ಎನ್ನಲಾಗಿದೆ. ಸಾರಿಗೆ ಇಲಾಖೆಯಿಂದ ನೀಡಲಾದ ಪ್ರಮಾಣಪತ್ರಗಳ ಪ್ರಕಾರ ಇವು ಕಾನೂನುಬದ್ಧವಾಗಿ ಮಾನ್ಯವೆಂದು ಇಲಾಖೆ ಹೇಳಿದೆ. ಚಾಲನಾ ಪರವಾನಗಿ ಮತ್ತು ಇತರ ಯಾವುದೇ ನಮೂನೆಯಲ್ಲಿ ನೋಂದಣಿ ಪ್ರಮಾಣಪತ್ರದ ಸಾಫ್ಟ್ ನಕಲನ್ನು ಮೂಲ ದಾಖಲೆಯಾಗಿ ಸ್ವೀಕರಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಏನಿದು DigiLocker?
DigiLocker ಒಂದು ವೇದಿಕೆಯಾಗಿದ್ದು, ಈ ವೇದಿಕೆಯ ಮೂಲಕ ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಹಾಗೂ ವೆಹಿಕಲ್ ರಜಿಸ್ಟ್ರೇಷನ್ ಸರ್ಟಿಫಿಕೇಟ್ ಗಳಂತಹ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತಗೊಳಿಸಬಹುದಾಗಿದೆ. ಇದನ್ನು Ministry of Electronics and Information Technology ಬಿಡುಗಡೆ ಮಾಡಿದೆ. ವಾಸ್ತವದಲ್ಲಿ ಇದು ನಿಮ್ಮ ಫೋನ್ ನಂಬರ್ ಹಾಗೂ ಆಧಾರ್ ಜೊತೆಗೆ ಲಿಂಕ್ ಆಗಿರಲಿದೆ. ಇದರಲ್ಲಿ ನೀವು ನಿಮ್ಮ ಮಹತ್ವದ ದಾಖಲೆಗಳ ಸ್ಕ್ಯಾನ್ ಮಾಡಲಾಗಿರುವ ಪ್ರತಿಗಳನ್ನು PDF, JPEG ಅಥವಾ PNG ಫಾರ್ಮ್ಯಾಟ್ ನಲ್ಲಿ ಅಪ್ಲೋಡ್ ಮಾಡಿ ಸೇವ್ ಮಾಡಬಹುದು. ಇಲ್ಲಿ ವಿಶೇಷ ಸಂಗತಿ ಎಂದರೆ ಈ ದಾಖಲೆಗಳನ್ನು ನೀವು ಇ-ಸೈನ್ ಮಾಡುವ ಮೂಲಕ ಸೆಲ್ಫ್ ಅಟೆಸ್ಟ್ (Trafic Rules) ಕೂಡ ಮಾಡಬಹುದು. ಇದು ಸೆಲ್ಫ್ ಅಟ್ಯಾಚ್ಡ್ ಫಿಸಿಕಲ್ ಡಾಕ್ಯೋಮೆಂಟ್ ರೀತಿಯಲ್ಲಿಯೇ ಕಾರ್ಯನಿರ್ವಹಿಸಲಿದೆ.
ಸಾಫ್ಟ್ ಕಾಪಿಗಳು ಇದರಲ್ಲಿ ಸಂಗ್ರಹವಾಗಿರಲಿವೆ
ದಾಖಲೆದಳನ್ನು ಡಿಜಿಲಾಕರ್ ನಲ್ಲಿ ಉಳಿಸುವುದರ ಬಹುದೊಡ್ಡ ಪ್ರಯೋಜನವೆಂದರೆ ((DigiLocker Uses) ನಿಮ್ಮ ಯಾವುದೇ ಡಾಕ್ಯುಮೆಂಟ್ಗಳ ಹಾರ್ಡ್ ಕಾಪಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ ಮತ್ತು ಸಹಜವಾಗಿ ಅವುಗಳನ್ನು ಕಳೆದುಕೊಳ್ಳುವ ಭಯ ನಿಮಗೆ ಇರುವುದಿಲ್ಲ. ಹಾಗಾದರೆ ಬನ್ನಿ ಡಿಜಿಲಾಕರ್ (DigiLocker App) ಬಳಸುವ ಪ್ರಕ್ರಿಯೆಯನ್ನು ತಿಳಿಯೋಣ.
1. ಇದಕ್ಕಾಗಿ ನೀವು ಮೊದಲು DigiLocker ವೆಬ್ಸೈಟ್ಗೆ ಹೋಗಬೇಕು. ನಂತರ ನಿಮ್ಮ ಸ್ಮಾರ್ಟ್ಫೋನ್ನಲ್ಲಿ DigiLocker ಆಪ್ ಡೌನ್ಲೋಡ್ ಮಾಡಿ.
2. ಈಗ ನೀವು ನಿಮ್ಮ ಆಧಾರ್ ಕಾರ್ಡ್ ಅಥವಾ ಮೊಬೈಲ್ ಸಂಖ್ಯೆಯಿಂದ ನಿಮ್ಮ ಯೂಸರ್ ಐಡಿಯನ್ನು ರಚಿಸಿ. ಈಗ ನಿಮ್ಮ ಸಂಖ್ಯೆಗೆ OTP ಕಳುಹಿಸಲಾಗುವುದು.
3. ಆಪ್ ತೆರೆದ ನಂತರ, ನೀವು Get Started ಆಯ್ಕೆಯನ್ನು ನೋಡುತ್ತೀರಿ, ಅದರ ಮೇಲೆ ಟ್ಯಾಪ್ ಮಾಡಿ.
ಇದನ್ನೂ ಓದಿ-ಪಂಜಾಬ್ ನೂತನ ಸಿಎಂ ಆಗಿ ಸುಖಜಿಂದರ್ ಸಿಂಗ್ ರಾಂಧವ ಆಯ್ಕೆ ಸಾಧ್ಯತೆ!
4. ನಂತರ Create Account ಮೇಲೆ ಟ್ಯಾಪ್ ಮಾಡಿ. ಇದರ ನಂತರ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ಭದ್ರತಾ ಪಿನ್, ಇಮೇಲ್ ಐಡಿ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ.
5. ಇದನ್ನೆಲ್ಲ ಮಾಡಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಈ OTP ಅನ್ನು ಅಪ್ಲಿಕೇಶನ್ನಲ್ಲಿ ಸಲ್ಲಿಸಿ.
6. ನಂತರ ನಿಮ್ಮನ್ನು ಒಂದು ಬಳಕೆದಾರ ಹೆಸರನ್ನು ರಚಿಸಲು ಕೇಳಲಾಗುತ್ತದೆ. ಇಲ್ಲಿ ನೀವು ಯಾವುದೇ ಬಳಕೆದಾರ ಹೆಸರನ್ನು ರಚಿಸಬಹುದು. ನಂತರ ಕೆಳಭಾಗದಲ್ಲಿ OK ಟ್ಯಾಪ್ ಮಾಡಿ. ನಿಮ್ಮ ಖಾತೆ ರಚನೆಯಾಗಲಿದೆ
7. ಈಗ DigiLockerನ ಇಂಟರ್ಫೇಸ್ ನಿಮ್ಮ ಮುಂದೆ ತೆರೆಯಲಿದೆ. ನಂತರ ನೀವು ಇಲ್ಲಿ ಸೇವ್ ಮಾಡಲು ಬಯಸುವ ಯಾವುದೇ ಡಾಕ್ಯುಮೆಂಟ್ ಮೇಲೆ ಕ್ಲಿಕ್ ಮಾಡಿ.
8. ಇದರ ನಂತರ ನಿಮ್ಮ ಮುಂದೆ ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ ಇದರಲ್ಲಿ ನಿಮ್ಮ ಅನುಮತಿಯನ್ನು ಕೇಳಲಾಗುತ್ತದೆ. ದಯವಿಟ್ಟು ಇದಕ್ಕೆ OK ಹೇಳಿ.
ಇದನ್ನೂ ಓದಿ-ಪಂಜಾಬ್ CM ಆಫರ್ ತಿರಸ್ಕರಿಸಿದ Ambika Soni, ಶಾಸಕಾಂಗ ಪಕ್ಷದ ಸಭೆಯೂ ರದ್ದು
9. OK ಹೇಳಿದ ನಂತರ, ನೀವು ಮತ್ತೊಮ್ಮೆ OTP ಪಡೆಯುತ್ತೀರಿ, ಅದನ್ನು ನಮೂದಿಸಿ. ನಂತರ Continue ಟ್ಯಾಪ್ ಮಾಡಿ.
10. ಇದರ ನಂತರ ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ Issued Documents ಉಳಿಸಲಾಗಿದೆ ಎಂಬುದನ್ನು ನೀವು ನೋಡಬಹುದು.
11. ಅದೇ ರೀತಿಯಲ್ಲಿ, ನಿಮ್ಮ PAN ಕಾರ್ಡ್, LIC, ಚಾಲನಾ ಪರವಾನಗಿ, ಶಾಲಾ ಪ್ರಮಾಣಪತ್ರಗಳು ಇತ್ಯಾದಿಗಳನ್ನು ನೀವು ಇಲ್ಲಿ ಉಳಿಸಲು ಸಾಧ್ಯವಾಗುತ್ತದೆ.
12. ನೀವು ಈ ದಾಖಲೆಗಳನ್ನು ಹಂಚಿಕೊಳ್ಳಲು ಸಹ ಸಾಧ್ಯವಾಗುತ್ತದೆ. ಇವುಗಳು PDF ರೂಪದಲ್ಲಿ ಕಳುಹಿಸುವವರಿಗೆ ಹೋಗುತ್ತದೆ.
ಇದನ್ನೂ ಓದಿ-Indian Railways Rules: ರೈಲು ಯಾತ್ರೆಯ ವೇಳೆ ಟಿಕೆಟ್ ಜೊತೆಗೆ ಸಿಗುವ ಈ ಲಾಭಗಳು ನಿಮಗೆ ತಿಳಿದಿವೆಯೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.