ನವದೆಹಲಿ: ಸನ್ರೈಸರ್ಸ್ ಹೈದಬಾರಾದ್ ತಂಡದ ವೇಗಿ ಟಿ.ನಟರಾಜನ್(T Natarajan) ಅವರಿಗೆ ಬುಧವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಆಗಿರುವುದು ಗೊತ್ತಾಗಿದೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ಹೈದರಾಬದ್ ನಡುವಿನ 32ನೇ ಪಂದ್ಯ ನಡೆಯಬೇಕಿದೆ.
ಪಂದ್ಯ ಆರಂಭಕ್ಕೂ ಕೆಲವು ಗಂಟೆಗಳ ಮುನ್ನ ಟಿ.ನಟರಾಜನ್ ಅವರಿಗೆ ಕೊರೊನಾ ಸೋಂಕು(CoranaVirus) ದೃಢಪಟ್ಟಿರುವುದು ತಿಳಿದುಬಂದಿದೆ. ಸದ್ಯ ಅವರನ್ನು ತಂಡದಿಂದ ಪ್ರತ್ಯೇಕಿಸಲಾಗಿದೆ. ನಟರಾಜನ್ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಹೈದರಾಬಾದ್ನ 6 ಸದಸ್ಯರನ್ನು ಕೂಡ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಹೈದರಾಬಾದ್ ತಂಡ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: IPL 2021: ಕೊಲ್ಕತ್ತಾ ನೈಟ್ ರೈಡರ್ಸ್ ಗೆ ಸುಲಭ ತುತ್ತಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು
‘ನಟರಾಜನ್ ಪ್ರಸ್ತುತ ರೋಗಲಕ್ಷಣರಹಿತರಾಗಿದ್ದಾರೆ. ಅವರ ಜೊತೆಗೆ ಸಂಪರ್ಕದಲ್ಲಿದ್ದ 6 ಸದಸ್ಯರನ್ನು ಪ್ರತ್ಯೇಕವಾಗಿರಸಲಾಗಿದೆ. ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ರೀತಿಯ ಆತಂಕವಿಲ್ಲ. ಆದರೆ ಇತರ ಆಟಗಾರರು ನೆಗೆಟಿವ್ ಆಗಿರುವುದರಿಂದ ಎಸ್ಆರ್ಹೆಚ್ ಮತ್ತು ದೆಹಲಿ ಕ್ಯಾಪಿಟಲ್ಸ್(DC vs SRH) ನಡುವಿನ ಪಂದ್ಯವು ನಡೆಯಲಿದೆ ಎಂಬ ಮಾಹಿತಿ ತಿಳಿದುಬಂದಿದೆ. ಟಿ.ನಟರಾಜನ್ ಜೊತೆಗೆ ಸಂಪರ್ಕ ಹೊಂದಿದ್ದ 6 ಸದಸ್ಯರ ಹೆಸರನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಈ ಪಟ್ಟಿ ಈ ಕೆಳಗಿನಂತಿದ್ದು, ಇವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
1) ವಿಜಯ್ ಶಂಕರ್ - ಆಟಗಾರ
2) ವಿಜಯ್ ಕುಮಾರ್ - ತಂಡದ ವ್ಯವಸ್ಥಾಪಕ
3) ಶ್ಯಾಮ್ ಸುಂದರ್ ಜೆ - ಫಿಸಿಯೋಥೆರಪಿಸ್ಟ್
4) ಅಂಜನಾ ವನ್ನನ್ - ಡಾಕ್ಟರ್
5) ತುಷಾರ್ ಖೇಡ್ಕರ್ - ಲಾಜಿಸ್ಟಿಕ್ಸ್ ಮ್ಯಾನೇಜರ್
6) ಪೆರಿಯಸಾಮಿ ಗಣೇಶನ್ - ನೆಟ್ ಬೌಲರ್
ನಟರಾಜನ್ ಜೊತೆಗಿನ ನಿಕಟ ಸಂಪರ್ಕಿತರೂ ಸೇರಿದಂತೆ ಇನ್ನುಳಿದ ಆಟಗಾರರು ಇಂದು ಬೆಳಿಗ್ಗೆ 5 ಗಂಟೆಗೆ RT-PCR ಪರೀಕ್ಷೆಗಳಿಗೆ ಒಳಗಾಗಿದ್ದರು. ಪರೀಕ್ಷಾ ವರದಿಗಳು ನೆಗೆಟಿವ್ ಬಂದಿದೆ. ಹೀಗಾಗಿ ಇಂದು ಸಂಜೆ 7.30ಕ್ಕೆ ಸನ್ ರೈಸರ್ಸ್ ಹೈದರಾಬಾದ್(Sunrisers Hyderbad) ಮತ್ತು ದೆಹಲಿ ಕ್ಯಾಪಿಟಲ್ಸ್(Delhi Capitals) ನಡುವಿನ ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತದೆ’ ಎಂದು ಐಪಿಎಲ್ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ: IPL 2021: RCB ತಂಡದ ನಾಯಕರಾಗುವ ಆಟಗಾರರು ಯಾರು ಗೊತ್ತೇ?
ಸದ್ಯ 14ನೇ ಆವೃತ್ತಿಯ ಐಪಿಎಲ್ ಟೂರ್ನಿ(IPL 2021)ಯ 2ನೇ ಹಂತದಲ್ಲಿ ಪಂದ್ಯಗಳನ್ನು ಯುಎಇನಲ್ಲಿ ನಡೆಯುತ್ತಿವೆ. ಕೆಲ ಆಟಗಾರರು ಮತ್ತು ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಭಾರತದಲ್ಲಿ ಆಯೋಜಿಸಿದ್ದ ಐಪಿಎಲ್ ಪಂದ್ಯಗಳನ್ನು ಮೊದಲ ಹಂತದಲ್ಲಿ ಸ್ಥಗಿತಗೊಳಿಸಲಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.