ವಾಷಿಂಗ್ಟನ್: Coronavirus Dangerous R.1 Variant - ಕೊರೊನಾವೈರಸ್‌ನ (Coronavirus) ಅನಾಹುತ ವಿಶ್ವಾದ್ಯಂತ ಮತ್ತೊಮ್ಮೆ ಹೆಚ್ಚಾಗತೊಡಗಿವೆ. ಕೋವಿಡ್ -19 (Covid-19) ಪ್ರಕರಣಗಳು ಹಲವು ದೇಶಗಳಲ್ಲಿ ವೇಗವಾಗಿ ಹೆಚ್ಚುತ್ತಿವೆ. ಕರೋನಾ ವೈರಸ್‌ನ ಮೂರನೇ ಅಲೆಯ (Coronvirus Third Wave) ಕುರಿತು ಭಾರತದಲ್ಲೂ ಎಚ್ಚರಿಕೆ ನೀಡಲಾಗಿದೆ. ಆದರೆ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ನಡುವೆ, ಒಂದು ಆತಂಕ ಹೆಚ್ಚಿಸುವ ಸುದ್ದಿ ಪ್ರಕಟಗೊಂಡಿದೆ. ಕೋವಿಡ್ -19 (Coronavirus Dangerous R.1 Variant) ನ ಅತ್ಯಂತ ಅಪಾಯಕಾರಿ ರೂಪಾಂತರವು ಅಮೆರಿಕದಲ್ಲಿ ಕಂಡುಬಂದಿದೆ. ಇದರ ಹೆಸರು ಆರ್ .1 ರೂಪಾಂತರಿ (R.1 Variant).
ಖತರ್ನಾಕ್ ಸಾಬೀತಾಗಬಹುದು R.1 ರೂಪಾಂತರಿ
ವಿಶ್ವಾದ್ಯಂತ R.1 ರೂಪಾಂತರಿಯ ಪ್ರಕರಣಗಳು ಕಡಿಮೆ ಇದ್ದರೂ ಕೂಡ ನಿರ್ಲಕ್ಷ ತೋರುವಂತಿಲ್ಲ. ಏಕೆಂದರೆ ಈ ರೂಪಾಂತರಿ ಎಲ್ಲಕ್ಕಿಂತ ಅಪಾಯಕಾರಿ ರೂಪಾಂತರಿಯಾಗಿದೆ. ಕೊರೊನಾ ವೈರಸ್ ಸೋಂಕಿಗೆ ಒಂದೂವರೆ ವರ್ಷ ಗತಿಸಿವೆ ಆದರೂ ಕೂಡ ವಿಶ್ವಾದ್ಯಂತ ಲಕ್ಷಾಂತರ ಜನರ ಪ್ರಾಣ ಅದು ಹೀರುತ್ತಲೇ ಇದೆ.
ಎರಡನೇ ಅಲೆಯಲ್ಲಿ ಭಾರಿ ಹಾನಿ ತಲುಪಿಸಿದ ಕೊರೊನಾ
ಕೊರೊನಾ ವೈರಸ್ ನ ಎರಡನೇ ಅಲೆ ಭಾರತದಲ್ಲಿ ಭಾರಿ ಹಾನಿಯನ್ನೇ ಸೃಷ್ಟಿಸಿತ್ತು. ಹೀಗಾಗಿ ಇದೀಗ ಕೊರ್ನಾ ವೈರಸ್ ನ R.1 ರೂಪಾಂತರಿ ಇದೀಗ ವಿಶ್ವಾದ್ಯಂತದ ಜನರ ಎದೆಬಡಿತ ಮತ್ತೊಮ್ಮೆ ತೀವ್ರಗೊಳಿಸಿದೆ ಎಂದರೆ ತಪ್ಪಾಗಲಾರದು.
ಇದನ್ನೂ ಓದಿ-Viral News: ಜೀವಂತ ಹಾವನ್ನೇ ನುಂಗಿದ ಭೂಪ, ಮುಂದೇನಾಯ್ತು ನೋಡಿ..!
ತಜ್ಞರು ನೀಡಿದ ಎಚ್ಚರಿಕೆ ಇದು
ಕರೋನಾ ವೈರಸ್‌ನ(Coronavirus) ಈ ಅಪಾಯಕಾರಿ ರೂಪಾಂತರದ (Dangerous Variant) ಬಗ್ಗೆ ತಜ್ಞರು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಸಂಶೋಧಕರು ಇತ್ತೀಚೆಗೆ ಅಮೆರಿಕದಲ್ಲಿ (US) ಕರೋನಾದ R.1 ರೂಪಾಂತರವನ್ನು ಗುರುತಿಸಿದ್ದಾರೆ. R.1 ರೂಪಾಂತರದ ಕಡಿಮೆ ಸಂಖ್ಯೆಯ ಪ್ರಕರಣಗಳ ಹೊರತಾಗಿಯೂ, ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದು ತಜ್ಞರು ಹೇಳಿದ್ದಾರೆ. ಇದು ಅಪಾಯಕಾರಿ ಎಂದು ಸಾಬೀತುಪಡಿಸಬಹುದು ಎಂಬುದು ಅವರ ಅಭಿಪ್ರಾಯ.
ಇದನ್ನೂ ಓದಿ-ಭಾರತದಲ್ಲಿ ಲಸಿಕೆಯನ್ನು ತಯಾರಿಸಲು ಜಾಗತಿಕ ಉತ್ಪಾದಕರಿಗೆ ಆಹ್ವಾನ ನೀಡಿದ ಪ್ರಧಾನಿ ಮೋದಿ
ಏನಿದು ಹೊಸ ರೂಪಾಂತರಿ R.1?
ತಜ್ಞರ ಪ್ರಕಾರ, ಆರ್ .1 ರೂಪಾಂತರಿಯನ್ನು ಇತ್ತೀಚೆಗಷ್ಟೇ ಅಮೆರಿಕದ ಸಂಶೋಧಕರು (US Researchers) ಗುರುತಿಸಿದ್ದರೂ, ಈ ರೂಪಾಂತರವು ಕಳೆದ ವರ್ಷ ಜಪಾನ್‌ನಲ್ಲಿ ಕಂಡುಬಂದಿದೆ. ಇದರ ಹೊರತಾಗಿ, R.1 ರೂಪಾಂತರವು ಇತರ ಹಲವು ದೇಶಗಳಲ್ಲಿಯೂ ಪತ್ತೆಯಾಗಿದೆ. ಕರೋನಾದ R.1 ರೂಪಾಂತರದ ಪ್ರಕರಣಗಳು ಅಮೆರಿಕ ಸೇರಿದಂತೆ ವಿಶ್ವದ ಸುಮಾರು 35 ದೇಶಗಳಲ್ಲಿ ಕಂಡುಬಂದಿದ್ದು, ವಿಶ್ವಾದ್ಯಂತ ಸುಮಾರು 10 ಸಾವಿರ ಜನರು ಈ ಮಾರಕ ಸೋಂಕಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ-Weird News: ಬೆಡ್ರೂಮಲ್ಲಿ ದೊರೆತ ಸಿಕ್ರೆಟ್ ಲಿಸ್ಟ್ ನೋಡಿ ಬೆಚ್ಚಿಬಿದ್ದಪತ್ನಿ, ಗರ್ಲ್ ಫ್ರೆಂಡ್ ಜೊತೆ...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.