LPG Cylinder Subsidy Latest News: ಅಡುಗೆ ಅನಿಲ ಸಿಲಿಂಡರ್ ಮೇಲೆ ಮತ್ತೆ ಸಿಗಲಿದೆಯೇ ಸಬ್ಸಿಡಿ? ಸರ್ಕಾರ ಸಿದ್ಧಪಡಿಸಿದೆ ಈ ಮಾಸ್ಟರ್ ಪ್ಲಾನ್

LPG Cylinder Subsidy Latest News - ಎಲ್ಪಿಜಿ ಸಿಲಿಂಡರ್ ಸಬ್ಸಿಡಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಪ್ರಕಟವಾಗಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ಮರುಸ್ಥಾಪಿಸುವ ಸಿದ್ಧತೆಯಲ್ಲಿ ಸರ್ಕಾರ (Government Of India) ತೊಡಗಿದೆ.

Written by - Nitin Tabib | Last Updated : Sep 28, 2021, 01:06 PM IST
  • ಎಲ್ಪಿಜಿ ಸಿಲಿಂಡರ್ ಸಬ್ಸಿಡಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಪ್ರಕಟವಾಗಿದೆ.
  • ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ಮರುಸ್ಥಾಪಿಸುವ ಸಿದ್ಧತೆಯಲ್ಲಿ ಸರ್ಕಾರ ತೊಡಗಿದೆ.
  • ಯಾರಿಗೆ ಇನ್ಮುಂದೆ ಸಬ್ಸಿಡಿ ಸಿಗಲಿದೆ ತಿಳಿಯಲು ವರದಿ ಓದಿ.
LPG Cylinder Subsidy Latest News: ಅಡುಗೆ ಅನಿಲ ಸಿಲಿಂಡರ್ ಮೇಲೆ ಮತ್ತೆ ಸಿಗಲಿದೆಯೇ ಸಬ್ಸಿಡಿ? ಸರ್ಕಾರ ಸಿದ್ಧಪಡಿಸಿದೆ ಈ ಮಾಸ್ಟರ್ ಪ್ಲಾನ್  title=
LPG Cylinder Subsidy Latest News (File Photo)

LPG Cylinder Subsidy Latest News - LPG ಸಬ್ಸಿಡಿಗೆ ಸಂಬಂಧಿಸಿದಂತೆ  ಪ್ರಮುಖ ಸುದ್ದಿಯೊಂದು ಪ್ರಕಟಗೊಂಡಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು (Ministry of Petroleum and Natural Gas) ದ್ರವೀಕೃತ ಪೆಟ್ರೋಲಿಯಂ ಅನಿಲ (LPG Or Cooking Gas) ಮೇಲಿನ ಸಬ್ಸಿಡಿಯ ಮಿತಿಯನ್ನು  ಮರುಸ್ಥಾಪಿಸಳು ಮೌಲ್ಯಮಾಪನ ನಡೆಸುತ್ತಿದೆ ಎನ್ನಲಾಗಿದೆ. ಇದಕ್ಕಾಗಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಆಂಗ್ಲ ಮಾಧ್ಯಮದ ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.

ಈ ವಿಷಯದ ಮಾಹಿತಿ ಹೊಂದಿದ ಹಿರಿಯ ಸರ್ಕಾರಿ ಅಧಿಕಾರಿಯ ಪ್ರಕಾರ, ಪ್ರಸ್ತುತ ಯಾವ ಬೆಲೆಗೆ ಹೆಚ್ಚಿನ ಗ್ರಾಹಕರು LPG ಗ್ಯಾಸ್ ಸಿಲಿಂಡರ್ ಗಳನ್ನು ಖರೀದಿಸಲು ಬಯಸುತ್ತಿದ್ದಾರೆ ಎಂಬುದರ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ ವಿವಿಧ ಆಯ್ಕೆಗಳನ್ನು ಕೂಡ ಪರಿಗಣಿಸಲಾಗುತ್ತಿದೆ. ಇದರಲ್ಲಿ ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ (Pradhan Mantri Ujjwala Yojana) ಫಲಾನುಭವಿಗಳಿಗೆ ಮಾತ್ರ ಸಬ್ಸಿಡಿ ಸಿಲಿಂಡರ್ ವಿತರಣೆಯನ್ನು ಸೀಮಿತಗೊಳಿಸುವುದು ಕೂಡ ಒಂದು ಆಯ್ಕೆಯಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮೇ 2020 ರಿಂದ ಹಲವು ಕ್ಷೇತ್ರಗಳಲ್ಲಿ ಸಬ್ಸಿಡಿಯನ್ನು ಬಂದ್ ಮಾಡಲಾಗಿದೆ
2020 ರಲ್ಲಿ, ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ವಿಶ್ವಾದ್ಯಂತ ಲಾಕ್‌ಡೌನ್ ಘೋಷಿಸಿದಾಗ, ಕಚ್ಚಾ ತೈಲದ ಬೆಲೆಗಳು ಭಾರಿ ಇಳಿಕೆಯಾದವು. ಇದರಿಂದ ಭಾರತ ಸರ್ಕಾರಕ್ಕೆ LPG ನಿಟ್ಟಿನಲ್ಲಿ ಅನುವು ಸಿಕ್ಕಿತು ಮತ್ತು ಸಬ್ಸಿಡಿ ನಿಟ್ಟಿನಲ್ಲಿ ಯಾವುದೇ ಬದಲಾವಣೆಯ ಅವಶ್ಯಕತೆ ಬೀಳಲಿಲ್ಲ. ಮೇ 2020 ರಲ್ಲಿ ಎಲ್‌ಪಿಜಿಯ ಮೇಲಿನ ಸಬ್ಸಿಡಿಯನ್ನು ಸರ್ಕಾರ ರದ್ದುಗೊಳಿಸಿತು. ಆಗ ದೆಹಲಿಯಲ್ಲಿ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 581.50 ರೂ. ಆಗಿತ್ತು. ಪ್ರಸ್ತುತ ಇದರ ಬೆಲೆ 884.50 ರೂ.ಗೆ ತಲುಪಿದೆ.

ಪ್ರಸ್ತುತ ಎಷ್ಟು ಸಬ್ಸಿಡಿ ಸಿಗುತ್ತದೆ?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಸ್ತುತ ದೇಶೀಯ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿ ಶೂನ್ಯವಾಗಿದೆ, ಆದರೆ ಕೇಂದ್ರವು ಇನ್ನೂ ಕೆಲ ರಾಜ್ಯಗಳಲ್ಲಿ ಸರಕು ವೆಚ್ಚದ ರೂಪದಲ್ಲಿ ಸಬ್ಸಿಡಿ ನೀಡುತ್ತಿದೆ. ಸಬ್ಸಿಡಿಯ ನಿಖರವಾದ ಮೊತ್ತವು ಭಿನ್ನ-ಭಿನ್ನವಾಗಿದೆ. ಆದರೆ ಸರಿಸುಮಾರು ರೂ. 30 ಕ್ಕಿಂತ ಕಡಿಮೆಯಾಗಿದೆ.  ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರವು ಸಬ್ಸಿಡಿಗೆ ಸಂಬಂಧಿಸಿದಂತೆ ಸಮೀಕ್ಷೆಯನ್ನು ನಡೆಸುತ್ತಿದೆ, ಇದರಿಂದ ಗ್ರಾಹಕರು ಯಾವ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಖರೀದಿಸಬಹುದು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ. ಸರ್ಕಾರ ತನ್ನ ಬೆಲೆಯನ್ನು ನಿಯಂತ್ರಣದಲ್ಲಿಡಲು ಬಯಸುತ್ತದೆ.

ಇದನ್ನೂ ಓದಿ-LPG Cylinder Booking Bumper Offer: ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್‌ನಲ್ಲಿ ಬಂಪರ್ ಕೊಡುಗೆ, ಎಷ್ಟು ಲಾಭ ಸಿಗಲಿದೆ ಗೊತ್ತಾ?

PMYU ಲಾಭಾರ್ಥಿಗಳನ್ನು ಆರ್ಥಿಕ ರೂಪದಲ್ಲಿ ಹಿಂದುಳಿದವರು ಎಂದು ಪರಿಗಣಿಸಲಾಗಿರುವ ಕಾರಣ ಅವರ ಆಯ್ಕೆಯ ಮೇಲೆ ಚಿಂತನೆ ನಡೆಸಲಾಗುತ್ತಿದೆ. 

ಇದನ್ನೂ ಓದಿ-LPG ಸಿಲಿಂಡರ್‌ ಬುಕಿಂಗ್ ಮೇಲೆ ಬಂಪರ್ ಆಫರ್ : ಸಿಗಲಿದೆ 2500 ರೂ.ಗಳಿಗಿಂತ ಹೆಚ್ಚು ಕ್ಯಾಶ್ ಬ್ಯಾಕ್! ಹೇಗೆ ಇಲ್ಲಿದೆ

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿಯಲ್ಲಿ ಶೇ.92ರಷ್ಟು ಇಳಿಕೆ
ಏಪ್ರಿಲ್-ಜುಲೈ ಅವಧಿಯಲ್ಲಿ, ವಾರ್ಷಿಕ ಆಧಾರದ ಮೇಲೆ ಪೆಟ್ರೋಲಿಯಂ ಉತ್ಪನ್ನ ಸಬ್ಸಿಡಿಗಳಲ್ಲಿ 92% ಇಳಿಕೆಯಾಗಿದೆ. ಅಡುಗೆಯ ಇಂಧನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದರೂ, ಲಕ್ಷಾಂತರ ಫಲಾನುಭವಿಗಳ ಖಾತೆಗಳಿಗೆ ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯ ವರ್ಗಾವಣೆಯನ್ನು ಸರ್ಕಾರ ನಿಲ್ಲಿಸಿದೆ ಎಂಬುದು ಇದರ ಹಿಂದಿನ ಕಾರಣವಾಗಿದೆ. 2021-22ರ ಮೊದಲ 4 ತಿಂಗಳಲ್ಲಿ, ಪೆಟ್ರೋಲಿಯಂ ಉತ್ಪನ್ನ ಸಬ್ಸಿಡಿ 1,233 ಕೋಟಿ ಎಂದು ಅಂದಾಜಿಸಲಾಗಿದೆ. ಇದು ಕಳೆದ ವರ್ಷದ ಇದೇ ಅವಧಿಯ ಅಂದರೆ 2020-21ರ ರೂ 16,461 ಕೋಟಿಗಿಂತ ಕಡಿಮೆಯಾಗಿದೆ.

ಇದನ್ನೂ ಓದಿ-Big News: LPG ಸಿಲಿಂಡರಗೆ ಸಿಗುವ ಸಬ್ಸಿಡಿ ಸ್ಥಗಿತಗೊಳ್ಳಲಿದೇಯಾ? ಇಲ್ಲಿದೆ ಸರ್ಕಾರದ ಹೊಸ ಪ್ಲಾನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News