ನವದೆಹಲಿ: ಮದುವೆ ಎಂದರೆ ಅಲ್ಲಿ ಫೋಟೋಗ್ರಾಫರ್(Photographer) ಹಾಜರಿ ಇರಲೇಬೇಕು. ಮದುವೆ ಸಮಾರಂಭದ ದಿನ ವಧು-ವರನ ಕಡೆಯವರು ಯಾರಿಗೆ ಗೌರವ ಕೊಡುತ್ತಾರೋ ಬಿಡುತ್ತಾರೋ ಆದರೆ ಫೋಟೋಗ್ರಾಫರ್ ಗೆ ಮಾತ್ರ ಇನ್ನಿಲ್ಲದ ಗೌರವ-ಮರ್ಯಾದೆ ನೀಡುತ್ತಾರೆ. ಸರಿಯಾಗಿ ಫೋಟೋ ತೆಗೆಯಲಿ ಎಂದು ಊಟ, ತಿಂಡಿ-ಕಾಫಿಯಿಂದ ಹಿಡಿದು ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಮದುವೆ ದಿನಪೂರ್ತಿ ಬ್ಯುಸಿಯಾಗಿರುವ ಫೋಟೋಗ್ರಾಫರ್ ವಧು-ವರರು, ಬಂಧು-ಬಳಗ ಸೇರಿ ನೂರಾರು ಜನರ ಫೋಟೋ ತೆಗೆಯುತ್ತಾರೆ.
ಊಟ- ತಿಂಡಿಗೆ ಸಮಯವೇ ಇಲ್ಲದಂತೆ ಫೋಟೋ ತೆಗೆಯುವಲ್ಲಿ ಫೋಟೋಗ್ರಾಫರ್(Photographer) ಬ್ಯುಸಿಯಾಗಿರುತ್ತಾನೆ. ಹೀಗಾಗಿ ಕೆಲವೊಮ್ಮೆ ವಧು-ವರ(Bride-Groom)ನ ಕಡೆಯವರು ಫೋಟೋಗ್ರಾಫರ್ ಊಟ-ತಿಂಡಿ ಬಗ್ಗೆ ಗಮನವನ್ನೇ ಹರಿಸುವುದಿಲ್ಲ. ಹಸಿದ ಹೊಟ್ಟೆಯಲ್ಲಿಯೇ ಕೆಲಸ ಮಾಡುತ್ತಾ ಮಾಡುತ್ತಾ ಫೋಟೋಗ್ರಾಫರ್ ಸಹನೆಯ ಕಟ್ಟೆ ಒಡೆದಿರುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಒಂದು ಘಟನೆ ನಡೆದಿದೆ. ಊಟ-ತಿಂಡಿ ಕಾಫಿ ಹೋಗಲಿ ನೀರು ಸಹಿತ ಕೊಡದೆ ದಿನಪೂರ್ತಿ ಕೆಲಸ ಮಾಡಿಸಿಕೊಂಡ ಕಾರಣ ಫೋಟೋಗ್ರಾಫರ್ ಒಬ್ಬ ಕೋಪದಲ್ಲಿ ಮದುವೆ ಸಮಾರಂಭದ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿ ಮದುವೆ ಮನೆಯಿಂದಲೇ ಹೊರನಡೆದಿದ್ದಾನೆ.
ಹಣ ಉಳಿಸುವ ಉದ್ದೇಶದಿಂದ ಮದುಮಗನೊಬ್ಬ ತನ್ನ ಸ್ನೇಹಿತನಿಗೆ ಫೋಟೋಗ್ರಾಫರ್ ಆಗಿ ಬರುವಂತೆ ಹೇಳಿದ್ದಾನೆ. ತಾನು ಕೇವಲ ನಾಯಿಗಳ ಫೋಟೋ ತೆಗೆಯುವುದರಲ್ಲಿ ಪಳಗಿದ್ದು, ಮದುವೆ ಫೋಟೋ(Wedding Photoshoot) ತೆಗೆಯುವುದು ನನಗೆ ಗೊತ್ತಿಲ್ಲ ಅಂತಾ ಹೇಳಿದ್ದಾನೆ. ಆದರೆ ಮದುಮಗ ಮಾತ್ರ ನೀನೇ ನನ್ನ ಮದುವೆಯ ಫೋಟೋಗನ್ನು ತೆಗೆಯಬೇಕು ಅಂತಾ ಹಠಹಿಡಿದಿದ್ದಾನೆ. ಕೊನೆಗೆ ಆತನ ಒತ್ತಾಯಕ್ಕೆ ಮಣಿದ ಸ್ನೇಹಿತ 250 ಡಾಲರ್(ಸುಮಾರು 18,500 ರೂ.) ಕೊಟ್ಟರೆ ಮದುವೆ ಫೋಟೋ ತೆಗೆಯುತ್ತೇನೆ ಅಂತಾ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಆಧಾರ್ ಕಾರ್ಡ್ನಲ್ಲಿ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಲು ಬಯಸುವಿರಾ?
ಬೆಳಗಿನ ಜಾವದಿಂದ ಸಂಜೆಯವರೆಗೂ ಮದುವೆ(Indian Wedding) ಕಾರ್ಯಕ್ರಮ ನಡೆದಿದೆ. ಬೆಳಿಗ್ಗೆ 11 ಗಂಟೆಗೆ ಕೆಲಸ ಶುರು ಮಾಡಿದ ಆತ ಸಂಜೆ 7.30ರವರೆಗೆ ಫೋಟೋ ತೆಗೆಯಬೇಕಿತ್ತು. ನಾನು ಫೋಟೋಗ್ರಾಪರ್ ಆಗಿ ಬೆಳಗ್ಗೆಯಿಂದ ಕೆಲಸ ಮಾಡಿದ್ದೇನೆ. ಸಂಜೆ 5 ಗಂಟೆಗೆ ನನಗೆ ಊಟ ಮಾಡಲು ಸಾಧ್ಯವಿಲ್ಲ. ಮಧ್ಯಾಹ್ನವೇ ಊಟದ ವ್ಯವಸ್ಥೆ ಮಾಡಿ ಎಂದು ಅಲ್ಲಿದ್ದವರ ಬಳಿ ಆತ ಹಲವು ಬಾರಿ ವಿನಂತಿಸಿದ್ದಾನೆ. ಆದರೆ ಆತನ ಬಗ್ಗೆ ಮದುವೆ ಮನೆಯವರು ಯಾರೂ ಕೇರ್ ಮಾಡಿಲ್ಲ.
ಮದುಮಗ(Groom)ನ ಬಳಿ ಹೋಗಿ ತನಗೆ ಹೊಟ್ಟೆ ಹಸಿವಾಗಿದೆ. 20 ನಿಮಷ ವಿರಾಮ ನೀಡಿದರೆ ನಾನು ಊಟ ಮಾಡಿ ಮತ್ತೆ ಕೆಲಸ ಶುರುಮಾಡುತ್ತೇನೆ ಅಂತಾ ಹೇಳಿದ್ದಾನೆ. ಆದರೆ ಮದುಮಗ ಆತನ ಮಾತು ಕೇಳದೆ ನಿರ್ಲಕ್ಷ್ಯ ಮಾಡಿದ್ದಾನೆ. ನೀನು ಫೋಟೋ ತೆಗೆದರೆ ತೆಗಿ, ಇಲ್ಲದಿದ್ದರೆ ನಾನು ನಿನಗೆ ಒಂದು ರೂಪಾಯಿಯನ್ನೂ ನೀಡುವುದಿಲ್ಲ ಅಂತಾ ಹೇಳಿದ್ದಾನೆ. ಹೊಟ್ಟೆ ಹಸಿದ ಸಿಟ್ಟಿನಲ್ಲಿದ್ದ ಫೋಟೋಗ್ರಾಫರ್ ಕಾರ್ಯಕ್ರಮ ಮುಗಿಯುವವರೆಗೆ ಕಾದಿದ್ದಾನೆ. ಬಳಿಕ ವೇದಿಕೆಯ ಮೇಲೆಯೇ ವಧು-ವರರ ಸಮ್ಮುಖದಲ್ಲಿಯೇ ತಾನು ಬೆಳಗ್ಗೆಯಿಂದ ತೆಗೆದಿದ್ದ ಫೋಟೋಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿದ್ದಾನೆ.
ಫೋಟೋ ಡಿಲೀಟ್ ಮಾಡುವ ಮೂಲಕ ತನ್ನನ್ನು ಬೆಳಗ್ಗೆಯಿಂದ ಹಸಿವೆಯಿಂದ ಬಳಲಿಸಿದ್ದ ಮದುವೆ ಮನೆಯವರ ವಿರುದ್ಧ ಫೋಟೋಗ್ರಾಫರ್ ಸೇಡು ತೀರಿಸಿಕೊಂಡಿದ್ದಾನೆ. ‘ಬೆಳಗ್ಗೆಯಿಂದ ಸಂಜೆಯವರೆಗೂ ನಾನು ಒಂದು ಲೋಟ ನೀರು ಕುಡಿಯದೇ ಫೋಟೋ ತೆಗೆದಿದ್ದೇನೆ. ಆದರೆ ಮದುವೆ ಮನೆಯಲ್ಲಿದ್ದ ಯಾರೂ ಕೂಡ ನನಗೆ ಊಟ, ತಿಂಡಿ-ಕಾಫಿ ವ್ಯವಸ್ಥೆ ಮಾಡಿಲ್ಲ. ಸಿಕ್ಕಾಪಟ್ಟೆ ಶಕೆ ಇದೆ, ಒಂದು ಲೋಟ ನೀರು ಕೊಡಿ ಅಂದರೂ ಯಾರೂ ಕೊಟ್ಟಿಲ್ಲ. ನನಗೆ ಬಂದ ಕೋಪದಲ್ಲಿ ಏನೂ ಮಾಡಬೇಕೆಂದು ತಿಳಿಯಲಿಲ್ಲ. ಹೀಗಾಗಿ ನಾನು ಬೆಳಗ್ಗೆಯಿಂದ ತೆಗೆದ ಫೋಟೋಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿದೆ’ ಎಂದು ನೊಂದುಕೊಂಡು ಫೋಟೋಗ್ರಾಫರ್ ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಹಂಚಿಕೊಂಡಿದ್ದಾನೆ.
ಇದನ್ನೂ ಓದಿ: Cyclone Shaheen: ಏಳು ರಾಜ್ಯಗಳಲ್ಲಿ ಅಕ್ಟೋಬರ್ 4 ರವರೆಗೆ ಭಾರಿ ಮಳೆ, ಹೈಅಲರ್ಟ್
ಸದ್ಯ ನವವಿವಾಹಿತರು ಹನಿಮೂನ್ಗೆ ಹೋಗಿದ್ದು, ಸೋಷಿಯಲ್ ಮೀಡಿಯಾ(Social Media)ದಿಂದ ದೂರ ಉಳಿದಿದ್ದಾರೆ. ಏಕೆಂದರೆ ಮದುವೆ ಫೋಟೋ ಎಲ್ಲಿ ಎಂದು ಯಾರಾದರೂ ಕೇಳಿದರೆ ಅವರಿಗೆ ಏನು ಹೇಳಬೇಕೆಂಬುದೇ ಅವರಿಗೆ ಅರ್ಥವಾಗುತ್ತಿಲ್ಲವಂತೆ. ಫೋಟೋಗ್ರಾಫರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪೋಸ್ಟ್ ವೈರಲ್ ಅಗಿದ್ದು, ಅನೇಕರು ‘ನೀನು ಸರಿಯಾಗಿಯೇ ಮಾಡಿದ್ದೀಯಾ’ ಅಂತಾ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.