ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಖಾಮುಖಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ ಗಳಿಂದ ಸೋಲಿಸಿದ್ದರಿಂದ ಪ್ಲೇಆಫ್ ಗೆ ಅರ್ಹತೆ ಪಡೆದ ಮೂರನೇ ತಂಡವಾಗಿದೆ.
ಇದನ್ನೂ ಓದಿ: IPL 2021: RCB ತಂಡದ ನಾಯಕರಾಗುವ ಆಟಗಾರರು ಯಾರು ಗೊತ್ತೇ?
ಕೆಎಲ್ ರಾಹುಲ್ (39) ಮತ್ತು ಮಯಾಂಕ್ ಅಗರ್ವಾಲ್ (57) 10 ನೇ ಓವರ್ ತನಕ ಆಡುತ್ತಿದ್ದ ಸಂದರ್ಭದಲ್ಲಿ ಪಂಜಾಬ್ ತಂಡವು ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿತ್ತು, ಆದರೆ ರಾಹುಲ್ ನಿರ್ಗಮಿಸಿದ ನಂತರ ಬೇಗನೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಪಂಜಾಬ್ ತಂಡಕ್ಕೆ ಮಾಯಾಂಕ್ ಅಗರವಾಲ್ ಔಟ್ ಆದ ನಂತರ ನುಂಗಲಾರದ ತುತ್ತಾಗಿ ಪರಿಣಮಿಸಿತು.ಕೊನೆಗೆ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 158 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.
What better way to celebrate a birthday than qualifying for the playoffs. Right, @KonaBharat? 🤩
Hope you had a great day, Champ! #PlayBold #WeAreChallengers #IPL2021 pic.twitter.com/3U5xdJFuzB
— Royal Challengers Bangalore (@RCBTweets) October 3, 2021
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ದೇವದತ್ ಪಡಿಕ್ಕಲ್ 40 ಹಾಗೂ ವಿರಾಟ್ ಕೊಹ್ಲಿ 25 ರನ್ ಗಳ ನೆರವಿನಿಂದ ಮೊದಲ ವಿಕೆಟ್ ಗೆ 68 ರನ್ ಗಳ ಜೊತೆಯಾಟವನ್ನು ಆಡಿತು, ಆದರೆ ನಂತರ ಐದು ರನ್ ಗಳಾಗುವಷ್ಟರಲ್ಲಿ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಬೆಂಗಳೂರು ತಂಡವು ಸಂಕಷ್ಟಕ್ಕೆ ಸಿಲುಕಿತು.
ಇದನ್ನೂ ಓದಿ: ಈ ಆಟಗಾರನ IPL ವೃತ್ತಿಜೀವನವೆ ಮುಗಿದಿತ್ತು? ಕೊಹ್ಲಿಯ ಒಂದು ಫೋನ್ ಕರೆಯಿಂದ ಜೀವನವೆ ಬದಲಾಯಿತು
ಈ ಹಂತದಲ್ಲಿ ಕಣಕ್ಕೆ ಇಳಿದ ಗ್ಲೆನ್ ಮ್ಯಾಕ್ಸ್ ವೆಲ್ ((Glen Maxwell) ) (57) ಹಾಗೂ ಎಬಿಡಿವಿಲಿಯರ್ಸ್ (23) ಅವರ 50 ರನ್ ಗಳ ಜೊತೆಯಾಟದಿಂದಾಗಿ ತಂಡಕ್ಕೆ ಆಸರೆಯಾದರು. ಗ್ಲೆನ್ ಮ್ಯಾಕ್ಸ್ ವೆಲ್ ಕೇವಲ 33 ಎಸೆತಗಳಲ್ಲಿ ನಾಲ್ಕು ಭರ್ಜರಿ ಸಿಕ್ಸರ್ ಹಾಗೂ ಮೂರು ಬೌಂಡರಿಗಳ ನೆರವಿನಿಂದಾಗಿ 57 ರನ್ ಗಳನ್ನು ಗಳಿಸಿತು. ಆ ಮೂಲಕ ಬೆಂಗಳೂರು ತಂಡವು 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು.
ಈಗ ಪಂಜಾಬ್ ವಿರುದ್ಧದ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ ಬೆಂಗಳೂರು ತಂಡವು ಪ್ಲೇ ಆಫ್ ನಲ್ಲಿ ತನ್ನ ಸ್ಥಾನವನ್ನು ಪಕ್ಕಾ ಮಾಡಿಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.