ಬೆಂಗಳೂರು: ಕರ್ನಾಟಕ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಪಕ್ಷವು ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
New Book Review!
The BJP Karnataka Manifesto, inspired by Narendra Modi, is a poorly crafted fantasy built around a weak plot, that has nothing unique to offer voters. If you've read the Congress Manifesto, don't waste your time on this one.
Rating: 1/5 ⭐
Recommendation:Avoid— Rahul Gandhi (@RahulGandhi) May 4, 2018
ಪ್ರಣಾಳಿಕೆಯ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ " ಹೊಸ ಪುಸ್ತಕ ವಿಮರ್ಶೆ ! ಬಿಜೆಪಿ ಕರ್ನಾಟಕ ಮ್ಯಾನಿಫೆಸ್ಟೋ, ನರೇಂದ್ರ ಮೋದಿಯವರಿಂದ ಸ್ಪೂರ್ತಿಪಡೆದಿದೆ, ಪ್ರನಾಳಿಕೆಯು ದುರ್ಬಲವಾದ ಕಥಾವಸ್ತುವಿನ ಸುತ್ತ ಹೆಣೆದಿರುವ ಕಳಪೆಯಾಗಿ ನಿರ್ಮಿಸಿದ ಫ್ಯಾಂಟಸಿ, ಇದು ಮತದಾರರಿಗೆ ಯಾವುದೇ ವಿಶೇಷವಾಗಿ ಹೊಂದಿರುವುದನ್ನು ನೀಡಿಲ್ಲ . ಒಂದು ವೇಳೆ ನೀವು ಕಾಂಗ್ರೆಸ್ ಮ್ಯಾನಿಫೆಸ್ಟೋವನ್ನು ಓದಿದಲ್ಲಿ, ಇದರ ಮೇಲೆ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ.
ರೇಟಿಂಗ್: 1/5 ಶಿಫಾರಸು: ತಿರಸ್ಕರಿಸಿ "ಎಂದು ಟ್ವೀಟ್ ಮೂಲಕ ಅವರು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯವರು ನಕಲು ಗಿರಾಕಿಗಳು, ನಮ್ಮ ಯೋಜನೆಗಳ ಕಾಪಿ ಹೊಡೆದಿದ್ದಾರೆ. ಈಗಿರುವ ಇಂದಿರಾ ಕ್ಯಾಂಟೀನ್ ರೀತಿಯೇ ಅನ್ನಪೂರ್ಣ ಕ್ಯಾಂಟೀನ್ ಮಾಡುತ್ತೇವೆ ಎಂದಿದ್ದಾರೆ. ಹಾಗಾದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇಲ್ಲಿಯ ವರೆಗೆ ಯಾಕೆ ಕ್ಯಾಂಟೀನ್ ತೆರೆದಿಲ್ಲ? #ಸುಳ್ಳುಭರವಸೆಪೊಳ್ಳುಪ್ರಣಾಳಿಕೆ
— Siddaramaiah (@siddaramaiah) May 4, 2018
ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವ್ಯಂಗವಾಡಿದ್ದು,"ಬಿಜೆಪಿಯವರು ನಕಲು ಗಿರಾಕಿಗಳು, ನಮ್ಮ ಯೋಜನೆಗಳ ಕಾಪಿ ಹೊಡೆದಿದ್ದಾರೆ. ಈಗಿರುವ ಇಂದಿರಾ ಕ್ಯಾಂಟೀನ್ ರೀತಿಯೇ ಅನ್ನಪೂರ್ಣ ಕ್ಯಾಂಟೀನ್ ಮಾಡುತ್ತೇವೆ ಎಂದಿದ್ದಾರೆ. ಹಾಗಾದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇಲ್ಲಿಯ ವರೆಗೆ ಯಾಕೆ ಕ್ಯಾಂಟೀನ್ ತೆರೆದಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ