SBI Cashback Offer: ಒಂದು ವೇಳೆ ನೀವು SBI ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. SBI ಕ್ರೆಡಿಟ್ ಕಾರ್ಡ್ ಗ್ರಾಹಕರು ತಮ್ಮ ಕಾರ್ಡಿನಲ್ಲಿ (SBI Credit Card Offer) ಗರಿಷ್ಠ 20 ಸಾವಿರ ರೂಪಾಯಿಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಕೊಡುಗೆಯ ಗಡುವು ಡಿಸೆಂಬರ್ 31 ರವರೆಗೆ ಇರಲಿದೆ. ಆಫರ್‌ನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
ಏನಿದು ಕೊಡುಗೆ?
ಆಯ್ದ LG ಕಂಪನಿಯ ಉತ್ಪನ್ನಗಳ ಮೇಲೆ ಈ ಕೊಡುಗೆ ಲಭ್ಯವಿದೆ. ನೀವು ಎಸ್‌ಬಿಐ ಕಾರ್ಡ್‌ನೊಂದಿಗೆ ಉತ್ಪನ್ನವನ್ನು ಖರೀದಿಸಿದರೆ ನೀವು ನೀವು ಶೇ. 20ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಪ್ರತಿ ಕಾರ್ಡ್‌ಗೆ ಗರಿಷ್ಠ 20,000 ರೂಗಳವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಕೊಡುಗೆ EMI ವಹಿವಾಟಿನಲ್ಲಿ ಮಾತ್ರ ಲಭ್ಯವಿದೆ. ಅಂದರೆ ನೀವು ಖರೀದಿಸಿದ LG ಉತ್ಪನ್ನದ ಪಾವತಿಯನ್ನು ನೀವು ಇಎಂಐ ಆಗಿ ಪರಿವರ್ತಿಸಿದರೆ ಮಾತ್ರ ನೀವು ಈ ಕೊಡುಗೆಯ ಲಾಭವನ್ನು ಪಡೆಯಬಹುದು.
ಇದನ್ನೂ ಓದಿ-SBI ಗ್ರಾಹಕರಿಗೆ ಸಿಹಿ ಸುದ್ದಿ : ಈಗ, ನೀವು ಐಟಿ ರಿಟರ್ನ್ಸ್ ಉಚಿತವಾಗಿ ಸಲ್ಲಿಸಬಹುದು - ವಿವರಗಳಿಗೆ ಇಲ್ಲಿ ಪರಿಶೀಲಿಸಿ
ಈ ಕೊಡುಗೆಯನ್ನು ಕೇವಲ ಪಾಯಿನ್ ಲ್ಯಾಬ್ಸ್ ಸ್ವೈಪ್ ಮಶೀನ್ ಮೇಲೆ ಮಾಡಲಾಗಿರುವ ವಹಿವಾಟಿಗೆ ಮಾತ್ರ ಮಾನ್ಯವಿರಲಿದೆ. ಯಾವ LG ಯಾವ ಉತ್ಪನ್ನಗಳ ಮೇಲೆ ನೀವು ಈ ಕ್ಯಾಶ್ ಬ್ಯಾಕ್ ಪಡೆಯಬಹುದು ಎಂಬುದನ್ನೂ ಕೂಡ SBI ಹೇಳಿದೆ. https://www.sbicard.com/en/personal/offer/lg-oct21.page ಈ ಅಧಿಕೃತ ಲಿಂಕ್ ಮೇಲೆ ಕ್ಲಿಕ್ಕಿಸುವ ಮೂಲಕ ನೀವು ಈ ಮಾಹಿತಿಯನ್ನು ಪಡೆಯಬಹುದು.
ಇದನ್ನೂ ಓದಿ-SBIನಲ್ಲಿ ಖಾತೆ ಇದ್ದರೆ ಕೇವಲ ರೂ.342 ಡಿಪಾಸಿಟ್ ಮಾಡಿ, 4 ಲಕ್ಷ ರೂ.ಗಳ ಬಂಪರ್ ಲಾಭ ಪಡೆಯಿರಿ
ಇತ್ತೀಚೆಗಷ್ಟೇ ಭಾರತೀಯ ಸ್ಟೇಟ್ ಬ್ಯಾಂಕ್ (State Bank Of India) ಕಾರ್ಡ್ ತನ್ನ ಮೆಗಾ ಫೆಸ್ಟಿವಲ್ ಕೊಡುಗೆ 'ದಮ್ ದಾರ್ ದಸ್' ಬಿಡುಗಡೆ ಮಾಡಿತ್ತು. ಇದರ ಅಡಿ ಯಾವುದೇ ರೀತಿಯ ಆನ್ಲೈನ್ ಶಾಪಿಂಗ್ ಮೇಲೆ ಶೇ 10ರಷ್ಟು ನಿಶ್ಚಿತ ಕ್ಯಾಶ್ ಬ್ಯಾಕ್ ನೀಡಲಾಗಿತ್ತು. ಆದರೆ, ಈ ಕೊಡುಗೆ ಮೂರು ದಿನಗಳವರೆಗೆ ಮಾತ್ರ ಸೀಮಿತವಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.