RBI Slaps Fine On SBI: ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೋಮವಾರ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಗೆ 1 ಕೋಟಿ ದಂಡ ವಿಧಿಸಿದೆ. ಬ್ಯಾಂಕ್ ಸೂಚನೆಗಳನ್ನು (Regulatory Directions) ಪಾಲಿಸದ ಕಾರಣ ಈ ದಂಡವನ್ನು ಸ್ಟೇಟ್ ಬ್ಯಾಂಕ್ ಮೇಲೆ ರಿಸರ್ವ್ ಬ್ಯಾಂಕ್ ವಿಧಿಸಿದೆ.
ಅಕ್ಟೋಬರ್ 18, 2021 ರಂದು, ಭಾರತೀಯ ರಿಸರ್ವ್ ಬ್ಯಾಂಕ್ (ವಾಣಿಜ್ಯ ಬ್ಯಾಂಕುಗಳು (Commercial Banks)ಮತ್ತು ಆಯ್ದ ಹಣಕಾಸು ಸಂಸ್ಥೆಗಳಿಂದ (Financial Institutions) ವಂಚನೆ ವರ್ಗೀಕರಣ (Fraud Classifications) ಮತ್ತು ವರದಿಗಳು), 2016 ರ ನಿರ್ದೇಶನಗಳನ್ನು (Regulatory Directions) ಪಾಲಿಸದ ಕಾರಣಕ್ಕಾಗಿ SBIಗೆ ಈ ದಂಡವನ್ನು ವಿಧಿಸಲಾಗಿದೆ ಎಂದು RBI ಹೇಳಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 ರ ಸೆಕ್ಷನ್ 46 (4) (i) ಮತ್ತು 51 (1) ಸೆಕ್ಷನ್ 47A (1) (c) ಅಡಿಯಲ್ಲಿ ಆರ್ಬಿಐ ತನ್ನ ಅಧಿಕಾರವನ್ನು ಚಲಾಯಿಸಲು ಈ ದಂಡವನ್ನು ವಿಧಿಸಿದೆ.
ಈ ಕ್ರಮವು ನಿಯಂತ್ರಕ ಅನುಸರಣೆಯನ್ನು ಆಧರಿಸಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಗ್ರಾಹಕರೊಂದಿಗೆ ಬ್ಯಾಂಕ್ ಮಾಡುವ ಯಾವುದೇ ವಹಿವಾಟಿಗೆ ಇದು ಯಾವುದೇ ರೀತಿಯ ಸಂಬಂಧವನ್ನು ಹೊಂದಿಲ್ಲ ಎಂದು RBI ಸ್ಪಷ್ಟಪಡಿಸಿದೆ.
ಇದನ್ನೂ ಓದಿ-BSNL ನಿಂದ ಕೊಡುಗೆಗಳ ಸುರಿಮಳೆ, ಕೇವಲ 56 ರೂ.ಗಳಲ್ಲಿ 10 GB ಉಚಿತ ಇಂಟರ್ನೆಟ್, ಇನ್ನೂ ಹಲವು Benefits
ಖಾತೆಯ ಪರೀಶೀಲನೆಯ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆಯ ಪರಿಶೀಲನೆಯ ಸಮಯದಲ್ಲಿ ಈ ಅಕ್ರಮವನ್ನು ಆರ್‌ಬಿಐ ಪತ್ತೆ ಹಚ್ಚಿದೆ. ಈ ಕುರಿತು ಕೇಂದ್ರ ಬ್ಯಾಂಕ್ ಎಸ್‌ಬಿಐಗೆ ನೋಟಿಸ್ ನೀಡಿದ್ದು, ನೋಟಿಸ್ ನಲ್ಲಿ ಸ್ಟೇಟ್ ಬ್ಯಾಂಕ್ ಅನ್ನು ನಿಯಮಗಳ ಈ ನಿರ್ಲಕ್ಷ್ಯಕ್ಕಾಗಿ ಏಕೆ ದಂಡ (RBI Fined SBI) ವಿಧಿಸಬಾರದು ಎಂದು ಪ್ರಶ್ನಿಸಿದೆ.
ಇದನ್ನೂ ಓದಿ-ಕೇವಲ Aadhaar ತೋರಿಸಿ ತಕ್ಷಣ ಪಡೆದುಕೊಳ್ಳಬಹುದು LPG ಸಂಪರ್ಕ, ಸಿಗಲಿದೆ ಸಬ್ಸಿಡಿ ಲಾಭ ಕೂಡಾ
ವೈಯಕ್ತಿಕ ವಿಚಾರಣೆಯ ನಂತರ ಮತ್ತು ನೋಟಿಸ್‌ಗೆ ಬ್ಯಾಂಕಿನ ಪ್ರತಿಕ್ರಿಯೆಯ ನಂತರ, ಆರ್‌ಬಿಐ, ಕೇಂದ್ರೀಯ ಬ್ಯಾಂಕಿನ ನಿರ್ದೇಶನಗಳನ್ನು ಅನುಸರಿಸದಿರುವ ಆರೋಪಗಳು ಒಂದು ವೇಳೆ ದೃಢಪಟ್ಟರೆ ಎಸ್‌ಬಿಐಗೆ ವಿತ್ತೀಯ ದಂಡವನ್ನು ವಿಧಿಸುವುದು ಅನಿವಾರ್ಯ ಎಂದು ನಿರ್ಧರಿಸಿದೆ.
ಇದನ್ನೂ ಓದಿ-Paytm Offer: ಹಬ್ಬದ ಸಮಯದಲ್ಲಿ ಪೇಟಿಎಂ ಬಳಸಿದರೆ ಸಿಗಲಿದೆ ಒಂದು ಲಕ್ಷ ಬಂಪರ್ ಕ್ಯಾಶ್ ಬ್ಯಾಕ್ ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ