Viral News: 6 ತಿಂಗಳು ಹೊಟ್ಟೆಯೊಳಗಿತ್ತು ಮೊಬೈಲ್ ಫೋನ್, ಬೆಚ್ಚಿಬಿದ್ದ ವೈದ್ಯರು..!

ಹೊಟ್ಟೆಯಲ್ಲಿಯೇ ಫೋನ್ ಸಿಕ್ಕಿಹಾಕಿಕೊಂಡಿದ್ದರಿಂದ ಪರಿಣಾಮ ಆತ ಸೇವಿಸುವ ಆಹಾರ ಸರಿಯಾಗಿ ಪಚನವಾಗಿಲ್ಲ. ಒಬ್ಬ ವ್ಯಕ್ತಿ ಇಡೀ ಮೊಬೈಲ್ ಫೋನ್ ನುಂಗಿರುವ ಪ್ರಕರಣವನ್ನು ನಾವು ಇದೇ ಮೊದಲು ನೋಡಿದ್ದು ಎಂದು ತಜ್ಞರು ಹೇಳಿದ್ದಾರೆ.

Written by - Puttaraj K Alur | Last Updated : Oct 22, 2021, 06:02 PM IST
  • ಈಜಿಪ್ಟ್ ನಲ್ಲಿ ಆಕಸ್ಮಿಕವಾಗಿ ಮೊಬೈಲ್ ಫೋನ್ ನುಂಗಿದ ವ್ಯಕ್ತಿ
  • ಯಾರಿಗೂ ಹೇಳದ ಪರಿಣಾಮ ಹೊಟ್ಟೆಯಲ್ಲಿಯೇ 6 ತಿಂಗಳು ಇದ್ದ ಫೋನ್
  • ಹೊಟ್ಟೆ ನೋವು ಕಾಣಿಸಿಕೊಂಡ ಬಳಿಕ ವೈದ್ಯರ ಬಳಿ ಚಿಕಿತ್ಸೆಗೆ ಹೊದ ವ್ಯಕ್ತಿ
Viral News: 6 ತಿಂಗಳು ಹೊಟ್ಟೆಯೊಳಗಿತ್ತು ಮೊಬೈಲ್ ಫೋನ್, ಬೆಚ್ಚಿಬಿದ್ದ ವೈದ್ಯರು..!  title=
ಹೊಟ್ಟೆಯಲ್ಲಿಯೇ 6 ತಿಂಗಳು ಇದ್ದ ಫೋನ್

ನವದೆಹಲಿ: ಈಜಿಪ್ಟ್(Egypt)ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಆಕಸ್ಮಿಕವಾಗಿ ಒಬ್ಬ ವ್ಯಕ್ತಿ ಮೊಬೈಲ್ ಫೋನ್ ಅನ್ನು ನುಂಗಿಬಿಟ್ಟಿದ್ದಾನೆ. ಆತ 6 ತಿಂಗಳು ಕಾಲ ಈ ವಿಷಯವನ್ನು ಯಾರಿಗೂ ಹೇಳಿಯೇ ಇಲ್ಲ. ವೈದ್ಯರ ಬಳಿ ಹೋಗಿ ಈ ವಿಷಯ ಹೇಳಲು ಆತ ಮುಜುಗರ ಪಟ್ಟುಕೊಂಡಿದ್ದಾನೆ. ಹೀಗಾಗಿ ಬರೋಬ್ಬರಿ 6 ತಿಂಗಳುಗಳ ಕಾಲ ಆತನ ಹೊಟ್ಟೆಯಲ್ಲಿಯೇ ಮೊಬೈಲ್ ಫೋನ್ ಇತ್ತು.

ಹೌದು, ಇದು ವಿಚಿತ್ರವಾದರೂ ನಿಜವಾಗಿಯೂ ನಡೆದಿರುವ ಘಟನೆ. ಮೊಬೈಲ್ ಫೋನ್(Mobile Phone)ನುಂಗಿದ್ದ ವ್ಯಕ್ತಿ ಆ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ಏನಾಗುತ್ತೆ ನೋಡೇ ಬಿಡೋಣ ಅಂತಾ ನಿರ್ಧರಿಸಿದ್ದ ಆತ ಸುಮ್ಮನಾಗಿದ್ದಾನೆ. ಹೀಗೆ 6 ತಿಂಗಳು ಕಳೆದಿವೆ. ಯಾರಿಗೂ ಹೇಳಲೇಬಾರದೂ ಎಂದುಕೊಂಡಿದ್ದ ಆತನ ಯೋಜನೆ ತಲೆಕೆಳಗಾಗಿದೆ. ಆತನ ಹೊಟ್ಟೆಯಲ್ಲಿಯೇ ಫೋನ್ ಸಿಲುಕಿಕೊಂಡಿದ್ದರಿಂದ ಸೇವಿಸುವ ಆಹಾರವು ಸರಿಯಾಗಿ ಜೀರ್ಣವಾಗಿಲ್ಲ. ಪರಿಣಾಮ ಆತ ಹೊಟ್ಟೆಯಲ್ಲಿ ಒಂದು ರೀತಿಯ ತ್ರಾಸದಾಯಕ ಪರಿಸ್ಥಿತಿ ಅನುಭವಿಸಿದ್ದಾನೆ.  

ಇದನ್ನೂ ಓದಿ: TRUTH Social: ಸ್ವಂತ ಸೋಶಿಯಲ್ ಮೀಡಿಯಾ ವೇದಿಕೆ ಚಾಲನೆಗೆ ಮುಂದಾದ ಡೊನಾಲ್ಡ್ ಟ್ರಂಪ್

ಆತ ಮೊಬೈಲ್ ಫೋನ್ ಅನ್ನು ಏಕೆ ನುಂಗಿದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೊಟ್ಟೆಯಲ್ಲಿಯೇ ಫೋನ್ ಸಿಕ್ಕಿಹಾಕಿಕೊಂಡಿದ್ದರಿಂದ ಪರಿಣಾಮ ಆತ ಸೇವಿಸುವ ಆಹಾರ ಸರಿಯಾಗಿ ಪಚನವಾಗಿಲ್ಲ. ಪರಿಣಾಮ ತೀವ್ರ ಹೊಟ್ಟೆನೋವು(Stomach Pain)ಕಾಣಸಿಕೊಂಡಿದೆ. ಇದಕ್ಕೆ ಹೊಟ್ಟೆಯಲ್ಲಿರುವ ಮೊಬೈಲ್ ಫೋನ್ ಕಾರಣವೆಂಬುದು ಆತನಿಗೆ ಮನದಟ್ಟಾಗಿದೆ. ಅಂತಿಮವಾಗಿ ವೈದ್ಯರ ಬಳಿ ಹೋಗಲು ಆತ ನಿರ್ಧರಿಸಿದ್ದಾನೆ.

ಆತನ ಹೊಟ್ಟೆಯ ಎಕ್ಸ್-ರೇ ಸ್ಕ್ಯಾನ್(X-ray Scan) ಮಾಡಿದ ವೈದ್ಯರು ಹೌಹಾರಿ ಹೋಗಿದ್ದಾರೆ. ಆತನ ಹೊಟ್ಟೆಯಲ್ಲಿ ಫೋನ್ ಇರುವುದು ಕಂಡು ಅವರಿಗೆ ಶಾಕ್ ಆಗಿದೆ. ಇದರ ನಂತರ ವೈದ್ಯರು ತಕ್ಷಣವೇ ಅಸ್ವಾನ್ ಯೂನಿವರ್ಸಿಟಿ ಆಸ್ಪತ್ರೆ(Aswan University Hospital)ಯಲ್ಲಿ ಆತನಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆತನಿಗೆ ಕರುಳು ಮತ್ತು ಹೊಟ್ಟೆಯ ಸೋಂಕು ಸೇರಿ ಅನೇಕ ಮಾರಣಾಂತಿಕ ಸೋಂಕುಗಳ ತಗುಲುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶ ಹಿಂಸಾಚಾರ : ದುರ್ಗಾ ಪೂಜೆ ನಡೆಯುವ ಸ್ಥಳದಲ್ಲಿ ಕುರಾನ್, ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಬಂಧನ   

6 ತಿಂಗಳ ನಂತರ ವ್ಯಕ್ತಿಯಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು

ಒಬ್ಬ ವ್ಯಕ್ತಿ ಇಡೀ ಮೊಬೈಲ್ ಫೋನ್ ನುಂಗಿರುವ ಪ್ರಕರಣವನ್ನು ನಾವು ಇದೇ ಮೊದಲು ನೋಡಿದ್ದು ಎಂದು ತಜ್ಞರು ಹೇಳಿದ್ದಾರೆ. ಅಸ್ವಾನ್ ಯೂನಿವರ್ಸಿಟಿ ಆಸ್ಪತ್ರೆಗಳ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಅಶ್ರಫ್ ಮಾಬಾದ್ ಹೇಳಿರುವ ಪ್ರಕಾರ, ‘ರೋಗಿಯು 6 ತಿಂಗಳ ಹಿಂದೆ ಆಕಸ್ಮಿಕವಾಗಿ ನುಂಗಿದ ಮೊಬೈಲ್ ಆತನಿಗೆ ಆಹಾರ ಸೇವಿಸಲು ತೊಂದರೆಯನ್ನುಂಟು ಮಾಡಿದೆ. ವ್ಯಕ್ತಿಯ ಆರೋಗ್ಯ ಸ್ಥಿತಿಯ ಬಗ್ಗೆ ಸದ್ಯ ನಾವು ಏನೂ ಹೇಳಲು ಸಾಧ್ಯವಿಲ್ಲ. ಆದರೆ ಆತ ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ’ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News