SBI ಗ್ರಾಹಕರಿಗೆ ಸಿಹಿ ಸುದ್ದಿ! ಈಗ ATM ನಿಂದ ಹಣ ಹಿಂಪಡೆಯುವ ನಿಯಮದಲ್ಲಿ ಬದಲಾವಣೆ ; ಹೊಸ ನಿಯಮಗಳನ್ನು ಇಲ್ಲಿದೆ

ಗ್ರಾಹಕರು ಮೊದಲು ತಮ್ಮ ಮೊಬೈಲ್ ಫೋನ್‌ನಲ್ಲಿ OTP ಅನ್ನು ಪಡೆಯುತ್ತಾರೆ, ಅದನ್ನು ನಮೂದಿಸಿದ ನಂತರವೇ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು.

Written by - Channabasava A Kashinakunti | Last Updated : Oct 27, 2021, 05:30 PM IST
  • SBI ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ
  • 10 ಸಾವಿರಕ್ಕಿಂತ ಮತ್ತು ಅದಕ್ಕಿಂತ ಹೆಚ್ಚಿನ ಹಣ ಹಿಂಪಡೆಯಲು ನಿಯಮಗಳು
  • ಈಗ OTP ಇಲ್ಲದೆ ATM ನಲ್ಲಿ ಹಣ ಬರುವುದಿಲ್ಲ
SBI ಗ್ರಾಹಕರಿಗೆ ಸಿಹಿ ಸುದ್ದಿ! ಈಗ ATM ನಿಂದ ಹಣ ಹಿಂಪಡೆಯುವ ನಿಯಮದಲ್ಲಿ ಬದಲಾವಣೆ ; ಹೊಸ ನಿಯಮಗಳನ್ನು ಇಲ್ಲಿದೆ title=

ನವದೆಹಲಿ : ಎಸ್‌ಬಿಐ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದು ಬಂದಿದೆ. ಎಟಿಎಂ ವಹಿವಾಟುಗಳನ್ನು ಹೆಚ್ಚು ಸುರಕ್ಷಿತಗೊಳಿಸಲು ಎಸ್‌ಬಿಐ ಹೊಸ ಉಪಕ್ರಮವನ್ನು ಕೈಗೊಂಡಿದೆ. ಈ ಹೊಸ ನಿಯಮದಲ್ಲಿ, ಗ್ರಾಹಕರು ಒಟಿಪಿ ಆಧಾರದ ಮೇಲೆ ಮಾತ್ರ ಎಟಿಎಂಗಳಿಂದ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರ ಅಡಿಯಲ್ಲಿ, ನಗದು ಹಿಂಪಡೆಯಲು, ಗ್ರಾಹಕರು ಮೊದಲು ತಮ್ಮ ಮೊಬೈಲ್ ಫೋನ್‌ನಲ್ಲಿ OTP ಅನ್ನು ಪಡೆಯುತ್ತಾರೆ, ಅದನ್ನು ನಮೂದಿಸಿದ ನಂತರವೇ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು.

ಈ ಮಾಹಿತಿಯನ್ನು SBI ಟ್ವೀಟ್ ಮೂಲಕ ಮಾಹಿತಿ ನೀಡಿದೆ

ಈ ಬಗ್ಗೆ ಬ್ಯಾಂಕ್ ಟ್ವೀಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಟ್ವೀಟ್‌ನಲ್ಲಿ, 'ನಮ್ಮ OTP ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆಯು ಎಸ್‌ಬಿಐ ಎಟಿಎಂ(SBI ATM)ಗಳಲ್ಲಿನ ವಹಿವಾಟುಗಳಿಗೆ ವಂಚಕರ ವಿರುದ್ಧ ಸರಿಯಾದ ಕ್ರಮಕ್ಕೆ ಮುಂದಾಗಿದ್ದೇವೆ. ನಿಮ್ಮನ್ನು ವಂಚನೆಯಿಂದ ರಕ್ಷಿಸುವುದು ಯಾವಾಗಲೂ ನಮ್ಮ ಪ್ರಮುಖ ಆದ್ಯತೆಯಾಗಿರುತ್ತದೆ. OTP ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು SBI ಗ್ರಾಹಕರು ತಿಳಿದಿರಬೇಕು.

ಇದನ್ನೂ ಓದಿ : Petrol-Diesel Price : ವಾಹನ ಸವಾರರಿಗೆ ಬಿಗ್ ಶಾಕ್ : ಪೆಟ್ರೋಲ್-ಡೀಸೆಲ್ ಬೆಲೆ 150 ರೂ.ವರೆಗೆ ಏರಿಕೆ ಸಾಧ್ಯತೆ!

10 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಹಣ ಹಿಂಪಡೆಯಲು ನಿಯಮಗಳು

10,000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂತೆಗೆದುಕೊಳ್ಳುವಾಗ ಈ ನಿಯಮಗಳು ಅನ್ವಯವಾಗುತ್ತವೆ. SBI ಗ್ರಾಹಕರು ತಮ್ಮ ಬ್ಯಾಂಕ್ ಖಾತೆ(SBI Bank Account)ಯಿಂದ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಅವರ ಡೆಬಿಟ್ ಕಾರ್ಡ್ ಪಿನ್‌ಗೆ ಕಳುಹಿಸಿದ OTP ಯೊಂದಿಗೆ ಪ್ರತಿ ಬಾರಿ ತಮ್ಮ ಎಟಿಎಂಗಳಿಂದ 10,000 ರೂ. ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡಲು ಅನುಮತಿಸುತ್ತದೆ.

ಇಲ್ಲಿ ಪ್ರಕ್ರಿಯೆಯನ್ನು ತಿಳಿಯಿರಿ

- SBI ATM ನಿಂದ ಹಣವನ್ನು ಹಿಂಪಡೆಯಲು ನಿಮಗೆ OTP ಅಗತ್ಯವಿರುತ್ತದೆ.
- ಇದಕ್ಕಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
- ಈ OTP ನಾಲ್ಕು ಅಂಕಿಗಳ ಸಂಖ್ಯೆಯಾಗಿದ್ದು, ಗ್ರಾಹಕರು ಒಂದೇ ವಹಿವಾಟಿಗೆ ಪಡೆಯುತ್ತಾರೆ.
- ಒಮ್ಮೆ ನೀವು ಹಿಂಪಡೆಯಲು ಬಯಸುವ ಮೊತ್ತವನ್ನು ನಮೂದಿಸಿದ ನಂತರ, ATM ಪರದೆಯ ಮೇಲೆ OTP ಅನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ.
- ನಗದು ಹಿಂಪಡೆಯಲು ಈ ಪರದೆಯಲ್ಲಿ ಬ್ಯಾಂಕ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ನೀವು ಸ್ವೀಕರಿಸಿದ OTP ಅನ್ನು ನಮೂದಿಸಬೇಕು.

ಇದನ್ನೂ ಓದಿ : Indian Railways Alert: ರೈಲು ಪ್ರಯಾಣದ ವೇಳೆ ಈ ತಪ್ಪು ಮಾಡಿದರೆ ದಂಡದ ಜೊತೆಗೆ 3 ವರ್ಷ ಜೈಲು ಶಿಕ್ಷೆ

ಯಾಕೆ ಬೇಕಿತ್ತು?

ಗ್ರಾಹಕರನ್ನು ವಂಚನೆಯಿಂದ ರಕ್ಷಿಸಲು ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI ಭಾರತ(India)ದಲ್ಲಿ 71,705 BC ಔಟ್‌ಲೆಟ್‌ಗಳೊಂದಿಗೆ 22,224 ಶಾಖೆಗಳು ಮತ್ತು 63,906 ATM/CDMಗಳ ದೊಡ್ಡ ಜಾಲವನ್ನು ಹೊಂದಿದೆ. ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಬಳಸುವ ಗ್ರಾಹಕರ ಸಂಖ್ಯೆ ಸರಿಸುಮಾರು 91 ಮಿಲಿಯನ್ ಮತ್ತು 20 ಮಿಲಿಯನ್ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News