Kangana Ranaut Azadi Remark: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರ ವಿವಾದಾತ್ಮಕ ಹೇಳಿಕೆಯನ್ನು ಹಿರಿಯ ಮರಾಠಿ ಹಾಗೂ ದಿಗ್ಗಜ ಬಾಲಿವುಡ್ ನಟ ವಿಕ್ರಮ್ ಗೋಖಲೆ (Vikram Gokhale) ಭಾನುವಾರ ಬೆಂಬಲಿಸಿದ್ದಾರೆ. 1947ರಲ್ಲಿ ಭಾರತಕ್ಕೆ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಬಳಿಕ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎಂದು ರನೌತ್ ಹೇಳಿದ್ದರು. ಮಹಾರಾಷ್ಟ್ರದ ಪುಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಗೋಖಲೆ ಅವರು ರನೌತ್ ಹೇಳಿದ್ದು ನಿಜ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ವಿಕ್ರಮ್ ಗೋಖಲೆ, "ನಾನು ರನೌತ್ (Kangana Ranaut Statement) ಅವರ ಹೇಳಿಕೆಯನ್ನು ಒಪ್ಪುತ್ತೇನೆ. ನಮಗೆ ಸ್ವಾತಂತ್ರ್ಯ ನೀಡಲಾಯಿತು. ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸುವಾಗ (British Raj), ಅನೇಕ ಜನರು ಕೇವಲ ಪ್ರೇಕ್ಷಕರಾಗಿದ್ದರು. ಈ ಮೂಕ ಪ್ರೇಕ್ಷಕರಲ್ಲಿ ಅನೇಕ ಹಿರಿಯ ನಾಯಕರು ಇದ್ದರು. ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ಅವರು ಉಳಿಸಲಿಲ್ಲ.
ಇದನ್ನೂ ಓದಿ-Kangana Ranaut Challenge: ನನ್ನ ಈ ಪ್ರಶ್ನೆಗೆ ಉತ್ತರ ಕೊಡಿ, 'ಪದ್ಮಶ್ರೀ' ಪ್ರಶಸ್ತಿಯನ್ನು ಹಿಂದಿರುಗಿಸುವೆ
ಗೋಖಲೆ ಮರಾಠಿ ರಂಗಭೂಮಿ, ಬಾಲಿವುಡ್ ಮತ್ತು ಟಿವಿಯಲ್ಲಿ ತಮ್ಮ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ಪ್ರತಿಯೊಂದು ರಾಜಕೀಯ ಪಕ್ಷವು ವಿವಾದದಲ್ಲಿ ತನ್ನ ಲಾಭವನ್ನು ನೋಡುತ್ತದೆ ಎಂದು ಅವರು ಹೇಳಿದ್ದಾರೆ. ತ್ರಿಪುರಾದಲ್ಲಿ ನಡೆದಿದೆ ಎನ್ನಲಾದ ಕೋಮುಗಲಭೆ ಮತ್ತು ಅದರ ವಿರುದ್ಧ ಅಮರಾವತಿ ಮತ್ತು ಇತರ ನಗರಗಳಲ್ಲಿ ನಡೆದ ಗಲಭೆ ಕುರಿತ ಪ್ರಶ್ನೆಗೆ ಉತ್ತರಿಸಿದ ಗೋಖಲೆ, ಕೋಮುಗಲಭೆಗಳು ವೋಟ್ ಬ್ಯಾಂಕ್ ರಾಜಕೀಯದ ಪರಿಣಾಮವಾಗಿದೆ ಎಂದು ಹೇಳಿದ್ದಾರೆ. "ಪ್ರತಿಯೊಂದು ರಾಜಕೀಯ ಪಕ್ಷವೂ ಅದನ್ನು (Vote Bank Politics) ಮಾಡುತ್ತದೆ" ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ರಾಜಕೀಯ ಸನ್ನಿವೇಶದಲ್ಲಿ, ದೇಶದ ಒಳಿತಿಗಾಗಿ ಮಾಜಿ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಬಿಜೆಪಿ ಮತ್ತೆ ಒಂದಾಗಬೇಕು ಎಂದು ಗೋಖಲೆ ಹೇಳಿದ್ದಾರೆ.
ಇದನ್ನೂ ಓದಿ-ಕಂಗನಾ ರನೌತ್ ಹೇಳಿಕೆ ವಿರುದ್ಧ ಸಂಸದ ವರುಣ್ ಗಾಂಧಿ ಆಕ್ರೋಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.